Latest Updates
-
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ
ಹೃದಯಾಘಾತದ ಅಪಾಯ ತಗ್ಗಿಸುವ ಅಭ್ಯಾಸಗಳು: ಟೀ ಪ್ರಿಯರಿಗೆ ಇಲ್ಲಿದೆ ಸಿಹಿ ಸುದ್ದಿ
ಸಿಡಿಸಿ ಪ್ರಕಾರ ಪ್ರತೀ 43 ಸೆಕೆಂಡ್‌ಗೆ ಒಬ್ಬರಿಗೆ ಹೃದಯಾಘಾತ ಸಂಭವಿಸುತ್ತಿದೆ. ಹೃಯದಾಘಾತ ಮಧ್ಯ ವಯಸ್ಸು ದಾಟಿದವರಲ್ಲಿ ಕಂಡು ಬರುತ್ತಿದೆ ಎಂದೇನು ಇಲ್ಲ, ಚಿಕ್ಕ ಪ್ರಾಯದವರಿಗೂ ಹೃದಯಾಘಾತ ಉಂಟಾಗುತ್ತಿದೆ. 16 ವರ್ಷ, 18 ವರ್ಷದ ಪ್ರಾಯದವರಲ್ಲಿಯೂ ಹೃದಯಾಘಾತ ಕಂಡು ಬರುತ್ತಿದೆ! ಇದಕ್ಕೆ ಒತ್ತಡದ ಜೀವನ ಶೈಲಿ ಒಂದು ಕಾರಣವಾಗಿದೆ.
ನಾವು ಸಾಕಷ್ಟು ಒತ್ತಡಕ್ಕೆ ಒಳಗಾಗುವುದು ನಮ್ಮ ಹೃದಯಕ್ಕೆ ಒಳ್ಳೆಯದಲ್ಲ, ನಮ್ಮ ಜೀವನಶೈಲಿ ಮೂಲಕ ಈ ಅಪಾಯವನ್ನು ತಪ್ಪಿಸಬಹುದಾಗಿದೆ. ನಾವಿಲ್ಲಿ ಹೃದಯದ ಸ್ವಾಸ್ಥ್ಯ ಹೆಚ್ಚಿಸಲು ಯಾವ ಬಗೆಯ ಜೀವನಶೈಲಿ ಸಹಾಯ ಮಾಡುತ್ತೆ ಎಂದು ಹೇಳಿದ್ದೇವೆ ನೋಡಿ:

1. ಉತ್ತಮವಾಗಿರುವುದನ್ನು ತಿನ್ನಿ
ನಮ್ಮ ಆಹಾರ ಶೈಲಿ ಉತ್ತಮವಾಗಿದ್ದರೆ ಅನೇಕ ಕಾಯಿಲೆ ತಡೆಗಟ್ಟಬಹುದು. ನೀವು ತಿನ್ನುವ ಆಹಾರಶೈಲಿಯನ್ನು ಒಂದೇ ದಿನದಲ್ಲಿ ಬದಲಾಯಿಸಬೇಕಾಗಿಲ್ಲ. ನಿಮ್ಮ ಆಹಾರಕ್ರಮದಲ್ಲಿ ನಿಧಾನಕ್ಕೆ ದವಸ ಧಾನ್ಯಗಳು, ಮೊಳಕೆ ಕಾಳುಗಳು, ಸೊಪ್ಪು, ತರಕಾರ, ಹಣ್ಣುಗಳು ಇವುಗಳನ್ನು ಸೇರಿಸುತ್ತಾ ಬನ್ನಿ. ಕೊಬ್ಬಿನಂಶದ ಆಹಾರ ಕಡಿಮೆ ಮಾಡಿ, ಸಕ್ಕರೆ ಸೇವನೆ ಕಡಿಮೆ ಮಾಡಿ. ನಾರಿನ ಪದಾರ್ಥಗಳು ನಿಮ್ಮ ಆಹಾರದಲ್ಲಿ ಇರಲಿ.

2. ನಿಮ್ಮ ದೇಹಕ್ಕೆ ಸ್ವಲ್ಪ ಚಲನೆ ಇರಲಿ
ತುಂಬಾ ಹೊತ್ತು ಕೂರುವುದು, ದೇಹಕ್ಕೆ ಯಾವುದೇ ದೈಹಿಕ ಶ್ರಮ ಇಲ್ಲದಿರುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ವಾರದಲ್ಲಿ 5 ದಿನ 30 ನಿಮಿಷ ವ್ಯಾಯಾಮ ಮಾಡಿ. ವ್ಯಾಯಾಮ ಅಂದ್ರೆ ಸೈಕಲ್ ತುಳಿಯುವುದು, ಮಕ್ಕಳ ಜೊತೆ ಆಡುವುದು, ಈಜುವುದು, ಡ್ಯಾನ್ಸ್ ಮಾಡುವುದು ಹೀಗೆ ನಿಮಗೆ ಇಷ್ಟವಾದದ್ದನ್ನು ಮಾಡಿ. ಪ್ರತಿದಿನ ಸ್ವಲ್ಪ ಬೆವರು ದೇಹದಿಂದ ಬರುವಂತೆ ಪ್ರಯತ್ನ ಮಾಡಿ, ಇದು ಆರೋಗ್ಯದ ದೃಷ್ಟಿಯಿಂದ ಅವಶ್ಯಕವಾಗಿದೆ.

3. ಧೂಮಪಾನ ಬಿಡಿ
ಧೂಮಪಾನ ಅಭ್ಯಾಸವಿದ್ದರೆ ಅದು ರಕ್ತ ನಾಳಗಳಿಗೆ ಹಾನಿಯುಂಟು ಮಾಡಿ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಧೂಮಪಾನ ಅಭ್ಯಾಸವಿದ್ದರೆ ಅದನ್ನು ಬಿಡುವುದು ಕಷ್ಟ, ಆದರೆ ಮುಂದೆ ಆಸ್ಪತ್ರೆಗೆ ಅಲೆದಾಡುವುದನ್ನು ತಪ್ಪಿಸಲು ಧೂಮಪಾನ ಅಭ್ಯಾಸ ಬಿಡಲು ಪ್ರಯತ್ನಿಸುವುದು ಒಳ್ಳೆಯದು.

4. ಮದ್ಯ ಮಿತಿಯಲ್ಲಿರಲಿ
ಮದ್ಯಪಾನ ಮಿತಿ ಮೀರದಿರಲಿ, ಮದ್ಯಪಾನಿಗಳು ಸರಿಯಾಗಿ ಆಹಾರ ಸೇವಿಸುವುದಿಲ್ಲ, ಇದೆಲ್ಲಾ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು. ಪುರುಷರಾಗಲಿ, ಮಹಿಳೆಯರಾಗಲಿ ದಿನಾ ಮಿತಿಯಲ್ಲಿ ಕುಡಿಯುವುದು ಒಳ್ಳೆಯದು.

5.ನಿಮ್ಮ ಹಲ್ಲುಗಳ ಆರೋಗ್ಯದ ಬಗ್ಗೆ ಗಮನ ನೀಡಿ
ವಸಡಿನ ಸಮಸ್ಯೆ ಹೃದಯಾಘಾತದ ಲಕ್ಷಣವಾಗಿದೆ ಎಂದು ಅನೇಕ ಅಧ್ಯಯನಗಳು ಹೇಳಿವೆ. ಆದ್ದರಿಂದ ವಸಡಿನ ಸಮಸ್ಯೆ ಕಾಣಿಸಿದರೆ ನಿರ್ಲಕ್ಷ್ಯ ಮಾಡಬೇಡಿ ಹಾಗೂ ಹಲ್ಲುಗಳ ಸ್ವಚ್ಛತೆ ಕಡೆಗೆ ಗಮನ ನೀಡಿ.

6. ಹೆಚ್ಚು ಟೀ ಕುಡಿಯಿರಿ
ಜೋಹನ್ ಹಾಪ್‌ಕಿನ್ಸ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ ಯಾರು ಹೆಚ್ಚು ಟೀ ಕುಡಿಯುತ್ತಾರೋ ಅವರಿಗೆ ಹೃದಯಾಘಾತ ಸಾಧ್ಯತೆ ಕಡಿಮೆ ಎಮದು ತಿಳಿದು ಬಂದಿದೆ. ರಿಲ್ಯಾಕ್ಸ್ ಆಗಿ ಕುಳಿತು ಒಂದು ಕಪ್ ಟೀ ಹೀರುವುದು ಹೃದಯದ ಆರೋಗ್ಯಕ್ಕೆ ಒಳ್ಳೆಯದೇ ಎಂದು ಅಧ್ಯಯನ ಹೇಳಿದೆ.

7. ಅಪಾಯವಿದ್ದರೆ ಆಸ್ಪಿರಿನ್ ತೆಗೆದುಕೊಳ್ಳಿ
ಈಗಾಗಲೇ ಹೃದಯಾಘಾತದ ಅಪಾಯ ಇರುವವರು ಕಡಿಮೆ ಡೋಸ್‌ನ ಆಸ್ಪಿರಿನ್ ಮಾತ್ರೆ ತೆಗೆದುಕೊಳ್ಳುವುದು ಒಳ್ಳೆಯದು. ನಿಮ್ಮ ವೈದ್ಯರ ಸಲಹೆಯನ್ನು ಪಡೆದ ಬಳಿಕವಷ್ಟೇ ಈ ಮಾತ್ರೆ ತೆಗೆದುಕೊಳ್ಳಿ. ಇದು ರಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟುತ್ತದೆ.

8. ನಿಮ್ಮನ್ನು ನೀವು ಕಾಳಜಿ ಮಾಡಿ
ನಮ್ಮ ದೇಹ



Click it and Unblock the Notifications
