Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಆರೋಗ್ಯಕರ ಹೃದಯಕ್ಕಾಗಿ, ಹೃದ್ರೋಗಶಾಸ್ತ್ರಜ್ಞರಿಂದ 8 ಸಲಹೆಗಳು!
ಹೃದಯವು ಮಾನವ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಹೃದಯವು ಚೆನ್ನಾಗಿ ಕಾರ್ಯನಿರ್ವಹಿಸದಿದ್ದರೆ, ಇತರ ಅಂಗಗಳು ಬಳಲಬಹುದು ಮತ್ತು ಮಾರಕ ಪರಿಣಾಮ ಬೀರಬಹುದು. "ಹೃದಯವು ಅರೋಗ್ಯವಾಗಿದ್ದಾಗ, ದೇಹವು ಆರೋಗ್ಯಕರವಾಗಿರುತ್ತದೆ" ಎಂಬುದು ಒಂದು ಜನಪ್ರಿಯ ಚೀನೀ ನುಡಿಗಟ್ಟು. ಹೃದಯವು ಉತ್ತಮವಾಗಿ ಕಾರ್ಯನಿರ್ವಹಿಸದೆ ಇದ್ದರೆ, ದೇಹದ ಎಲ್ಲಾ ಇತರ ಅಂಗಗಳು ತೊಂದರೆಗೊಳಗಾಗುತ್ತವೆ. ಆದ್ದರಿಂದ "ಹೃದಯವು ಅರೋಗ್ಯವಾಗಿದ್ದಾಗ, ದೇಹವು ಆರೋಗ್ಯವಾಗಿರುತ್ತದೆ" ಎಂಬ ಉಲ್ಲೇಖ ಅಕ್ಶರ ಸಹ ನಿಜ.
ನಾವು ಈಗಾಗಲೇ ತಿಳಿದಿರುವಂತೆ, ಮಾನವ ದೇಹವು ಹೃದಯ, ಶ್ವಾಸಕೋಶಗಳು, ಮೂತ್ರಪಿಂಡಗಳು, ಯಕೃತ್ತು ಮತ್ತು ಮೆದುಳಿನಂತಹ ಪ್ರಮುಖ ಅಂಗಗಳನ್ನು ಒಳಗೊಂಡಿದೆ. ಪ್ರಮುಖ ಅಂಗಗಳ ನಡುವೆ ಹೃದಯದ ಕಾರ್ಯಗಳು ಬಹಳ ಮುಖ್ಯವಾಗಿದೆ. ಹೃದಯ, ರಕ್ತವನ್ನು ಶೋಧಿಸುತ್ತದೆ ಮತ್ತು ಅಪಧಮನಿಗಳ ಮೂಲಕ ದೇಹದ ಪ್ರತಿಯೊಂದು ಭಾಗಕ್ಕೂ ಆಮ್ಲಜನಕಯುಕ್ತ ರಕ್ತವನ್ನು ಪೂರೈಸುತ್ತದೆ.
ಆದ್ದರಿಂದ, ಕೆಲವೊಂದು ಕಾಯಿಲೆಗಳು ಅಥವಾ ಗಾಯಗಳ ಕಾರಣದಿಂದಾಗಿ ಹೃದಯವು ಉತ್ತಮವಾಗಿ ಕಾರ್ಯನಿರ್ವಹಿಸದಿದ್ದರೆ, ಅದು ಇತರ ಅಂಗಗಳಿಗೆ ಆರೋಗ್ಯಕರ ರಕ್ತದ ಹರಿವನ್ನು ತಡೆಗಟ್ಟುತ್ತದೆ ಮತ್ತು ಪರಿಣಾಮ ಬೀರುತ್ತದೆ!. ಹೃದಯದ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ನಿಮ್ಮ ಹೃದಯವನ್ನು ಎಷ್ಟು ಸಾಧ್ಯವೋ ಅಷ್ಟು ಆರೋಗ್ಯಕರವಾಗಿಡಲು ಪ್ರಯತ್ನಿಸುವುದು ಬಹಳ ಮುಖ್ಯ! ಹೃದಯದ ರೋಗಗಳು ಮತ್ತು ಚಿಕಿತ್ಸೆಗಳಲ್ಲಿ ಪರಿಣಿತನಾಗಿರುವ ವೈದ್ಯರು ಅಥವಾ ಹೃದ್ರೋಗಶಾಸ್ತ್ರಜ್ಞರು (ಹೃದಯ ತಜ್ಞರು) ನೀಡಿದ ಕೆಲವು ಹೃದಯದ ಆರೋಗ್ಯ ಸಲಹೆಗಳು ಇಲ್ಲಿವೆ. ಹೃದ್ರೋಗಶಾಸ್ತ್ರಜ್ಞರು ಹೇಳುವ ಕೆಲವು ಹೃದಯ ಆರೋಗ್ಯ ಸಲಹೆಗಳು ಇಲ್ಲಿವೆ; ನೋಡಿ!

ತೆಳ್ಳಗಿನ ಶರೀರ ಹೊಂದಿದವರು ಸಹ ಅಪಾಯದಲ್ಲಿರಬಹುದು
ಸಾಮಾನ್ಯವಾಗಿ ಹೆಚ್ಚಿನ ಜನ, ಅಧಿಕ ತೂಕ ಹೊಂದಿದವರು ಅಥವಾ ಬೊಜ್ಜು ಹೊಂದಿದವರು ಹೃದಯದ ಕಾಯಿಲೆಗೆ ಒಳಗಾಗುತ್ತಾರೆ ಮತ್ತು ಅದಕ್ಕೆ ಕಾರಣ, ಹೃದಯದಲ್ಲಿ ಶೇಕರಣೆಯಾದ ಹೆಚ್ಚಿನ ಕೊಬ್ಬು ಮತ್ತು ಹೆಚ್ಚಿನ ಕೊಲೆಸ್ಟರಾಲ್ ಎಂದು ನಂಬಿದ್ದಾರೆ. ಇದಕ್ಕೆ ಪುರಾವೆಗಳೂ ಇವೆ, ಆದರೆ ಇದು ಖಂಡಿತಾ ಸುಳ್ಳು. ಜನರ ಅನಾರೋಗ್ಯಕರ ಜೀವನಶೈಲಿ, ಆನುವಂಶಿಕವಾಗಿ ಅಥವಾ ಕೆಲವು ಹೃದಯದ ಹೊಂದಾಣಿಕೆಯ ಕಾಯಿಲೆಗಳನ್ನು ಹೊಂದಿದ್ದರೆ ಹೃದ್ರೋಗ ಬರಬಹುದು ಎಂದು ಹೃದಯಶಾಸ್ತ್ರಜ್ಞರು ಸ್ಪಷ್ಟಪಡಿಸುತ್ತಾರೆ. ಹೃದಯದ ಕಾಯಿಲೆಗಳ ಅಪಾಯದಲ್ಲಿ ತೆಳ್ಳಗಿನ ಶರೀರದವರು ಸಹ ಇರಬಹುದು. ಆದ್ದರಿಂದ, ಯಾವಾಗಲೂ ಎಚ್ಚರವಾಗಿರುವುದು ಉತ್ತಮ.
ಸಕ್ಕರೆಯ ಪ್ರಮಾಣ ನಿಮ್ಮ ನಿಜವಾದ ಶತ್ರು
ನಮ್ಮಲ್ಲಿ ಹಲವು, 'ಕೊಬ್ಬು' ಹೃದಯ ರೋಗಗಳಿ ಕಾರಣ ಎಂದು ತಿಳಿದಿದ್ದಾರೆ, ದೇಹದಲ್ಲಿನ ಅಧಿಕ ಕೊಬ್ಬು ಮತ್ತು ಹೆಚ್ಚಿನ ಕೊಲೆಸ್ಟರಾಲ್ ಹೃದಯ ರೋಗಗಳಿಗೆ ಕಾರಣವಾಗಬಹುದು, ಆದರೆ ವಾಸ್ತವವಾಗಿ ಹೃದಯದ ಕಾಯಿಲೆಗಳಿಗೆ ಸಕ್ಕರೆ ಕಾರಣವಾಗಿದೆ ಎಂದು ತಜ್ಞರು ಹೇಳುತ್ತಾರೆ. ದೇಹದಲ್ಲಿನ ಅತಿಯಾದ ಸಕ್ಕರೆಯು ಇನ್ಸುಲಿನ್ ಹಾರ್ಮೋನಿನ ಮಟ್ಟವನ್ನು ಅವ್ಯವಸ್ಥೆಗೊಳಿಸಿ, ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ, ಹೀಗಿ ಹೃದಯ ರೋಗದ ಅಪಾಯವನ್ನು ಹೆಚ್ಚಿಸುತ್ತದೆ.
ಮಲ್ಟಿವಿಟಮಿನ್ ಗಳಿಂದ ಮಾತ್ರಾ ನಿಮ್ಮ ಹೃದಯವನ್ನು ಕಾಪಾಡಲು ಸಾದ್ಯವಿಲ್ಲ
ಮಲ್ಟಿವಿಟಮಿನ್ ಪೂರಕ ಮಾತ್ರೆಗಳು ಅಥವಾ ಸಿರಪ್ ಗಳ ಸೇವನೆಯ ಮೂಲಕ ಉತ್ತಮ ಪೋಷಣೆ ಮತ್ತು ಆರೋಗ್ಯ ಪಡೆಯಬಹುದೆಂದು ಜನರು ಸಲಹೆ ನೀಡುತ್ತಾರೆ. ಮಲ್ಟಿ ವಿಟಮಿನ್ಗಳು ಹೃದಯ ರೋಗಗಳನ್ನು ಒಳಗೊಂಡಂತೆ ಇತರ ಕೆಲವು ಕಾಯಿಲೆಗಳನ್ನು ತಡೆಯಬಹುದು ಎಂದು ಕೆಲವರು ನಂಬುತ್ತಾರೆ. ಆದರೆ, ಇದು ಕೇವಲ ಸುಳ್ಳು, ಏಕೆಂದರೆ ಮಲ್ಟಿವಿಟಮಿನ್ ಪೂರಕಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಕೆಲವು ಆರೋಗ್ಯಕರ ಜೀವನಶೈಲಿಯ ಬದಲಾವಣೆಗಳನ್ನು ಮಾಡದ ಹೊರತು ಯಾವುದೇ ರೋಗವನ್ನು ತಡೆಯಲು ಸಾಧ್ಯವಿಲ್ಲ,
ಅಪಾಯಕಾರಿ ಗರ್ಭದಾರಣೆ ಹೃದ್ರೋಗಗಳನ್ನು ಪ್ರಚೋದಿಸಬಹುದು
ಹೃದ್ರೋಗಶಾಸ್ತ್ರಜ್ಞರು ಸಾಧಾರಣವಾಗಿ ಮಹಿಳಾ ರೋಗಿಗಳಲ್ಲಿ, ಗರ್ಭಿಣಿಯಾಗಿದ್ದಾಗ ಅಥವಾ ಹೆರಿಗೆಯಲ್ಲಿ ಏನಾದರೂ ತೊಂದರೆಳನ್ನು ಹೊಂದಿದ್ದರೆ? ಎಂದು ಪ್ರಶ್ನಿಸುತ್ತಾರೆ. ಒಂದು ವೇಳೆ ಆಗಿದ್ದರೆ, ಈ ಸಮಸ್ಯೆಗಳು ಈಗಾಗಲೇ ಅಸ್ತಿತ್ವದಲ್ಲಿದ್ದ ರಕ್ತನಾಳಗಳಲ್ಲಿನ ಅಸಹಜತೆಗಳ ಉಪಸ್ಥಿತಿಯನ್ನು ಸೂಚಿಸುತ್ತವೆ, ಮತ್ತು ಮುಂದೆ ಇದು ಹೃದಯದ ಕಾಯಿಲೆಗಳನ್ನು ಪ್ರಚೋದಿಸಬಹುದು!
ಕೆಂಪು ವೈನ್ ಹೃದಯ ರೋಗಗಳನ್ನು ತಡೆಯುವುದಿಲ್ಲ
ಇಂದಿಗೂ ಅನೇಕ ಜನರು ನಂಬಿರುವ ಮತ್ತೊಂದು ವಿಷಯ, ದಿನಕ್ಕೆ ಒಂದೆರಡು ಗ್ಲಾಸ್ ಗಳಷ್ಟು ಕೆಂಪು ವೈನ್ ಕುಡಿಯುವುದರಿಂದ ನಿಮ್ಮ ಹೃದಯವನ್ನು ಆರೋಗ್ಯಕರವಾಗಿರಿಸಬಹುದು ಮತ್ತು ಹೃದ್ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ ಎಂಬುದು. ಹೃದಯಕ್ಕೆ ಕೆಂಪು ವೈನ್ ಉತ್ತಮವಾದುದು, ಆದರೆ ಅದನ್ನು ಮಿತಿ ಮೀರಿ ಸೇವಿಸುವುದು ಮತ್ತು ಪ್ರತಿದಿನ ಕುಡಿಯುವುದು ನಿಜವಾಗಿ ಹೃದಯಕ್ಕೆ ಕೆಟ್ಟದ್ದಾಗಿರಬಹುದು, ಜೊತೆಗೆ ಇತರ ಆರೋಗ್ಯದ ಸ್ಥಿತಿಯ ಅಪಾಯವನ್ನು ಹೆಚ್ಚಿಸಬಹುದು, ಮದ್ಯ ಸೇವನೆಯೂ ಇದಕ್ಕೆ ಹೊರತಾಗಿಲ್ಲ!
ಧೂಮಪಾನವನ್ನು ತ್ಯಜಿಸಿ
ಹೃದ್ರೋಗಗಳ ವಿಷಯದಲ್ಲಿ, ಧೂಮಪಾನವು ಮುಖ್ಯ ಕಾರಣಗಳಲ್ಲಿ ಒಂದಾಗಿದೆ, ಎಲ್ಲಾ ಆರೋಗ್ಯ ವೃತ್ತಿಪರರು ಮತ್ತು ಹೃದ್ರೋಗಶಾಸ್ತ್ರಜ್ಞರು ಧೂಮಪಾನದ ಅಭ್ಯಾಸವನ್ನು ತೊರೆಯಲು ಸಲಹೆ ನೀಡುತ್ತಾರೆ. ಯಾಕೆಂದರೆ ಧೂಮಪಾನವು ಮಾರಕವಾಗಬಹುದು. ಧೂಮಪಾನವು ಹೃದಯ ಸ್ತಂಭನಗಳಿಗೆ ಕಾರಣವಾಗುತ್ತದೆ, ಕೊಲೆಸ್ಟರಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಅಪಧಮನಿಗಳ ತಡೆಯನ್ನು ಹೆಚ್ಚಿಸುತ್ತದೆ!
ಒತ್ತಡ ನಿರ್ವಹಿಸಿ
ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವ ವ್ಯಕ್ತಿಗಳಲ್ಲೂ ಸಹ ಹೃದಯ ರೋಗಗಳು ಕಾಣಿಸಿಕೊಳ್ಳಬಹುದು. ಹೃದ್ರೋಗಶಾಸ್ತ್ರಜ್ಞರು ಹೇಳುವ ಪ್ರಕಾರ, ಹೃದಯ ರೋಗಗಳಿಗೆ, 'ಒತ್ತಡ' ಮುಖ್ಯ ಕಾರಣಗಳಲ್ಲಿ ಒಂದು. ಆದ್ದರಿಂದ, ವೈದ್ಯರು ಒತ್ತಡವನ್ನು ನಿರ್ವಹಿಸುವುದು ಮತ್ತು ಯೋಗ ಅಥವಾ ಧ್ಯಾನವನ್ನು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಲು ಜನರಿಗೆ ಸಲಹೆ ನೀಡುತ್ತಾರೆ, ಧ್ಯಾನ ಮತ್ತು ಯೋಗವು ಅಪಾಯಕಾರಿ ಹೃದಯದ ಸ್ಥಿತಿಯನ್ನು ತಡೆದು ದೀರ್ಘಕಾಲದ ಒತ್ತಡದಿಂದ ಪರಿಹಾರವನ್ನು ಒದಗಿಸಲು ಸಹಾಯ ಮಾಡುತ್ತದೆ.
ಒಸಡಿನ ಆರೋಗ್ಯ ಹೃದಯ ರೋಗಗಳಿಗೆ ಸಂಬಂಧಿಸಿದೆ
ನೀವು ಹೃದ್ರೋಗಶಾಸ್ತ್ರಜ್ಞರನ್ನು ಭೇಟಿ ನೀಡಿದಾಗ, ಸಾಮಾನ್ಯ ಚೆಕ್-ಅಪ್ ಕೂಡಾ ಮಾಡುತ್ತಾರೆ, ಹೆಚ್ಚಿನವರು ನಿಮ್ಮ ಹಲ್ಲುಗಳು ಮತ್ತು ಒಸಡುಗಳನ್ನು ಪರೀಕ್ಷಿಸುತ್ತಾರೆ, ಏಕೆಂದರೆ, ಒಸಡಿನಲ್ಲಿ ಉರಿಯೂತ ಮತ್ತು ರಕ್ತಸ್ರಾವವು ಸಾಕಷ್ಟು ಇದ್ದರೆ ಹೃದಯ ರೋಗಗಳಿಗೆ ಕಾರಣವಾಗಬಹುದು. ಏಕೆಂದರೆ ರಕ್ತನಾಳಗಳು ಮತ್ತು ಒಸಡುಗಳು ನೇರವಾಗಿ ಹೃದಯಕ್ಕೆ ಸಂಬಂಧಿಸಿವೆ. ನಿಮ್ಮ ವೈದ್ಯರು ನಿಮ್ಮ ಜೀವನದಲ್ಲಿ, ಆಹಾರ ಮತ್ತು ವ್ಯಾಯಾಮದೊಂದಿಗೆ ಸ್ವಲ್ಪ ಬದಲಾವಣೆಗಳನ್ನು ಮಾಡಬೇಕೆಂದು ಹೇಳುತ್ತಾರೆಯೆ?.ಬಹುಶಃ ನೀವು ಆಶ್ಚರ್ಯ ಪಡುವಿರಿ:, ಅದು ನಿಜಕ್ಕೂ ವ್ಯತ್ಯಾಸ ಕೊಡಬಹುದೇ? ನಿಮ್ಮ ಹೃದಯಕ್ಕಾಗಿ ನೀವು ಔಷಧವನ್ನು ತೆಗೆದುಕೊಳ್ಳುತ್ತಿದ್ದರೆ ನಿಜವಾಗಿಯೂ ಆ ಬದಲಾವಣೆಗಳನ್ನು ಮಾಡಬೇಕೇ?
ಉತ್ತರ, ಹೌದು. ನಿಮ್ಮ ಜೀವನಶೈಲಿ ಬಹಳಷ್ಟು ಮಹತ್ವದ್ದಾಗಿದೆ. ಆರೋಗ್ಯಕರವಾಗಿ ಉಳಿಯಲು, ಆರೋಗ್ಯ ತಜ್ಞರು ನೀಡಿದ ಈ ಸುಳಿವುಗಳನ್ನು ಅನುಸರಿಸಿ,
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











