Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಹೃದಯದ ಆರೋಗ್ಯಕ್ಕೆ ಬೇಕು ಈ ರೀತಿಯ ವ್ಯಾಯಮಗಳು
ವ್ಯಾಯಾಮ ಮಾಡುವುದು ದೇಹಕ್ಕೆ ಹಾಗೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದೇಹವನ್ನು ಫಿಟ್ ಆಗಿಟ್ಟುಕೊಂಡು ಯಾವುದೇ ಅನಾರೋಗ್ಯ ಬರದಂತೆ ತಡೆಯಲು ವ್ಯಾಯಾಮ ತುಂಬಾ ಮುಖ್ಯ. ವ್ಯಾಯಾಮ ಮಾಡುವುದರಿಂದ ನಮ್ಮ ಹೃದಯದ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬಹುದು.

ಆರೋಗ್ಯಕರ ಹಾಗೂ ಬಲಿಷ್ಠ ಹೃದಯ ಬೇಕೆಂದರೆ ವ್ಯಾಯಾಮ ಅತೀ ಅಗತ್ಯ. ವ್ಯಾಯಾಮ ಮಾಡುತ್ತಿರುವವರಿಗಿಂತ ವ್ಯಾಯಾಮ ಮಾಡದೆ ಇರುವವರಿಗೆ ಹೃದಯದ ಕಾಯಿಲೆಗಳು ಕಾಡುವುದು ಹೆಚ್ಚು ಎಂದು ಅಧ್ಯಯನಗಳು ಹೇಳಿವೆ. ದಿನವಿಡೀ ಕುಳಿತುಕೊಂಡೇ ಇದ್ದರೆ ಹೃದಯಕ್ಕೆ ಅಪಾಯ!
ನಿಯಮಿತವಾಗಿ ವ್ಯಾಯಾಮ ಮಾಡುತ್ತಾ ಇದ್ದರೆ ರಕ್ತದೊತ್ತಡ ಕಡಿಮೆಯಾಗಿ ಕೆಟ್ಟ ಕೊಲೆಸ್ಟ್ರಾಲ್ ತಗ್ಗಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಾಗಿ ಕ್ಯಾಲರಿ ದಹಿಸಿ ದೇಹದ ತೂಕ ಕಡಿಮೆಯಾಗುವುದು.
ವ್ಯಾಯಾಮವೆಂದರೆ ನೀವು ಜಿಮ್ ಗೆ ಹೋಗಿ ಭಾರವಾದ ಕಸರತ್ತುಗಳನ್ನು ಮಾಡಬೇಕೆಂದಿಲ್ಲ. ಮನೆಯಲ್ಲಿ ಲಘುವಾದ ವ್ಯಾಯಾಮ ಮಾಡಿದರೆ ಉತ್ತಮ. ದಿನದಲ್ಲಿ ಅರ್ಧ ಗಂಟೆ ಕಾಲ ವ್ಯಾಯಾಮ ಮಾಡಿದರೆ ಸಾಕು. ಇದು ಹೇಗೆಂದು ಮುಂದೆ ತಿಳಿಯಿರಿ.
ಹೃದಯದ ವ್ಯಾಯಾಮವು ದೈನಂದಿನ ವ್ಯಾಯಾಮವಾಗಿದೆ. ಈ ವ್ಯಾಯಾಮದಿಂದ ಹೃದಯ ಮಾತ್ರವಲ್ಲದೆ ದೇಹದಲ್ಲಿ ಆಮ್ಲಜನಕದ ಸರಬರಾಜು ಹೆಚ್ಚಾಗುವುದು. ಹೃದಯಕ್ಕೆ ನೆರವಾಗುವಂತಹ ವ್ಯಾಯಾಮ ಮಾಡುವವರು ವ್ಯಾಯಾಮ ಮಾಡದೇ ಇರುವವರಿಗಿಂತ ಹೃದಯದ ಕಾಯಿಲೆಗೆ ತುತ್ತಾಗುವುದು ತುಂಬಾ ಕಡಿಮೆ. ಓಡುವ ಅಥವಾ ವೇಗವಾಗಿ ನಡೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಸ್ಕಿಪ್ಪಿಂಗ್ ಮಾಡುವುದು ತುಂಬಾ ಲಾಭದಾಯಕ ವ್ಯಾಯಾಮವಾಗಿದೆ. ಹೃದಯವು ವೇಗವಾಗಿ ರಕ್ತವನ್ನು ಸಂಚಲನ ಮಾಡಲು ಇದು ನೆರವಾಗುವುದು. ಕಿಕ್ ಬಾಕ್ಸಿಂಗ್ ಮತ್ತು ಕೆಲವೊಂದು ರೀತಿಯ ನೃತ್ಯಗಳು ಮನೋರಂಜನೆ ನೀಡುವುದು ಮಾತ್ರವಲ್ಲದೆ ಇದರಿಂದ ಹಲವಾರು ರೀತಿಯಲ್ಲಿ ಹೃದಯಕ್ಕೆ ಲಾಭವಿದೆ. ಹೈಕಿಂಗ್ ಅನ್ನು ನೀವು ಪ್ರಯತ್ನಿಸಿದರೆ ಹೃದಯವನ್ನು ಆರೋಗ್ಯವಾಗಿಡುವುದಲ್ಲದೆ ಹಲವಾರು ಸ್ನಾಯುಗಳನ್ನು ಬಲಪಡಿಸುವುದು. ಹೃದಯ ಬಡಿತದ ಏರಿಳಿತ: ಇದು ಅಪಾಯದ ಸೂಚನೆಯೇ?
ಮೇಲೆ ಹೇಳಿರುವಂತಹ ವ್ಯಾಯಾಮಗಳಿಂದ ತುಂಬಾ ಲಾಭವಿದೆ. ಕೈ ಹಾಗೂ ಕಾಲುಗಳನ್ನು ಅಲ್ಲಾಡಿಸುವಂತಹ ಯಾವುದೇ ರೀತಿಯ ವ್ಯಾಯಾಮಗಳು ಹೃದಯದ ಬಡಿತವನ್ನು ಹೆಚ್ಚು ಮಾಡುತ್ತದೆ. ಇದರಿಂದ ಇದನ್ನು ಹೃದಯದ ವ್ಯಾಯಾಮವೆಂದು ಪರಿಗಣಿಸಲಾಗುತ್ತದೆ. ಮನೆಕೆಲಸ ಮಾಡುವುದು, ಈಜುವುದು ಹಾಗೂ ನಡೆಯುವುದರಿಂದ ಹಲವಾರು ರೀತಿಯ ಲಾಭಗಳು ನಿಮ್ಮ ದೇಹಕ್ಕೆ ಆಗಲಿದೆ. ದೈಹಿಕ ವ್ಯಾಯಾಮ ಮೈ ಮನಸ್ಸಿಗೆ ಹಿತಕಾರಿ
ಇಂತಹ ಯಾವುದೇ ವ್ಯಾಯಾಮವನ್ನು ಮಾಡುತ್ತಿರುವಾಗ ಹೃದಯದಲ್ಲಿ ನೋವು ಅಥವಾ ಒತ್ತಡ, ಉಸಿರಾಟದಲ್ಲಿ ತೊಂದರೆ, ಅತಿಯಾಗಿ ಹೃದಯವು ಬಡಿದುಕೊಳ್ಳುವುದು ಅಥವಾ ನಿಶ್ಯಕ್ತಿ, ತಲೆ ನೋವು ಕಾಣಿಸಿಕೊಂಡರೆ ತಕ್ಷಣ ಈ ವ್ಯಾಯಾಮವನ್ನು ನಿಲ್ಲಿಸಿ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications



