Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಪ್ರತಿ ನಿತ್ಯ ಜುಂಬಾ ಡಾನ್ಸ್ ಮಾಡಿದ್ರೆ ಸೆಲೆಬ್ರಿಟಿಗಳ ಹಾಗೆ ಫಿಟ್ ಆಗಿರ್ತೀರಿ !
ಮೊದಲೆಲ್ಲಾ ಫಿಟ್‌ನೆಸ್ ಅಂದ್ರೆ ಅದು ಕೇವಲ ಸೆಲೆಬ್ರಿಟಿಗಳಿಗಾಗಿ ಮಾತ್ರ ಸೀಮಿತವಾಗಿತ್ತು. ಆದ್ರೆ ಇದೀಗ ಎಲ್ಲರೂ ಫಿಟ್ ಆಗಿರ್ಬೇಕು ಅಂತ ಆಸೆ ಪಡ್ತಾರೆ. ಅಷ್ಟೇ ಅಲ್ಲದೇ ನಾವು ದಿನ ನಿತ್ಯ ಪಾಲಿಸೋ ಆಹಾರ ಪದ್ಧತಿಯು ಕೂಡ ಆರೋಗ್ಯ ಸಮಸ್ಯೆಯನ್ನು ತಂದೊಡ್ಡುತ್ತದೆ. ಜೊತೆಗೆ ವಿಪರೀತ ತೂಕ ಹೆಚ್ಚಿಸಿಕೊಳ್ಳೋದಕ್ಕೆ ಕಾರಣವಾಗುತ್ತದೆ.
ತೂಕ ಇಳಿಸಿಕೊಳ್ಳೋದಕ್ಕೆ ಯೋಗ, ವ್ಯಾಯಾಮ, ರನ್ನಿಂಗ್, ಸೈಕ್ಲಿಂಗ್ ಹೀಗೆ ಅನೇಕ ವಿಧಾನಗಳಿದೆ. ಆದ್ರೆ ಇತ್ತೀಚಿಗೆ ಹೆಚ್ಚಿನ ಜನರು ಜುಂಬಾ ಡಾನ್ಸ್‌ನತ್ತ ಆಸಕ್ತಿ ತೋರಿಸ್ತಿದ್ದಾರೆ. ಜುಂಬಾ ಡಾನ್ಸ್ ಮಾಡೋದ್ರಿಂದ ಅತೀ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು. ತುಂಬಾ ಜನ ಇದನ್ನು ಇಷ್ಟ ಪಡ್ತಾರೆ ಕೂಡ. ಅನೇಕರಿಗೆ ಡಾನ್ಸ್, ಮ್ಯೂಸಿಕ್ ಅಂದ್ರೆ ತುಂಬಾನೇ ಇಷ್ಟ.

ಜುಂಬಾ ಡಾನ್ಸ್ ಮಾಡೋದ್ರಿಂದ ತೂಕವನ್ನೂ ಇಳಿಸಿಕೊಳ್ಳಬಹುದು. ಅದರ ಜೊತೆಗೆ ಡಾನ್ಸ್, ಮ್ಯೂಸಿಕ್ ಕೂಡ ಎಂಜಾಯ್ ಮಾಡ್ಬಹುದು. ಅಷ್ಟಕ್ಕು ಜುಂಬಾ ಡಾನ್ಸ್ ಮಾಡೊದ್ರಿಂದ ಏನೆಲ್ಲಾ ಆರೋಗ್ಯಕರ ಪ್ರಯೋಜನಗಳಿದೆ ಅನ್ನೋದನ್ನು ತಿಳಿಯೋಣ.
1. ಸುಲಭವಾಗಿ ಕ್ಯಾಲೋರಿ ಕರಗಿಸಬಹುದು
ತೂಕ ಇಳಿಸಬೇಕಂದ್ರೆ ದೇಹದಲ್ಲಿರುವ ಕ್ಯಾಲೊರಿಯನ್ನು ಕರಗಿಸಲೇಬೇಕು. ಜುಂಬಾ ಕ್ಲಾಸ್‌ಗೆ ಹೋಗೋದ್ರಿಂದ 600 - 1000 ರಷ್ಟು ಕ್ಯಾಲೊರಿಯನ್ನು ಕರಗಿಸಬಹುದು. ಕೇವಲ ಒಂದು ತರಗತಿಗೆ ಹೋದ್ರೆ ಸಾಕು ಇಷ್ಟೆಲ್ಲಾ ಬದಲಾವಣೆಗಳು ಆಗುತ್ವೆ. ಅದೇ ಪ್ರತಿನಿತ್ಯ ಜುಂಬಾ ಕ್ಲಾಸ್‌ಗೆ ಹೋದ್ರೆ ತೂಕ ಇಳಿಸಿಕೊಂಡು ಫಿಟ್ ಆಗಿ ಇರಬಹುದು.
2. ಡಯಾಬಿಟಿಸ್ ಕಡಿಮೆಯಾಗುತ್ತೆ
ಡಯಾಬಿಟಿಸ್ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಜನರನ್ನು ಹೆಚ್ಚಾಗಿ ಕಾಡುತ್ತಿದೆ. ತೂಕವನ್ನು ಸರಿಯಾಗಿ ನಿಯಂತ್ರಿಸಿಕೊಂಡರೆ ಡಯಾಬಿಟಸ್ ಅನ್ನು ಕೂಡ ನಿಯಂತ್ರಣದಲ್ಲಿಡಬಹುದು. ಸರಿಯಾದ ಆಹಾರ ಪದ್ಧತಿ ಹಾಗೂ ವ್ಯಾಯಾಮ ಮಾಡೋದ್ರಿಂದ ಡಯಾಬಿಟಿಸ್ ಸಮಸ್ಯೆಯನ್ನು ನಿಯಂತ್ರಣದಲ್ಲಿಡಬಹುದು. ಹೀಗಾಗಿ ತೂಕ ಇಳಿಕೊಳ್ಳಲು ಜುಂಬಾ ಬೆಸ್ಟ್ ಅಂತಾನೇ ಹೇಳಬಹುದು.
3. ಸಂಪೂರ್ಣ ದೇಹದ ವರ್ಕ್‌ಔಟ್ ಮಾಡ್ಬಹುದು
ಜುಂಬಾ ಡಾನ್ಸ್ ಮಾಡೋದ್ರಿಂದ ಮತ್ತೊಂದು ಪ್ರಯೋಜನ ಅಂದ್ರೆ ಸಂಪೂರ್ಣ ದೇಹದ ವರ್ಕ್‌ಔಟ್ ಇದ್ರಿಂದ ಸಾಧ್ಯವಾಗುತ್ತದೆ. ತಲೆ, ಕೈ, ಕಾಲು, ಕುತ್ತಿಗೆ, ಭುಜ, ಸೊಂಟ, ತೊಡೆ ಸೇರಿದಂತೆ ಪೂರ್ತಿ ದೇಹದ ವರ್ಕ್‌ಔಟ್ ಇದ್ರಿಂದ ಸಾಧ್ಯವಾಗುತ್ತದೆ. ಜುಂಬಾ ಡಾನ್ಸ್ ನಿಮ್ಮ ದೇಹದ ಒಂದು ಭಾಗವನ್ನೂ ನಿಷ್ಕ್ರಿಯವಾಗಿರಲು ಬಿಡುವುದಿಲ್ಲ. ಅಷ್ಟೇ ಅಲ್ಲದೇ, ಜುಂಬಾ ನಿಮ್ಮ ಹೃದಯ ಮತ್ತು ಉಸಿರಾಟದ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಜುಂಬಾ ದೇಹಕ್ಕೆ ಸಂಪೂರ್ಣ ವ್ಯಾಯಾಮ ನೀಡೋದ್ರಿಂದ ಈ ರೀತಿಯ ಸಂಪೂರ್ಣ ವ್ಯಾಯಾಮಗಳು ರಕ್ತದಲ್ಲಿನ ಗ್ಲೂಕೋಸ್ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸಲು ಸ್ನಾಯುಗಳಿಗೆ ಸಹಾಯ ಮಾಡುತ್ತದೆ. ಇದು ರಕ್ತದಲ್ಲಿನ ಗ್ಲೂಕೋಸ್ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ ಮತ್ತು ಮಧುಮೇಹ ನಿರ್ವಹಣೆಗೆ ಇದು ಅತ್ಯಗತ್ಯ.
4. ನಿಮ್ಮ ಏಕಾಗ್ರತೆ ಹೆಚ್ಚಾಗುತ್ತದೆ
ಜುಂಬಾ ಡಾನ್ಸ್ ಮಾಡುವಾಗ ಆ ಹಾಡಿನ ಬೀಟ್‌ಗೆ ತಕ್ಕಂತೆ ನೀವು ನೃತ್ಯ ಮಾಡಬೇಕು. ನಿಮ್ಮ ಹೆಜ್ಜೆಗಳು ನಿಮ್ಮ ಸುತ್ತಲೂ ನೃತ್ಯ ಮಾಡುವ ಇತರರೊಂದಿಗೆ ಹೊಂದಿಕೆಯಾಗುತ್ತವೆ ಎಂದು ಖಚಿತಪಡಿಸಿಕೊಳ್ಳಲು ನಿಮ್ಮ ಮನಸ್ಸು ಮತ್ತು ದೇಹವು ಸಾಕಷ್ಟು ಶ್ರಮಿಸುತ್ತದೆ. ಜುಂಬಾದ ನಿಯಮಿತ ಅಭ್ಯಾಸವು ನಿಮ್ಮ ಮನಸ್ಸು-ದೇಹದ ಸಮನ್ವಯವನ್ನು ಹೆಚ್ಚಿಸುತ್ತದೆ. ಹಾಗೂ ನಿಧಾನವಾಗಿ ನಿಮ್ಮ ಏಕಾಗ್ರತೆ ಕೂಡ ಹೆಚ್ಚಾಗುತ್ತದೆ.
5. ತುಂಬಾ ಎಂಜಾಯ್ ಮಾಡಬಹುದು
ಯೋಗ, ವ್ಯಾಯಾಮ, ರನ್ನಿಂಗ್, ಸೈಕ್ಲಿಂಗ್ ಈ ರೀತಿ ಯಾವುದೇ ಚಟುವಟಿಕೆಗಳನ್ನು ಮಾಡಬೇಕಾದರೂ ಕೂಡ ಖಂಡಿತ ಉದಾಸೀನ ತೋರುತ್ತೇವೆ. ಆದ್ರೆ ಜುಂಬಾ ಹಾಗಲ್ಲ ಅಲ್ಲಿ ಹಾಡು ಪ್ಲೇ ಆದ ತಕ್ಷಣ ನಾವು ಕುಣಿಯೋದಕ್ಕೆ ಶುರು ಮಾಡುತ್ತೇವೆ. ಹಾಡು ಕೇಳಿದ ತಕ್ಷಣ ಯಾರಿಗಾದ್ರೂ ಸರಿ ಕುಣಿಬೇಕು ಅನ್ನಿಸೋದು ಸಹಜ ಅಲ್ವಾ? ಒಂದು ಕಡೆಯಿಂದ ನಮ್ಮ ನೃತ್ಯ ಕೌಶಲ್ಯವನ್ನು ಹೆಚ್ಚಿಸಬಹುದು. ಜೊತೆಗೆ ತೂಕವನ್ನು ಇಳಿಸಿಕೊಳ್ಳಬಹುದು. ಜೊತೆಗೆ ಆರೋಗ್ಯದ ದೃಷ್ಟಿಯಿಂದಲೂ ತುಂಬಾಲೂ ಒಳ್ಳೆಯದು.
6. ಇತರ ಆರೋಗ್ಯಕರ ಪ್ರಯೋಜನಗಳು
* ಸ್ನಾಯುಗಳ ನಿರ್ಮಾಣ ಮಾಡುತ್ತೆ
* ಸ್ನಾಯುವಿನ ಸ್ಥಿತಿಸ್ಥಾಪಕತ್ವವನ್ನು ಹೆಚ್ಚು ಮಾಡುತ್ತದೆ
* ಹೃದಯದ ಸ್ಟ್ಯಾಮಿನವನ್ನು ಹೆಚ್ಚಿಸುತ್ತದೆ
ಫಿಟ್ ಆಗಿರ್ಬೇಕು ಆದ್ರೆ ವ್ಯಾಯಾಮ ಮಾಡೋದಕ್ಕೆ ಬೇಜಾರು ಅನ್ನುವವರಿಗೆ ಜುಂಬಾ ಡಾನ್ಸ್ ಬೆಸ್ಟ್. ಡಾನ್ಸ್ ಮಾಡುತ್ತಾ ಎಂಜಾಯ್ ಮಾಡಿ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications