Latest Updates
-
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು? -
ಜನ್ಮಾಷ್ಟಮಿ ಉಪವಾಸ: ಸುಸ್ತಾಗದೆ, ಆರೋಗ್ಯಕರವಾಗಿ ವ್ರತ ಆಚರಿಸಲು ಇಲ್ಲಿವೆ ಸರಳ ಟಿಪ್ಸ್!
ರಂಬೂಟ ಹಣ್ಣಿನಲ್ಲಿ ಈ ಅದ್ಭುತ ಆರೋಗ್ಯಕರ ಗುಣಗಳು
ಇದೀಗ ನಿಮಗೆ ರಸ್ತೆ ಬದಿಯಲ್ಲಿ ರಂಬೂಟ ಮಾರುತ್ತಿರುವುದು ಕಾಣಬಹುದು, ದಕ್ಷಿಣ ಕನ್ನಡದಲ್ಲಿ, ಕೊಡಗಿನ ಮಾರ್ಗದಲ್ಲಿ ಮೈಸೂರು-ಬೆಂಗಳೂರು ಮಾರ್ಗದಲ್ಲಿ ಹೀಗೆ ಮಾರ್ಗದ ಬದಿಯಲ್ಲಿ ಈ ಹಣ್ಣುಗಳನ್ನು ಮಾರುತ್ತಿರುತ್ತಾರೆ, ಕೆಂಪಾದ ಹಣ್ಣುಗಳು ತಕ್ಷಣವೇ ನಮ್ಮ ಗಮನ ಸೆಳೆಯುತ್ತದೆ, ಇನ್ನು ಟೇಸ್ಟ್ ಮಾಡಿದರೆ ಸೂಪರ್ ಅನಿಸುವುದು.
ಇದರ ಬೆಲೆ ಕೆಜಿಗೆ 250 ರುಪಾಯಿಯಿಂದ ಹಿಡಿದು 400 ರುಪಾಯಿವರೆಗೂ ಇದೆ, ಒಂದೊಂದು ಕಡೆ ಒಂದೊಂದು ಬೆಲೆಯಲ್ಲಿ ದೊರೆಯುವುದು. ಈ ಹಣ್ಣಿನ ಆರೋಗ್ಯಕರ ಗುಣಗಳ ಬಗ್ಗೆ ನೋಡುವುದಾದರೆ ಆರೋಗ್ಯಕ್ಕಾಗಿ ಅದ್ಭುತವಾದ ಹಣ್ಣಾಗಿದೆ, ಇದನ್ನು ತಿನ್ನುವುದರಿಂದ ಈ ಪ್ರಯೋಜನಗಳನ್ನು ಪಡೆಯಬಹುದು:

ಬ್ಯಾಕ್ಟೀರಿಯಾ ವಿರೋಧಿ:
ರಂಬೂಟಾನ್ ಅಥವಾ ರಂಬೂಟ ಬ್ಯಾಕ್ಟೀರಿಯಾ ಅಥವಾ ನಂಜು ನಿರೋಧಕ ಗುಣಲಕ್ಷಣಗಳನ್ನು ಹೊಂದಿದ್ದು ಪ್ರಾಚೀನ ಕಾಲದಿಂದಲೂ ಇದನ್ನ ಬಳಸಲಾಗುತ್ತಿದೆ ಎಂದು ಹೇಳಲಾಗುತ್ತದೆ ಇದು ದೇಹವನ್ನು ಸೋಂಕುಗಳಿಂದ ರಕ್ಷಿಸುತ್ತದೆ. ಈ ಹಣ್ಣನ್ನು ಸೇವಿಸಿದರೆ ದೇಹದಲ್ಲಿ ಯಾವುದೇ ಗಾಯಗಳಾದರು ಅದು ಗುಣವಾಗುತ್ತದೆ ಜೊತೆಗೆ ಗಾಯದಲ್ಲಿ ಕೀವು ಉಂಟಾಗದಂತೆ ಈ ಹಣ್ಣು ತಡೆಯುತ್ತದೆ.
ಜೀರ್ಣಕಾರಿ ವ್ಯವಸ್ಥೆ ಸುಧಾರಿಸುತ್ತದೆ:
ರಂಬೂಟಾನ್ ಹಣ್ಣಿನಲ್ಲಿ ಫೈಬರ್ ಅಂಶವಿದೆ ಇದು ಜೀರ್ಣಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತದೆ ಜೀರ್ಣಕ್ರಿಯೆ ಸಮಸ್ಯೆ ಇದ್ದಾಗ ಮಲಬದ್ಧತೆ ಕರುಳಿನ ಸಮಸ್ಯೆ ಅತಿ ಸಾರ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಆದರೆ ರಂಬೂಟಾನ್ ಸೇವನೆ ಮಾಡಿದರೆ ಇದರಲ್ಲಿ ಇರುವ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಎಲ್ಲಾ ಸಮಸ್ಯೆಗಳಿಗೂ ಚಿಕಿತ್ಸೆ ನೀಡಬಲ್ಲದು.
ಕೂದಲಿನ ಆರೋಗ್ಯಕ್ಕೂ ಬೆಸ್ಟ್:
ನಿಯಮಿತವಾಗಿ ರಂಬೂಟಾನ್ ಹಣ್ಣು ಸೇವಿಸುತ್ತಾ ಬಂದರೆ ಇದರಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳಿಂದ ತಲೆಹೊಟ್ಟು, ತಲೆಯಲ್ಲಿ ತುರಿಕೆ ಮೊದಲಾದ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಈ ಹಣ್ಣಿನಲ್ಲಿರುವ ವಿಟಮಿನ್ ಸಿ ಅಂಶ ಕೂದಲು ಹೆಚ್ಚು ಆರೋಗ್ಯಕರವಾಗಿ ಬೆಳೆಯಲು ಸಹಾಯ ಮಾಡುತ್ತದೆ.
ತೂಕ ಇಳಿಕೆಗೂ ರಾಮಬಾಣ:
ರಂಬೂಟ ಹಣ್ಣು ದುಬಾರಿಯಾದರೂ ಸೇವಿಸುವುದಕ್ಕೆ ಅತ್ಯಂತ ರುಚಿ ಅಷ್ಟೇ ಅಲ್ಲ ಇದರ ಆರೋಗ್ಯಕರ ಪ್ರಯೋಜನಗಳು ಕೂಡ ಹೆಚ್ಚು. ಈ ಹಣ್ಣಿನಲ್ಲಿ ಇರುವ ಕಡಿಮೆ ಶಕ್ತಿಯ ಸಾಂದ್ರತೆಯಿಂದ ತೂಕ ಹೆಚ್ಚಾಗುವುದನ್ನು ತಡೆಯಬಹುದು. ದೇಹದ ತೂಕ ಇಳಿಸಿಕೊಳ್ಳಲು ಬೇಸಿಗೆಯಲ್ಲಿ ರಂಬೂಟ ಹಣ್ಣಿನ ಜ್ಯೂಸ್, ಐಸ್ ಕ್ರೀಮ್, ಪಲ್ಪ್ ಗಳನ್ನು ಸೇವಿಸಬಹುದು.
ಹೃದಯದ ಆರೋಗ್ಯ ಕಾಪಾಡಬಲ್ಲದು:
ಫೈಬರ್ ಅಂಶದಿಂದ ಪರಿಧಮನಿಯ ಹೃದಯ ಕಾಯಿಲೆಯನ್ನು ತಡೆಯುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ಕೂಡ ನಿಯಂತ್ರಿಸುತ್ತದೆ. ಕೊಲೆಸ್ಟಾಲ್, ಅಧಿಕ ರಕ್ತದ ಒತ್ತಡ ಹೃದಯ ಸಂಬಂಧಿ ಖಾಯಿಲೆಗೆ ಕಾರಣವಾಗಿರುತ್ತದೆ. ಇವುಗಳನ್ನು ರಂಬೂಟ ಹಣ ನಿಯಂತ್ರಣದಲ್ಲಿಡುತ್ತದೆ.
ಮೂಳೆಯ ಆರೋಗ್ಯಕ್ಕೂ ಬೆಸ್ಟ್:
ರಂಬೂಟ ಹಣ್ಣಿನಲ್ಲಿ ರಂಜಕ ಅಂಶ ಇದ್ದು, ಇದು ಮೂಳೆಯ ರಚನೆ ಹಾಗೂ ಅದರ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಜೊತೆಗೆ ರಂಬುಟಾನ್ ಹಣ್ಣಿನಲ್ಲಿ ಇರುವ ವಿಟಮಿನ್ ಸಿ ಮೂಳೆ ಗಟ್ಟಿಯಾಗಿರುವುದಕ್ಕೆ ಸಹಾಯ ಮಾಡುತ್ತದೆ.
ಕ್ಯಾನ್ಸರ್ ನ ಚಿಂತೆ ಬೇಡ:
ಈ ಹಣ್ಣು ಕ್ಯಾನ್ಸರ್ ವಿರೋಧಿ ಕೂಡ ಹೌದು. ಹಣ್ಣಿನ ಸಿಪ್ಪೆಗಳು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ ಎಂದು ಅಧ್ಯಯನದಿಂದ ಸಾಬೀತಾಗಿದೆ. ಈ ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್ ಗುಣ ಇದೆ ಉತ್ಕರ್ಷಣ ನಿರೋಧಕಗಳು ಉರಿಯುತದ ವಿರುದ್ಧ ಹೋರಾಡುತ್ತದೆ ಹಾಗಾಗಿ ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳು ಬೆಳೆಯದೆ ಇರುವಲ್ಲಿ ರಂಬೂಟಾನ್ ಹಣ್ಣು ಸಹಾಯ ಮಾಡುತ್ತದೆ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:
ರಂಬುಟಾನ್ ಹಣ್ಣು ನೋಡುವುದಕ್ಕೆ ಲಿಚಿ ಹಣ್ಣಿನ ಹಾಗೆ ಕಾಣಿಸುತ್ತದೆ ಇದರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ವಿಟಮಿನ್ ಸಿ, ಕಬ್ಬಿಣ ಮೊದಲಾದ ಅಂಶಗಳು ಹೆಚ್ಚಾಗಿದೆ ಇದರಿಂದಾಗಿ ಬಿಳಿ ರಕ್ತ ಕಣಗಳ ರಕ್ಷಣೆ, ರಕ್ತ ಪರಿಚಲನೆಗಾಗಿ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಕೂಡ ಹೆಚ್ಚಿಸುವ ಶಕ್ತಿ ರಂಬುಟಾನ್ ಹಣ್ಣಿನಲ್ಲಿ ಇದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications