Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
'ಓಂ ನಮಃ ಶಿವಾಯ'ಮಂತ್ರ ಪಠಣೆಯಿಂದ ಈ 9 ಆರೋಗ್ಯಕರ ಪ್ರಯೋಜನಗಳಿವೆ
ಓಂ ನಮಃ ಶಿವಾಯ ಈ ಮಂತ್ರ ಪಠಣೆ ಮಾಡುವಾಗಲೇ ನಮ್ಮಲ್ಲಿ ಭಕ್ತಿ ಭಾವನೆ ಉಕ್ಕಿ ಹರಿಯುತ್ತದೆ, ಮನಸ್ಸು ಮತ್ತು ದೇಹಕ್ಕೆ ಹೊಸ ಚೈತನ್ಯ ಮೂಡಿಸುತ್ತದೆ. ಈ ಮಂತ್ರೆ ಪಠಣೆ ಮಾಡುವುದರಿಂದ ಶಿವನ ಕೃಪೆಗೆ ಪಾತ್ರರಾಗುತ್ತೇವೆ ಎಂಬ ನಂಬಿಕೆ, ಈ ಮಂತ್ರ ಪಠಣೆ ಮಾಡಿದರೆ ಯಾವ ಕಷ್ಟವೂ ನಮ್ಮನ್ನು ಬಾಧಿಸಲ್ಲ, ನಾವು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳು ಶಿವ ಕೃಪೆಯಿಂದ ದೂರಾಗುವುದು.
ಶಿವ ಮೂಲ ಮಂತ್ರ ಪಠಣೆ ಮಾಡುತ್ತಾ ಶಿವಪೂಜೆಯನ್ನು ಮಾಡಲಾಗುವುದು, ಯಾರು ಈ ಮಂತ್ರ ಪಠಣೆ ಮಾಡುತ್ತಿರುತ್ತಾರೋ ಅವರಿಗೆ ಈ ಮಂತ್ರ ಎಷ್ಟೊಂದು ಶಕ್ತಿಯುತವಾದದ್ದು ಎಂಬ ಎಂಬುವುದು ಅನುಭವಕ್ಕೆ ಬಂದಿರುತ್ತದೆ. ಮನುಷ್ಯನಿಗೆ ದೈವ ಕೃಪೆ ದೊರೆಯುವುದು ಅವನು ತೋರುವ ಭಕ್ತಿಯಲ್ಲಿದೆ. ಶಿವನನ್ನು ಒಲಿಸಿಕೊಳ್ಳಲು ಹೇಳುವ ಮಂತ್ರದಿಂದ ನಮ್ಮ ಆರೋಗ್ಯಕ್ಕೂ ಅಷ್ಟೇ ಆರೋಗ್ಯಕರ ಪ್ರಯೋಜನಗಳಿವೆ. ಶಿವ ಮಂತ್ರದಿಂದ ಈ ಆರೋಗ್ಯಕರ ಪ್ರಯೋಜನವನ್ನು ಪಡೆಯಬಹುದಾಗಿದೆ:

ನೆನಪಿನ ಶಕ್ತಿ ಹೆಚ್ಚಿಸುತ್ತದೆ: ಓಂಕಾರದ ಉಚ್ಚಾರಣೆ ಮಾಡುವಾಗ ಉಂಟಾಗುವ ಕಂಪನ ನಮ್ಮ ಮೆದುಳನ್ನು ಚುರುಕುಗೊಳಿಸುತ್ತದೆ, ಇದರಿಂದ ನೆನಪಿನ ಶಕ್ತಿ ಉತ್ತಮವಾಗಿರುತ್ತದೆ.
ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ: ಓಂ ನಮಃ ಶಿವಾಯ ಎಂಬ ಮಂತ್ರ ಪಠಣೆ ಮಾಡಿಸಲಾರಂಭಿಸಿದಾಗ ಮನಸ್ಸು ಧ್ಯಾನಸ್ಥ ಸ್ಥಿತಿಗೆ ಜಾರುತ್ತದೆ. ನಮ್ಮ ಮನಸ್ಸು ಮಂತ್ರ ಮೇಲೆ ಮಾತ್ರ ಕೇಂದ್ರೀಕೃತವಾಗಿರುತ್ತದೆ, ಮನಸ್ಸಿನಲ್ಲಿ ಇನ್ಯಾವ ಆಲೋಚನೆಯೂ ಬರಲ್ಲ, ಇದರಿಂದಾಗಿ ಮನಸ್ಸು ನಿರಾಲವಾಗುವುದು, ಮಾನಸಿಕ ಒತ್ತಡ ದೂರಾಗುವುದು
ಬೆನ್ನು ಮೂಳೆಗೆ ಒಳ್ಳೆಯದು
ಮಂತ್ರ ಹೇಳುವಾಗ ಧ್ಯಾನಸ್ಥ ಸ್ಥಿತಿಯಲ್ಲಿ ಕೂತು ಧ್ಯಾನ ಮಾಡುತ್ತೇವೆ, ಹೀಗೆ ಧ್ಯಾನ ಮಾಡುವಾಗ ಬೆನ್ನು ಮೂಳೆಯನ್ನು ನೇರವಾಗಿ ಇಟ್ಟು ಕೂರುತ್ತೇವೆ, ಇದರಿಂದ ಬೆನ್ನುಮೂಳೆಯ ಆರೋಗ್ಯ ಚೆನ್ನಾಗಿರುತ್ತದೆ.
ಮನಸ್ಸು ಖುಷಿಯಾಗಿರುತ್ತದೆ: ಶಿವ ಮಂತ್ರ ಪಠಣೆ ಮಾಡಿದಾಗ ಮನಸ್ಸಿಗೆ ನೆಮ್ಮದಿಯ ಅನುಭವ ಉಂಟಾಗುತ್ತದೆ, ಮನಸ್ಸು ಖುಷಿಯಾಗುವುದು. ನಮ್ಮ ಮನೋಬಲ ಹೆಚ್ಚಾಗುವುದು.
ದೇಹವನ್ನು ಶುದ್ಧೀಕರಿಸುತ್ತದೆ: ಓಂಕಾರ ಉಚ್ಚಾರಣೆ ಮನಸ್ಸು ಮಾತ್ರವಲ್ಲ, ದೇಹವನ್ನು ಕೂಡ ಶುದ್ಧೀಕರಿಸುತ್ತದೆ. ಓಂ ಉಚ್ಚಾರಣೆಯಿಂದ ಉಂಟಾಗುವ ಕಂಪನ ಹೃದಯದ ಆರೋಗ್ಯಕ್ಕೂ ಒಳ್ಳೆಯದು.
ಹೃದಯದ ಆರೋಗ್ಯಕ್ಕೆ ಒಳ್ಳೆಯದು, ಜೀರ್ಣಕ್ರಿಯೆಗೆ ಒಳ್ಳೆಯದು
ಓಂ ನಮಃ ಶಿವಾಯ ಉಚ್ಚಾರಣೆ ಹೊಟ್ಟೆ ಭಾಗದಿಂದ ಹೇಳುತ್ತೇವೆ, ಇದರಿಂದ ಜೀರ್ಣಕ್ರಿಯೆಗೆ ಒಳ್ಳೆಯದು, ಜೀರ್ಣಕ್ರಿಯೆ ಉತ್ತಮವಾಗಿ ನಡೆಯುವುದರಿಂದ ಆರೋಗ್ಯಕ್ಕೂ ಒಳ್ಳೆಯದು.
ನಿದ್ರಾಹೀನತೆ ಸಮಸ್ಯೆ ದೂರ ಮಾಡುತ್ತದೆ: ಯಾರಿಗೆ ನಿದ್ದೆ ಚೆನ್ನಾಗಿ ಬರುವುದಿಲ್ಲವೋ, ನಿದ್ರಾಹೀನತೆ ಸಮಸ್ಯೆ ಇದೆಯೋ ಅವರ ಶಿವ ಮಂತ್ರ ಪಠಣೆ ಮಾಡುವುದರಿಂದ ಕಣ್ಣಿಗೆ ನಿದ್ದೆ ಬರುತ್ತದೆ.
ಸಂತಾನೋತ್ಪತ್ತಿ ಅಂಗಾಂಗಗಳಿಗೆ ಒಳ್ಳೆಯದು
ಶಿವ ಮಂತ್ರಗಳನ್ನು ಪಠಣೆ ಮಾಡುವುದರಿಂದ ಸಂತಾನೋತ್ಪತ್ತಿ ಅಂಗಾಂಗಗಳಿಗೆ ಒಳ್ಳೆಯದು, ಗರ್ಭದಲ್ಲಿರುವ ಮಗವಿಗೂ ಒಳ್ಳೆಯದು.
ಋಣಾತ್ಮಕತೆ ದೂರ ಮಾಡುತ್ತದೆ
ಶಿವ ಮಂತ್ರ ಪಠಣೆ ಮಾಡುವುದರಿಂದ ಯಾವುದೇ ಋಣಾತ್ಮಕ ಶಕ್ತಿ ನಮ್ಮನ್ನು ಬಾಧಿಸುವುದಿಲ್ಲ, ನಮ್ಮ ಆತ್ಮವಿಶ್ವಾಸ ಹೆಚ್ಚಾಗುವುದು, ಸವಾಲುಗಳನ್ನು ಜಯಿಸುವ ಧೈರ್ಯ ಸಿಗಲಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications