Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಮಹಾಶಿವರಾತ್ರಿಗೆ ಉಪವಾಸವಿದ್ದು ಜಾಗರಣೆ ಮಾಡುವುದರಿಂದ ಆರೋಗ್ಯಕ್ಕೆ ಇಷ್ಟೆಲ್ಲಾ ಗುಣಗಳಿವೆ
ಮಹಾಶಿವರಾತ್ರಿ ದಿನ ಉಪವಾಸವಿದ್ದು ಜಾಗರಣೆ ಮಾಡುವ ಮೂಲಕ ಶಿವರಾತ್ರಿಯನ್ನು ಆಚರಿಸಲಾಗುವುದು. ಈ ದಿನ ರಾತ್ರಿ ಪೂರ್ತಿ ಶಿವನ ಮಂತ್ರಗಳನ್ನು ಹೇಳುತ್ತಾ, ಶಿವನ ಹಾಡುಗಳನ್ನು ಹೇಳುತ್ತಾ, ಹರಿಕಥೆಗಳನ್ನು ಕೇಳುತ್ತಾ ಸಮಯ ಕಳೆಯಲಾಗುವುದು.
ಶಿವರಾತ್ರಿಗೆ ಉಪವಾಸವಿದ್ದು ಶಿವನ ಆರಾಧನೆ ಮಾಡುವುದರಿಂದ ಶಿವಕೃಪೆಗೆ ಪಾತ್ರರಾಗುತ್ತೇವೆ ಎಂಬ ಧಾರ್ಮಿಕ ನಂಬಿಕೆಯೊಂದಿಗೆ ನಾವು ಮಹಾಶಿವರಾತ್ರಿ ಆಚರಿಸಲಾಗುವುದು. ಶಿವರಾತ್ರಿಗೆ ಉಪವಾಸವಿರುವುದರಿಂದ ಆರೋಗ್ಯಕ್ಕೂ ಇಷ್ಟೊಂದು ಪ್ರಯೋಜನಗಳಿವೆ:

ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣಲ್ಲಿಡುತ್ತದೆ
ಉಪವಾಸವಿರುವುದರಿಂದ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಸಹಕಾರಿ.
ಉರಿಯೂತದ ಸಮಸ್ಯೆ ತಡೆಗಟ್ಟುತ್ತದೆ
ಸಂಧಿವಾತ, ಮೈಕೈ ನೋವು, ತಲೆನೋವು ಈ ಬಗೆಯ ಸಮಸ್ಯೆ ತಡೆಗಟ್ಟುವಲ್ಲಿ, ಉರಿಯೂತದ ಸಮಸ್ಯೆ ತಡೆಗಟ್ಟುವಲ್ಲಿ ಉಪವಾಸ ಪ್ರಯೋಜನಕಾರಿಯಾಗಿದೆ.
ಹೃದಯದ ಆರೋಗ್ಯಕ್ಕೆ ಒಳ್ಳೆಯದು
ಉಪವಾಸವಿರುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ, ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಲು ಸಹಕಾರಿ.
ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು
ಉಪವಾಸವಿರುವುದರಿಂದ ಮೆದುಳಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎಂದು ಅಧ್ಯಯನ ಕೂಡ ಹೇಳಿವೆ. ನರ ಸಂಬಂಧಿ ಸಮಸ್ಯೆ ತಡೆಗಟ್ಟಲು ತುಂಬಾನೇ ಸಹಕಾರಿಯಾಗಿದೆ. ನರ ಸಂಬಂಧಿ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ, ಇನ್ನು ಅಲ್ಜೈಮರ್ಸ್, ಪಾರ್ಕಿಸನ್ಸ್, ನೆನಪಿನ ಶಕ್ತಿ ಕುಗ್ಗುವುದು ಈ ಬಗೆಯ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ.
ತೂಕ ನಿಯಂತ್ರಣಕ್ಕೆ ಸಹಕಾರಿ
ಉಪವಾಸವಿರುವುದರಿಂದ ದೇಹದಲ್ಲಿ ಕೊಬ್ಬಿನಂಶ ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ.
ಬೇಗನೆ ವಯಸ್ಸು ಕಾಣುವುದಿಲ್ಲ
ಹೀಗೆ ಉಪವಾಸ ಮಾಡುವುದರಿಂದ ಮುಖದಲ್ಲಿ ಬೇಗನೆ ನೆರಿಗೆ ಉಂಟಾಗುವುದಿಲ್ಲ, ಆಯಸ್ಸು ಹೆಚ್ಚುತ್ತೆ ಎಂದು ಹೇಳಲಾಗುವುದು.
ಕ್ಯಾನ್ಸರ್ ಕಣಗಳ ಉತ್ಪತ್ತಿ ತಡೆಗಟ್ಟುತ್ತದೆ
ಒಂದು ಟೆಸ್ಟ್ ಟ್ಯೂಬ್ ಸ್ಟಡಿ ಪ್ರಕಾರ ಉಪವಾಸವಿರುವುದರಿಂದ ಕ್ಯಾನ್ಸರ್ ಕಣಗಳ ಉತ್ಪತ್ತಿ ತಡೆಗಟ್ಟುತ್ತದೆ. ಕೀಮೋ ಮಾಡುತ್ತಿರುವವರೆಗೆ ಕೂಡ ಸಹಕಾರಿಯಾಗಿದೆ ಎಂದು ಹೇಳಲಾಗಿದೆ.
ಮಹಾರಾತ್ರಿ ಉಪವಾಸ
ಮಹಾರಾತ್ರಿ ಉಪವಾಸವನ್ನು 24 ಗಂಟೆ ಮಾಡಲಾಗುವುದು. ಇನ್ನು ಆರೋಗ್ಯ ಸಮಸ್ಯೆ ಇರುವವರು ಉಪವಾಸ ಮಾಡಲು ತೀರ್ಮನಿಸಿದರೆ ನೀವು ವೈದ್ಯರ ಸಲಹೆ ಪಡೆಯುವುದು ತುಂಬಾ ಒಳ್ಳೆಯದು. ನೀವು ಸ್ವತಃ ನಿರ್ಧಾರ ಮಾಡಿ ಉಒವಾಸ ಮಾಡಬೇಡಿ.
ಜಾಗರಣೆ ಇರುವುದರಿಂದ ಪ್ರಯೋಜನ
ಇಡೀ ರಾತ್ರಿ ಜಾಗರಣೆಯಿದ್ದು ಶಿವ ಮಂತ್ರಗಳನ್ನು ಪಠಣೆ ಮಾಡುವಾಗ ನಮ್ಮ ಗಂಟಲಿನ ಆರೋಗ್ಯಕ್ಕೆ ಒಳ್ಳೆಯದು, ಅಲ್ಲದೆ ನಾವು ಓಂ ಉಚ್ಛಾರಣೆ ಮಾಡುವಾಗ ನಾವು ಶ್ವಾಸ ಎಳೆದು ಬಿಡುತ್ತೇವೆ, ಇದರಿಂದ ಶ್ವಾಸಕೋಶದ ಆರೋಗ್ಯಕ್ಕೆ ಒಳ್ಳೆಯದು.
ಉಪವಾಸದ ಮಹತ್ವ: ಪ್ರತಿಯೊಂದು ಧರ್ಮದಲ್ಲಿಯೂ ಉಪವಾಸಕ್ಕೆ ಮಹತ್ವವಿದೆ, ಹಿಂದೂ ಧರ್ಮದಲ್ಲಿ ಏಕಾದಶಿ, ಶಿವರಾತ್ರಿ ಹೀಗೆ ವಿಶೇಷ ಧಾರ್ಮಿಕ ಆಚರಣೆಯಲ್ಲಿ ಉಪವಾಸವಿದ್ದು ಪೂಜೆಯನ್ನು ಮಾಡಲಾಗುವುದು, ಹೀಗೆ ಉಪವಾಸ ಮಾಡುವುದರಿಂದ ಅನೇಕ ಆರೋಗ್ಯಕರ ಗುಣಗಳನ್ನೂ ಪಡೆಯಬಹುದು.
ಇತರ ಸಲಹೆ:
ಉಪವಾಸ ಮಾಡುವುದರಿಂದ ಹಾನಿಗೊಳಗಾದ ನರಗಳನ್ನು ಸರಿಪಡಿಸಬಹುದು.
ಟೈಪ್ 2 ಮಧುಮೇಹ, ಒಬೆಸಿಟಿಯಂಥ ಸಮಸ್ಯೆ ತಡೆಗಟ್ಟಲು ಸಹಕಾರಿ
ಈ ಬಗ್ಗೆ ಗಮನವಿರಲಿ
ಉಪವಾಸ ಎಲ್ಲರೂ ಮಾಡಲು ಸಾಧ್ಯವಿಲ್ಲ, ನಿಮ್ಮ ಶರೀರದ ಪರಿಸ್ಥಿತಿನೋಡಿ ಮಾಡಬೇಕು.
ಮಧುಮೇಹಿಗಳು ಉಪವಾಸ ಮಾಡುವುದಾದರೆ ತುಂಬಾನೇ ಜಾಗ್ರತೆವಹಿಸಬೇಕು.
24 ಗಂಟೆಗಳಿಗೂ ಅಧಿಕ ಸಮಯ ಉಪವಾಸವಿರುವಾಗ ನೀವು ವೈದ್ಯರ ಸಲಹೆ ಪಡೆಯಿರಿ
ಕೆಲವರು ಕಠಿಣ ಉಪವಾಸ ನಿಯಮ ಪಾಲಿಸುತ್ತಾರೆ: ಇವರು ನೀರು, ಹಾಲು ಏನೂ ಸೇವಿಸದೆ ಉಪವಾಸ ಮಾಡುತ್ತಾರೆ, ಈ ಉಪವಾಸ ತುಂಬಾನೇ ಕಷ್ಟ, ಇಷ್ಟೊಂದು ಕಠಿಣ ಉಪವಾಸ ಮಾಡುವುದಾದರೆ ಆರೋಗ್ಯ ತುಂಬಾ ಚೆನ್ನಾಗಿರಬೇಕಾಗುತ್ತದೆ.
ಇಲ್ಲದವರು ಸಾತ್ವಿಕ ಆಹಾರ ಹಣ್ಣು, ಹಾಲು ಮಾತ್ರ ಸೇವಿಸಿ ಉಪವಾಸ ಮಾಡುತ್ತಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











