Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪೇರಳೆ ಎಲೆಗಳ ಪ್ರಯೋಜನ ತಿಳಿದರೆ ಅಚ್ಚರಿ ಪಡುತ್ತೀರ..! ಸೀಬೆ ಎಲೆ ಟೀ ಮಾಡುವ ವಿಧಾನ ಇಲ್ಲಿದೆ
ಸೀಬೆಹಣ್ಣು ಅಥವಾ ಪೇರಳೆ ಹಣ್ಣು ಎನ್ನಲಾಗುವ ಅತ್ಯಂತ ರುಚಿಕರ ಹಣ್ಣನ್ನು ನಾವೆಲ್ಲರು ಸೇವಿಸಿರುತ್ತೇವೆ. ಆದರೆ ಇದರ ಎಲೆಗಳಲ್ಲೂ ಅದೆಷ್ಟೋ ಆರೋಗ್ಯಕರ ಅಂಶಗಳು ಅಡಗಿವೆ ಎಂಬುದು ನಿಮಗೆ ಗೊತ್ತಿದ್ಯಾ? ಹೌದು ಸೀಬೆಹಣ್ಣಿನ ಎಲೆಗಳಲ್ಲೂ ಆರೋಗ್ಯಕ್ಕೆ ಅಗತ್ಯವಾದ ಅಂಶಗಳಿವೆ.
ಈ ಸೀಬೆಹಣ್ಣು ಎರಡು ಬಣ್ಣಗಳಲ್ಲಿ ಕಾಣಸಿಗುತ್ತದೆ. ಕೆಂಪು ಮತ್ತು ಬಿಳಿ ಬಣ್ಣದಲ್ಲಿ ಈ ಹಣ್ಣುಗಳು ಮಾರುಕಟ್ಟೆಯಲ್ಲೂ ಸಿಗುತ್ತವೆ. ಮನೆಗಳ ಬಳಿಯೂ ಇವುಗಳ ಮರಗಳು ಕಾಣಸಿಗುತ್ತವೆ. ಆಯುರ್ವೇದದಲ್ಲಿ ಈ ಗಿಡದ ಎಲೆಗಳಲ್ಲಿರುವ ಅದ್ಭುತ ಗುಣಗಳನ್ನು ಪ್ರಸ್ತಾಪಿಸಲಾಗಿದೆ. ಈ ಎಲೆಗಳನ್ನು ಅರೆದು ಮಾಡಿದ ಮಿಶ್ರಣದಲ್ಲಿ ಹಲವಾರು ಆಂಟಿ ಆಕ್ಸಿಡೆಂಟುಗಳು, ಬ್ಯಾಕ್ಟೀರಿಯಾ ನಿವಾರಕಗಳು ಹಾಗೂ ಉರಿಯೂತವನ್ನು ತಣಿಸುವ ಪೋಷಕಾಂಶಗಳಿವೆ.
ಮುಖ್ಯವಾಗಿ ಇದರಲ್ಲಿ ಅಧಿಕವಾಗಿರುವ ಟ್ಯಾನಿನ್ ಎಂಬ ರಾಸಾಯನಿಕ ನೈಸರ್ಗಿಕವಾದ ನೋವು ನಿವಾರಕವಾಗಿದೆ. ಅಲ್ಲದೇ ಹಲವು ಪಾಲಿಫಿನಾಲ್, ಕ್ಯಾರೋಟಿನಾಯ್ಡ್, ಫ್ಲೇವನಾಯ್ಡ್ ಗಳೆಂಬ ವಿವಿಧ ಪೋಷಕಾಂಶಗಳಿದ್ದು ಹಲವು ರೋಗಗಳ ಚಿಕಿತ್ಸೆಗೆ ನೆರವಾಗುತ್ತವೆ. ಹಾಗಾದರೆ ಸೀಬೆಹಣ್ಣಿನ ಎಲೆಗಳ ಪ್ರಯೋಜನಗಳೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಅಸ್ತಮಕ್ಕೆ ಇದು ಮನೆಮದ್ದು
ಪೇರಳೆ ಎಲೆಗಳನ್ನು ಕುದಿಸಿ ತಣಿಸಿದ ನೀರನ್ನು ಕುಡಿಯುವುದರಿಂದ ಶ್ವಾಸಕೋಶ, ಶ್ವಾಸನಾಳಗಳು ಸ್ವಚ್ಛಗೊಳ್ಳುತ್ತವೆ, ಕಟ್ಟಿದ್ದ ಕಫ ಸಡಿಲಗೊಂಡು ಹೊರಬರುತ್ತದೆ. ಗಟ್ಟಿಯಾಗಿದ್ದ ಕಫವನ್ನು ಹೊರಹಾಕಲು ಕೆಮ್ಮಿನ ಮೂಲಕ ಕಷ್ಟಪಡುತ್ತಿದ್ದ ದೇಹಕ್ಕೆ ಆರಾಮ ಸಿಗುತ್ತದೆ. ಉಸಿರಾಡುವಾಗ ನೀವೇನಾದರು ಸಮಸ್ಯೆ ಎದುರಿಸುತ್ತಿದ್ದರೆ ಈ ಹಣ್ಣು ಮತ್ತು ಎಲೆಯ ಪಾನಿಯ ಸೇವಿಸಿ.
ವೀರ್ಯವೃದ್ಧಿಗೆ ನೆರವಾಗುತ್ತದೆ
ಸಂತಾನಫಲ ಪ್ರಾಪ್ತಿಯಾಗದ ದಂಪತಿಗಳಲ್ಲಿ ಒಂದು ವೇಳೆ ದೋಷ ಪುರುಷರಲ್ಲಿದೆ ಎಂದಾದರೆ ಉತ್ಪತ್ತಿಯಾದ ವೀರ್ಯಗಳ ಸಂಖ್ಯೆಯಲ್ಲಿ ಕಡಿಮೆ ಇರುವುದು ಮುಖ್ಯ ಕಾರಣವಾಗಿರಬಹುದು. ಅಂಡಾಣುವಿನೊಂದಿಗೆ ಸಂಯೋಜನೆಗೊಳ್ಳಲು ಕನಿಷ್ಠ 15 ಮಿಲಿಯನ್/ಎಂ.ಎಲ್. ಇರಬೇಕು. (ಕೆಲವು ಪುರುಷರಲ್ಲಿ 14 ಮಿಲಿಯನ್ ಇದ್ದಾಗಲೂ ಫಲಕಂಡಿದೆ) ಇದಕ್ಕಿಂತ ಕಡಿಮೆ ಇದ್ದರೆ ಫಲಕಾಣದು. ಸಂಶೋಧನೆಗಳ ಮೂಲಕ ಈ ಸಂಖ್ಯೆ ಕಡಿಮೆ ಇರುವ ಪುರುಷರ ವೀರ್ಯ ಫಲವತ್ತತೆ ಪಡೆಯಲು ವಿಫಲವಾಗಿದೆ. ಪೇರಳೆ ಎಲೆಗಳನ್ನು ಕುದಿಸಿ ಸೋಸಿದ ನೀರನ್ನು ಸತತವಾಗಿ ಕುಡಿಯುವ ಮೂಲಕ ಈ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತದೆ. ಪರಿಣಾಮವಾಗಿ ಸಂತಾನಭಾಗ್ಯ ಪ್ರಾಪ್ತಿಯಾಗಲು ನೆರವಾಗುತ್ತದೆ.
ಗಾಯಗಳು ಹಾಗೂ ನಂಜು ಬೇಗನೇ ಮಾಗುತ್ತದೆ
ಪೇರಳೆ ಎಲೆಗಳಲ್ಲಿ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಹಾಗೂ ಗಾಯಗಳ ಮೂಲಕ ದೇಹವನ್ನು ಪ್ರವೇಶಿಸದಂತೆ ತಡೆಯುವ ಹಲವು ಪೋಷಕಾಂಶಗಳಿವೆ. ಸಾಮಾನ್ಯವಾದ ಗಾಯ, ಗೀರು, ಮೊದಲಾದವುಗಳ ಮೇಲೆ ಎಲೆಗಳನ್ನು ಜಜ್ಜಿ ಪೇಸ್ಟ್ ನಂತೆ ಹಚ್ಚುವುದರಿಂದ ಹಾಗೂ ಎಲೆಗಳನ್ನು ಕುದಿಸಿ ತಣಿಸಿದ ನೀರನ್ನು ಕುಡಿಯುವುದರಿಂದ ನಂಜು ಆಗದಿರುವಂತೆ ನೋಡಿಕೊಳ್ಳುತ್ತದೆ. ಬಾಣಂತಿಯರಲ್ಲಿ ಗರ್ಭಾಶಯದ ಊತವನ್ನು ಕಡಿಮೆಗೊಳಿಸಲು ಹಾಗೂ ದೇಹದೊಳಗಣ ಸ್ರಾವಗಳನ್ನು ಶೀಘ್ರವಾಗಿ ಒಣಗುವಂತೆ ಮಾಡಲು ಸಹಕರಿಸುತ್ತದೆ.
ಕೂದಲುದುರುವಿಕೆಯನ್ನು ತಡೆಗಟ್ಟುತ್ತದೆ
ಸಾಮಾನ್ಯವಾಗಿ ನಾವೆಲ್ಲರೂ ಪ್ರತಿದಿನ ಸುಮಾರು ನೂರು ಕೂದಲುಗಳನ್ನು ಕಳೆದುಕೊಳ್ಳುತ್ತೇವೆ. ಆದರೆ ಅಷ್ಟೇ ಪ್ರಮಾಣದಲ್ಲಿ ಹೊಸ ಕೂದಲು ಹುಟ್ಟಿದರೆ ಮಾತ್ರ ಕೂದಲಿನ ದಟ್ಟತೆ ಹೆಚ್ಚಾಗುತ್ತದೆ. ಬದಲಿಗೆ ನೂರಕ್ಕಿಂತಲೂ ಕಡಿಮೆ ಕೂದಲು ಹುಟ್ಟಿದರೆ ಕೂದಲುದುರುವ ತೊಂದರೆ ಇದೆ ಎಂದು ಅರ್ಥ. ಹೊಸ ಕೂದಲನ್ನು ಹುಟ್ಟುವ ಪ್ರಕ್ರಿಯೆಗೆ ಪೇರಳೆ ಎಲೆ ನೆರವಾಗುತ್ತದೆ. ಇದಕ್ಕಾಗಿ ಒಂದು ಮುಷ್ಟಿ ಎಲೆಗಳನ್ನು ಒಂದು ಲೀಟರ್ ನೀರಿನಲ್ಲಿ ಇಪ್ಪತ್ತು ನಿಮಿಷ ಕುದಿಸಿ ತಣಿದ ಬಳಿಕ ಕೂದಲುಗಳ ಬುಡಕ್ಕೆ ನಯವಾಗಿ ಮಸಾಜ್ ಮಾಡಬೇಕು. ಸುಮಾರು ಒಂದು ಘಂಟೆಯ ಬಳಿಕ ತಣ್ಣೀರು ಅಥವಾ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಬೇಕು.
ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ.
ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕರಗಿಸುವುದರಿಂದ ಹಿಡಿದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡುವವರೆಗೆ, ಪೇರಳೆಯ ಎಲೆಗಳು ಲೆಕ್ಕವಿಲ್ಲದಷ್ಟು ಪ್ರಯೋಜನಗಳನ್ನು ನೀಡುತ್ತವೆ.
ಪೇರಳೆ ಎಲೆಯ ಟೀ ಮಾಡುವುದು ಹೇಗೆ?
ಒಂದು ಪಾತ್ರೆಯಲ್ಲಿ 3 ಗ್ಲಾಸ್ ನೀರು ತೆಗೆದುಕೊಳ್ಳಿ. 4, 5 ಪೇರಳೆಯ ಎಲೆಗಳನ್ನು ತೊಳೆದು ನೀರಿಗೆ ಸೇರಿಸಿ ಕಡಿಮೆ ಉರಿಯಲ್ಲಿ ಕುದಿಯಲು ಬಿಡಿ. ಮೂರನೇ ಒಂದು ಭಾಗದಷ್ಟು ನೀರು ಖಾಲಿಯಾದ ನಂತರ ಅದನ್ನು ಸೋಸಿ. ಬಳಿಕ ತಣ್ಣಗಾಗಲು ಬಿಡಿ ನಂತರ ಅದಕ್ಕೆ ಜೇನು ತುಪ್ಪ ಸೇರಿಸಿ ಕುಡಿಯಬಹುದು. ಇಲ್ಲವೆ ಹಾಗೆಯೇ ಕುಡಿಯಬಹುದು. ಆದಷ್ಟು ಸಕ್ಕರೆ ಮಿಶ್ರಣ ಮಾಡುವುದನ್ನು ತಪ್ಪಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
