Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಿಹಿ ಕುಂಬಳ ಬೀಜ ಎಂಬ ಸಂಜೀವಿನಿ ಬಗ್ಗೆ ಗೊತ್ತಾ? ಇದರ ಉಪಯೋಗ ಕೇಳಿದ್ರೆ ಅಚ್ಚರಿಯಾಗುತ್ತೆ!
ಹಣ್ಣುಗಳಲ್ಲಿರುವ ಪೋಷಕಾಂಶ, ವಿಟಮಿನ್ ಹಾಗೂ ಸಾರವು ದೇಹದ ಆರೋಗ್ಯಕ್ಕೆ ಬಹಳ ಉತ್ತಮ ಎಂದು ತಿಳಿದಿದ್ದೇವೆ. ಹಣ್ಣುಗಳ ಸೇವನೆ ಆರೋಗ್ಯಕರ ಬೆಳವಣಿಗೆ. ಒಂದು ಸೇಬು ಹಣ್ಣು ವೈದ್ಯರನ್ನು ದೂರ ಮಾಡಲಿದೆ ಎಂದು ನಾವು ಕೇಳಿದ್ದೇವೆ. ಅದೇ ರೀತಿ ಹಣ್ಣಿನ ಬೀಜಗಳು ತರಕಾರಿ ಬೀಜಗಳು ಸಹ ಆರೋಗ್ಯಕ್ಕೆ ಉತ್ತಮ ಎಂದು ನಾವು ತಿಳಿದಿದ್ದೇವೆ.
ಅದ್ರಲ್ಲೂ ಕಲ್ಲಂಗಡಿ, ಕುಂಬಳಕಾಯಿ, ಸಿಹಿ ಕುಂಬಳದಲ್ಲಿರುವ ಬೀಜಗಳಂತು ಬೆಲೆಯಲ್ಲೂ ದುಬಾರಿ ಹಾಗೆ ಆರೋಗ್ಯಕ್ಕೂ ಬಹಳ ಉತ್ತಮ. ಹಾಗಾದರೆ ಸಿಹಿ ಕುಂಬಳಕಾಯಿ ಬೀಜಗಳು ಎಷ್ಟು ಆರೋಗ್ಯಕರ ಅಂಶಗಳ ಅಡಗಿಸಿಕೊಂಡಿದೆ ಎಂಬುದನ್ನು ನಾವಿಂದು ತಿಳಿಯೋಣ.

ಸಿಹಿ ಕುಂಬಳಕಾಯಿಯಲ್ಲೂ ಬೀಟಾ ಕ್ಯಾರೋಟಿನ್ ಎಂಬ ಪೋಷಕಾಂಶವಿದ್ದು ಕಣ್ಣಿನ ಆರೋಗ್ಯಕ್ಕೆ ಪೂರಕವಾಗಿದೆ. ಈ ತರಕಾರಿಗೆ ಚಿನ್ನದ ಬಣ್ಣ ಬರಲು ಈ ಪೋಷಕಾಂಶವೇ ಕಾರಣ. ಬೀಟಾ ಕ್ಯೋರೋಟಿನ್ ನಮ್ಮ ಜೀರ್ಣಾಂಗದಲ್ಲಿ ಜೀರ್ಣಗೊಂಡ ಬಳಿಕ ರೆಟಿನಾಲ್ ಎಂಬ ಪೋಷಕಾಂಶವಾಗಿ ಮಾರ್ಪಾಡು ಪಡೆಯುತ್ತದೆ. ಇದೊಂದು ವಿಟಮಿನ್ ಎ ಆಗಿದ್ದು ಕಣ್ಣಿಗೆ ಅತ್ಯುತ್ತಮವಾದ ಪೋಷಕಾಂಶವಾಗಿದೆ.
ಸಿಹಿ ಕುಂಬಳಕಾಯಿ ಬೀಜಗಳು ಹೆಚ್ಚಿನ ಪ್ರಮಾಣದ ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ ಮತ್ತು ಕ್ಯಾನ್ಸರ್‌ನಿಂದಲೂ ರಕ್ಷಣೆ ಪಡೆಯಲು ಇವು ಸಹಕಾರಿಯಂತೆ.
ಚಯಾಪಚಯವನ್ನು ಸುಧಾರಿಸುತ್ತದೆ
ಕುಂಬಳಕಾಯಿ ಬೀಜಗಳ ಪ್ರಯೋಜನಗಳು ರಕ್ತದಲ್ಲಿನ ಸಕ್ಕರೆಯ ಮಟ್ಟಗಳು, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ನಿರ್ವಹಿಸಲು ಸಹಕಾರಿಯಾಗಿದೆ. ಇದು ಚಯಾಪಚಯವು ಯಾವುದೇ ತೊಂದರೆಗಳಿಲ್ಲದೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅವಶ್ಯಕವಾಗಿದೆ.
ಹೃದಯರಕ್ತನಾಳದ ಆರೋಗ್ಯಕ್ಕೆ ಉತ್ತಮ
ಸಿಹಿ ಕುಂಬಳಕಾಯಿ ಬೀಜಗಳು ಮತ್ತು ಅವುಗಳ ಎಣ್ಣೆ ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಯಕೃತ್ತಿನ ಕಾಯಿಲೆಯ ಅಪಾಯ ಕಡಿಮೆ ಮಾಡಲಿದೆ
ಸಿಹಿ ಕುಂಬಳಕಾಯಿ ಬೀಜಗಳಲ್ಲಿನ ಆರೋಗ್ಯಕರ ಕೊಬ್ಬುಗಳು ಅಪಧಮನಿಕಾಠಿಣ್ಯದ ಬೆಳವಣಿಗೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಸಿಹಿ ಕುಂಬಳಕಾಯಿ ಬೀಜಗಳು ಸ್ತನ ಕ್ಯಾನ್ಸರ್ ಅಪಾಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಕೂದಲಿಗೆ ಕುಂಬಳಕಾಯಿ ಬೀಜಗಳು
ಕುಂಬಳಕಾಯಿ ಬೀಜಗಳು ಅಥವಾ ಕುಂಬಳಕಾಯಿ ಬೀಜದ ಎಣ್ಣೆಯು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ನಿದ್ರಾಹೀನತೆಗೆ ಮದ್ದು
ಸಿಹಿ ಕುಂಬಳ ಬೀಜಗಳಲ್ಲಿ ಟ್ರಿಪ್ಟೊಫಾನ್ ಅಂಶದಿಂದಾಗಿ ಕುಂಬಳಕಾಯಿ ಬೀಜಗಳು ನಿದ್ರಾಹೀನತೆಯಿಂದ ಬಳಲುತ್ತಿರುವ ಜನರಿಗೆ ಸಹಾಯಕವಾಗಿದೆ. ಈ ಬೀಜವನ್ನು ನೆನೆಸಿಟ್ಟು ಅದರ ನೀರು ಕುಡಿಯುತ್ತಾರೆ. ಇಲ್ಲವೆ ಒಣಗಿಸಿ ಅದನ್ನು ಸವಿಯಲು ಬಹುದು. ಜೊತೆಗೆ ಆಹಾರಗಳ ಜೊತೆಗೂ ಸವಿಯುತ್ತಾರೆ.
ಚರ್ಮದ ಕಾಂತಿಗೆ ಸಹಕಾರಿ
ಸಿಹಿ ಕುಂಬಳ ಬೀಜವು ಬೀಟಾ ಕ್ಯಾರೋಟಿನ್ ಹೊಂದಿದ್ದು, ರೆಟಿನಾಲ್ ಚರ್ಮಕ್ಕೂ ಉತ್ತಮವಾದ ಪೋಷಕಾಂಶವಾಗಿದೆ. ಇದು ಚರ್ಮಕ್ಕೆ ಅಗತ್ಯವಾದ ಆರ್ದ್ರತೆ ಮತ್ತು ಸೆಳೆತಗಳನ್ನು ನೀಡುವ ಮೂಲಕ ಚರ್ಮ ಕಾಂತಿಯುಕ್ತವಾಗಿದ್ದು ನೆರಿಗೆರಹಿತವಾಗಿರುತ್ತದೆ. ಚರ್ಮದಲ್ಲಿ ಕಂಡುಬರುವ ಮೊಡವೆ ಮತ್ತು ದದ್ದುಗಳ, ಸೋರಿಯಾಸಿಸ್ ಎಂಬ ಚರ್ಮವ್ಯಾಧಿಗಳ ನಿವಾರಣೆಗೆ ವೈದ್ಯರು ಕ್ಯಾರೋಟಿನ್ ಯುಕ್ತ ಔಷಧಿಗಳನ್ನು ನೀಡುತ್ತಾರೆ. ಕುಂಬಳ ಕಾಯಿಯನ್ನು ನಿತ್ಯದ ಆಹಾರದಲ್ಲಿ ಸೇವಿಸುತ್ತಾ ಬರುವುದರಿಂದ ಚರ್ಮದ ಸಕಲ ತೊಂದರೆಗಳಿಗೆ ನೈಸರ್ಗಿಕ ಪರಿಹಾರ ದೊರಕುತ್ತದೆ.
ಹೆಚ್ಚಿದ ರೋಗನಿರೋಧಕ ಶಕ್ತಿ
ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕಾದರೆ ಸಿಹಿ ಕುಂಬಳಕಾಯಿ ಬೀಜಗಳು ಸಹಕಾರಿಯಾಗುತ್ತವೆ. ನಿತ್ಯ ನಿಮ್ಮ ಆಹಾರದಲ್ಲಿ ಸಿಹಿ ಕುಂಬಳ ಬೀಜಗಳು ಸೇರಿಸಿದರೆ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ.
ಮೂಳೆಗಳ ಗಟ್ಟಿಯಾಗಿಸುವಿಕೆ
ಸಿಹಿ ಕುಂಬಳ ಬೀಜದಲ್ಲಿ ಮೆಗ್ನೀಸಿಯಮ್ ಮತ್ತು ರಂಜಕದ ಪ್ರಮಾಣ ಹೆಚ್ಚಾಗಿರುವುದರಿಂದ ಇದರ ಸೇವನೆಯು ನಿಮ್ಮ ದೇಹದ ಮೂಳೆಗಳ ಗಟ್ಟಿಯಾಗಿಸಲು ನೆರವಾಗಲಿದೆ. ಬಲವಾದ ಮೂಳೆಗಳು ಮತ್ತು ಆಸ್ಟಿಯೊಪೊರೋಸಿಸ್ ತಡೆಗಟ್ಟುವಿಕೆಗೆ ಅವಶ್ಯಕವಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications