Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸೆಕೆ ಶುರುವಾಗಿದೆ, ಚಿಯಾ ಬೀಜ ಸೇವನೆಯಿಂದ ಪಡೆಯಬಹುದು ಈ ಪ್ರಯೋಜನಗಳು
ಅಬ್ಬಾಬ್ಬ ಏನು ಸೆಕೆ ಫೆಬ್ರವರಿ ತಿಂಗಳಿನಲ್ಲಿಯೇ ಬಿಸಿಲಿನ ತಾಪ ಈ ರೀತಿ ಇದ್ದಾಗ ಇನ್ನು ಮಾರ್ಚ್, ಏಪ್ರಿಲ್, ಮೇ ಹೇಗಿರಬಹುದು ಎಂದು ಊಹಿಸಿಕೊಳ್ಳಬಹುದಾಗಿದೆ, ಸೆಕೆ ಹೆಚ್ಚಾಗುತ್ತಿರುವುದರಿಂದ ಮೈಯನ್ನು ತಂಪಾಗಿ ಇಡುವ ಆಹಾರವನ್ನು ಸೇವಿಸಬೇಕು, ಅಂಥ ಆಹಾರದಲ್ಲೊಂದು ಚಿಯಾ ಬೀಜಗಳು.
ಈ ಚಿಯಾ ಬೀಜಗಳನ್ನು ನೀವು ಮಾಡು ಜ್ಯೂಸ್ ಅಥವಾ ಕುಡಿಯುವ ನೀರಿಗೆ ಹಾಕಿ ಕುಡಿದರೆ ಒಳ್ಳೆಯದು. ನೀವು ಪ್ರತಿದಿನ ಚಿಯಾ ಬೀಜವನ್ನು ಜ್ಯೂಸ್ ಅಥವಾ ನೀರಿನಲ್ಲಿ ಹಾಕಿ ಕುಡಿಯುವುದರಿಂದ ದೊರೆಯುವ ಪ್ರಯೋಜನಗಳಿವು:

ಚಿಯಾ ಬೀಜದಲ್ಲಿರುವ ಪೋಷಕಾಂಶಗಳು
ಕ್ಯಾಲೋರಿ:138
ಪ್ರೊಟೀನ್:4.7ಗ್ರಾಂ
ಕೊಬ್ಬು:8.7ಗ್ರಾಂ
ಕಾರ್ಬ್ಸ್:11.9 ಗ್ರಾಂ
ನಾರಿನಂಶ:9.8 ಗ್ರಾಂ
ಕ್ಯಾಲ್ಸಿಯಂ: ದಿನದಲ್ಲಿ ಅವಶ್ಯಕವಾದ ಕ್ಯಾಲ್ಸಿಯಂ ಶೇ.14ರಷ್ಟು ಸಿಗುತ್ತದೆ.
ಮೆಗ್ನಿಷ್ಯಿಯಂ
ರಂಜಕ
ಸತು
ವಿಟಮಿನ್ ಬಿ1
ವಿಟಮಿನ್ ಬಿ3
ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಅಧಿಕವಿರುತ್ತದೆ
ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಅಧಿಕವಿರುತ್ತದೆ, ಇದು ಕ್ಯಾನ್ಸರ್ ಅಂತ ಅಪಾಯವನ್ನು ತಡೆಗಟ್ಟಲು ಸಹಕಾರಿಯಾಗಿದೆ, ಅಲ್ಲದೆ ದೇಹದೊಳಗಿರುವ ಕಶ್ಮಲವನ್ನು ಹೊರ ಹಾಕಲು ಅಂದರೆ ದೇಹವನ್ನು ಡಿಟಾಕ್ಸ್ ಮಾಡಲು ಸಹಕಾರಿ.
ತೂಕ ಇಳಿಕೆಗೆ ಸಹಕಾರಿ
ಚಿಯಾ ಬೀಜ ತಿನ್ನುವುದರಿಂದ ಮೈ ತೂಕ ನಿಯಂತ್ರಿಸಲು ಸಹಕಾರಿ. ಇದನ್ನು ಸೇವಿಸುವುದರಿಂದ ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಸಹಕಾರಿ, ಅಲ್ಲದೆ ಇದನ್ನು ಸೇವಿಸುವುದರಿಂದ ಬೇಗನೆ ಹಸಿವು ಉಂಟಾಗುವುದಿಲ್ಲ. ಹೀಗಾಗಿ ಅತಿಯಾಗಿ ತಿನ್ನುವುದಕ್ಕೆ ಕಡಿವಾಣ ಹಾಕಬಹುದು. ಡಯಟ್ ಮಾಡುವಾಗ ನೀವು ಇದನ್ನು ಮಿಲ್ಕ್‌ಶೇಕ್‌ಗೆ ಹಾಕಿ ಕುಡಿಯುವುದರಿಂದ ನಿಮ್ಮ ದೇಹಕ್ಕೆ ಅವಶ್ಯಕವಾದ ಪೋಷಕಾಂಶಗಳು ದೊರೆಯುತ್ತದೆ.
ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
ಇದರಲ್ಲಿ ಒಮೆಗಾ 3 ಕೊಬ್ಬಿನಂಶವಿದೆ ಅಲ್ಲದೆ ಇದರಲ್ಲಿ ನಾರಿನಂಶ ಕೂಡ ಇದೆ, ಇದನ್ನು ತಿನ್ನುವುದರಿಂದ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಇದರಿಂದ ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಮೂಳೆಯ ಆರೋಗ್ಯಕ್ಕೆ ಒಳ್ಳೆಯದು
ಇದರಲ್ಲಿ ಕ್ಯಾಲ್ಸಿಯಂ, ರಂಜಕ, ಮೆಗ್ನಿಷ್ಯಿಯಂ ಇರುವುದರಿಂದ ಮೂಳೆಯ ಆರೋಗ್ಯಕ್ಕೆ ಒಳ್ಳೆಯದು.
ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಸಹಕಾರಿ
ಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ತುಂಬಾನೇ ಸಹಕಾರಿ. ಮಧುಮೇಹಿಗಳು ನೀರಿಗೆ ಇದನ್ನು ಹಾಕಿ ಸೇವಿಸಿದರೆ ಒಳ್ಳೆಯದು.
ದಿನದಲ್ಲಿ ಎಷ್ಟು ಚಿಯಾ ಬೀಜ ಬಳಸಬೇಕು?
ದಿನದಲ್ಲಿ ನೀವು 2-3 ಚಮಚ ಚಿಯಾ ಬೀಜ ಬಳಸಬಹುದು.
ನೀವು ಪ್ರತಿದಿನ ಚಿಯಾ ಬೀಜ ಸೇವಿಸಬಹುದೇ?
ಪ್ರತಿದಿನ ನೀವು ಚಿಯಾ ಬೀಜ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು, ಇದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.
ಚಿಯಾ ಬೀಜ ಹಾಗೆ ಸೇವಿಸಬಹುದೇ?
ಚಿಯಾ ಬೀಜ ನೇರವಾಗಿ ತೆಗೆದುಕೊಳ್ಳುವುದಕ್ಕಿಂತ ಜ್ಯೂಸ್‌ನಲ್ಲಿ ಹಾಕಿ ತೆಗೆದುಕೊಂಡರೆ ಒಳ್ಳೆಯದು.
ಚಿಯಾ ಬೀಜದಿಂದ ಅಡ್ಡಪರಿಣಾಮಗಳಿವೆಯೇ?
* ಇದನ್ನು ಅತಿಯಾಗಿ ಸೇವಿಸಿದರೆ ಜಠರ ಮತ್ತು ಕರುಳಿನ ಸಮಸ್ಯೆಗಳು ಮಲಬದ್ಧತೆ, ವಾಯು, ಕಳುರಿನ ಮೇಲೆ ಇದು ಅಡ್ಡ ಪರಿಣಾಮವನ್ನು ಉಂಟು ಮಾಡುತ್ತದೆ. ಇದು ಚಿಯಾ ಬೀಜದಿಂದ ಮಾತ್ರವಲ್ಲ ಹೆಚ್ಚು ಫೈಬರ್ ಇರುವ ಆಹಾರವನ್ನು ಸೇವಿಸಿದಾಗ ಉಂಟಾಗುವ ಸಾಮಾನ್ಯ ಸಮಸ್ಯೆ ಇದಾಗಿರುತ್ತದೆ ಎಂಬುದನ್ನು ನೀವು ಗಮನಿಸಬೇಕು.
* ಅಲರ್ಜಿ ಚಿಯಾ ಬೀಜಗಳಿಂದ ಅಲರ್ಜಿ ಆಗುವ ಸಾಧ್ಯತೆ ಬಹಳ ವಿರಳವಾಗಿದ್ದರೂ ಕೂಡ ಇದರ ಸಾಧ್ಯವಿದೆ . ನಿಮಗೆ ಇದನ್ನು ತಿಂದು ಅಲರ್ಜಿ ಉಂಟಾದರೆ ನೀವು ಇದನ್ನು ಸೇವಿಸಬೇಡಿ, ಆದರೆ ಈ ರೀತಿಯಾಗುವುದು ವಿರಳ. ಇತರೆ ಕೆಲವು ಆಹಾರ ಪದಾರ್ಥಗಳೊಂದಿಗೆ ಈ ಬೀಜಗಳು ಮಿಲನಗೊಂಡಾಗ ಅಡ್ಡಪರಿಣಾಮವಾಗಬಹುದು. ಕಿತ್ತಳೆ, ಸಾಸಿವೆ, ಮೆಂತ್ಯೆ ಮತ್ತು ಇತರೆ ಕೆಲವು ವಸ್ತುಗಳ ಜೊತೆಗೆ ಸೇವಿಸಬೇಡಿ.
* ರಕ್ತದೊತ್ತಡ ಕಡಿಮೆ ಇರುವವರು ಇದನ್ನು ಸೇವಿಸುವುದರಿಂದ ಮತ್ತಷ್ಟು ರಕ್ತದೊತ್ತಡ ಕಡಿಮೆಯಾಗುವ ಸಾಧ್ಯತೆ ಇದೆ, ಆದ್ದರಿಂದ ಇಂಥವರು ಜಾಗ್ರತೆವಹಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications