Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
ಬಾಳೆಲೆ ಊಟ ಮಾಡುವವರಿಗೆ ಇಷ್ಟೆಲ್ಲಾ ಪ್ರಯೋಜನಗಳಿವೆ
ಬಾಳೆಲೆಯಲ್ಲಿ ಊಟ ಮಾಡುವ ಖುಷಿಯೇ ಬೇರೆ, ವಿವಿಧ ಬಗೆಯ ಖಾದ್ಯಗಳನ್ನು ಬಾಳೆಲೆಯಲ್ಲಿ ಬಡಿಸಿದರೆ ಆ ಆಹಾರ ಸ್ವಾದಿಷ್ಟ ಅನಿಸುವುದು ಅಲ್ವಾ? ಇನ್ನು ಕೆಲವೊಂದು ಆಹಾರಗಳನ್ನು ಕೂಡ ಬಾಳೆಲೆಯಲ್ಲಿ ಸುತ್ತಿ ಬೇಯಿಸುತ್ತಾರೆ, ಬಾಳೆಲ್ಲಿ ಬೇಯಿಸಿದಾಗ ಅದರ ರುಚಿ ಅದ್ಭುತ ಅನಿಸುವುದು, ಅಷ್ಟು ಮಾತ್ರವಲ್ಲ ಆಹಾರವನ್ನು ಪೊಟ್ಟಣ ಕಟ್ಟಿಕೊಡಲು ಬಾಳೆಲೆ ಬಳಸುತ್ತಾರೆ.
ಆದರೆ ನಾವು ಅಹಾರ ಬೇಯಿಸಲು, ಆಹಾರ ಸೇವಿಸಲು ಬಾಳೆಲೆ ಬಳಸುತ್ತೇವೆ, ಈ ಬಾಳೆಲೆ ಬಳಸುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆಯಂತೆ:

ಆ್ಯಂಟಿಬ್ಯಾಕ್ಟಿರಿಯಾ ಗುಣವಿದೆ
ಇದರಿಂದಾಗಿ ಹಿಂದಿನ ಕಾಲದಿಂದಲೂ ಅಡುಗೆಗೆ ಹಾಗೂ ಆಹಾರ ಸೇವಿಸಳು ಬಳಸಲಾಗುವುದು. ಇನ್ನು ಬಾಳೆಲೆಯ ಮತ್ತೊಂದು ವಿಶೇಷವೆಂದರೆ ಶುಚಿತ್ವದ ದೃಷ್ಟಿಯಿಂದಲೂ ತುಂಬಾನೇ ಒಳ್ಳೆಯದು, ಒಮ್ಮೆ ಬಳಸಿದ ಬಾಳೆಲೆ ಮತ್ತೊಮ್ಮೆ ಬಳಸಲ್ಲ ಹಾಗಾಗಿ ಮತ್ತೊಬ್ಬರಿಂದ ಸೋಂಕು ಕೂಡ ಹರಡಲ್ಲ, ಅದೇ ತಟ್ಟೆಯಲ್ಲಿಯಾದರೆ ಚೆನ್ನಾಗಿ ತೊಳೆದಿಲ್ಲ ಎಂದರೆ ಅದರಿಂದಲೂ ಕಾಯಿಲೆ ಹರಡಬಹುದು, ಬಾಳೆಲೆಯಲ್ಲಿ ಆ ಸಮಸ್ಯೆಯಿಲ್ಲ.
ಬಾಳೆಲೆಯಲ್ಲಿ ತಿನ್ನುವುದರಿಂದ ಈ ಪ್ರಯೋಜನಗಳಿವೆ
ಪೋಷಕಾಂಶದ ಮೌಲ್ಯ
ಬಾಳೆಲೆಯಲ್ಲಿ ಪಾಲಿಫೀನೋಲ್, ವಿಟಮಿನ್ ಎ, ವಿಟಮಿನ್ ಸಿ ಇದ್ದು ಬಾಳೆಲೆಯಲ್ಲಿ ಆಹಾರ ಸೇವಿಸಿದಾಗ ಈ ಅಂಶ ಕೂಡ ಹೊಟ್ಟೆಯನ್ನು ಸೇರುತ್ತದೆ.
ರುಚಿ ಹೆಚ್ಚು
ನೀವು ಬೇಕಾದರೆ ಪರೀಕ್ಷೆ ಮಾಡಲು ಬಾಳೆಲೆಯಲ್ಲಿ ಆಹಾರ ಸೇವಿಸಿ, ಅದೇ ಆಹಾರವನ್ನು ಪ್ಲೇಟ್‌ನಲ್ಲಿ ಸೇವಿಸಿ, ಬಾಳೆಲೆಯಲ್ಲಿ ತಿಂದ ಆಹಾರ ರುಚಿ ಅನಿಸುವುದು, ಮನಸ್ಸಿಗೆ ತೃಪ್ತಿ ಅನಿಸುವುದು.
ಜೀರ್ಣಕ್ರಿಯೆಗೆ ಒಳ್ಳೆಯದು
ಬಾಳೆಲೆಯಲ್ಲಿ ಆಹಾರ ಸೇವಿಸಿದರೆ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು. ಇದರಲ್ಲಿರುವ ಎಂಜೈಮ್ಸ್ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು.
ಬಾಳೆಲೆಯನ್ನು ಆಹಾರದಲ್ಲಿ ಹೇಗೆ ಬಳಸಲಾಗುವುದು
ಆಹಾರವನ್ನು ಬಡಿಸಲು: ಬಾಳೆಲೆಯ ಊಟವೆಂದರೆ ವಿಶೇಷ, ಹಾಗಾಗಿಯೇ ಹಬ್ಬದ ಸಮಯದಲ್ಲಿ ಬಾಳೆಲೆ ಊಟ ಮಾಡಲು ಇಷ್ಟಪಡುತ್ತೇವೆ, ಹಬ್ಬದ ಸಮಯದಲ್ಲಿ ಬಾಳೆಲೆ ಊಟ ಮಾಡಲು ಇಷ್ಟಪಡುತ್ತೇವೆ. ದಿನಾ ಬಾಳೆಲೆ ಊಟ ಒಳ್ಳೆಯದು, ಆದರೆ ದಿನಾ ಯಾರೂ ಬಳಸಲ್ಲ, ವಿಶೇಷ ಸಂದರ್ಭದಲ್ಲಿ ಬಳಸಲು ಇಚ್ಚೆ ಪಡುತ್ತಾರೆ.
ಬೇಯಿಸಲು
ಕೆಲವು ತಿಂಡಿಗಳನ್ನು ಬೇಯಿಸಲು ಬಾಳೆಲೆ ಬಳಸುತ್ತೇವೆ, ಬಾಳೆಲೆಯಲ್ಲಿ ಬೇಯಿಸಿದಾಗ ಬಾಳೆಲೆಯಲ್ಲಿನ ಪೋಷಕಾಂಶ ಕೂಡ ಆಹಾರ ಎಳೆದುಕೊಳ್ಳುತ್ತದೆ.
ಪಾರ್ಟಿಗಳಲ್ಲಿ, ರೆಸ್ಟೋರೆಂಟ್‌ಗಳಲ್ಲಿ ಬಳಸಲಾಗುವುದು, ಬಾಳೆಲೆ ಊಟವೆಂದರೆ ಅದೊಂದು ಸ್ಪೆಷಲ್ ಎಂದು ಪರಿಗಣಿಸಲಾಗುವುದು.
ಸೌಂದರ್ಯವೃದ್ಧಿಗೂ ಇದನ್ನು ಬಳಸಲಾಗುವುದು?
ಮುಖದ ಅಂದಕ್ಕೆ
ಬಾಳೆಲೆಯನ್ನು ಅರಿಶಿಣ ಜೊತೆ ಪೇಸ್ಟ್ ರೀತಿ ಮಾಡಿ ಮುಖಕ್ಕೆ ಹಚ್ಚಿ 15-20 ನಿಮಿಷ ಬಿಟ್ಟು, ತಣ್ಣೀರಿನಿಂದ ಅಥವಾ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.
ಕಾಲಿನ ತ್ವಚೆಯ ಆರೈಕೆಗೆ
ಬಾಳೆಯನ್ನು ಬೇಯಿಸಿ ಆ ನೀರು ಸ್ವಲ್ಪ ತಣ್ಣಗಾದ ಮೇಲೆ ಅದರಲ್ಲಿ ಕಾಲನ್ನು ಅರ್ಧ ಗಂಟೆ ಇಟ್ಟರೆ ರಿಲ್ಯಾಕ್ಸ್ ಅನಿಸುವುದು. ಪಾದದ ತ್ವಚೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications