Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಕೂದಲು ಕಸಿಗೆ ಒಳಗಾದ ಇಂಜಿನಿಯರ್ ಮೃತ್ಯು: ವೈದ್ಯರ ಮೇಲೆ ಕೇಸ್..!
ಕೂದಲು ಉದುರುವಿಕೆ ಬಹುದೊಡ್ಡ ಸಮಸ್ಯೆಯಾಗಿದೆ. ಹಿರಿಯರಿಂದ ಹಿಡಿದು ಯುವ ಸಮೂಹ ಕೂಡ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದ್ರೆ ಈ ಸಮಸ್ಯೆಯಿಂದ ಹೊರಬರಲು ಹಲವು ರೀತಿಯ ಚಿಕಿತ್ಸೆಗಳು, ಶಾಂಪು, ವೈದ್ಯಕೀಯ ಚಿಕಿತ್ಸೆಗಳು ಲಭ್ಯವಿದೆ. ಆಯುರ್ವೇದದಿಂದ ಹಿಡಿದು ಕ್ಲೀನಿಕಲ್ ಶಸ್ತ್ರ ಚಿಕಿತ್ಸೆ ವರೆಗೂ ಈಗ ಕೂದಲು ವಾಪಾಸು ತರಿಸುವ ಪ್ರಕ್ರಿಯೆ ಇದೆ. ಅದರಲ್ಲೂ ಹಲವು ಶ್ರೀಮಂತರು ಕೂದಲು ಕಸಿ ಮಾಡಿಸಿಕೊಳ್ಳುವುದು ನೋಡಬಹುದು.
ನಟ ನಟಿಯರು ತಮ್ಮ ಕೂದಲು ಉದುರುವಿಕೆಗೆ ಕೂದಲು ಕಸಿ ಯಶಸ್ವಿ ಚಿಕಿತ್ಸೆಗೆ ಒಳಗಾಗಿರುವ ಉದಾಹರಣೆಗಳಿವೆ. ಅನೇಕರು ಕಾಸ್ಮೆಟಿಕ್ ಸರ್ಜರಿಗೆ ಒಳಗಾಗಿ ತಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದು ನೋಡಬಹುದು. ಆದ್ರೆ ಈಗೊಂದು ಪ್ರಕರಣ ಎಲ್ಲಾ ಆತ್ಮವಿಶ್ವಾಸವನ್ನು ಆತಂಕಕ್ಕೆ ತಳ್ಳುವಂತೆ ಮಾಡಿದೆ. ಕಾನ್ಪುರದಲ್ಲಿ ಇತ್ತೀಚಿಗೆ ಕೂದಲು ಕಸಿಗೆ ಒಳಗಾದ ವ್ಯಕ್ತಿ ಮೃತಪಟ್ಟಿರುವುದು ಈ ಆತಂಕ ದುಪ್ಪಟ್ಟಾಗಲು ಕಾರಣವಾಗಿದೆ.

ಇದು ಕೂದಲು ಕಸಿ ಚಿಕಿತ್ಸೆಯ ಸುರಕ್ಷತೆ ಹಾಗೂ ಕಾರ್ಯವಿಧಾನಗಳ ಕುರಿತಾಗಿ ಆತಂಕ ಹೆಚ್ಚುವಂತೆ ಹಾಗೆ ಕಳವಳಕ್ಕೆ ಕಾರಣವಾಗುವಂತೆ ಮಾಡಿದೆ. ಇಂಜಿನಿಯರ್ ಒಬ್ಬರು ಕೂದಲು ಕಸಿ ಚಿಕಿತ್ಸೆಗೆ ಒಳಗಾದ ಬಳಿಕ ಅನಾರೋಗ್ಯಕ್ಕೆ ತುತ್ತಾಗಿ ಪ್ರಾಣ ಕಳೆದಕೊಂಡಿದ್ದಾರೆ. ಕೂದಲು ಕಸಿ ಚಿಕಿತ್ಸೆಯ ಬಳಿಕ ಉಂಟಾಗಿದ್ದ ಸೋಂಕು ಅವರನ್ನು ಪ್ರಾಣಕ್ಕೆ ಕುತ್ತು ತಂದಿತ್ತು ಎಂದು ತಿಳಿದುಬಂದಿದೆ.
ಆತ ಶಸ್ತ್ರ ಚಿಕಿತ್ಸೆಗೆ ಒಳಗಾದ ತಕ್ಷಣವೇ ಮೂಖ ಊದಿಕೊಂಡಿತ್ತು. ಹಾಗೆ ತಲೆಯಲ್ಲಿ ಸೋಂಕು ಹರಡಲು ಆರಂಭಿಸಿತ್ತು. ಆದ್ರೆ ಆರಂಭದಿಂದಲೂ ನಿರ್ಲಕ್ಷ್ಯ ಮಾಡಿದ್ದಲ್ಲದೆ ತಡವಾಗಿ ಚಿಕಿತ್ಸೆಗೆ ಒಳಗಾಗಿದ್ದು, ಅವರ ಪ್ರಾಣಕ್ಕೆ ಸಂಚಕಾರ ತಂದಿತು. ಪ್ರಕರಣದ ಬಳಿಕ ಇಂಜಿನಿಯರ್ ಪತ್ನಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕ್ಲೀನಿಕ್ ಹಾಗೂ ಶಸ್ತ್ರ ಚಿಕಿತ್ಸೆ ನೆರವೇರಿಸಿದ್ದ ವೈದ್ಯರ ವಿರುದ್ಧ ಪ್ರಕರಣ ದಾಖಲಾಗಿದೆ.
ಸೋಂಕು ಉಂಟಾಗಲು ಕಾರಣವಾಗಿದ್ದೇನು?
ಕೂದಲು ಕಸಿ ಚಿಕಿತ್ಸೆ ನಿನ್ನೆ ಮೊನ್ನೆ ಆರಂಭಗೊಂಡ ಚಿಕಿತ್ಸಾ ವಿಧಾನವಲ್ಲ. ಇದು ಅತ್ಯಂತ ಸುರಕ್ಷಿತ ಚಿಕಿತ್ಸಾ ವಿಧಾನ ಎಂಬುದು ಈ ಮೊದಲೇ ದೃಢವಾಗಿದೆ. ಹಾಗೆ ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಸಹ ವರದಿಯಾಗಿರುವುದು ಬಹಳ ಕಡಿಮೆ. ಅದರಲ್ಲೂ ಪ್ರಾಣ ಹಾನಿ ಉಂಟಾಗಿರುವುದು ಅಪರೂಪವಾಗಿದೆ. ಇದಕ್ಕೆ ಕಳಪೆ ಚಿಕಿತ್ಸಾಲಯಗಳು, ಸೂಕ್ತ ಸುರಕ್ಷಿತಾ ಮಾಪನ ಮಾಡದೆ ಇರುವುದು, ನುರಿತ ವೈದ್ಯರ ಕೊರತೆಯಂತಹ ಸಮಯದಲ್ಲಿ ಮಾತ್ರವೇ ಇದು ಸಮಸ್ಯೆ ಆಗಿ ಕಾಡಬಹುದು ಎಂದು ಹೇಳಲಾಗಿದೆ.
ಕೂದಲು ಕಸಿ ಮಾಡುವಿಕೆಯು ನೆತ್ತಿಯ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಶಸ್ತ್ರ ಚಿಕಿತ್ಸೆಯ ಮೂಲಕ ಕೂದಲನ್ನು ಕಸಿ ಮಾಡುವುದಾಗಿದೆ. ಈ ಪ್ರಕ್ರಿಯೆಯಲ್ಲಿ ನುರಿತ ತಜ್ಞರ ಅಗತ್ಯವಿರುತ್ತದೆ. ಸಾಕಷ್ಟು ನೈರ್ಮಲ್ಯವಿಲ್ಲದೆ ಅಥವಾ ಅನರ್ಹ ಸಿಬ್ಬಂದಿ ಈ ಕಾರ್ಯವಿಧಾನವನ್ನು ನಡೆಸಿದರೆ, ಸೋಂಕಿನ ಅಪಾಯವು ಹೆಚ್ಚಾಗುತ್ತದೆ, ಇಲ್ಲವೆ ಇದು ಮಾರಕವೂ ಆಗಬಹುದು.
ತುರ್ತು ವೈದ್ಯಕೀಯ ಸೌಲಭ್ಯಗಳಿಲ್ಲದ ಕಾನೂನುಬಾಹಿರ ಅಥವಾ ನೋಂದಾಯಿಸದ ಚಿಕಿತ್ಸಾಲಯಗಳಲ್ಲಿ ತರಬೇತಿ ಪಡೆಯದ ವ್ಯಕ್ತಿಗಳು ಕೆಲವೊಮ್ಮೆ ಇಂತಹ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸುತ್ತಾರೆ. ಈ ಕಸಿ ಚಿಕಿತ್ಸೆಯ ಬಳಿಕ ಊತ, ಜ್ವರ, ನೋವು ಅಥವಾ ಕೀವು ಮುಂತಾದ ಲಕ್ಷಣಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಆದ್ರೆ ಈ ಪ್ರಕರಣದಲ್ಲಿ ನೋವು ಹಾಗೂ ಸೋಂಕನ್ನು ಸಾಮಾನ್ಯ ಅಡ್ಡಪರಿಣಾಮದಂತೆ ಪರಿಗಣಿಸಿದ್ದೇ ಆತನ ಪ್ರಾಣ ಹಾನಿಗೆ ಕಾರಣ ಎನ್ನಬಹುದು.
ಕೂದಲು ಕಸಿ ಚಿಕಿತ್ಸೆಯ ಸಮಯದಿಂದಲೇ ಅದರ ಆರೈಕೆ ಕೂಡ ಅಷ್ಟೇ ಮುಖ್ಯವಾಗುತ್ತದೆ. ನೀರು, ಧೂಳು ಅಥವಾ ಬಾಹ್ಯ ಅಂಶಗಳು ತಲೆಗೆ ತಾಗುವುದು, ಗಾಯವಾಗುವುದು ಸೋಂಕು ಹೆಚ್ಚಾಗಲು ಕಾರಣವಾಗಲಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications