Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಹೆಚ್ಚಾಗುತ್ತಿದೆ ಹಂದಿ ಜ್ವರದ ಭೀತಿ: ಯಾರೆಲ್ಲಾ ಎಚ್ಚರಿಕೆ ವಹಿಸಬೇಕು?
ಚಳಿಗಾಲ ಆರಂಭವಾಗುತ್ತಿದೆ, ಹಗಲಿನಲ್ಲಿ ವಿಪರೀತ ಬಿಸಿಲು ಹಾಗೆ ಸಂಜೆಯಾಗುತ್ತಿದ್ದಂತೆ ಶೀತಗಾಳಿ ಬೀಸಲು ಆರಂಭವಾಗುತ್ತದೆ. ಇದು ಹಲವು ರೀತಿಯಲ್ಲಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಸಾಮಾನ್ಯ. ಇದು ಕಾಲೋಜಿತ ಅನಾರೋಗ್ಯ ಸಮಸ್ಯೆಗಳ ತರುವುದು ನೋಡಬಹುದು. ಅದ್ರಲ್ಲೂ ಹೆಚ್ಚಾಗಿ ನಿಮಗೆ ಶೀತ, ಜ್ವರ, ವೈರಲ್ ಫೀವರ್, ನೆಗಡಿಯಂತಹ ಸಮಸ್ಯೆಗಳು ಎದುರಾಗುವುದು ಸಹ ನೋಡಬಹುದು.
ಇನ್ನು ಆಗಾಗ ಮಹಾನಗರಗಳಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳಲ್ಲಿ ಹಂದಿ ಜ್ವರ ಅಥವಾ ಹೆಚ್1ಎನ್1 ಸಹ ಈಗ ಮತ್ತೆ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಈ ಪ್ರಕರಣಗಳ ಸಂಖ್ಯೆ ನಿಧಾನವಾಗಿ ಏರಿಕೆಯಾಗುತ್ತಿದೆ. ವಾತಾವರಣದಲ್ಲಿನ ಬದಲಾವಣೆ ಸೇರಿದಂತೆ ಹಲವು ಅಂಶಗಳು ಇದಕ್ಕೆ ಕಾರಣವಾಗುತ್ತಿದೆ. ಕೇವಲ H1N1 ಅಲ್ಲದೆ, H3N2 ಪ್ರಕರಣಗಳಲ್ಲೂ ಏರಿಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ರೋಗ ಲಕ್ಷಣಗಳು ಕಂಡುಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಉತ್ತಮ.

ಕಳೆದ ಮಳೆಗಾಲದ ಸಂದರ್ಭದಲ್ಲಿ ಹಂದಿ ಜ್ವರ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿತ್ತು. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಭಾರಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿಲ್ಲ, ಆದರೆ H1N1 ಮತ್ತು H3N2 ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ. ಈ ಸಮಸ್ಯೆಯು ಮಕ್ಕಳು, ಹಿರಿಯ ನಾಗರಿಕರು ಸೇರಿದಂತೆ ಯಾವುದೇ ವಯಸ್ಸಿನವರ ಮೇಲೂ ಪರಿಣಾಮ ಬೀರಬಹುದು.
ಮಕ್ಕಳಿಗೆ ಫ್ಲೂ ಸಂಬಂಧಿತ ಲಸಿಕೆಗಳನ್ನು ನೀಡುವುದರಿಂದ ಅವರಲ್ಲಿ ಗಂಭೀರ ಪ್ರಕರಣಗಳು ಅಷ್ಟಾಗಿ ಕಂಡುಬರುತ್ತಿಲ್ಲ. ವಯಸ್ಕರು ಮತ್ತು ಹಿರಿಯರಲ್ಲಿ ಮಾತ್ರ ಈ ಸಮಸ್ಯೆಯು ಹೆಚ್ಚಾಗಿ ಕಂಡುಬರುತ್ತಿದ್ದು, ಮೊದಲ ಮೂರು ದಿನಗಳಲ್ಲಿ ಶೀತ, ಒಣ ಕೆಮ್ಮು, ಕೀಲು ನೋವು ಮತ್ತು ಭೇದಿಯಂತಹ ಲಕ್ಷಣಗಳು ಕಂಡುಬರುತ್ತದೆ ಎಂದು ತಜ್ಞರು ವಿವರಿಸಿದ್ದಾರೆ.
ಅನೇಕರು ಈ ರೋಗಲಕ್ಷಣಗಳು ಕಾಣಿಸಿಕೊಂಡಾಗ ಮನೆಮದ್ದುಗಳ ಮೊರೆ ಹೋಗುತ್ತಾರೆ ಆದ್ರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಏಕೆಂದರೆ ಸಮಸ್ಯೆಯು ಗಂಭೀರವಾಗಬಹುದು, ಕೆಲವರಲ್ಲಿ ರೋಗಲಕ್ಷಣಗಳು ಕಾಲಕ್ರಮೇಣ ಕಡಿಮೆಯಾಗಬಹುದು. ಉಸಿರಾಟದ ತೊಂದರೆ, ಕಡಿಮೆ ಆಮ್ಲಜನಕದ ಮಟ್ಟ ಮತ್ತು ಉಬ್ಬಸ (wheezing) ಗಂಭೀರವಾದ ಸಮಸ್ಯೆಯ ಲಕ್ಷಣಗಳಾಗಿವೆ.
ಒಣ ಕೆಮ್ಮು ಕಾಣಿಸಿಕೊಳ್ಳುವುದರಿಂದ ರೋಗಿಯಲ್ಲಿ ಹೆಚ್ಚು ಆಯಾಸ ಉಂಟು ಮಾಡುತ್ತದೆ ಹಾಗಾಗಿ ಅನೇಕರು ಆಹಾರ ಸೇವಿಸುವುದನ್ನು ನಿಲ್ಲಿಸುತ್ತಾರೆ, ವಯಸ್ಕರಲ್ಲಿ ಈ ರೀತಿಯ ತೀವ್ರ ರೋಗಲಕ್ಷಣಗಳು ಕಂಡುಬರುತ್ತವೆ. 70 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಜ್ವರ ಕಾಣಿಸಿಕೊಳ್ಳಬಹುದು ಜೊತೆಗೆ ದೀರ್ಘಕಾಲದ ಆಯಾಸ ಕಂಡುಬರುವುದರಿಂದ ಆಹಾರ ತಿನ್ನುವುದನ್ನು ನಿಲ್ಲಿಸುತ್ತಾರೆ. ಒಂದು ವೇಳೆ ಅವರಿಗೆ ಕೆಮ್ಮು ಮತ್ತು ಶೀತದಂತಹ ಲಕ್ಷಣಗಳು ಇಲ್ಲದಿದ್ದರೂ ಸಹ ಹಂದಿ ಜ್ವರ (swine flu) ಲಕ್ಷಣವನ್ನು ಹೋಲುತ್ತದೆ. ಇಂತಹ ಸಂದರ್ಭಗಳಲ್ಲಿ ಮನೆ ಮದ್ದು ಬಳಸುವುದಕ್ಕಿಂತ ಆಸ್ಪತ್ರೆಗೆ ಭೇಟಿ ನೀಡುವುದು ಉತ್ತಮ ಎನ್ನುತ್ತಾರೆ ಬೆಂಗಳೂರಿನ ವಾಸವಿ ಆಸ್ಪತ್ರೆಯ ಆರೋಗ್ಯ ತಜ್ಞರಾದ ಡಾ. ವಿನಯ್ ಹೊಸದುರ್ಗ.
ಹಂದಿ ಜ್ವರ (swine flu)ಕ್ಕೆ ಒಳಗಾದ ರೋಗಿಗಳಿಗೆ ಆರಂಭಿಕ ಚಿಕಿತ್ಸೆ ಅಗತ್ಯವಾದ ಸಮಯಕ್ಕೆ ಸಿಗಬೇಕಾಗುತ್ತದೆ. ಇದು ಗಂಭೀರಗೊಂಡ ಸಂದರ್ಭದಲ್ಲಿ ಆಮ್ಲಜನಕದ ಕೊರತೆ ಉಂಟಾದಾಗ ಕೆಲವು ರೋಗಿಗಳಿಗೆ ವೆಂಟಿಲೇಟರ್ ನೆರವಿನ ಅಗತ್ಯವಿರುತ್ತದೆ. ಆರಂಭಿಕ ಚಿಕಿತ್ಸೆಯ ಜೊತೆಗೆ ವೆಂಟಿಲೇಟರ್‌ನಲ್ಲಿರಿಸಿ ಚಿಕಿತ್ಸೆ ನೀಡುವುದರಿಂದಲೂ ಚೇತರಿಕೆಯ ಸಾಧ್ಯತೆಗಳು ಹೆಚ್ಚಾಗಿರುತ್ತದೆ.
ಬೇರೆ ರೀತಿಯ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ ರೋಗಿಗಳಲ್ಲಿ ಈ ಸಮಸ್ಯೆಯು ಕಂಡುಬಂದಾಗ ಅಪಾಯ ಮಟ್ಟ ಹೆಚ್ಚಾಗಿರುತ್ತದೆ.
ಈ ಸಮಸ್ಯೆಗೆ ನಿರ್ದಿಷ್ಟ ಚಿಕಿತ್ಸೆ ಲಭ್ಯವಿದ್ದು, ರೋಗ ಪತ್ತೆಹಚ್ಚುವಿಕೆ ಸುಲಭವಾಗಿರುವುದಿಲ್ಲ. ಏಕೆಂದರೆ ರಕ್ತ ಪರೀಕ್ಷೆಯಲ್ಲಿ ಈ ಆರೋಗ್ಯ ಸಮಸ್ಯೆಯು ಪತ್ತೆಯಾಗುವುದಿಲ್ಲ, ಬದಲಿಗೆ ಗಂಟಲು ಸ್ವಾಬ್ (throat swab) ಪರೀಕ್ಷೆಯಲ್ಲಿ ಪತ್ತೆ ಮಾಡಬಹುದು.
ಹಂದಿ ಜ್ವರ ಹರಡುವುದನ್ನು ತಡೆಗಟ್ಟಲು ವೈದ್ಯರ ಸಲಹೆ
ಸಾರ್ವಜನಿಕವಾಗಿ ಪ್ರಯಾಣಿಸುವಾಗ ಅಥವಾ ಜನಸಂದಣಿಯ ಸ್ಥಳಗಳಲ್ಲಿ ಸೇರುವುದು, ಧೂಮಪಾನಿಗಳು, 55 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ದೀರ್ಘಕಾಲದ ಮಧುಮೇಹ ಹೊಂದಿರುವವರು ಮತ್ತು ಡಯಾಲಿಸಿಸ್‌ನಲ್ಲಿರುವ ವ್ಯಕ್ತಿಗಳು ಹೆಚ್ಚಿನ ಅಪಾಯವನ್ನು ಎದುರಿಸಲಿದ್ದಾರೆ. ಇದಕ್ಕೆ ಚುಚ್ಚುಮದ್ದು ಲಭ್ಯವಿದ್ದು, ಹೆಚ್ಚಿನ ಅಪಾಯದಲ್ಲಿರುವವರು ಸಹ ಈ ಚುಚ್ಚುಮದ್ದನ್ನು ಪಡೆಯಬಹುದು. ಅದಲ್ಲದೆ ಇದು ವೈರಲ್ ಸ್ಟ್ರೈನ್‌ನಲ್ಲಿನ ಬದಲಾವಣೆಗಳನ್ನು ಆಧರಿಸಿರುತ್ತದೆ.
ಹಂದಿ ಜ್ವರ (swine flu) ಹರಡುವಿಕೆಯನ್ನು ತಡೆಗಟ್ಟುವ ಪ್ರಮುಖ ವಿಧಾನಗಳೆಂದರೆ ನೈರ್ಮಲ್ಯ ಕಾಪಾಡುವುದು, ಮಾಸ್ಕ್ ಮತ್ತು ಸ್ಯಾನಿಟೈಜರ್ ಬಳಕೆ, ಆಗ್ಗಾಗ್ಗೆ ಮುಖವನ್ನು ಮುಟ್ಟುವುದನ್ನು ತಪ್ಪಿಸುವುದು, ಕರವಸ್ತ್ರದ ಬದಲು ಟಿಶ್ಯೂ ಪೇಪರ್ ಬಳಸುವುದು ಮತ್ತು ಆಗ್ಗಾಗ್ಗೆ ನೀರಿನಲ್ಲಿ ಕೈಗಳನ್ನು ತೊಳೆಯುವುದು. ಜೊತೆಗೆ ಉತ್ತಮ ಪ್ರಮಾಣದ ಪೋಷಣೆಯುಳ್ಳ ಆಹಾರವನ್ನು ಸೇವಿಸುವುದರಿಂದ ದೇಹಕ್ಕೆ ಸಹಾಯವಾಗುತ್ತದೆ. ಈ ರೋಗದ ಕುರಿತು ಹೆಚ್ಚು ಭಯಪಡುವ ಅಗತ್ಯವಿಲ್ಲ ಎಂದು ಡಾ. ವಿನಯ್ ಹೊಸದುರ್ಗ ಸಲಹೆ ನೀಡುತ್ತಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications












