Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಗೋವಾದಲ್ಲಿ ಗೋಬಿ ಮಂಚೂರಿ ಬ್ಯಾನ್: ಗೋಬಿ ಗರಿಗರಿಯಾಗಲು ಡಿಟರ್ಜೆಂಟ್ ಬಳಸುತ್ತಾರಂತೆ!
ಗೋಬಿ ಮಂಚೂರಿ ಯಾರಿಗೆ ತಾನೆ ಇಷ್ಟವಾಗಲ್ಲ, ಅದರ ಕೆಂಪು ಬಣ್ಣ, ಅದರ ಸುವಾಸನೆ ಇಷ್ಟೇ ಸಾಕು ಒಂದು ಪ್ಲೇಟ್ ಗೋಬಿ ಎಂದು ಆರ್ಡರ್ ಮಾಡಲು.
ಸ್ನ್ಯಾಕ್ಸ್ ಐಟಂಗಳಲ್ಲಿ ಮೋಸ್ಟ್ ಡಿಮ್ಯಾಂಡಿಂಗ್ ಫುಡ್. ಅದರಲ್ಲೂ ರಸ್ತೆ ಬದಿಯಲ್ಲಿ ವ್ಯಾಪಾರಿ ಗೋಬಿ ಮಾರಾಟ ಮಾರುತ್ತಿದ್ದರೆ ಗ್ರಾಹಕರಿಗೆ ಯಾವುದೇ ಬರವಿರಲ್ಲ, ಆದರೆ ಈ ವಿಷಯ ತಿಳಿದ ಮೇಲೆ ಗೋಬಿ ತಿನ್ನಲು ಹಿಂದೇಟು ಹಾಕುವಿರಿ.

ಗೋಬಿಯನ್ನು ಬ್ಯಾನ್ ಮಾಡಿದ ಗೋವಾ
ಗೋಬಿಯಲ್ಲಿರುವ ಅಪಾಯಕಾರಿ ಅಂಶಗಳನ್ನು ತಿಳಿದ ಗೋವಾ ಸರ್ಕಾರ ಗೋಬಿ ಬ್ಯಾನ್ ಮಾಡಿದೆ, ಯಾರಾದರೂ ಗೋಬಿ ಮಾರಿದರೆ ಅವರ ಹೋಟೆಲ್ ನಡೆಸುವ ಲೈಸೆನ್ಸ್ ಕೂಡ ರದ್ದು ಮಾಡಲಾಗುವುದು ಎಂಬ ಆದೇಶ ಹೊರಡಿಸಿದೆ.
ಗೋಬಿಯಲ್ಲಿ ಬಳಸಲಾಗುತ್ತಿದೆ ಕಳಪೆ ಮಟ್ಟದ ಸಾಸ್
ಗೋಬಿ ರುಚಿಯಾಗಬೇಕೆಂದರೆ ಸಾಸ್ ಪಾತ್ರ ಪ್ರಮುಖವಾದದ್ದು, ಚಿಲ್ಲಿ ಸಾಸ್, ಸೋಯ ಸಾಸ್, ಟೊಮೆಟೊ ಸಾಸ್ ಹಾಕಿ ಮಾಡುವ ಈ ಗೋಬಿಯನ್ನು ಬಾಯಿಗಿಟ್ಟರೆ ಅದರೆ ರುಚಿಗೆ ಕರಗಿ ಹೋಗುತ್ತೇವೆ, ಆದರೆ ಆ ರುಚಿ ನಮ್ಮ ಆರೋಗ್ಯವನ್ನೂ ಕರಗಿಸುತ್ತದೆ ಎಂಬ ಆಘಾತಕಾರಿ ಅಂಶ ತಿಳಿದು ಬಂದಿದೆ. ಗೋಬಿ ಮಾಡಲು ತುಂಬಾ ವ್ಯಾಪಾರಿಗಳು ತುಂಬಾನೇ ಕಳಪೆ ಗುಣಮಟ್ಡದ ಸಾಸ್‌ಗಳನ್ನು ಬಳಸುತ್ತಿದ್ದಾರೆ.
ಡಿಟರ್ಜೆಂಟ್ ಹಾಕಿ ಮಾಡಲಾಗುವುದು
ಇದು ಕೇಳಿದಾಗ ಬೆಚ್ಚಿ ಬೀಳುತ್ತೀವಿ ಅಲ್ವಾ, ಹೌದು ಹೂಕೋಸು ಫ್ರೈ ಮಾಡಿ ಗೋಬಿ ಮಾಡುತ್ತಾರೆ ಎಂಬುವುದು ನಮಗೆ ಗೊತ್ತು, ಆ ಗರಿ ಗರಿ ಗೋಬಿಯನ್ನು ನಾವು ಕೆಲವೊಮ್ಮೆ ಡ್ರೈ ಗೋಬಿಯನ್ನಾಗಿ ತಿನ್ನಲು ಇಷ್ಟಪಡುತ್ತೇವೆ, ಅದೇ ಮನೆಯಲ್ಲಿ ಮಾಡಿದರೆ ಅಷ್ಟು ಗರಿಗರಿ ಬರುವುದಿಲ್ಲ, ಗೋಬಿ ಗರಿಗರಿಯಾಗಿ ಬರಲು ಡಿಟರ್ಜೆಂಟ್ ಪೌಡರ್ ಬಳಸುತ್ತಿದ್ದಾರೆ. ಇದು ಗೋವಾ ಮಾತ್ರವಲ್ಲ ತುಂಬಾ ಕಡೆ ಕಂಡು ಬರುತ್ತಿದೆ, ಆದರೆ ಈ ವಿಷಯ ತಿಳಿದ ಗೋವಾ ಸರ್ಕಾರ ಗೋಬಿ ಮಂಚೂರಿಯನ್‌ಯನ್ನು ಬ್ಯಾನ್ ಮಾಡಿದೆ.
ಶುಚಿತ್ವ ಇರುವುದಿಲ್ಲ
ಬೀದಿ ಬದಿಯ ವ್ಯಾಪಾರಿಗಳು ಶುಚಿತ್ವ ಕಡೆಗೆ ಗಮನ ನೀಡುವುದು ಕಡಿಮೆ, ಇಂಥ ಕಡೆ ತಿನ್ನುವುದರಿಂದ ಆರೋಗ್ಯಕ್ಕೆ ಹಾನಿಯುಂಟಾಗುವುದು. ಅಲ್ಲದೆ ಎಣ್ಣೆ ಕೂಡ ಅಷ್ಟೇ ಕರಿದ ಎಣ್ಣೆಯನ್ನೇ ಪದೇ ಪದೇ ಬಳಸುತ್ತಾರೆ. ಇಂಥ ಎಣ್ಣೆ ಬಳಸುವುದರಿಂದ ಆರೋಗ್ಯಕ್ಕೆ ಹಾನಿಯಾಗುವುದು.
ಕೆಂಪು ಬಣ್ಣ
ಇನ್ನು ಗೋಬಿ ಕೆಂಪಾಗಿ ಆಕರ್ಷಿಸಲು ರಾಸಾಯನಿಕ ಬಣ್ಣಗಳನ್ನು ಬಳಸುತ್ತಾರೆ, ಈ ಎಲ್ಲಾ ಕಾರಣಗಳಿಂದಲೇ ನೀವು ಗೋಬಿ ತಿಂದಾಗ ಹೊಟ್ಟೆ ಹಾಳಾಗುವುದು ಉಂಟಾಗುವುದು.
ಗೋಬಿ ತಿನ್ನಬೇಕೆಂದು ಅನಿಸಿದರೆ ಮನೆಯಲ್ಲಿ ಮಾಡಿ ಹೊರಗಡೆ ತಿನ್ನಲು ಹೋಗಬೇಡಿ..
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
