Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರಕ್ಕೆ 5 ನಿಮಿಷದಲ್ಲಿ ಪರಿಹಾರ ಮಾಡಿ.! ಇಲ್ಲಿದೆ ಮನೆಮದ್ದು
ಇತ್ತೀಚಿಗೆ ಜನರನ್ನು ಗೆಚ್ಚಾಗಿ ಕಾಡುತ್ತಿರುವ ಸಮಸ್ಯೆಗಳಲ್ಲಿ ಈ ಗ್ಯಾಸ್ಟ್ರಿಕ್ ಸಮಸ್ಯೆ ಸಹ ಒಂದಾಗಿದೆ. ಗ್ಯಾಸ್ಟ್ರಿಕ್‌ಗೆ ಹಲವು ಮದ್ದುಗಳಿದ್ದರೂ ಹಲವರು ಬಳಲುತ್ತಿದ್ದಾರೆ. ಇತ್ತೀಚಿಗೆ ಈ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ದೊಡ್ಡವರು ಮಾತ್ರವಲ್ಲ ಚಿಕ್ಕ ವಯಸ್ಸಿನವರು ಸಹ ಪರದಾಡುವಂತಾಗಿದೆ. ಅಲ್ಲದೆ ಗ್ಯಾಸ್ಟ್ರಿಕ್ ಸಮಸ್ಯೆಯು ಮುಂದೆ ಬಹಳ ದೊಡ್ಡ ಸಮಸ್ಯೆಯಾಗಿ ಪರಿಣಮಿಸಬಹುದು.
ಈ ಗ್ಯಾಸ್ಟ್ರಿಕ್ ಇದ್ದವರು ಹೆಚ್ಚಾಗಿ ಮಾತ್ರೆ ಸೇವಿಸುವುದು ಹಾಗೂ ಕೆಲವು ಜ್ಯೂಸ್, ಡ್ರಿಂಕ್ಸ್ ಕುಡಿಯುವ ಮೂಲಕ ಕ್ಷಣಿಕ ಪರಿಹಾರದ ಮೊರೆಹೋಗುತ್ತಾರೆ. ಇದು ಕೆಲ ಹೊತ್ತು ನೆಮ್ಮದಿ ನೀಡಿದರೂ ದೀರ್ಘ ಕಾಲದ ಸಮಸ್ಯೆಯಿಂದ ತಪ್ಪಿಸುವುದಿಲ್ಲ, ಜೊತೆಗೆ ಪರಿಹಾರವನ್ನೂ ನೀಡುವುದಿಲ್ಲ. ಹಾಗಾದ್ರೆ ಗ್ಯಾಸ್ಟ್ರಿಕ್ ಸಮಸ್ಯೆಗೆ ಮನೆಯಲ್ಲೇ ಹೇಗೆ ಪರಿಹಾರ ಮಾಡಬೇಕು.? ಇದಕ್ಕೆ ಯಾವ ಗಿಡಮೂಲಿಕೆಯಲ್ಲಿ ಪರಿಹಾರವಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಶುಂಠಿ-ಪುದಿನ ಡ್ರಿಂಕ್
ಮೊದಲು ಶುಂಠಿಯನ್ನ ಚೆನ್ನಾಗಿ ಜಜ್ಜಿಕೊಂಡು ಅದನ್ನು ಒಂದು ಗ್ಲಾಸ್‌ಗೆ ಹಾಕಿಕೊಳ್ಳಿ, ಬಳಿಕ ಇದಕ್ಕೆ ನೀರು ಹಾಕಿ ನೀರಿಗೆ ಸೋಂಕಾಳು, ಜೀರಿಗೆ, ಇಂಗು, 2 ಪುದೀನ ಎಲೆಗಳ ಹಾಕಿ ಅದನ್ನು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಕುದಿಯಲು ಬಿಡಿ. ಬಳಿಕ ಇದನ್ನು ಚೆನ್ನಾಗಿ ಆರಿಸಿ ಶೋಧಿಸಿ ಕುಡಿಯಿರಿ. ಹೀಗೆ ಕುಡಿಯುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಯಾಗಲಿದೆ.
ಜೇಷ್ಢ ಮಧು/ ಯಷ್ಠಿ ಮಧು
ಈ ಜೇಷ್ಠ ಮದು ಆರ್ಯುವೇದದಲ್ಲಿ ಬಹಳ ಉಪಯೋಗ ಮಾಡುತ್ತಾರೆ. ಇದನ್ನು ಪೇಸ್ಟ್ ರೀತಿ ನಾಲ್ಕೈದು ಹನಿಯಷ್ಟು ಬಿಸಿ ನೀರಿನ ಜೊತೆ ಬೆರೆಸಿ ಬಳಿಕ ಕುಡಿಯುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ದೂರಾಗಬಹುದು.
ಆಪಲ್ ಸಿಡರ್ ವಿನೆಗರ್
ಹೊಟ್ಟೆಯಲ್ಲಿ ಆಸಿಡ್ ಹೆಚ್ಚಾಗಲು ಪಿಹೆಚ್ ಲೆವೆಲ್ ಹೆಚ್ಚಾಗುವುದು ಕಾರಣವಾಗಿರುತ್ತದೆ. ಅಲ್ಲಿ ಆಕ್ಲೈನ್ ಹೆಚ್ಚಾದಾಗ ಹುಳಿ ತೇಗು, ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಹೀಗಾದಾಗ, ಒಂದು ಚಮಚ ಆಪಲ್ ಸಿಡರ್ ವಿನಿಗರ್ ಅನ್ನು ನೀರಿನ ಜೊತೆ ಮಿಕ್ಸ್ ಮಾಡಿ ಊಟಕ್ಕೂ ಮೊದಲು ಅರ್ಧ ಗಂಟೆ ಮೊದಲು ಸೇವಿಸುತ್ತಾ ಬರಬೇಕು. ಹೀಗೆ ಮಾಡುವುದರಿಂದ ಆಸಿಡಿಟಿ ಲೆವೆಲ್ ಕಡಿಮೆ ಮಾಡುತ್ತದೆ.
ಜೀರಿಗೆ
ಒಂದು ಲೋಟ ನೀರಿಗೆ ಒಂದು ಚಮಚ ನೀರಿಗೆ ಒಂದು ಚಿಟಿಕೆ ಒಂಕಾಳು, ಕೊತ್ತಂಬರಿ ಕಾಳು ಜಜ್ಜಿ ಹಾಕಿಕೊಂಡು ಒಲೆ ಮೇಲೆ ಇಟ್ಟು ಎರಡು ಮೂರು ನಿಮಿಷ ಕುದಿಬರುವವರೆ ಬಿಟ್ಟು ಬಳಿಕ ಕುಡಿಯಬೇಕು.
ಶುಂಠಿ ಜ್ಯೂಸ್
ಶುಂಠಿ ತೆಗೆದುಕೊಂಡು ಚೆನ್ನಾಗಿ ಕುಟ್ಟಿ ಪುಡಿ ಮಾಡಿ ನೀರಿನಲ್ಲಿ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಬಳಿಕ ಇದಕ್ಕೆ ಎರಡು ಕೊತ್ತಂಬರಿ ಕಾಳು, ಜೀರಿಗೆ ಪುಡಿ ಮಾಡಿ ಹಾಕಿ ಹಾಗೆಯೇ ಕುಡಿಯಬೇಕು. ಇದನ್ನು ಊಟದ ಬಳಿಕವೂ ತೆಗೆದುಕೊಳ್ಳಬಹುದು.
ಇಂಗು
ಒಂದು ಚಿಟಿಕೆ ಇಂಗನ್ನು ಒಂದು ಪಾತ್ರೆಗೆ ಹಾಕಿ ಸ್ವಲ್ಪ ತುಪ್ಪದ ಜೊತೆಗೆ ಹಾಕಿ ಫ್ರೈ ಮಾಡಿಕೊಳ್ಳಬೇಕು. ಬಳಿಕ ಕಜ್ಜಿಗೆಗೆ ಹಾಕಿ ಚೆನ್ನಾಗಿ ಕದಡಿ ಬಳಿಕ ಕುಡಿಯಬೇಕು. ಹೀಗೆ ಮಾಡಿದ್ರೆ ತಕ್ಷಣವೇ ಗ್ಯಾಸ್ಟ್ರಿಕ್ ಮಾಯವಾಗುತ್ತದೆ.
ಅಣಲೆ ಕಾಯಿ ಪೌಡರ್
ಈ ಅಣಲೆ ಕಾಯಿ ಪೌಡರ್ ಅನ್ನು ನೀರಿನ ಜೊತೆ ಮಿಕ್ಸ್ ಮಾಡಿ ದಿನ ರಾತ್ರಿ ಮಲಗುವಾಗ ಕುಡಿದರೆ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಯಾಗಲಿದೆ. ಇದು ಮಲಬದ್ಧತೆಗೂ ಕೂಡ ಅತ್ಯುತ್ತಮ ಔಷಧವಾಗಿದೆ.
ಬೆಳ್ಳುಳ್ಳಿ ಮತ್ತು ಈರುಳ್ಳಿ
ಅರ್ಧ ಈರುಳ್ಳಿ ಹಾಗೂ 3 ಎಸಳು ಬೆಳ್ಳುಳ್ಳಿ ಜೊತೆ ಸ್ವಲ್ಪ ಉಪ್ಪು ಸೇರಿಸಿ ಚೆನ್ನಾಗಿ ಕುಟ್ಟಿ ಪುಡಿ ಮಾಡಬೇಕು. ಬಳಿಕ ಇದನ್ನು ಒಂದು ಗ್ಲಾಸ್ ಮಜ್ಜಿಗೆಗೆ ಹಾಕಿಕೊಂಡು ಕುಡಿದರೆ ಗ್ಯಾಸ್ಟ್ರಿಕ್ ಕಡಿಮೆಯಾಗುತ್ತದೆ. ಆದ್ರೆ ಇದು ಕೆಲವರಿಗೆ ಆಗುವುದಿಲ್ಲ. ಇದನ್ನು ಕುಡಿದಾಗ ಹೊಟ್ಟೆ ಉಬ್ಬರ ಕಾಣಿಸಿಕೊಳ್ಳಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











