Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಮಳೆಗಾಲದಲ್ಲಿ ಕಾಡುವ ಶೀತ, ಕೆಮ್ಮಿಗೆ ಲೈಫ್‌ಸ್ಟೈಲ್ ಎಕ್ಸ್‌ಪರ್ಟ್ ಸೂಚಿಸಿದ ಕಷಾಯವಿದು: 13 ವರ್ಷಗಳಿಂದ ಅವರ ಕ್ಲೈಂಟ್ಸ್‌ಗೆ ಇದು
ಮಳೆಗಾಲದಲ್ಲಿ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಯೆಂದರೆ ಶೀತ, ಕೆಮ್ಮು. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಈ ಸಮಸ್ಯೆ ಕಾಡತ್ತದೆ. ಪ್ರಸಿದ್ಧ ಲೈಫ್‌ಸ್ಟೈಲ್ ಎಕ್ಸ್‌ಪರ್ಟ್ ಲುಕೆ ಕೌಂಟಿನೋ ಅವರು ಈ ಸಾಮಾನ್ಯ ಸಮಸ್ಯೆಗೆ ಸಿಂಪಲ್ ಟಿಪ್ಸ್ ನೀಡಿದ್ದು, ಈ ಟಿಪ್ಸ್ ಅವರ ಕ್ಲೈಂಟ್ಸ್‌ಗೆ ಕಳೆದ 13 ವರ್ಷದ ಸೂಪರ್ ಆಗಿ ವರ್ಕ್ ಆಗಿದೆ ಎಂಬುವುದಾಗಿ ಹೇಳಿದ್ದಾರೆ.

ಸಾಮಾನ್ಯ ಶೀತ-ಕೆಮ್ಮಿಗೆ ಪರಿಣಾಮಕಾರಿ ಮನೆಮದ್ದು
1/2 ಚಮಚ ಅರಿಶಿಣ ಪುಡಿ
1/2 ಚಮಚಶುಂಠಿ ಪುಡಿ ಅಥವಾ 1/2 ಇಂಚು ಹಸಿ ಶುಂಠಿ
1 ಚಮಚ ನಿಂಬೆರಸ
ಸ್ವಲ್ಪ ಚಕ್ಕೆ ಪುಡಿ ( ಇದು ಬೇಡ ಅಂದರೆ ಸ್ಕಿಪ್ ಮಾಡಬಹುದು)
ನಿಂಬೆರಸ ಬಿಟ್ಟು ಉಳಿದ ಸಾಮಗ್ರಿ ಹಾಕಿ 5 ನಿಮಿಷ ಕುದಿಸಿ, ನಂತರ 1 ಚಮಚ ಜೇನು , 1 ಚಮಚ ನಿಂಬೆರಸ ಮಿಕ್ಸ್ ಮಾಡಿ ಕುಡಿಯಿರಿ, ಈ ಕಷಾಯವನ್ನು 15ml ದಿನದಲ್ಲಿ ಎರಡು ಬಾರಿ ಕುಡಿದರೆ ಕೆಮ್ಮು, ಶೀತ ಕಡಿಮೆಯಾಗುವುದು.
ಈ ಕಷಾಯದಲ್ಲಿರುವ ಗುಣಗಳು
ಅರಿಶಿಣ: ಇದರಲ್ಲಿ ಆಂಟಿಬ್ಯಾಕ್ಟಿರಿಯಾ ಗುಣವಿದೆ ಹಾಗಾಗಿ ಅರಿಶಿಣ ಬ್ಯಾಕ್ಟಿರಿಯಾ, ಸೋಂಕುಗಳ ವಿರುದ್ಧ ಹೋರಾಡಲು ತುಂಬಾನೇ ಸಹಾಯ ಮಾಡುತ್ತದೆ.
ಕೆಮ್ಮು-ಶೀತ ಕಡಿಮೆ ಮಾಡಲು , ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಅರಿಶಿಣ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಶುಂಠಿ: ಶುಂಠಿ ಕೆಮ್ಮು-ಶೀತ ಈ ಬಗೆಯ ಸಮಸ್ಯೆಗೆ ರಾಮಬಾಣ. ಹಲವುಮನೆಮದ್ದುಗಳಲ್ಲಿ ಶುಂಠಿಯನ್ನು ಸೇರಿಸಲಾಗುವುದು. ಶುಂಠಿ ಬಳಸುವುದರಿಂದ ಗಂಟಲು ಕೆರೆತ, ವಿಪರೀತ ಕಾಡುವ ಕೆಮ್ಮು ಕಡಿಮೆಯಾಗುವುದು. ಹಾಗಾಗಿ ಮಳೆಗಾಲದಲ್ಲಿ ಶುಂಠಿಯನ್ನು ನಿಯಮಿತವಾಗಿ ಬಳಸಲು ಸಲಹೆ ನೀಡಲಾಗುವುದು.
ನಿಂಬೆರಸ: ನಿಂಬೆರಸದಲ್ಲಿ ವಿಟಮಿನ್ ಸಿ ಇದೆ, ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಅಲ್ಲದೆ ಕೆಮ್ಮು-ಶೀತ ಈ ಬಗೆಯ ಸಮಸ್ಯೆ ತಡೆಗಟ್ಟಲು ತುಂಬಾನೇ ಸಹಕಾರಿಯಾಗಿದೆ.
ಚಕ್ಕೆ ಪುಡಿ: ಈ ಚಕ್ಕೆಪುಡಿ ಗಂಟಲು ಕರೆತ ತಡೆಗಟ್ಟಲು ಸಹಕಾರಿ. ಆದರೆ ಕೆಲವರಿಗೆ ಚಕ್ಕೆಯ ವಾಸನೆ ಆಗಲ್ಲ, ಅಂಥವರು ಇದನ್ನು ಬಳಸಿದೆ ಇರಬಹುದು, ಈ ಚಕ್ಕೆಯನ್ನು ಬಳುಸವುದರಿಂದ ಸೋಂಕಾಣುಗಳ ವಿರುದ್ಧ ಹೋರಾಡುತ್ತದೆ.
ಜೇನು: ಶೀತ, ಕೆಮ್ಮಿಗೆ ಜೇನು ಕೂಡ ಪರಿಣಾಮರಿ, ನೀವು ಈ ಮಿಶ್ರಣಕ್ಕೆ ಜೇನು ಸೇರಿಸುವುದರಿಂದ ಇದರಲ್ಲಿರುವ ಆ್ಯಂಟಿಬ್ಯಾಕ್ಟಿರಿಯಾ ರೋಗಾಣುಗಳ ವಿರುದ್ಧ ಹೋರಾಡುತ್ತದೆ.
ಹಾಗಾಗಿ ಈ ಕಷಾಯ ಹೆಚ್ಚು ಪರಿಣಾಮಕಾರಿ
ನೀವು ಈ ಕಷಾಯ ಮಾಡಿ ಕುಡಿಯುವುದರಿಂದ ಇವುಗಳ ಅಷ್ಟೂ ಪ್ರಯೋಜನ ಸಿಗುವುದು ಹಾಗಾಗಿ ಕೆಮ್ಮು-ಶೀತ ಈ ಬಗೆಯ ಸಮಸ್ಯೆಗೆ ಅತ್ಯುತ್ತಮವಾದ ಮನೆಮದ್ದಾಗುದೆ, ಅಲ್ಲದೆ ಈ ಕಷಾಯ 5 5ml ಚಿಕ್ಕ ಮಕ್ಕಳಿಗೂ ನೀಡಬಹುದು. ತುಂಬಾ ಚಿಕ್ಕ ಮಕ್ಕಳಿಗೆ ನೀಎಬೇಡಿ, ಒಂದು ವರ್ಷದ ಮೇಲಿನ ಮಕ್ಕಳಿಗೆ ನೀಡಬಹುದು.
ಅಡ್ಡಪರಿಣಾಮವಿದೆಯೇ?
ಈ ಕಷಾಯದ ಮತ್ತೊಂದು ಪ್ರಯೋಜನವೆಂದರೆ ಈ ಕಷಾಯ ಸೇವನೆಯಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ. ಸಾಮಾನ್ಯ ಶೀತ-ಕೆಮ್ಮಿಗೆ ಇದನ್ನು ಟ್ರೈ ಮಾಡಿ ಖಂಡಿತ ಸಕ್ಸಸ್ ಸಿಗುತ್ತೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
