Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹೆಲ್ತ್‌ಗೆ ಡೇಂಜರ್! ಮಳೆಗಾಲದಲ್ಲಿ ಅಪ್ಪಿತಪ್ಪಿಯೂ ಈ ಫುಡ್ ತಿನ್ನಬೇಡಿ.. ಬಿಟ್ಟುಬಿಡಿ
ಮತ್ತೆ ಮಳೆಗಾಲ ಬಂದಿದೆ, ರೋಗ ತರುತ್ತಿದೆ! ಹವಾಮಾನದಲ್ಲಿನ ದಿಢೀರ್ ಬದಲಾವಣೆಯೊಂದಿಗೆ ಆರೋಗ್ಯ ಸಮಸ್ಯೆಗಳು ಬರುತ್ತವೆ. ದೇಹದ ಉಷ್ಣತೆಯ ಇಳಿಕೆಯಿಂದಾಗಿ ಅನೇಕ ಜನರು ವಿವಿಧ ಕಾಯಿಲೆಗಳಿಗೆ ಬಲಿಯಾಗುತ್ತಾರೆ. ಹೌದು, ಮಳೆಗಾಲದಲ್ಲಿ (Monsoon season) ತಿನ್ನುವ ಆಹಾರದ ಬಗ್ಗೆ ಎಚ್ಚರವಹಿಸಬೇಕು. ಬಾಯಿ ರುಚಿಗೆ ತಿನ್ನಲು ಹೋದರೆ ಕಾಯಿಲೆಗೆ ತುತ್ತಾಗುವುದು ಖಚಿತ. ಅದಕ್ಕಾಗಿಯೇ ವೈದ್ಯಕೀಯ ತಜ್ಞರು ಈ ಮನ್ಸೂನ್‌ನಲ್ಲಿ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಸಲಹೆ ನೀಡುತ್ತಾರೆ. ಅದರಂತೆ ನೀವು, ಮಳೆಗಾಲದಲ್ಲಿ ಈ ಐದು ಆಹಾರಗಳನ್ನು (Five Foods You Should Avoid During Monsoon) ತಿನ್ನಬಾರದು. ಅವು ಯಾವುವು ಎಂಬುದನ್ನು ಇಲ್ಲಿ ನೋಓಡೋಣ.
ಮಳೆಗಾಲ ಎಂದರೆ ಮೋಜು. ಶೀತ ಮತ್ತು ಕೆಮ್ಮು, ಕಾಲೋಚಿತ ಅಲರ್ಜಿಗಳು, ವೈರಲ್ ಜ್ವರ, ಡೆಂಗ್ಯೂ, ಮಲೇರಿಯಾ ಮತ್ತು ಹೊಟ್ಟೆಯ ಸೋಂಕುಗಳು ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ನಮ್ಮೊಂದಿಗೆ ಬರುತ್ತವೆ. ಆದರೆ, ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಮುಖ್ಯ. ಇದು ಸಾಧ್ಯವಾಗಬೇಕಾದರೆ, ಈ ಮಳೆಗಾಲದಲ್ಲಿ ನಮ್ಮನ್ನು ಪ್ರಚೋದಿಸುವ ಕೆಲವು ಆಹಾರಗಳನ್ನು ಸೇವಿಸುವುದಕ್ಕೆ ಕಡಿವಾಣ ಹಾಕುವುದು ಅತ್ಯಗತ್ಯ. ಏಕೆಂದರೆ, ಅವು ನಮ್ಮ ಒಟ್ಟಾರೆ ಆರೋಗ್ಯ ಮತ್ತು ಸ್ವಾಸ್ಥ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ. ಸ್ವಲ್ಪ ಎಚ್ಚರ ತಪ್ಪಿದರೆ, ನೀವು ಕಾಯಿಲೆ ಬೀಳ ಬೇಕಾಗುತ್ತದೆ.

ಮಳೆಗಾಲದಲ್ಲಿ ತಿನ್ನಬಾರದ ಆಹಾರಗಳು
1. ಬೀದಿ ಬದಿಯ ಆಹಾರ ತಿನ್ನಲೇಬಾರದು
ಮಳೆಗಾಲದಲ್ಲಿ ಬೀದಿ ಬದಿಯ ಆಹಾರವನ್ನು ತಿನ್ನಲೇಬಾರದು ಎಂದು ಆರೋಗ್ಯ ತಜ್ಞರ ಹೇಳುತ್ತಾರೆ. ಗಾಡಿಗಳಲ್ಲಿ ಮಾರಾಟ ಮಾಡುವ ಸಮೋಸ, ಬಜ್ಜಿ ಮತ್ತು ಪಾನಿಪುರಿ ಸೇರಿದಂತೆ ಇನ್ನಿತರ ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಬೇಕು. ಏಕೆಂದರೆ, ಅಲ್ಲಿ ಸ್ವಚ್ಛತೆಯ ಕೊರತೆ ಇರುತ್ತದೆ. ಹೊರಗಿನ ಆಹಾರವನ್ನು ತಿನ್ನುವುದರಿಂದ ಹೊಟ್ಟೆಯ ಸೋಂಕುಗಳು, ಹೊಟ್ಟೆ ನೋವು ಮತ್ತು ಅತಿಸಾರದಂತಹ ಸಮಸ್ಯೆಗಳು ಉಂಟಾಗಬಹುದು. ಹೀಗಾಗಿ, ಬೀದಿ ಬದಿಯ ಆಹಾರದಿಂದ ದೂರವಿರುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.
2. ಸಿಟ್ರಸ್ ಹಣ್ಣುಗಳಿಂದ ದೂರವಿರಬೇಕು
ಸಿಟ್ರಸ್ ಹಣ್ಣುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇವು ವಿಟಮಿನ್ 'ಡಿ' ಮತ್ತು 'ಸಿ' ಅಂತಹ ಪೋಷಕಾಂಶಗಳನ್ನು ಹೊಂದಿರುತ್ತವೆ. ಆದರೆ, ಮಳೆಗಾಲದಲ್ಲಿ ಇವುಗಳನ್ನು ಹೆಚ್ಚಾಗಿ ತಿನ್ನಬಾರದು. ಏಕೆಂದರೆ, ನಿರ್ದಿಷ್ಟವಾಗಿ ಕತ್ತರಿಸಿ ಮಾರಾಟ ಮಾಡುವ ಸಿಟ್ರಸ್ ಹಣ್ಣುಗಳು ಮಳೆಗಾಲದಲ್ಲಿ ಬೇಗನೆ ಕಲುಷಿತಗೊಳ್ಳುತ್ತವೆ. ಇದರಿಂದ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ, ಸಾಧ್ಯವಾದಷ್ಟು ಮಟ್ಟಿಗೆ ಅವುಗಳಿಂದ ದೂರವಿರಬೇಕು ಎನ್ನುವುದು ತಜ್ಞರ ಸಲಹೆ.
3. ಮೊಸರು, ಮಜ್ಜಿಗೆ ಸೇವಿಸಬೇಡಿ
ಕೆಲವರಿಗೆ ಮೊಸರು ಮತ್ತು ಮಜ್ಜಿಗೆ ಎಂದರೆ ತುಂಬಾ ಇಷ್ಟ. ಮಳೆಗಾಲದ ಪರಿಗಣನೆ ಇಲ್ಲದೆ ಮೊಸರು ಮತ್ತು ಮಜ್ಜಿಗೆಯನ್ನು ಹೆಚ್ಚಾಗಿ ಸೇವಿಸುತ್ತಾರೆ. ಆದರೆ, ಮಳೆಗಾಲದಲ್ಲಿ ಮೊಸರು ಅಥವಾ ಮಜ್ಜಿಗೆಯನ್ನು ಹೆಚ್ಚಾಗಿ ತಿನ್ನಬಾರದು. ಅತಿಯಾಗಿ ಸೇವಿಸುವುದರಿಂದ ಹೊಟ್ಟೆಯಲ್ಲಿ ಅಜೀರ್ಣ ಮತ್ತು ಹೊಟ್ಟೆ ಉಬ್ಬುವಿಕೆಯಂತಹ ಸಮಸ್ಯೆಗಳು ಉಂಟಾಗುತ್ತವೆ. ದೇಹದಲ್ಲಿ ಕಫವನ್ನು ಹೆಚ್ಚಿಸುತ್ತವೆ. ಇದರಿಂದಾಗಿ ಶೀತ, ಕೆಮ್ಮು ಮತ್ತು ಇತರೆ ಉಸಿರಾಟದ ಸಮಸ್ಯೆಗಳು ಉಂಟಾಗಬಹುದು ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ, ಮಳೆಗಾಲದಲ್ಲಿ ಮೊಸರು ಮತ್ತು ಮಜ್ಜಿಗೆಯನ್ನು ಮಿತವಾಗಿ ಸೇವಿಸಬೇಕು.
4. ಕಾರ್ಬೋನೇಟೆಡ್ ಪಾನೀಯ ಕುಡಿಯಬಾರದು
ಮಳೆಗಾಲದಲ್ಲಿ ಕಾರ್ಬೋನೇಟೆಡ್ ಪಾನೀಯಗಳಿಂದ ದೂರವಿರಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ. ಏಕೆಂದರೆ, ಮಳೆಗಾಲದಲ್ಲಿ ತಂಪಾದ ಕಾರ್ಬೋನೇಟೆಡ್ ಪಾನೀಯಗಳನ್ನು ಹೆಚ್ಚಾಗಿ ಕುಡಿಯುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಮುಖ್ಯವಾಗಿ ಜೀರ್ಣಕಾರಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ, ಮಳೆಗಾಲದಲ್ಲಿ ಕಾರ್ಬೋನೇಟೆಡ್ ಪಾನೀಯಗಳನ್ನು ಕುಡಿಯಬಾರದು.
5. ಚಹಾ ಮತ್ತು ಕಾಫಿ ಹೆಚ್ಚಾಗಿ ಕುಡಿಯುತ್ತೀರಾ?
ಮಳೆಗಾಲದಲ್ಲಿ ಅನೇಕ ಜನರು ಚಹಾ ಮತ್ತು ಕಾಫಿ ಹೆಚ್ಚಾಗಿ ಕುಡಿಯುತ್ತಾರೆ. ದೇಹಕ್ಕೆ ಬೆಚ್ಚಗಿನ ಅನುಭವ ನೀಡುತ್ತದೆ ಎಂದು ಇವುಗಳನ್ನು ಹೆಚ್ಚಾಗಿ ಕುಡಿಯುವುದು ಸಾಮಾನ್ಯ. ಇದರಿಂದ ಹೊಟ್ಟೆಯಲ್ಲಿ ಗ್ಯಾಸ್‌ನಂತಹ ಸಮಸ್ಯೆಗಳು ಉಂಟಾಗುತ್ತವೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ಒಟ್ಟಾರೆಯಾಗಿ, ಮಳೆಗಾಲದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವು ಆಹಾರಗಳನ್ನು ತ್ಯಜಿಸುವುದು ಮತ್ತು ಕೆಲವು ಅಭ್ಯಾಸಗಳನ್ನು ಬದಲಾಯಿಸಿಕೊಳ್ಳುವುದು ಮುಖ್ಯ. ಆರೋಗ್ಯವನ್ನು ಕಾಪಾಡಿಕೊಳ್ಳಲು ತಾಜಾ ಮತ್ತು ಸ್ವಚ್ಛವಾದ ಆಹಾರ ಸೇವಿಸುವುದು ಬಹಳ ಉತ್ತಮ. ಕಲುಷಿತ ಆಹಾರವನ್ನು ತಿನ್ನುವುದರಿಂದ ರೋಗಗಳು ಬರುವ ಸಾಧ್ಯತೆ ಹೆಚ್ಚಿರುತ್ತವೆ. ಹೀಗಾಗಿ, ಮಳೆಗಾಲದಲ್ಲಿ ತಿನ್ನುವ ಆಹಾರದ ಬಗ್ಗೆ ಗಮನವಿರಲಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications










