Latest Updates
-
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು!
ಹೃದ್ರೋಗಿ ಅಲ್ಲದವರು ಫಿಶ್ ಆಯಿಲ್ ಸಪ್ಲಿಮೆಂಟ್ ಸೇವಿಸುವುದರೆ ಹೃದಯಾಘಾತ, ಸ್ಟ್ರೋಕ್ ಉಂಟಾಗುತ್ತೆ: ಅಧ್ಯಯನ ವರದಿ
ಫಿಶ್ ಆಯಿಲ್ ಸಪ್ಲಿಮೆಂಟ್ ತೆಗೆದುಕೊಳ್ಳುವವರು ತುಂಬಾ ಜನ ಇದ್ದಾರೆ, ಯಾವುದೇ ವೈದ್ಯರ ಸಲಹೆ ಪಡೆಯದೆ ಈ ಸಪ್ಲಿಮೆಂಟ್ ತೆಗೆದುಕೊಳ್ಳುವವರೂ ಇದ್ದಾರೆ, ಆದರೆ ಈ ಅಧ್ಯಯನದಿಂದ ತಿಳಿದು ಬಂದಿರುವ ಶಾಕಿಂಗ್ ವರದಿಯೆಂದರೆ ಇದರಿಂದ ಸ್ಟ್ರೋಕ್ ಅಂದರೆ ಪಾರ್ಶ್ವವಾಯು ಹಾಗೂ ಹೃದಯಾಘಾತದ ಅಪಾಯವಿದೆಯಂತೆ!

ಆರೋಗ್ಯವಂತ ವ್ಯಕ್ತಿ ಇದನ್ನು ತೆಗೆದುಕೊಳ್ಳಲೇಬಾರದು
ಇದೇ ಮೊದಲ ಬಾರಿಗೆ ಇಂಥದ್ದೊಂದು ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ, ಫಿಶ್ ಆಯಿಲ್ ಆರೋಗ್ಯಕ್ಕೆ ಒಳ್ಳೆಯದು ಎಂದು ಸಪ್ಲಿಮೆಂಟ್ ತೆಗೆದುಕೊಳ್ಳುತ್ತಾರೆ. ಆರೋಗ್ಯವಂತ ವ್ಯಕ್ತಿ ಈ ಸಪ್ಲಿಮೆಂಟ್ ತೆಗೆದುಕೊಳ್ಳಲೇಬಾರದು. ಇದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಿದೆ. ಇದರ ಬದಲಿಗೆ ಮೀನು ಸೇವನೆ ಒಳ್ಳೆಯದು. ಆದರೆ ಸಿವಿಡಿ ಸಮಸ್ಯೆ ಇರುವವರು ಫಿಶ್ ಆಯಿಲ್ ಸೇವನೆ ಮಾಡಬಹುದು ಎಂದು ಈ ಅಧ್ಯಯನ ಹೇಳಿದೆ.
ಆರೋಗ್ಯಕರವಾಗಿ ಇರುವ ವ್ಯಕ್ತಿ ಮೇಲೆ ಭಿನ್ನ ಪ್ರಭಾವ ಬೀರುತ್ತದೆ
ಫ್ಲೋರಿಡಾದಲ್ಲಿ ಈ ಅಧ್ಯಯನ ಮಾಡಲಾಯಿತು, Healthy Outlook in Jacksonville, Floridaದಲ್ಲಿ ನಡೆದ ಅಧ್ಯಯನ ಮಾಡಿದಾಗ ಈ ಅಂಶ ತಿಳಿದು ಬಂದಿದೆ. ಒಮೆಗಾ 3ಯನ್ನು ಸಪ್ಲಿಮೆಂಟ್ ರೀತಿಯಲ್ಲಿ ತೆಗೆದುಕೊಳ್ಳುವಾಗ ಇದರಿಂದ ರಕ್ತಸ್ರಾವ ಉಂಟಾಗುವುದು, ಹೃದಯ ಸಂಬಂಧಿ ಸಮಸ್ಯೆ ಉಂಟಾಗಬಹುದು.
ಈ ಫಿಶ್ ಆಯಿಲ್ ಸಪ್ಲಿಮೆಂಟ್ ತೆಗೆದುಕೊಳ್ಳುವುದರಿಂದ ಫ್ಯಾಟಿ ಆಸಿಡ್ ಅಸಮತೋಲನ ಉಂಟಾಗುವುದು. ಇದರಿಂದ ಹೃದಯ ಬಡಿತದಲ್ಲಿ ಉಂಟಾಗುವುದು. ಇದರಿಂದ ಉರಿಯೂತದ ಸಮಸ್ಯೆ ಉಂಟಾಗುವುದು. ಇದರಿಂದ ಹೃದಯದ ಆರೋಗ್ಯವನ್ನು ದುರ್ಬಲಗೊಳಿಸುತ್ತದೆ. ಹಾಗಾಗಿ ಆರೋಗ್ಯವಂತ ವ್ಯಕ್ತಿ ಫಿಶ್ ಆಯಿಲ್ ಸೇವಿಸಬಾರದು.
ಹೃದಯ ಸಮಸ್ಯೆ ಇರುವವರಿಗೆ ಫಿಶ್ ಆಯಿಲ್ ಸಪ್ಲಿಮೆಂಟ್ ಒಳ್ಳೆಯದು
ಫಿಶ್ ಆಯಿಲ್ ಸಪ್ಲಿಮೆಂಟ್ ಹೃದಯ ಸಮಸ್ಯೆ ಇರುವವರಿಗೆ ಒಳ್ಳೆಯದು. ಇದನ್ನು ದಿನ ನಿತ್ಯ ಬಳಸಿದರೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದು ದೇಹಕ್ಕೆ ಆರೋಗ್ಯಕರ ಕೊಬ್ಬಿನಂಶ ನೀಡುತ್ತದೆ, ಇದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದು.
ಆದರೆ ಹೃದಯ ಸಮಸ್ಯೆ ಇಲ್ಲ, ಆರೋಗ್ಯವಾಗಿ ಇದ್ದೇವೆ ಎಂದಾದರೆ ಈ ಫಿಶ್ ಆಯಿಲ್ ಸಪಲ್ಇಮೆಂಟ್ ತೆಗೆದುಕೊಳ್ಳುವುದರಿಂದ ಹೃದಯಾಘಾತದ ಸಾಧ್ಯತೆ ಶೇ. 13ರಷ್ಟು ಇದೆ, ಅಲ್ಲದೆ ಇದನ್ನು ಸೇವಿಸಿದರೆ ಪಾರ್ಶ್ವವಾಯು ಬರುವ ಸಾಧ್ಯತೆ ಇದೆ ಎಂದು BMJ Medicine ಜರ್ನಲ್‌ನಲ್ಲಿ ವರದಿ ಬಂದಿದೆ.
ಒಮೆಗಾ 3ಗಾಗಿ ನೀವು ಸಪ್ಲಿಮೆಂಟ್ ಬದಲಿಗೆ ಆಹಾರ ಸೇವಿಸುವುದು ಒಳ್ಳೆಯದು
ನೀವು ಆರೋಗ್ಯವಂತ ವ್ಯಕ್ತಿಯಾಗಿದ್ದು ಹೃದಯ ಸಂಬಂಧಿ ಸಮಸ್ಯೆ ಇಲ್ಲದಿದ್ದರೆ ನೀವು ಸಪ್ಲಿಮೆಂಟ್ ಬದಲಿಗೆ ಒಮೆಗಾ 3 ಇರುವ ಆಹಾರ ಸೇವಿಸಿ.
ಒಮೆಗಾ 3 ಕೊಬ್ಬಿನಂಶವಿರುವ ಆಹಾರ
ಮೀನಿನಲ್ಲಿ ಒಮೆಗಾ 3 ಕೊಬ್ಬಿನಂಶ ಅಧಿಕವಿದೆ
ಮೀನು ತಿನ್ನದವರು ಚಿಯಾ ಸೀಡ್ಸ್, ಸೋಯಾ ಬೀನ್, ಅಗಸೆಬೀಜ, ವಾಲ್ನಟ್ ಈ ಬಗೆಯ ಆಹಾರದಲ್ಲಿ ಒಮೆಗಾ 3 ಕೊಬ್ಬಿನಂಶವಿದೆ.
ಹೃದಯ ಸಂಬಂಧಿ ಸಮಸ್ಯೆ ಇರುವವರು ಒಮೆಗಾ 3 ಸಪ್ಲಿಮೆಂಟ್ ತಿನ್ನುವುದರಿಂದ ಈ ಪ್ರಯೋಜನಗಳಿವೆ:
ಒಮೆಗಾ 3 ಹೃದಯ ಸರಿಯಾಗಿ ಕಾರ್ಯನಿರ್ವಹಿಸಲು ಸಹಕಾರಿ
ಕ್ಯಾನ್ಸರ್ ಕಣಗಳ ಉತ್ಪತ್ತಿ ತಡೆಗಟ್ಟುತ್ತದೆ
ಇದು ಮಲಬದ್ಧತೆ ಸಮಸ್ಯೆ, ಬೇಧಿ ತಡೆಗಟ್ಟುತ್ತದೆ.
ಉರಿಯೂತದ ಸಮಸ್ಯೆ ಕಡಿಮೆಮಾಡುತ್ತದೆ.
ಆದರೆ ಆರೋಗ್ಯವಂತರು ಇದನ್ನು ಸೇವಿಸಿದರೆ ಇದು ಕೆಟ್ಟ ಪರಿಣಾಮ ಬೀರುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications