Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Expert Tips: ಹೀಗೆ ಮಾಡುವುದರಿಂದ ಮೈ ತೂಕ ಹೆಚ್ಚಲ್ಲ, ಮಧುಮೇಹ , ಕ್ಯಾನ್ಸರ್ ಸೇರಿ ಹಲವು ಆರೋಗ್ಯ ಸಮಸ್ಯೆ ಬಾಧಿಸಲ್ಲ
ಬೊಜ್ಜಿನ ಸಮಸ್ಯೆ... ಈ ಆಧುನಿಕ ಯುಗದಲ್ಲಿ ಬಹುತೇಕರನ್ನು ಕಾಡುತ್ತಿರುವ ಸಮಸ್ಯೆ. ಈ ಬೊಜ್ಜು ದೇಹದಲ್ಲಿ ಹೆಚ್ಚಾದರೆ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುವುದು. ಬೊಜ್ಜಿನ ಸಮಸ್ಯೆಯಿಂದ ಹೃದ್ರೋಗ, ಮಧುಮೇಹ ಮತ್ತು ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಗಳು ಬರುತ್ತವೆ. ಮೈ ತೂಕ ಹೆಚ್ಚಾಗುವುದಕ್ಕೂ ನಮ್ಮ ಜೀರ್ಣಕ್ರಿಯೆಗೂ ಸಂಬಂಧವಿದೆ. ನಮ್ಮ ಜೀರ್ಣಕ್ರಿಯೆ ಸರಿಯಾಗಿ ನಡೆಯದಿದ್ದಾಗ ಮೈ ಬೊಜ್ಜು ಹೆಚ್ಚಾಗುವುದು.

ಮೈ ಬೊಜ್ಜು ಬಾರದಿರಲು ಕರುಳಿನ ಆರೋಗ್ಯ ತುಂಬಾನೇ ಮುಖ್ಯ
ಜೀರ್ಣಕ್ರಿಯೆಗೆ ಕರುಳಿನ ಆರೋಗ್ಯ ತುಂಬಾನೇ ಮುಖ್ಯ. ಇದು ಜಠರದಲ್ಲಿ ಬ್ಯಾಕ್ಟೀರಿಯಾ, ಕಿಣ್ವಗಳು, ಸೂಕ್ಷ್ಮಜೀವಿಗಳ ಸಮತೋಲಿತ ವ್ಯವಸ್ಥೆಯನ್ನು ನಿರ್ವಹಿಸುತ್ತದೆ. ಕರುಳು ಉತ್ತಮ ಆರೋಗ್ಯದಿಂದ ಇದ್ದರೆ ಜೀರ್ಣಕ್ರಿಯೆ ಚೆನ್ನಾಗಿ ನಡೆಯುತ್ತದೆ, ಅಲ್ಲದೆ ದೇಹವು ಪೋಷಕಾಂಶಗಳ ಹೀರಿಕೊಳ್ಳಲು ಸಹಕಾರಿ. ಜೀರ್ಣಕ್ರಿಯೆ ಉತ್ತಮವಾದರೆ ರೋಗನಿರೋಧಕ ಶಕ್ತಿ ಹೆಚ್ಚಾಗುವುದು, ಇದರಿಂದ ದೈಹಿಕವಾಗಿ ಆರೋಗ್ಯವಾಗಿರುತ್ತೇವೆ ಎಂದು ಬೆಂಗಳೂರಿನ ಕಿಂಡರ್ ಆಸ್ಪತ್ರೆಯ ನ್ಯೂಟ್ರೀಷನಿಸ್ಟ್ ಕನ್ಸಲ್ಟೆಂಟ್ ಡಾ. ಸಂಜನಾ ಪ್ರೇಮ್‌ಲಾಲ್ ತಿಳಿಸಿದರು.
ಜೀರ್ಣಕ್ರಿಯೆ ಸರಿಯಾಗಿ ನಡೆಯದಿದ್ದರೆ ಈ ಬಗೆಯ ತೊಂದರೆಗಳಾಗುವುದು
ಮಾನವನ ದೇಹವು ಸಂಪೂರ್ಣವಾಗಿ ಆರೋಗ್ಯವಾಗಿರಬೇಕು ಎಂದರೆ ಜೀರ್ಣಕ್ರಿಯೆ ಹಾಗೂ ತೂಕದ ನಡುವಿನ ಸಂಬಂಧ ಬಹುಮುಖ್ಯವಾಗಿದೆ. ಕರುಳಿನ ಮೈಕ್ರೋಬಯೋಟಾದಲ್ಲಿನ ಅಸಮತೋಲನವೇ ತೂಕ ಹೆಚ್ಚಾಗಲು ಮತ್ತು ಜೀರ್ಣಕ್ರಿಯೆ ಅಸ್ವಸ್ಥತೆಗೆ ಪ್ರಮುಖ ಕಾರಣವಾಗಿದೆ. ಈ ಜೀರ್ಣಕ್ರಿಯೆ ಅಂದರೆ ಚಯೊಚಯ ಕ್ರಿಯೆಗೆ ತೊಂದರೆಯಾದರೆ ಮೈ ತೂಕ ಹೆಚ್ಚಾಗುವುದು. ಅಲ್ಲದೆ ಉರಿಯೂತ, ಚಯಾಪಚಯ ಹಾಗೂ ಹಾರ್ಮೋನ್‌ಗಳ ಅಸಮತೋಲನ ಹೀಗೆ ಅನಾರೋಗ್ಯದ ಸಮಸ್ಯೆ ಹೆಚ್ಚಾಗುತ್ತಲೇ ಹೋಗುತ್ತದೆ.
ನಾವು ಇಟ್ನೆಸ್ ಕಾಪಾಡಬೇಕೆಂದರೆ ವೈದ್ಯರು ನಮ್ಮ ಆಹಾರಕ್ರಮ ಹೀಗಿರಬೇಕೆಂದು ತಿಳಿಸಿಕೊಟ್ಟಿದ್ದಾರೆ
ಆಹಾರಕ್ರಮ ಹೀಗಿರಲಿ
ನಾರಿನಂಶ ಅಧಿಕವಿರುವ ಆಹಾರ ಸೇವಿಸಿ: ಹಣ್ಣು, ತರಕಾರಿ, ದವಸ ಹಾಗೂ ಧಾನ್ಯಗಳನ್ನು ಸೇವಿಸಿದರೆ, ಅವುಗಳಲ್ಲಿ ರೋಗನಿರೋಧಕ ಶಕ್ತಿ ಹಾಗೂ ನಾರಿನಂಶ ಚೆನ್ನಾಗಿರುತ್ತದೆ, ಇದರಿಂದಾಗಿ ಜೀರ್ಣಕ್ರಿಯೆಗೆ ಒಳ್ಳೆಯದು.
ಪ್ರಿಬಯಾಟಿಕ್ ಅಥವಾ ಪ್ರೋಬಯಾಟಿಕ್ ಆಹಾರ ಸೇವನೆ : ಮೊಸರು, ಹುದುಗು ಬರಿಸಿದ ಆಹಾರಗಳಲ್ಲಿ ಈ ಪ್ರಿಬಯೋಟಿಕ್ ಇರಲಿದೆ.
ದೇಹದಲ್ಲಿ ನೀರಿನಂಶ ಕಾಪಾಡಬೇಕು : ದೇಹದಲ್ಲಿ ನೀರಿನಂಶ ಚೆನ್ನಾಗಿರಲು ನೀವು ಸಾಕಷ್ಟು ನೀರು, ನಿಮ್ಮ ವಯಸ್ಸು ಹಾಗೂ ಮೈ ತೂಕಕ್ಕೆ ನೀರು ಕುಡಿಯಬೇಕು. 2 ಲೀಟರ್ ನೀರು ಕುಡಿಯಲೇಬೇಕು.
ಆಹಾರವನ್ನು ಜಗಿದು ತಿನ್ನಬೇಕು : ಉತ್ತಮ ಜೀರ್ಣಕ್ರಿಯೆಗೆ ಪೋಷಕಾಂಶಗಳ ಹೀರಿಕೊಳ್ಳುವಿಕೆ ಹಾಗೂ ಜೀರ್ಣಕ್ರಿಯೆಯ ಅಸ್ವಸ್ಥತೆಯನ್ನು ಕಡಿಮೆ ಮಾಡಲು ಆಹಾರವನ್ನು ಸಂಪೂರ್ಣವಾಗಿ ಜಗಿದು ತಿನ್ನಬೇಕು.
ಉತ್ತಮ ನಿದ್ರೆ : ಹಾರ್ಮೋನ್ ಸಮತೋಲನ ಮತ್ತು ಕರುಳಿನ ಆರೋಗ್ಯಕ್ಕೆ ಉತ್ತಮ ನಿದ್ರೆ ಅತ್ಯಗತ್ಯ. ಆದ್ದರಿಂದ ಪ್ರತಿದಿನ ಒಂದೇ ಸಮಯಕ್ಕೆ ನಿದ್ದೆ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ.
ವ್ಯಾಯಾಮ : ಪ್ರತಿದಿನ ವ್ಯಾಯಾಮ ಮಾಡಿ
ಉತ್ತಮ ಅಡುಗೆ ಎಣ್ಣೆ ಬಳಸಿ: ಉತ್ತಮ ಆರೋಗ್ಯಕ್ಕಾಗಿ ವರ್ಜಿನ್ ಆಲಿವ್ ಎಣ್ಣೆ ಹಾಗೂ ತೆಂಗಿನ ಎಣ್ಣೆಯನ್ನು ಬಳಸಿ. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುವುದರ ಜೊತೆಗೆ ಉರಿಯೂತ ಕಡಿಮೆಯಾಗುತ್ತದೆ.
ಸರಿಯಾದ ಸಮಯಕ್ಕೆ ತಿನ್ನಿ: ಜೀರ್ಣಕ್ರಿಯೆ ಉತ್ತಮವಾಗಿರಲು ಪ್ರತಿ ಊಟದ ನಡುವೆ 3 ರಿಂದ 4 ಗಂಟೆಗಳ ಅಂತರವಿರಲಿ. ಇದರಿಂದ ಹೊಟ್ಟೆ ಉಬ್ಬರಿಕೆ ಹಾಗೂ ಮಲಬದ್ಧತೆಯಂತಹ ಸಮಸ್ಯೆಗಳು ಕಂಡು ಬರುವುದಿಲ್ಲ.
ಒತ್ತಡ ನಿರ್ವಹಣೆ : ಒತ್ತಡವನ್ನು ನಿರ್ವಹಿಸಲು ಧ್ಯಾನ, ಯೋಗ ಮಾಡುವುದರಿಂದ ಕರುಳಿನ ಆರೋಗ್ಯ ಉತ್ತಮವಾಗಿರುತ್ತದೆ.
ಕರುಳಿನ ಆರೋಗ್ಯಕ್ಕಾಗಿ ಈ ತಪ್ಪು ಮಾಡದಿರಿ:
ಒಂದೇ ತರಹದ ಆಹಾರ ಸೇವನೆ: ಪ್ರತಿನಿತ್ಯ ಒಂದೇ ತರಹದ ಆಹಾರ ಸೇವನೆಯನ್ನು ಮಾಡದಿರುವುದು ಒಳಿತು. ಈ ರೀತಿ ಮಾಡುವುದರಿಂದ ದೇಹಕ್ಕೆ ಅಗತ್ಯ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ಹೀಗಾಗಿ ಹಣ್ಣು, ತರಕಾರಿ, ದವಸ ಹಾಗೂ ಸಿರಿಧಾನ್ಯಗಳ ಸೇವನೆಯಿಂದ ಕರುಳಿನ ಆರೋಗ್ಯಕ್ಕೆ ಅನುಕೂಲವಾಗಲಿದೆ. ಹಾಗಾಗಿ ಒಂದೊಂದು ದಿನ ಒಂದೊಂದು ಬಗೆಯ ಆಹಾರ ಒಳ್ಳೆಯದು
ಸಂಸ್ಕರಿಸಿದ ಆಹಾರ ಸೇವನೆ: ಸಂಸ್ಕರಿಸಿದ ಆಹಾರ ಸೇವನೆ ಒಳ್ಳೆಯದಲ್ಲ. ಇದರಿಂದ ಪೋಷಕಾಂಶಗಳ ಕೊರತೆ ಉಂಟಾಗುವುದರ ಜೊತೆಗೆ ಕರುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಜೀರ್ಣಕ್ರಿಯೆಗೆ ಬೇಳೆ ಕಾಳುಗಳು, ದವಸಧಾನ್ಯಗಳು, ಹೆಚ್ಚು ಪ್ರೊಟೀನ್ ಇರುವ ಆಹಾರವನ್ನು ಸೇವಿಸಬೇಕು.
ಹೆಚ್ಚು ಆಹಾರ ಸೇವನೆ : ಹೆಚ್ಚು ಆಹಾರ ಸೇವಿಸುವುದರಿಂದ ಜೀರ್ಣಕ್ರಿಯೆಗೆ ಸಮಸ್ಯೆಯಾಗುತ್ತದೆ. ಹೀಗಾಗಿ ಅಗತ್ಯ ಹಾಗೂ ಉತ್ತಮ ಆಹಾರವನ್ನು ಸರಿಯಾಗಿ ಜಗಿದು ತಿನ್ನಬೇಕು. ಜೊತೆಗೆ ಹಸಿವಾದಾಗ ಮಾತ್ರ ಆಹಾರ ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.
ಕೃತಕ ಸಿಹಿ ಪದಾರ್ಥಗಳ ಸೇವನೆ : ಕೃತಕ ಸಿಹಿ ಪದಾರ್ಥಗಳ ಸೇವನೆಯಿಂದ ಕರುಳಿನ ಆರೋಗ್ಯ ಹಾಳಾಗುತ್ತದೆ. ಹೀಗಾಗಿ ನೈಸರ್ಗಿಕ ಪದಾರ್ಥಗಳಿಂದ ತಯಾರಿಸಲಾದ ಜ್ಯೂಸ್ ಹಾಗೂ ತಾಜಾ ಹಣ್ಣುಗಳನ್ನು ಸೇವಿಸುವುದು ಒಳಿತು.
ಉರಿಯೂತವನ್ನುಂಟು ಮಾಡುವ ಅಡುಗೆ ಎಣ್ಣೆ ಬಳಕೆ ನಿಷೇಧ : ಕ್ಯಾನೋಲ, ಕಡಲೆಕಾಯಿ ಮತ್ತು ಸೂರ್ಯಕಾಂತಿಯಂತಹ ಅಡುಗೆ ಎಣ್ಣೆ ಬಳಕೆಯನ್ನು ಕಡಿಮೆ ಮಾಡಿ. ಇವುಗಳಿಂದ ಉರಿಯೂತ ಉಂಟಾಗುವುದರ ಜೊತೆಗೆ ಜೀರ್ಣಾಂಗ ವ್ಯವಸ್ಥೆ ಹದಗೆಡುತ್ತದೆ. ಉತ್ತಮ ಕರುಳಿನ ಆರೋಗ್ಯಕ್ಕಾಗಿ ಸಂಪೂರ್ಣವಾಗಿ ಸಂಸ್ಕರಿಸದ ಸಸ್ಯ ಆಧಾರಿತ ಆಹಾರಗಳನ್ನು ಹೆಚ್ಚು ಬಳಸಿ.
ದೈಹಿಕ ಮತ್ತು ಮಾನಸಿಕ ಆರೋಗ್ಯದ ನಿರ್ಲಕ್ಷ್ಯ: ದೈಹಿಕ ಹಾಗೂ ಮಾನಸಿಕ ಆರೋಗ್ಯ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಉತ್ತಮ ಆರೋಗ್ಯಕ್ಕಾಗಿ ವ್ಯಾಯಾಮ, ಒತ್ತಡ ನಿರ್ವಹಣೆ ಹಾಗೂ ಸ್ವಯಂ ಆರೈಕೆಗೆ ಸಮಯ ಮೀಸಲಿಡಬೇಕು.
ಬೊಜ್ಜು ನಿವಾರಿಸಲು ಜೀರ್ಣಕ್ರಿಯೆ ಹೆಚ್ಚಿಸಿಕೊಳ್ಳುವುದರ ಜೊತೆಗೆ ವ್ಯಾಯಾಮ ಮಾಡುವುದು ಪ್ರಮುಖ ಸೂತ್ರ. ಉತ್ತಮ ಆಹಾರ ಪದ್ದತಿ, ಸ್ಥಿರವಾದ ದೈಹಿಕ ಚಟುವಟಿಕೆ, ಸರಿಯಾದ ನಿದ್ರೆ, ಒತ್ತಡ ನಿರ್ವಹಣೆ, ತೂಕ ನಿಯಂತ್ರಣ ಕೂಡ ಅತ್ಯಗತ್ಯವಾಗಿರುತ್ತದೆ. ಸಣ್ಣ ಬದಲಾವಣೆಗಳು ಸಹ ಕರುಳಿನ ಆರೋಗ್ಯ ಹಾಗೂ ತೂಕ ನಿರ್ವಹಣೆಯಲ್ಲಿ ದೀರ್ಘಕಾಲದ ಯಶಸ್ಸನ್ನು ನೀಡುತ್ತದೆ ಎಂದು ತಜ್ಞೆ ಸಂಜನಾ ಪ್ರೇಮ್‌ಲಾಲ್ ಸಲಹೆಗಳನ್ನು ನೀಡಿದ್ದಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications