Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶುಗರ್ ಫ್ರೀ ತಿನಿಸುಗಳಲ್ಲೂ ಸಕ್ಕರೆ ಅಂಶ ಇರಬಹುದು..! ICMR ಶಂಕೆ..!
ಇತ್ತೀಚಿಗೆ ಯಾವ ಆಹಾರ ಸೇವನೆ ಮಾಡಿದರೂ ಆರೋಗ್ಯಕ್ಕೆ ಪೂರಕವಾಗುವ ಬದಲು ಅದು ಹಲವು ಸಮಸ್ಯೆ ಉಂಟುಮಾಡುವ ವಸ್ತುವಾಗಿ ಪರಿಣಮಿಸುತ್ತಿದೆ. ಅಂದರೆ ಹೊರಗಿನ ಪ್ಯಾಕ್ ಮಾಡಲಾದ ತಿನಿಸುಗಳು ಆರೋಗ್ಯಕ್ಕೆ ಎಷ್ಟು ಹಾನಿಕಾರಕೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ.
ಜೊತೆಗೆ ಯಾವ ತಿನಿಸು ಹಾಗೂ ಯಾವ ಪಾನೀಯದಲ್ಲಿ ಯಾವ ಅಂಶ ಬೆರೆಸುತ್ತಾರೆ ಎಂಬುದು ಮುಖ್ಯವಾಗುತ್ತದೆ. ಹೀಗಾಗಿಯೇ ಸರ್ಕಾರ ಈ ಸಂಸ್ಥೆಗಳಿಗೆ ತಮ್ಮ ಉತ್ಪನ್ನಗಳ ಮೇಲೆ ಯಾವ ಯಾವ ಅಂಶ ಹಾಕಿ ಈ ಉತ್ಪನ್ನ ತಯಾರಿಸಲಾಗಿದೆ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿರಬೇಕು ಎಂಬ ನಿಯಮ ಜಾರಿ ಮಾಡಿದೆ.

ಇನ್ನು ಈ ಸಕ್ಕರೆ ಬಳಸಿ ಮಾಡುವಂತಹ ಪದಾರ್ಥಗಳು ಎಂದಿಗೂ ಆರೋಗ್ಯಕ್ಕೆ ಹಾನಿಕಾರಕವೇ ಆಗಿವೆ. ಅದರಲ್ಲೂ ತಂಪು ಪಾನಿಯ ಹಾಗೂ ಡೈರಿ ಪ್ರೊಡಕ್ಟ್‌ಗಳಂತು ಈ ಸಕ್ಕರೆ ಮೂಲಕವೇ ಮಾಡಲ್ಪಟ್ಟಿರುತ್ತವೆ. ಈ ಸಕ್ಕರೆ ಮನುಷ್ಯನ ದೇಹಕ್ಕೆ ಸಿಹಿಯಾದ ವಿಷವಿದ್ದಂತೆ. ಇದರಿಂದ ನೂರಾರು ರೀತಿಯ ಅನಾರೋಗ್ಯ ಸಮಸ್ಯೆ ತಂದಿಡಲು ಸಾಕು.
ಹೀಗಾಗಿ ಫುಡ್‌ಗಳ ಮೇಲೂ ಎಷ್ಟು ಪ್ರಮಾಣದ ಸಕ್ಕರೆ ಬಳಸಲಾಗಿದೆ ಎಂಬುದನ್ನು ನಮೂದಿಸಲಾಗಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲರು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದು, ಈ ಸಕ್ಕರೆ ಅಂಶ ಇರುವ ಉತ್ಪನ್ನಗಳನ್ನ ಅವರು ತಿರಸ್ಕರಿಸಿ ಸಕ್ಕರೆ ಅಂಶ ಇಲ್ಲದ ಶುಗರ್ ಫ್ರೀ ಪ್ರೊಡಕ್ಟ್‌ಗಳ ಕುರಿತು ಹೆಚ್ಚು ಆಸಕ್ತಿ ಹೊಂದಿದ್ದಾರೆ.
ಇದು ಮಾರುಕಟ್ಟೆಯಲ್ಲಿ ಹತ್ತಾರು ಬಗೆಯ ಶುಗರ್ ಫ್ರೀ ಉತ್ಪನ್ನಗಳು ಸಿಗುತ್ತವೆ. ಅವುಗಳ ಮೇಲೆ ಇದು ಶುಗರ್ ಫ್ರೀ ಉತ್ಪನ್ನ ಎಂದು ಬರೆದಿರಲಾಗುತ್ತದೆ. ಆದರೆ ಈಗೊಂದು ವರದಿಯ ಪ್ರಕಾರ ಈ ರೀತಿ ಶುಗರ್ ಫ್ರೀ ಉತ್ಪನ್ನ ಎಂದು ಬರೆದಿರುವ ಅದೇಷ್ಟೋ ಉತ್ಪನ್ನಗಳಲ್ಲಿ ಸಕ್ಕರೆ ಬಳಸಿರುತ್ತಾರಂತೆ.
ಹೌದು ಮಧುಮೇಹಿಗಳಿಗೆ ಪ್ರಯೋಜನಕಾರಿ ಎಂದು ಗ್ರಹಿಸಲಾದ ಸಕ್ಕರೆ ಮುಕ್ತ ಎಂದು ಲೇಬಲ್ ಮಾಡಲಾದ ಆಹಾರ ಉತ್ಪನ್ನಗಳಲ್ಲಿ ಕೊಬ್ಬುಗಳು, ಸಂಸ್ಕರಿಸಿದ ಧಾನ್ಯಗಳು ಮತ್ತು ಗುಪ್ತ ಸಕ್ಕರೆಗಳನ್ನು ಸೇರಿಸಲಾಗುತ್ತದೆ ಎಂದು ICMR ಉಲ್ಲೇಖಿಸಿದೆ.
ಆಹಾರದ ಲೇಬಲ್‌ಗಳನ್ನು ಸಂಪೂರ್ಣವಾಗಿ ಓದಲು ಮತ್ತು ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಜನರನ್ನು ಸೂಚಿಸುತ್ತಾ, ICMR (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್) ಅದರ ಇತ್ತೀಚಿನ ಮಾರ್ಗದರ್ಶಿ ಸೂತ್ರಗಳಲ್ಲಿ ಅವುಗಳಲ್ಲಿ ಹೇಳಲಾದ ಮಾಹಿತಿಯು ತಪ್ಪುದಾರಿಗೆಳೆಯುವ ಸಾಧ್ಯತೆಯಿದೆ ಎಂದು ಹೇಳಿದೆ.
'ಪ್ಯಾಕ್ ಮಾಡಲಾದ ಆಹಾರಗಳ ಮೇಲಿನ ಆರೋಗ್ಯ ಹಕ್ಕುಗಳು ಗ್ರಾಹಕರ ಗಮನವನ್ನು ಸೆಳೆಯಲು ಮತ್ತು ಉತ್ಪನ್ನವು ಆರೋಗ್ಯಕರವಾಗಿದೆ ಎಂದು ಅವರಿಗೆ ಮನವರಿಕೆ ಮಾಡಲು ವಿನ್ಯಾಸಗೊಳಿಸಲಾಗಿದೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಕಟ್ಟುನಿಟ್ಟಾದ ನಿಯಮಗಳನ್ನು ಹೊಂದಿದ್ದರೂ, ಲೇಬಲ್‌ಗಳಲ್ಲಿ ನೀಡಲಾಗಿರುವ ಮಾಹಿತಿಯು ತಪ್ಪುದಾರಿಗೆಳೆಯುವಂತಿದೆ' ಎಂದು ICMR ಹೇಳಿದೆ. ಇದು ಹಲವರಲ್ಲಿ ಆತಂಕ್ಕೆ ಕಾರಣವಾಗಿದೆ.
ICMR ತನ್ನ ಮಾರ್ಗಸೂಚಿಗಳಲ್ಲಿ ಸಕ್ಕರೆ ಮುಕ್ತ ಎಂದು ಲೇಬಲ್ ಮಾಡಲಾದ ಆಹಾರ ಉತ್ಪನ್ನಗಳನ್ನು ಮಧುಮೇಹಿಗಳು ಮತ್ತು ತೂಕ ಇಳಿಸುವವರಿಗೆ ಪ್ರಯೋಜನಕಾರಿಯಾಗಿದ್ದರೂ, ಇದರಲ್ಲಿ ಕೊಬ್ಬುಗಳು, ಸಂಸ್ಕರಿಸಿದ ಧಾನ್ಯಗಳು ಮತ್ತು ಗುಪ್ತ ಸಕ್ಕರೆಗಳನ್ನು ಸೇರಿಸಿರುವ ಸಾಧ್ಯತೆ ಅಲ್ಲಗೆಳೆಯುವಂತಿಲ್ಲ ಎಂದಿದೆ. ಇದರಲ್ಲಿರುವ ಹೆಚ್ಚಿನ ಗ್ಲೈಸೆಮಿಕ್ ಸೂಚ್ಯಂಕ ಮತ್ತು ಆಹಾರ ಪದಾರ್ಥದಲ್ಲಿ ಹೆಚ್ಚಿನ ಕ್ಯಾಲೊರಿಗಳನ್ನು ಸೂಚಿಸುತ್ತವೆ ಎಂದಿದೆ.
ಅದರಲ್ಲೂ ಜ್ಯೂಸ್‌ಗಳು ಜನರ ದಾರಿ ತಪ್ಪಿಸಲಿವೆ
ನೀವು ಯಾವುದೇ ಹಣ್ಣಿನ ಜ್ಯೂಸ್ ಬಾಟಲಿ ತೆಗೆದುಕೊಂಡರೆ ಅದರಲ್ಲಿ ಪ್ಯೂರ್ ಹಣ್ಣಿನ ಜ್ಯೂಸ್ ಎಂದು ಬರೆದಿರಲಾಗುತ್ತದೆ. ಅಂದರೆ ಈ ಜ್ಯೂಸ್ ಸಂಪೂರ್ಣವಾಗಿ ಹಣ್ಣಿನಿಂದಲೇ ಮಾಡಲ್ಪಟ್ಟಿದೆ ಎಂದು ಹೇಳಿರುತ್ತಾರೆ. ಆದರೆ ಇದರಲ್ಲಿ ಕೇವಲ ಶೇ.10ರಷ್ಟು ಹಣ್ಣಿನ ಅಂಶವಿದ್ದರೆ ಉಳಿದದ್ದು ಸಕ್ಕರೆ ಹಾಗೂ ಇತರೆ ಅಂಶ ಇರಬಹುದು ಎಂದು ಹೇಳಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications









