Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತುಂಬಾ ತೆಳ್ಳಗಿದ್ದವರು ಮನೆಮದ್ದಿನ ಮೂಲಕ ತೂಕ ಹೆಚ್ಚಿಸಿಕೊಳ್ಳಿ!!
ಇತ್ತೀಚಿನ ದಿನಗಳಲ್ಲಿ ಜನರು ದಪ್ಪಆಗಿ ತೆಳ್ಳಗಾಗಲು ಹೇಗೆ ಕಷ್ಟ ಪಡುತ್ತಾರೋ ತೆಳ್ಳಗಿರುವವರು ದಪ್ಪ ಆಗಲು ಸಹ ಅಷ್ಟೇ ಕಷ್ಟಪಡುತ್ತಾರೆ. ತೆಳ್ಳಗಿರುವವರು ಎಷ್ಟೇ ಆಹಾರ ತಿಂದರು ದಪ್ಪ ಆಗುವುದಿಲ್ಲ ಎಂಬ ದೂರು ಅವರದ್ದು, ದಪ್ಪ ಆಗಬೇಕು ಅಂತಲೇ ಸಿಕ್ಕ ಸಿಕ್ಕಾಗಲೆಲ್ಲ ಸಿಕ್ಕ ಸಿಕ್ಕ ಆಹಾರ, ತಿಂಡಿ ಸವಿಯುತ್ತಲೇ ಇರುತ್ತಾರೆ. ಆದರೆ ಇದರಿಂದ ತೂಕ ಹಚ್ಚಾಗುವುದಿಲ್ಲ ಬದಲಿಗೆ ಹೊಟ್ಟೆ ಬರುತ್ತದೆ.
ಹಲವರು ಇದು ಎದುರಿಸುತ್ತಿರುವ ಸಮಸ್ಯೆಯಲ್ಲಿ ಇದು ಸಹ. ತೆಳ್ಳಗಿರುವವರು ದಪ್ಪ ಆಗಲು ಏನು ಮಾಡಬೇಕು ಎಂಬುದು. ತೆಳ್ಳಗಿರುವುದು ಆರೋಗ್ಯದ ದೃಷ್ಟಿಯಿಂದ ಉತ್ತಮವೇ ಆಗಿದ್ದರೂ ಸಮಾಜದ ದೃಷ್ಟಿಯಲ್ಲಿ ಹಲವು ರೀತಿ ಸಮಸ್ಯೆ ಎದುರಿಸಬೇಕಾಗುತ್ತದೆ. ತೆಳ್ಳಗಿದ್ದರೆ ಮದುವೆಯಾಗುವುದು ಕಷ್ಟ, ಕೆಲಸ ಮಾಡಲು ಕಷ್ಟವಾಗಬಹುದು. ಆಡಿಕೊಂಡು ನಗುವುದು ನಮ್ಮ ಮನಸ್ಸಿನ ಮೇಲೂ ಇದು ಕೆಟ್ಟ ರೀತಿ ಪರಿಣಾಮ ಬೀರಬಹುದು.

ಆದರೆ ತೆಳ್ಳಗಿದ್ದವರು ತೂಕ ಹೆಚ್ಚಿಕೊಳ್ಳಲು ಹಲವು ರೀತಿ ಔಷಧಿ ಈಗ ಮಾರುಕಟ್ಟೆಗೆ ಬಂದಿವೆ. ಖಚಿತ ಫಲಿತಾಂಶ ನೀಡುತ್ತೆ ಎಂದು ಹೇಳುತ್ತಾರೆ. ಆದ್ರೆ ಅದೆಲ್ಲವೂ ಸೈಡ್ ಎಫೆಕ್ಟ್ ಎಂಬ ಆತಂಕವೂ ಜನರಲ್ಲಿದೆ. ಹೆಚ್ಚು ಹೆಚ್ಚು ತಿನ್ನುವುದರಿಂದ ದಪ್ಪ ಆಗುತ್ತಾರೆ ಎಂಬುದು ಸತ್ಯವಾದರೂ ಅದರ ಪರಿಣಾಮ ಕಷ್ಟವಾಗಬಹುದು.
ಹಾಗಾದ್ರೆ ದಪ್ಪ ಆಗಲು ಏನು ಮಾಡಬೇಕು? ಆರೋಗ್ಯಕರ ರೀತಿಯಲ್ಲಿ ದಪ್ಪ ಆಗುವುದು ಹೇಗೆ? ದಪ್ಪ ಆಗಲು ಮನೆಮದ್ದು ಏನು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹಾಲು ಮತ್ತು ಹಾಲಿನ ಉತ್ಪನ್ನಗಳು
ಹಾಲು ಮತ್ತು ಹಾಲಿನ ಉತ್ಪನ್ನಗಳು ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಸೇರಿದ್ದರೆ ನೀವು ಸುಲಭವಾಗಿ ತೂಕ ಹೆಚ್ಚಿಕೊಳ್ಳಬಹುದು. ಮಾರುಕಟ್ಟೆಯಲ್ಲಿ ಸಿಗುವ ಹಲವು ಔಷಧಿಗಳ ಅಂಶದಲ್ಲಿ ಈ ಡೈರಿ ಉತ್ಪನ್ನಗಳೇ ಇರುತ್ತವೆ, ನೀವು ನಿತ್ಯ ಹಾಲಿ, ಮಜ್ಜಿಗೆ, ಮೊಸರು, ಬೆಣ್ಣೆ, ತುಪ್ಪ ಹೀಗೆ ಹಾಲಿನ ಉತ್ಪನ್ನಗಳನ್ನ ಊಟ, ತಿಂಡಿಯ ಜೊತೆ ಬಳಸುವುದರಿಂದ ಸಾಮಾನ್ಯವಾಗಿ ತೂಕ ಹೆಚ್ಚಾಗುತ್ತದೆ. ಆದರೆ ಇತರರು ಬಳಸಿದಷ್ಟೇ ನೀವು ಬಳಸಿದರೆ ಪ್ರಯೋಜನವಿಲ್ಲ ಬದಲಿಗೆ ಅದರ ಪ್ರಮಾಣ ಹೆಚ್ಚು ಮಾಡಿ ತೆಗೆದುಕೊಳ್ಳಬೇಕು.
ಕಾಳು ಮತ್ತು ಧಾನ್ಯ
ನೀವು ಸಸ್ಯಹಾರಿಗಳಾಗಿದ್ದರೆ ನಿಮ್ಮ ಆಹಾರದಲ್ಲಿ ಕಾಳು ಹಾಗೂ ಧಾನ್ಯ ಇರಲೇಬೇಕು. ಬೇಳೆ ಕಾಳುಗಳಲ್ಲಿ ಅತೀ ಹೆಚ್ಚು ಪೋಷಕಾಂಶ ಹಾಗೂ ಪ್ರೋಟಿನ್ ನೀವು ಪಡೆಯಬಹುದು. ಹೀಗಾಗಿ ಕಾಳುಗಳನ್ನು ನೆನೆಸಿಟ್ಟು ಸವಿಯುವುದು, ಮೊಳಕೆ ಬರಿಸಿ ತಿನ್ನುವುದು ಬಹಳ ಉತ್ತಮ. ಮಾಂಸಹಾರ ತಿನ್ನದವರು ಬೇಳೆ, ಕಾಳುಗಳ ತಿನ್ನಲೇಬೇಕು.
ಮೊಟ್ಟೆ ಹಾಗೂ ಮಾಂಸ
ನಿಮ್ಮ ಆಹಾರದಲ್ಲಿ ಮೊಟ್ಟೆ ಸೇರಿದ್ದರೆ ಉತ್ತಮ. ಮೊಟ್ಟೆ ಪ್ರೋಟಿನ್ ಮೂಲವಾಗಿದ್ದು, ನಿತ್ಯವೂ ಒಂದೊಂದು ಮೊಟ್ಟೆ ನಿಮ್ಮ ಆರೋಗ್ಯಕ್ಕೆ ಅತ್ಯುತ್ತಮ. ಹಾಗೆ ಮಾಂಸ ಅಹ ಪ್ರೋಟಿನ್‌ನಿಂದ ತುಂಬಿರುವುದರಿಂದ ನಿಯಮಿತ ಸೇವನೆಯ ತೂಕ ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ. ಕಡಿಮೆ ಹಣದಲ್ಲಿ ಹೆಚ್ಚು ಪ್ರೋಟಿಸ್ ಸಿಗುವ ಆಹಾರ ಯಾವುದಾದರು ಇದ್ದರೆ ಅದು ಮೊಟ್ಟೆಯಾಗಿದೆ. ಕೆಲವರು ಅದರಲ್ಲಿರುವ ಹಳದಿ ಸೇವಿಸುವುದಿಲ್ಲ, ತೂಕ ಹೆಚ್ಚಳಕ್ಕೆ ಇದು ಪೂರಕ ಆಗಿರೋದ್ರಿಂದ ಹಳದಿಯನ್ನು ತೆಳ್ಳಗಿನ ದೇಹ ಹೊಂದಿರುವವರು ಸೇವಿಸಬಹುದು.
ಆಹಾರ ಜಗಿದು ತಿನ್ನುವುದು
ನಮ್ಮ ಆಹಾರದಲ್ಲಿ ಕೆಲವು ಬಾಯಿಯ ಜೊಲ್ಲಿನಲ್ಲಿಯೇ ಕರಗುವಂತಹವು ಇರುತ್ತವೆ. ಪೂರ್ತಿಯಾಗಿ ಜಗಿಯದ ಆಹಾರ ಜೊಲ್ಲಿನಲ್ಲಿ ಕರಗದೇ ಹಾಗೇ ಜಠರಕ್ಕೆ ಹೋಗಿಬಿಡುವುದರಿಂದ ಆ ಆಹಾರವನ್ನು ಕರಗಿಸಿಕೊಳ್ಳಲು ಸಾಧ್ಯವಾಗದೇ ವಿಸರ್ಜಿಸಲ್ಪಡುತ್ತವೆ. ಇದರಿಂದ ದೇಹಕ್ಕೆ ಲಭ್ಯವಾಗಲಿದ್ದ ಪೋಷಕಾಂಶಗಳು ಸಿಗದೇ ನಷ್ಟವಾಗುತ್ತದೆ. ದೇಹ ತೂಕ ಪಡೆದುಕೊಳ್ಳುವುದು ನಿಧಾನವಾಗುತ್ತದೆ. ನಾವು ಆಹಾರವನ್ನು ಜಗಿದು ತಿನ್ನುವುದರಿಂದಾಗಿ ದೇಹಕ್ಕೆ ಅಗತ್ಯವಾಗಿ ಬೇಕಾದ ಅಂಶಗಳನ್ನು ದೇಹ ಹೀರಿಕೊಳ್ಳಲು ಸಹಾಯವಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
