Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ 5 ಫುಡ್‌ಗಳ ಸೇವನೆ ಫುಡ್ ಪಾಯಿಸನ್ ಅಪಾಯ ಹೆಚ್ಚಿಸುತ್ತೆ..! ಆದಷ್ಟು ದೂರವೇ ಇರಿ..!
ನಮಗೆ ಯಾವಾಗ ಫುಡ್ ಪಾಯಿಸನ್ ಆಗುತ್ತೆ ಅನ್ನೋದನ್ನ ಆಲೋಚಿಸಲು ಸಾಧ್ಯವಾಗೋದಿಲ್ಲ. ಏಕೆಂದರೆ ನಮ್ಮ ಇಷ್ಟದ ತಿಂಡಿ, ಊಟ ಮಾಡಿದಾಗಲು, ಸ್ನ್ಯಾಕ್ಸ್ ತಿಂದಾಗಲು ಫುಡ್ ಪಾಯಿಸನ್ ಆಗೋದು ನೋಡಿದ್ದೇವೆ. ಕೆಲವೊಮ್ಮೆ ಯಾವ ಕಾರಣಕ್ಕೆ ಫುಡ್ ಪಾಯಿಸನ್ ಆಗುತ್ತೆ ಅನ್ನೋದನ್ನ ಪತ್ತೆ ಮಾಡುವುದು ಬಹಳ ಕಷ್ಟವಾಗುತ್ತದೆ. ಹಾಗೆ ಫುಡ್ ಪಾಯಿಸನ್ ಅನ್ನು ನಿರ್ಲಕ್ಷಿಸಿದರೆ ಪ್ರಾಣಕ್ಕೂ ಅಪಾಯ ತರುವಂತಹ ಸಾಧ್ಯತೆ ಇರುತ್ತದೆ.
ಅದರಲ್ಲೂ ರಸ್ತೆ ಬದಿಯ ಆಹಾರ ಸವಿಯಲು ಇಷ್ಟಪಡುವವರು ಹೆಚ್ಚಾಗಿ ಫುಡ್ ಪಾಯಿಸನ್‌ಗೆ ಒಳಗಾಗುವುದನ್ನು ನಾವು ನೋಡಬಹುದು. ಅದರಲ್ಲೂ ಕೆಲವು ಫುಡ್‌ಗಳು ಫುಡ್ ಪಾಯಿಸನ್‌ಗೆ ನೇರ ಕಾರಣವಾಗಿರುತ್ತದೆ. ಹಾಗಾದ್ರೆ ಯಾಔ 5 ಫುಡ್‌ಗಳನ್ನು ನಾವು ಸವಿಯುವ ಮುನ್ನ ಮತ್ತೊಮ್ಮೆ ಯೋಚಿಸುವುದು ಉತ್ತಮ ಎನ್ನುವುದನ್ನು ನಾವಿಲ್ಲಿ ತಿಳಿಯೋಣ.

ಭಾರತದಲ್ಲಿ ಫುಡ್ ಪಾಯಿಸನ್ ಪ್ರಕರಣಗಳಲ್ಲಿ ಬೀದಿ ಬದಿಯ ಆಹಾರಗಳು ಪ್ರಮುಖ ಕಾರಣವಾಗಿರುತ್ತವೆ. ಇತ್ತೀಚಿಗೆ ಹೈದರಾಬಾದ್‌ನಲ್ಲಿ ತಾತಿ ಹಾಗೂ ಮಕ್ಕಳು ಮೋಮೊಸ್ ತಿಂದ ಬಳಿಕ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದರು. ಆದ್ರೆ ಅವರು ಮಗು ಬದುಕುಳಿದಿರಲಿಲ್ಲ. ಹೀಗೆ ಫುಡ್ ಪಾಯಿಸನ್‌ಗೆ ಬೀದಿ ಬದಿಯ ಆಹಾರಗಳು ನೇರ ಕಾರಣವಾಗುತ್ತಿವೆ. ಹಾಗಾದ್ರೆ ಯಾವ ಫುಡ್‌ಗಳು ಅಪಾಯಕಾರಿಯಾಗಬಹುದು ಎಂಬುದನ್ನು ತಿಳಿದುಕೊಳ್ಳೋಣ.
ಪಾನಿಪುರಿ ಅಥವಾ ಗೋಲ್ಗಪ್ಪ
ಪಾನಿಪುರಿಯಲ್ಲಿ ಬಳಸುವ ನೀರು ಸೇರಿ ಅಲ್ಲಿನ ಕೆಲವು ವಸ್ತುಗಳು ಬಹುಬೇಗ ಹಾಳಾಗುವ ಕಾರಣ ಪಾನಿಪೂರಿ ಹಾಗೂ ಗೋಲ್ಗಪ್ಪ ಬೇಗ ಕೆಡುತ್ತವೆ. ಪ್ಯಾಪಾರಸ್ಥರು ಸರಿಯಾಗಿ ನೋಡದಿದ್ದರೆ ಅಥವಾ ಪರಿಶೀಲಿಸದೆ ಇದನ್ನು ಗ್ರಾಹಕರಿಗೆ ಹಂಚಿದರೆ ಫುಡ್ ಪಾಯಿಸನ್ ಆಗ್ರೋದ್ರಲ್ಲಿ ಯಾವ ಅನುಮಾನವೂ ಇಲ್ಲ. ಪಾನಿಪೂರಿಗೆ ಬಳಸುವ ನೀರು, ಆಲೂಗಡ್ಡೆ ಸೇರಿ ಪೂರಿ ಕೂಡ ಬಹುಬೇಗ ಬ್ಯಾಕ್ಟಿರಿಯಾ, ವೈರಸ್‌ಗಳ ಬೆಳವಣಿಗೆಗೆ ಸಹಕಾರಿಯಾಗುತ್ತವೆ. ಇ. ಕೋಲಿ, ಸಾಲ್ಮೊಎಲ್ಲಾ, ಹೆಪಟೈಟಿಸ್ ಸೇರಿ ಹಲವು ಬ್ಯಾಕ್ಟಿರಿಯಾ ಉತ್ಪತ್ತಿಗೆ ಕಾರಣವಾಗುತ್ತದೆ.
ವಡಾ ಪಾವ್
ಚಟ್ನಿ ಅಥವಾ ಪನಿಯಾಣಗಳ ಅಸಮರ್ಪಕ ಶೇಖರಣೆ ಹಾಗೂ ಶೇಖರಿಸಿಟ್ಟ ಸ್ಥಳದಲ್ಲಿನ ಉಷ್ಣತೆ ಸೇರಿ ವಡಾ ಪಾವ್ ಮಾಡಲು ಬಳಸುವ ಮಸಾಲೆ ಬಹುಬೇಗ ಕೆಡುತ್ತದೆ.
ಸ್ಟ್ಯಾಫಿಲೋಕೊಕಸ್ ಔರೆಸ್ ಅಥವಾ ಕ್ಲೋಸ್ಟ್ರಿಡಿಯಮ್ ಪರ್ಫ್ರಿಂಗನ್ಸ್‌ನ್ ಬ್ಯಾಕ್ಟೀರಿಯಾ ಬೆಳೆಯಲು ಇದು ಕಾರಣವಾಗುವುದರಿಂದ ಈ ಆಹಾರ ಕೂಡ ಫುಡ್ ಪಾಯಿಸನ್ ಹೆಚ್ಚಾಗಲು ಕಾರಣವಾಗಬಹುದು.
ಸಮೋಸ
ಸಮೋಸಾಗಳನ್ನು ಸರಿಯಾಗಿ ಬೇಯಿಸದಿದ್ದರೆ ಅಥವಾ ಸುರಕ್ಷಿತ ತಾಪಮಾನದಲ್ಲಿ ಶೇಖರಿಸಿಡದಿದ್ದರೆ ಬಹಳ ಬೇಗ ಕೆಡುತ್ತದೆ. ಆದ್ರೆ ಸಮೋಸ ಕೆಟ್ಟಿದ್ದರು ಗೊತ್ತಾಗುವುದಿಲ್ಲ. ಒಳಗೆ ಇರುವ ಪಲ್ಯ ಕೆಟ್ಟಿರುತ್ತದೆ, ಇದರಿಂದ ಸಮೋಸ ತಿಂದರೆ ಹಾನಿಯಾಗುವುದನ್ನು ನೋಡಬಹುದು. ಸಾಲ್ಮೊನೆಲ್ಲಾ ಅಥವಾ ಇ.ಕೋಲಿಯಂತಹ ಬ್ಯಾಕ್ಟೀರಿಯಾ ಇದರಲ್ಲಿ ಬೆಳವಣಿಗೆಯಾಗುತ್ತದೆ.
ಮೊಮೊಸ್
ಮೊಮೊಸ್‌ಗಳನ್ನು ಬಹಳ ಇಷ್ಟಪಟ್ಟು ಸವಿಯುತ್ತಾರೆ, ಆದ್ರೆ ಮೊಮೊಸ್‌ಗಳು ಬಹಳ ಬೇಗ ಹಾಳಾಗುತ್ತದೆ. ಅದರಲ್ಲಿಯೂ ಮೊಮೊಸ್ ಮಾಡಲು ಮೈದಾ ಬಳಸುವುದು ಹಾಗೆ ಎಣ್ಣೆಗಳನ್ನು ಒಂದಿಷ್ಟು ದಿನ ಇಟ್ಟಾಗ ಅದರಲ್ಲಿ ಫಂಗಸ್, ಬ್ಯಾಕ್ಟಿರಿಯಾ ಹುಟ್ಟಿಗೆ ಕಾರಣವಾಗುತ್ತದೆ.
ಚಾಟ್‌ಗಳು
ರಸ್ತೆಬದಿಯಲ್ಲಿನ ಚಾಟ್‌ಗಳನ್ನು ಸಾಮಾನ್ಯವಾಗಿ ಫ್ರಿಡ್ಜ್‌ನಲ್ಲಿಡುವುದು ಅಥವಾ ಮೊಸರು, ಚಟ್ನಿಗಳನ್ನು ಒಂದಿಷ್ಟು ದಿನ ಇಟ್ಟಾಗ ಅದರಲ್ಲೀ ಬ್ಯಾಕ್ಟಿರಿಯಾ ಬೆಳವಣಿಗೆಯಾಗುತ್ತದೆ. ಇದು ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಹೀಗಾಗಿ ಎಲ್ಲಾ ತಿಂಡಿಗಳ ಸವಿಯುವ ಮುನ್ನ ಎಚ್ಚರಿಕೆಯಿಂದ ಇರುವುದು ಬಹಳ ಮುಖ್ಯ, ಅದರಲ್ಲೂ ಕ್ಲೀನ್ ಇರದಂತಹ ಸ್ಥಳದಲ್ಲಿ ಈ ಎಲ್ಲಾ ಫುಡ್‌ಗಳ ಸವಿಯುವುದು ಅಪಾಯಕ್ಕೆ ಸೂಚನೆಯಾಗಲಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


