Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೂಳೆಗಳ ಬಲಕ್ಕಾಗಿ ಈ 6 ಆಹಾರ ಸೇವಿಸಿ..! ಕ್ಯಾಲ್ಸಿಯಂ ತುಂಬಿರುವ ಆಹಾರವಿದು..!
ಇತ್ತೀಚಿಗೆ ಬೆನ್ನು ನೋವು, ಸೊಂಟ ನೋವು, ಕಾಲು ನೋವು ಹೀಗೆ ಹಲವಾರು ಮೂಳೆ ಸಂಬಂಧಿ ಸಮಸ್ಯೆಯಿಂದ ಬಳಲುವವರನ್ನು ನಾವು ನೋಡುತ್ತಲೇ ಇರುತ್ತೇವೆ. ಹಿರಿಯರಲ್ಲಿ ಮಾತ್ರವಲ್ಲ ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಸಹ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮೂಳೆಗಳ ಸಮಸ್ಯೆ ಬರಲು ನಿರ್ದಿಷ್ಟ ವಯಸ್ಸಿನ ಮಿತಿ ಏನು ಇಲ್ಲ ಬಿಡಿ.
ಆದರೆ ಸಣ್ಣ ವಯಸ್ಸಿನಲ್ಲೇ ಮೂಳೆ ಸಂಬಂಧಿ ಸಮಸ್ಯೆಗೆ ಒಳಗಾಗುತ್ತಿರುವುದು ಮಾತ್ರ ಆತಂಕ ಹುಟ್ಟಿಸುತ್ತೆ. ಏಕೆಂದರೆ ಮುಂಬರುವ ಪೀಳಿಗೆಗಳು ಅತೀ ಚಿಕ್ಕ ವಯಸ್ಸಿನಲ್ಲೇ ಮೂಳೆ ಸಂಬಂಧಿ ಸಮಸ್ಯೆಗೆ ಗುರಿಯಾದರು ಅಚ್ಚರಿಪಡಬೇಕಿಲ್ಲ.

ಹೀಗೆ ಅವಧಿ ಮುನ್ನವೇ ಈ ಸಮಸ್ಯೆಗೆ ಒಳಗಾಗಲು ಹಲವಾರು ಕಾರಣಗಳಿವೆ. ನಾವು ಸೇವಿಸುವ ಆಹಾರದಲ್ಲಿ ನಿರ್ದಿಷ್ಟ ಪೋಷಕಾಂಶದ ಕೊರತೆಯೂ ಇದಕ್ಕೆ ಕಾರಣವರಬಹುದು. ಇನ್ನೊಂದು ನಮ್ಮ ಜೀವನ ಶೈಲಿಯಾಗಿರಬಹುದು. ನಾವು ಸೇವಿಸುವ ಆಹಾರದಲ್ಲಿ ಕ್ಯಾಲ್ಸಿಯಂ ಅಂಶ ಕಡಿಮೆಯಾದಾಗ ಬೇಗನೇ ಮೂಳೆಗಳ ಸಮಸ್ಯೆ ಕಾಣಿಸಿಕೊಳ್ಳಲಿದೆ ಎಂಬುದು ಸಾಮಾನ್ಯವಾಗಿ ಹೇಳುವ ಕಾರಣವಾಗಿದೆ.
ಹಾಗಾದರೆ ನಮ್ಮ ಮೂಳೆಗಳ ಬಲ ಹೆಚ್ಚಿಸಲು ನಾವು ಯಾವ ರೀತಿಯ ಆಹಾರ ಸೇವಿಸಬೇಕು?, ಯಾವ ಆಹಾರದಲ್ಲಿ ಹೆಚ್ಚು ಕ್ಯಾಲ್ಸಿಯಂ ನಮ್ಮ ದೇಹಕ್ಕೆ ಸಿಗುತ್ತದೆ ಎಂಬೆಲ್ಲಾ ವಿಚಾರಗಳ ಕುರಿತು ನಾವಿಂದು ತಿಳಿದುಕೊಳ್ಳೋಣ.
ಆರೋಗ್ಯಕರ ಮೂಳೆಗಳಿಗೆ ಆಹಾರ
ಕ್ಯಾಲ್ಸಿಯಂ ನಮ್ಮ ದೇಹಕ್ಕೆ ಬಹಳ ಮುಖ್ಯ. ಏಕೆಂದರೆ ಕ್ಯಾಲ್ಸಿಯಂ ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ. ವೈದ್ಯಕೀಯ ಪರಿಭಾಷೆಯಲ್ಲಿ ಕ್ಯಾಲ್ಸಿಯಂ ಕೊರತೆಯನ್ನು ಹೈಪೋಕ್ಯಾಲ್ಸಿಯಂ ಎಂದು ಕರೆಯಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸ್ನಾಯುಗಳು ಮತ್ತು ಮೂಳೆಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ. ಮೂಳೆಗಳನ್ನು ಬಲಪಡಿಸಲು ಏನು ತಿನ್ನಬೇಕು ಎಂದು ತಿಳಿಯೋಣ.
ತರಕಾರಿಗಳು ಮತ್ತು ಹಣ್ಣುಗಳು
ಯಾರೊಬ್ಬರ ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಿದ್ದರೆ ಬಾಳೆಹಣ್ಣು, ಕಿತ್ತಳೆ, ಪಾಲಕ್ ಇತ್ಯಾದಿಗಳನ್ನು ಪ್ರತಿದಿನ ಸೇವಿಸಬೇಕು. ಏಕೆಂದರೆ ಈ ತರಕಾರಿಗಳಲ್ಲಿ ಕ್ಯಾಲ್ಸಿಯಂ ಹೇರಳವಾಗಿ ಕಂಡುಬರುತ್ತದೆ. ಇದು ಮೂಳೆಗಳನ್ನು ಬಲಗೊಳಿಸುತ್ತದೆ.
ಮೊಟ್ಟೆ
ಮೂಳೆಗಳನ್ನು ಬಲಪಡಿಸಲು ನೀವು ಪ್ರತಿದಿನ ಮೊಟ್ಟೆಗಳನ್ನು ಸೇವಿಸಬಹುದು. ಏಕೆಂದರೆ ಇದು ಹೇರಳವಾದ ಪ್ರೋಟೀನ್ ಮತ್ತು ಮೂಳೆಗಳಿಗೆ ಮುಖ್ಯವಾದ ವಿಟಮಿನ್ ಡಿ ಯ ಉತ್ತಮ ಮೂಲವನ್ನು ಹೊಂದಿರುತ್ತದೆ. ಹೀಗಾಗಿ ಪ್ರತಿದಿನ ಒಂದು ಇಲ್ಲವೆ 2 ಮೊಟ್ಟೆ ಸೇವನೆ ನಿಮಗೆ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ನೀಡಲಿದೆ.
ಎಳ್ಳು
ಮೂಳೆಗಳನ್ನು ಬಲಪಡಿಸಲು ನೀವು ಆಹಾರದಲ್ಲಿ ಎಳ್ಳನ್ನು ಸೇರಿಸಬಹುದು. ಏಕೆಂದರೆ ಕ್ಯಾಲ್ಸಿಯಂ ಮತ್ತು ಫೈಬರ್ ಇದರಲ್ಲಿ ಹೇರಳವಾಗಿ ಕಂಡುಬರುತ್ತದೆ. ಇದು ಮೂಳೆಗಳನ್ನು ಬಲಪಡಿಸಲು ಮತ್ತು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಡೈರಿ ಆಹಾರಗಳು
ಮೂಳೆಗಳು ಬಲವಾಗಿರಲು, ನೀವು ಡೈರಿ ಆಹಾರವನ್ನು ಸೇವಿಸಬೇಕು. ಉದಾಹರಣೆಗೆ ಮೊಸರು, ಹಾಲು ಮತ್ತು ಚೀಸ್ ಇತ್ಯಾದಿ. ಏಕೆಂದರೆ ಇದರಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಕಂಡುಬರುತ್ತದೆ. ಆದ್ದರಿಂದ, ಪ್ರತಿದಿನ ಹಾಲು ಅಥವಾ ಮೊಸರು ತಿನ್ನುವುದರಿಂದ ದೇಹದ ಕ್ಯಾಲ್ಸಿಯಂ ಅಗತ್ಯವನ್ನು ಸುಲಭವಾಗಿ ಪೂರೈಸುತ್ತದೆ.
ಬಾದಾಮಿ
ಎಲ್ಲಾ ಕಾಳುಗಳಲ್ಲಿ ಕ್ಯಾಲ್ಸಿಯಂ ತುಂಬಿರುತ್ತದೆ. ಅದೇ ರೀತಿ ಬಾದಾಮಿಯಲ್ಲಿ ಕ್ಯಾಲ್ಸಿಯಂ ಅತ್ಯಧಿಕವಾಗಿದೆ. ಕೇವಲ 1 ಔನ್ಸ್ (28 ಗ್ರಾಂ) ಬಾದಾಮಿ, ಅಥವಾ ಸುಮಾರು 23 ಬೀಜಗಳು ನಿಮ್ಮಗೆ ದೇಹಕ್ಕೆ ಬೇಕಾದ ಅಗತ್ಯ ಕ್ಯಾಲ್ಸಿಯಂ ಒದಗಿರುತ್ತದೆ.
ಹರಿವೆ ಸೊಪ್ಪು / ಬೀಜ
ಹರಿವೆ ಸೊಪ್ಪು ಅಥವಾ ಅದರ ಬೀಜದಲ್ಲಿ ಸಾಕಷ್ಟು ಕ್ಯಾಲ್ಸಿಯಂ ಇರಲಿದೆ. ನಿಮ್ಮ ಊಟದಲ್ಲಿ ಹರಿವೆ ಸೊಪ್ಪು ಇಲ್ಲವೆ ಅದರ ಬೀಜದಿಂದ ತಯಾರಾರಿಸಿದ ಆಹಾರ ಸೇವಿಸುವುದರಿಂದ ಮೂಳೆಗಳು ಬಲವಾಗುತ್ತವೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications