Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ತೂಕ ಇಳಿಸಲು ಸುಲಭದ 2-2-2 ವಿಧಾನ..! ಏನಿದು ವೈರಲ್ ವಿಧಾನ? ಜನ ಇದರ ಹಿಂದೆ ಬಿದ್ದಿರೋದ್ಯಾಕೆ?
ಇತ್ತೀಚಿಗೆ ತೂಕ ಇಳಿಸೋದು ಅಂದ್ರೆ ದೊಡ್ಡ ಸವಾಲಿನ ಕೆಲಸ. ಚಿಕ್ಕ ವಯಸ್ಸಿನಲ್ಲೇ ಅಧಿಕ ತೂಕ ಹೊಂದುವುದು ಇಂದಿನ ಹಲವು ಸಮಸ್ಯೆಗಳಲ್ಲಿ ಒಂದಾಗಿದೆ. ಅವರ ವಯಸ್ಸಿಗೆ ಇರಬೇಕಾದ ಪ್ರಮಾಣಕ್ಕಿಂತ ಹೆಚ್ಚಿನ ತೂಕ ಹೊಂದುವುದು ಹಾಗೂ ಬಳಿಕ ತೂಕ ಇಳಿಸಲು ಪರದಾಡುವುದು ಸಾಮಾನ್ಯ ಸಂಗತಿಯಾಗಿದೆ.
ತೂಕ ಇಳಿಸಲು ಡಯೆಟ್, ಜಿಮ್, ಕಸರತ್ತು, ಓಡುವುದು, ವ್ಯಾಯಾಮ, ಯೋಗ, ಔಷಧಿ ಸೇರಿ ಹತ್ತಾರು ರೀತಿಯ ಪರಿಹಾರಕ್ಕೆ ಮುಂದಾಗುತ್ತಾರೆ. ಆದರೆ ಅದು ಅಷ್ಟೊಂದು ಸುಲಭದ ಮಾತಲ್ಲ. ಕೆಲವೊಮ್ಮೆ ತೂಕ ಇಳಿಸುವುದು ವರ್ಷಗಳ ಕಾಲ ತೆಗೆದುಕೊಳ್ಳುತ್ತದೆ. 1 ಕೆ,ಜಿ ತೂಕ ಇಳಿಸಲು ತಿಂಗಳುಗಳ ಕಾಲ ಕಷ್ಟಪಡುಬೇಕಾಗುತ್ತದೆ. ಆದರೆ ಕಠಿಣ ಶ್ರಮ, ಶ್ರದ್ಧೆಯಿಂದ ಕೆಲವರು ತಾವಂದುಕೊಂಡಂತೆ ತೂಕ ಇಳಿಸುವಲ್ಲಿ ಯಶಸ್ವಿಯೂ ಆಗಿರುತ್ತಾರೆ.

ಆದ್ರೆ ಈಗ ತೂಕ ಇಳಿಸಲು ಹೊಸದೊಂದು ಸಿದ್ದಾಂತ ರೂಪಗೊಂಡಿದೆ. ತೂಕ ಇಳಿಸಲು ಕಷ್ಟಪಡುತ್ತಿದ್ದ ಮಂದಿ ಈ ವಿಭಿನ್ನ ಸಿದ್ಧಾಂತ ಕಂಡು ಅಚ್ಚರಿಯ ಜೊತೆಗೆ ಏನಿದು ಹೊಸ ರೂಪಕ ಎಂದು ಬಾಯಿ ಮೇಲೆ ಬೆರಳಿಟ್ಟಿದ್ದಾರೆ. ಹೌದು ಅದೇ 2-2-2 ವಿಧಾನ.
2-2-2 ವಿಧಾನ ಈಗ ಇಂಟರ್‌ನೆಟ್‌ನಲ್ಲಿ ಭಾರೀ ಸುದ್ದಿಯಾಗುತ್ತಿದೆ. ಫಿಟ್‌ನೆಸ್ ಟ್ರೈನಿಗಳು, ವೈದ್ಯರು ಸೇರಿ ಹಲವರು ಈ ವಿಧಾನಕ್ಕೆ ಮೊರೆ ಹೋಗಿದ್ದಾರೆ. ಈ ವಿಧಾನದ ಮೂಲಕ ಸುಲಭವಾಗಿ ತೂಕ ಇಳಿಸಬಹುದು ಎಂದು ಖಚಿತವಾಗಿ ಹೇಳುತ್ತಿದ್ದಾರೆ. ಹಾಗಾದ್ರೆ ಏನಿದು 2-2-2 ವಿಧಾನ.
2-2-2 ವಿಧಾನ ಎಂದರೇನು?
2-2-2 ಎಂದರೆ ಯಾವುದೋ ಗಣಿತದ ದೊಡ್ಡ ಸೂತ್ರವಲ್ಲ ದಿನದಲ್ಲಿ 2 ಬಾಟಲಿ ನೀರು, 2 ಬಾರಿ ಹಣ್ಣು ಮತ್ತು ತರಕಾರಿ ಸೇವನೆ ಮತ್ತು 2 ಬಾರಿ ನಡೆಯುವುದು ಎಂಬ ಸರಳ ಸೂತ್ರವಾಗಿದೆ. ಈ ಸೂತ್ರವನ್ನು ಹಿಂದಿನಿಂದಲೂ ಅನುಸರಿಸಿ ತೂಕ ಇಳಿಸಲು ಮುಂದಾಗಿರುವವರು ಸಹ ಇರಬಹುದು. ಆದರೆ ಇದನ್ನು ನಿತ್ಯ ಕಟ್ಟು ನಿಟ್ಟಾಗಿ ಪಾಲಿಸಿರೆ ಖಚಿತವಾಗಿ ತೂಕ ಇಳಿಸಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಕೇವಲ ಈ 2-2-2 ಸೂತ್ರದ ಮೂಲಕ ತೂಕ ಇಳಿಸುತ್ತೇನೆ ಎಂದುಕೊಂಡಿದ್ದರೆ ಅದು ತಡವಾಗಲೂಬಹುದು. ಹೀಗಾಗಿ ಇದರ ಜೊತೆಗೆ ನಿಯಮಿತ ವ್ಯಾಯಾಮ, ಡಯಟಿಂಗ್, ಸೈಕಲಿಂಗ್, ಜಿಮ್ ಹೀಗೆ ಎಲ್ಲಾ ವಿಧಾನವನ್ನು ನಿತ್ಯವು ತಪ್ಪಿಸದೆ ಕ್ರಮಬದ್ಧವಾಗಿ ಮಾಡಿದ್ದೇ ಆದಲ್ಲಿ ಕೆಲವೇ ದಿನದಲ್ಲಿ ತೂಕ ಇಳಿಕೆಯಲ್ಲಿನ ಫಲಿತಾಂಶ ನೋಡಬಹುದು.
ಸದ್ಯ ಹೊಸ ವಿಧಾನ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪ್ರತಿಯೊಬ್ಬರು ಇಂತಹ ಸುಲಭದ ವಿಧಾನ ಅನುಸರಿಸಲು ಉತ್ಸುಕರಾಗಿದ್ದಾರೆ. ಏಕೆಂದರೆ ತೂಕ ಇಳಿಸಲು ಮುಂದಾದವರು ಹತ್ತಾರು ರೀತಿಯ ಕಠಿಣ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಉಪವಾಸ ಮಾಡುವುದು, ಅಲ್ಪ ಆಹಾರ ಸೇವನೆ, ಇಡೀ ದಿನ ವ್ಯಾಯಾಮ ಹೀಗೆ ಕಠಿಣ ನಿಯಮದ ನಡುವೆ ಈ 2-2-2 ವಿಧಾನ ಅವರಲ್ಲಿ ನೆಮ್ಮದಿಯ ನಿಟ್ಟುಸಿರು ತಂದಿದೆ. ಈ ಸೂತ್ರ ಸುಲಭವಾಗಿ ಯಾರು ಬೇಕಾದರು ಅನುಸರಿಸಬಹುದಾಗಿದೆ.
ತೂಕ ಇಳಿಸಲು ನೆರವಾಗುವ ತರಕಾರಿಗಳು
ಪಾಲಾಕ್, ಇತರ ಸೊಪ್ಪುಗಳು, ಟೊಮೆಟೊ, ಈರುಳ್ಳಿ, ಬೆಂಡೆಕಾಯಿ ಅಣಬೆ, ಕ್ಯಾಬೇಜ್, ಹೂಕೋಸು, ಬ್ರೊಕೋಲಿ ಹಣ್ಣುಗಳು: ಪಪ್ಪಾಯಿ, ಕಿತ್ತಳೆ, ಹುಣಸೆಹಣ್ಣು, ಸೇಬು, ಕಲ್ಲಂಗಡಿ, ಕರ್ಬೂಜ, ಬಾಳೆಹಣ್ಣು,
ಕಾಳುಗಳು: ಬಾದಾಮಿ, ಪಿಸ್ತಾ, ಕಡಲೆ ಬೀಜ, ಕುಂಬಳಕಾಯಿ ಬೀಜ, ಅಗಸೆ ಬೀಜ ಮುಂತಾದವುಗಳು
ಸಂಬಾರ ಪದಾರ್ಥಗಳು: ಅರಿಶಿಣ, ಕೊತ್ತಂಬರಿ, ಜೀರಿಗೆ, ಬೆಳ್ಳುಳ್ಳಿ, ಕಾಳುಮೆಣಸು, ಮೆಂತೆ, ಏಲಕ್ಕಿ ಮುಂತಾದವು
ಪ್ರೊಟೀನ್‌ಗಾಗಿ: ಪನ್ನೀರ್, ಟೋಫು
ಬೆಣ್ಣೆ, ಚೀಸ್, ಎಣ್ಣೆ ಭರಿತ ಆಹಾರ, ಬೀದಿ ಬದಿಯ ತಿಂಡಿ, ಬೇಕರಿ ತಿಂಡಿಗಳು, ಡೈರಿ ಪ್ರೋಡಕ್ಟ್, ಸಿಹಿ ತಿಂಡಿ, ಮದ್ಯಪಾನ, ಟೀ-ಕಾಫಿ (ಸಕ್ಕರೆ ಬಳಸಿರುವುದು)
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
