Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನುಗ್ಗೆಸೊಪ್ಪಿನ ಜ್ಯೂಸ್ ಕುಡಿದರೆ ತೂಕ ಇಳಿಕೆಯಿಂದ ಹಿಡಿದು ಇಷ್ಟೆಲ್ಲಾ ಪ್ರಯೋಜನವಿದೆಯಾ?
ಈಗಂತೂ ನುಗ್ಗೆ ಸೊಪ್ಪು ಸಿಕ್ಕಾಪಟ್ಟೆ ಜನಪ್ರಿಯವಾಗುತ್ತಿದೆ, ಮೊದಲೆಲ್ಲಾ ನುಗ್ಗೆಸೊಪ್ಪು ಬಗ್ಗೆ ಇಷ್ಟೊಂದು ಜನಪ್ರಿಯತೆ ಇರಲಿಲ್ಲ, ಈಗಂತೂ ನುಗ್ಗೆಸೊಪ್ಪು ಪುಡಿಯೆಲ್ಲಾ ಮಾರ್ಕೆಟ್‌ನಲ್ಲಿ ದೊರೆಯುತ್ತಿದೆ, ಏಕೆಂದರೆ ಇದರ ಪ್ರಯೋಜನ ಅಷ್ಟಿದೆ. ಹಳ್ಳಿಗಳಲ್ಲಿ ನುಗ್ಗೆಸೊಪ್ಪು ಅದರ ದಂಟು ಅವುಗಳಿಂದ ಅನೇಕ ಮನೆಮದ್ದು ಮಾಡ್ತಾ ಇದ್ದರು. ಈಗ ನಗರಪ್ರದೇಶದಲ್ಲಿಯೂ ನುಗ್ಗೆಸೊಪ್ಪು ಬಳಕೆ ಹೆಚ್ಚಾಗಿದೆ. ನುಗ್ಗೆಸೊಪ್ಪಿನಲ್ಲಿ ವಿಟಮಿನ್, ಖನಿಜಾಂಶಗಳು, antioxidants ಎಲ್ಲಾ ಇವೆ.
ತೂಕ ಇಳಿಕೆ ನುಗ್ಗೆಸೊಪ್ಪು ಜ್ಯೂಸ್ ಬಳಸುತ್ತಿದ್ದಾರೆ. ನುಗ್ಗೆಸೊಪ್ಪು ಜ್ಯೂಸ್ ತೂಕ ಇಳಿಕೆಗೆ ಹೇಗೆ ಸಹಕಾರಿ ಇದರಿಂದ ದೊರೆಯುವ ಪ್ರಯೋಜನವೇನು ಎಂದು ನೋಡೋಣ ಬನ್ನಿ::

ನುಗ್ಗೆಸೊಪ್ಪು ಜ್ಯೂಸ್ ಹೇಗೆ ಮಾಡುವುದು
ನುಗ್ಗೆಸೊಪ್ಪು ಪುಡಿಯನ್ನು ಗ್ಲಾಸ್‌ನಲ್ಲಿ ಹಾಕಿ ಮಿಕ್ಸ್ ಮಾಡಿ ಕುಡಿಯುತ್ತಾರೆ ಅಥವಾ ಅದನ್ನು ಬೇಯಿಸಿ ಗ್ರೈಂಡ್ ಮಾಡಿ ಜ್ಯೂಸ್ ರೀತಿ ಮಾಡಿ ಅದಕ್ಕೆ ಸ್ವಲ್ಪ ನಿಂಬೆಸ ಹಿಂಡಿ ಕುಡಿಯಬಹುದು.
ನುಗ್ಗೆಸೊಪ್ಪು ನೀರು ಏಕೆ ಒಳ್ಳೆಯದು?
ನುಗ್ಗೆಸೊಪ್ಪಿನಲ್ಲಿ ಪೋಷಕಾಂಶ ಹೇರಳವಾಗಿದೆ
ನುಗ್ಗೆಸೊಪ್ಪಿನಲ್ಲಿ ವಿಟಮಿನ್ ಎ, ಸಿ ಮತ್ತು ಇ ಇದೆ, ಖನಿಜಾಂಶಗಳಿವೆ, ಅಮೈನೋ ಆಮ್ಲ ಇದೆ ಇದರಿಂದಾಗಿ ಶರೀರಕ್ಕೆ ತುಂಬಾನೇ ಒಳ್ಳೆಯದು, ಜೀರ್ಣಕ್ರಿಯೆಗೆ ಒಳ್ಳೆಯದು. ಅಲ್ಲದೆ ಇದನ್ನು ಪ್ರತಿದಿನ ಸೇವಿಸಿದರೂ ಶರೀರಕ್ಕೆ ಒಳ್ಳೆಯದೇ ಹೊರತು ಯಾವುದೇ ಅಡ್ಡಪರಿಣಾಮವಿಲ್ಲ.
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ನುಗ್ಗೆಸೊಪ್ಪು ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ, ನುಗ್ಗೆಸೊಪ್ಪಿಗೆ ಹಲವು ಕಾಯಿಲೆಗಳನ್ನು ತಡೆಗಟ್ಟುವ ಶಕ್ತಿಯಿದೆ ಎಂದು ಹೇಳಲಾಗುವುದು. ನೀವು ನುಗ್ಗೆಸೊfಪಪಿನ ಜ್ಯೂಸ್ ಕುಡಿಯುವುದರಿಂದ ಎಲ್ಲಾ ಕಾಲದಲ್ಲಿಯೂ ಆರೋಗ್ಯದ ರಕ್ಷಣೆ ಮಾಡುತ್ತದೆ.
ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು
ಕೆಲವರಿಗೆ ಮಲಬದ್ಧತೆ ಸಮಸ್ಯೆ ಇರುತ್ತದೆ ಅಂಥವರು ಈ ಜ್ಯೂಸ್ ಕುಡಿಯುವುದು ಒಳ್ಳೆಯದು, ಇದು ಮಲಬದ್ಧತೆ ಸಮಸ್ಯೆ ಕಡಿಮೆ ಮಾಡುತ್ತದೆ, ಹೊಟ್ಟೆ ಉಬ್ಬುವಿಕೆ, ಮಲಬದ್ಧತೆ, ಅಜೀರ್ಣ ಈ ಬಗೆಯ ಆರೋಗ್ಯ ಸಮಸ್ಯೆ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ. ಈ ಜ್ಯೂಸ್ ಅನ್ನು ಬೆಳಗ್ಗೆ ಕುಡಿದರೆ ಒಳ್ಳೆಯದು, ಇತರ ಯಾವುದೇ ಸಮಯದಲ್ಲಿ ಬೇಕಾದರೆ ತೆಗೆದುಕೊಳ್ಳಬಹುದು.
ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡುತ್ತದೆ
ಮಧುಮೇಹಿಗಳು ಈ ಜ್ಯೂಸ್ ಕುಡಿದರೆ ಅದ್ಭುತ ಪ್ರಯೋಜನ ಪಡೆಯುವಿರಿ. ಇದು ಅಧ್ಯಯನದಿಂದ ಸಾಬೀತಾಗಿರುವ ಅಂಶವಾಗಿದೆ, ಈ ಬಗ್ಗೆ Complementary Therapies in Medicine ಎಂಬ ಜರ್ನಲ್‌ನಲ್ಲಿ ಹೇಳಲಾಗಿದೆ, ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಬಳಸಬಹುದಾದ ನೈಸರ್ಗಿಕವಾದ ಸಪ್ಲಿಮೆಂಟ್ ಇದಾಗಿದೆ.
ಹೃದಯದ ಆರೋಗ್ಯಕ್ಕೆ ಒಳ್ಳೆಯದು
ನುಗ್ಗೆಸೊಪ್ಪಿನ ನೀರು ಹೃದಯದ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದಿದೆ. ಆದರೆ ಇದರ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಯಬೇಕಾಗಿದೆ. ನುಗ್ಗೆಸೊಪ್ಪಿನ ಜ್ಯೂಸ್ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಲು ತುಂಬಾನೇ ಸಹಕಾರಿಯಾಗಿದೆ.
ತ್ವಚೆ ಮತ್ತು ಕೂದಲಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
ಈ ನುಗ್ಗೆಸೊಪ್ಪಿನ ಜ್ಯೂಸ್ ಕೂದಲು ಮತ್ತು ತ್ವಚೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದಿದೆ. ತ್ವಚೆಯಲ್ಲಿ ಹೊಳಪು ಹೆಚ್ಚಾಗಲಿದೆ, ಕೂದಲಿನ ಆರೋಗ್ಯಕ್ಕೆ ಒಳ್ಳೆಯದು, ಇದರಲ್ಲಿರುವ ಪೋಷಕಾಂಶಗಳು ಕೂದಲನ್ನು ಆಂತರಿಕವಾಗಿ ಪೋಷಣೆ ಮಾಡುತ್ತದೆ.
ತೂಕ ಇಳಿಕೆಗೆ ಸಹಕಾರಿ
ದಿನಾ ನುಗ್ಗೆಸೊಪ್ಪಿನ ಜ್ಯೂಸ್ ಕುಡಿಯುವುದರಿಂದ ತೂಕ ಇಳಿಕೆಗೆ ಸಹಕಾರಿ. Molecular Nutritional Food Research ಜರ್ನಲ್‌ನಲ್ಲಿ ಈ ಬಗ್ಗೆ ಹೇಳಲಾಗಿದೆ. ಇದು ಚಯಪಚಯ ಕ್ರಿಯೆ ಉತ್ತಮವಾಗಿಸುತ್ತದೆ. ಹಾಗಾಗಿ ತೂಕ ಇಳಿಕೆಯ ಜರ್ನಿಯಲ್ಲಿರುವವರು ಈ ಜ್ಯೂಸ್ ಕುಡಿಯುವುದು ಒಳ್ಳೆಯದು. ಇದಕ್ಕೆ ಸ್ವಲ್ಪನಿಂಬೆರಸ ಹಾಕಿ ಕುಡಿಯಬಹುದು.
ಈ ಜ್ಯೂಸ್ ದೇಹಕ್ಕೆ ಅಗ್ಯತವಾದ ಪೋಷಕಾಂಶ ನೀಡುತ್ತದೆ ಅಲ್ಲದೆಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು.
ಸಲಹೆ: ನುಗ್ಗೆಸೊಪ್ಪು ಎಲ್ಲರೂ ತೆಗೆದುಕೊಳ್ಳಬಹುದು, ಆದರೆ ಏನಾದರು ಆರೋಗ್ಯ ಸಮಸ್ಯೆಯಿದ್ದರೆ ಉದಾಹರಣೆಗೆ ಮಧುಮೇಹಿಗಳು ಬರಿ ಇದೇ ಸೇವಿಸಿದರೆ ಸಾಕು ಔಷಧಿ ಬೇಡ ಎಂಬ ಸ್ವನಿರ್ಧಾರ ಬೇಡ, ನೀವು ವೈದ್ಯರ ಸಲಹೆ ಪಡೆದ ಬಳಿಕವಷ್ಟೇ ಔಷಧಿಯಲ್ಲಿ ಬದಲಾವಣೆ ಮಾಡಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











