Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಖ್ಯಾತ ನೇತ್ರತಜ್ಞ ಡಾ. ಭುಜಂಗ ಶೆಟ್ಟಿಗೆ ಹೃದಯಾಘಾತ: ಯಾರಿಗೆ ಜಿಮ್‌ನ ವರ್ಕೌಟ್ ಅಪಾಯಕಾರಿ?
ಡಾ. ಭುಜಂಗ ಶೆಟ್ಟಿ ಇನ್ನಿಲ್ಲ ಎಂಬ ಸುದ್ದಿ ಕೇಳಿ ಬರುತ್ತಿದ್ದಂತೆ ಕರ್ನಾಟಕದ ಜನತೆ ಮಾತ್ರವಲ್ಲ ದೇಶದ ಜನತೆ ಕಂಬಿನಿ ಮಿಡಿದಿದ್ದಾರೆ. ಕರ್ನಾಟಕವೂ ಅತ್ಯಾಮೂಲ್ಯ ಆಸ್ತಿಯನ್ನು ಕಳೆದುಕೊಂಡಿದೆ. ಖ್ಯಾತ ನೇತ್ರತಜ್ಞರಾಗಿ ಲಕ್ಷಾಂತರ ಜನರ ಕಣ್ಣಿನ ಕತ್ತಲು ಹೋಗಲಾಡಿಸಿ, ಅವರ ಪಾಲಿಗೆ ಬೆಳಕಾಗಿದ್ದ ಡಾ. ಭುಜಂಗ ಶೆಟ್ಟಿಯವರ ಉಸಿರು ಹೃದಯಾಘಾತಕ್ಕೆ ನಿಂತು ಹೀಗಿದೆ.
ಡಾ. ಭುಜಂಗ ಶೆಟ್ಟಿಯವರ ವಯಸ್ಸು 69, ಆದರೆ ಫಿಟ್ನೆಸ್ ಕಾಪಾಡಿಕೊಂಡಿದ್ದರಿಂದ ನೋಡಿದರೆ 45-50 ವಯಸ್ಸಿನವರಂತೆ ಕಾಣುತ್ತಿದ್ದರು. ತುಂಬಾ ಲವಲವಿಕೆಯ ವ್ಯಕ್ತಿ, ಸ್ವತಃ ವೈದ್ಯರಾಗಿರುವುದರಿಂದ ಆರೋಗ್ಯದ ಕಡೆಗೆ ತುಂಬಾನೇ ಗಮನ ಹರಿಸುತ್ತಿದ್ದರು. ಅವರ ಮೈಕಟ್ಟು ನೋಡಿದಾಗಲೇ ಅವರು ದೈಹಿಕ ಫಿಟ್ನೆಸ್‌ಗೆ ಎಷ್ಟು ಪ್ರಾಮುಖ್ಯತೆ ನೀಡಿದ್ದಾರೆ ಎಂಬುವುದು ಗೊತ್ತಾಗುತ್ತಿತ್ತು, ಅವರು ರಿವರ್ಸ್ ಡಯಾಬಿಟಿಸ್ ಫಾರ್ಮುಲಾ ಮಾಡಿ ಆರೋಗ್ಯ ಕಾಪಾಡಿಕೊಂಡಿದ್ದರು. ಅಂಥ ವ್ಯಕ್ತಿಗೆ ಹೃದಯಾಘಾತ ಎಂದಾಗ ನಂಬಲು ಸ್ವಲ್ಪ ಕಷ್ಟವಾಗುವುದು.

ಅವರು ಶುಕ್ರವಾರ ಡ್ಯೂಟಿ ಮುಗಿಸಿ ಬಂದು ಸಂಜೆ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವಾಗ ಅವರಿಗೆ ಹೃದಯಾಘಾತವಾಗಿತ್ತು. ಪುನೀತ್‌ರಾಜ್ ಕುಮಾರ್ ಕೂಡ ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಅವರಿಗೆ ಹೃದಯಾಘಾತ ಉಂಟಾಗಿತ್ತು. ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಯಾರಿಗೆ ಹೃದಯಾಘಾತದ ಅಪಾಯ ಅಧಿಕ? ಹೃದಯಾಘಾತದ ಲಕ್ಷಣಗಳೇನು, ವರ್ಕೌಟ್ ಬಳಿಕ ಅಥವಾ ವರ್ಕೌಟ್ ಮಾಡುವಾಗ ಎದೆನೋವು ಬಂದರೆ ಏನು ಮಾಡಬೇಕು ಎಂಬೆಲ್ಲಾ ಮಾಹಿತಿ ನೋಡೋಣ:
ವರ್ಕೌಟ್ ಮಾಡುವಾಗ ಯಾರಿಗೆ ಹೃದಯಾಘಾತದ ಅಪಾಯ ಅಧಿಕ?
ಹೃದಯ ಸಂಬಂಧಿ ಸಮಸ್ಯೆಯಿದ್ದರೆ, ಅತ್ಯಧಿಕ ಮೈ ತೂಕ ಹೊಂದಿದ್ದರೆ, ಅತ್ಯಧಿಕ ರಕ್ತದೊತ್ತಡ ಅಥವಾ ಮಧುಮೇಹದ ಸಮಸ್ಯೆ ಹೊಂದಿರುವವರಿಗೆ ಇತರರಿಗೆ ಹೋಲಿಸಿದರೆ ಹೃದಯಾಘಾತದ ಅಪಾಯ ಅಧಿಕ. ಅದಲ್ಲದೆ ಆರೋಗ್ಯಕರ ಆಹಾರಕ್ರಮ ಪಾಲಿಸದಿದ್ದರೆ, ಧೂಮಪಾನಿಗಳಲ್ಲಿ, ದೈಹಿಕ ಚಟುವಟಿಕೆ ಕಡಿಮೆ ಇರುವವರಲ್ಲಿ ಹೃದಯಾಘಾತ ಸಂಭವಿಸದಬಹುದು. ಅಲ್ಲದೆ ಕುಟುಂಬದಲ್ಲಿ ಹೃದಯಾಘಾತದ ಇತಿಹಾಸವಿದ್ದರೂ ಅಪಾಯದ ಸಾಧ್ಯತೆ ಹೆಚ್ಚಿದೆ.
ಹೃದಯಾಘಾತದ ಲಕ್ಷಣಗಳೇನು?
ವ್ಯಾಯಾಮ ಮಾಡುವಾಗ ಅಥವಾ ವ್ಯಾಯಾಮ ಮಾಡಿದ ಬಳಿಕ ಏನಾದರೂ ಎದೆನೋವು ಕಂಡು ಬಂದರೆ ನಿರ್ಲಕ್ಷ್ಯ ಮಾಡಲೇಬಾರದು. ಅಲ್ಲದೆ ವರ್ಕೌಟ್ ಮಾಡುತ್ತಿದ್ದಾಗ ಎದೆನೀವು ಕಂಡು ಬಂದರೆ ತಕ್ಷಣ ವರ್ಕೌಟ್ ನಿಲ್ಲಿಸಿ, ಸಮೀಪದ ಸುಸಜ್ಜಿತ ಆಸ್ಪತ್ರೆಗೆ ಧಾವಿಸಿ.
ವಿವಿಧ ಬಗೆಯ ಎದೆನೋವು
ಜಿಮ್‌ನಲ್ಲಿ ವರ್ಕೌಟ್ ಮಾಡಿದಾಗ ಎದೆನೋವು ಕಾಣಿಸಿಕೊಂಡಾಗ ಹೃದಯಾಘಾತದಿಂದ ಉಂಟಾದ ಎದೆನೋವಾ ಅಥವಾ ವರ್ಕೌಟ್ ಮಾಡಿದ್ದರಿಂದ ಉಂಟಾಗಿದ್ದ ಎಂದು ಕೆಲವೊಮ್ಮೆ ಗೊತ್ತಾಗುವುದಿಲ್ಲ. ಬಹುಶಃ ಸುಸ್ತಾಗಿರುವುದರಿಂದ ಎದೆನೋವು ಕಾಣಿಸಿಕೊಂಡಿರಬಹುದು ಎಂದು ಭಾವಿಸುತ್ತಾರೆ, ಅದರೆ ಕೂಡಲೇ ಚಿಕಿತ್ಸೆ ದೊರೆತರೆ ಬದುಕಿಯುಳಿಯುವ ಸಾಧ್ಯತೆ ಹೆಚ್ಚು.
ಯಾವಾಗ ಕೂಡಲೇ ಆಸ್ಪತ್ರೆಗೆ ಧಾವಿಸಬೇಕು?
ವರ್ಕೌಟ್ ಮಾಡುತ್ತಿದ್ದಾಗ ಎದೆನೋವು ಕಾಣಿಸಿಕೊಂಡರೆ ವಿಶ್ರಾಂತಿ ತೆಗೆದುಕೊಂಡರೂ ಅಸ್ವಸ್ಥತೆ ಕಡಿಮೆಯಾಗದಿದ್ದರೆ ಮೈ ಬೆವರುವುದು, ಉಸಿರಾಟದಲ್ಲಿ ತೊಂದರೆ, ವಾಂತಿ, ತಲೆಸುತ್ತು ಈ ಬಗೆಯ ಲಕ್ಷಣಗಳು ಕಂಡು ಬಂದರೆ ಒಂದು ನಿಮಿಷವೂ ತಡಮಾಡದೆ ಕೂಡಲೇ ಆಸ್ಪತ್ರೆಗೆ ತಲುಪಿಸಬೇಕು. ಹೃದಯಾಘಾತವಾದಾಗ ಗೋಲ್ಡನ್ ಅವರ್ ಅಂತಿರುತ್ತದೆ, ಈ ಸಮಯದೊಳಗಡೆ ಸೂಕ್ತ ಚಿಕಿತ್ಸೆ ದೊರೆತರೆ ಬದುಕಿಳಿಯುವ ಸಾಧ್ಯತೆ ಹೆಚ್ಚು.
ಜಿಮ್‌ನಿಂದಾಗಿ ಹೃದಯಾಘಾತ ಉಂಟಾಗುವುದೇ?
ದೈಹಿಕವಾಗಿ ಫಿಟ್ ಆಗಿರಲು ಜಿಮ್‌ನಲ್ಲಿ ವರ್ಕೌಟ್ ಮಾಡುವುದು ಒಳ್ಳೆಯದು. ಪ್ರತಿದಿನ ವ್ಯಾಯಾಮ ಮಾಡುವುದರಿಂದ ಹೃದಯಾಘಾತದ ಅಪಾಯ ತಡೆಗಟ್ಟಬಹುದು. ಆದರೆ ಕೆಲವರಿಗೆ ಹೃದಯಾಘಾತದ ಅಪಾಯ ಹೆಚ್ಚು.
ವಯಸ್ಸು 40 ದಾಟಿದರೆ ಜಿಮ್‌ನಲ್ಲಿ ವರ್ಕೌಟ್ ಅತಿಯಾಗಿ ಮಾಡಬಾರದು
ವಯಸ್ಸು 40 ದಾಟಿದ ಬಳಿಕ ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಅತಿಯಾಗಿ ವರ್ಕೌಟ್ ಮಾಡಬಾರದು. ಅಲ್ಲದೆ ಅತ್ಯಧಿಕ ರಕ್ತದೊತ್ತಡ ಸಮಸ್ಯೆಯಿದ್ದರೆ ಅತಿಯಾಗಿ ವರ್ಕೌಟ್ ಮಾಡಬಾರದು.
ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಹೃದಯಾಘಾತ ತಡೆಗಟ್ಟುವುದು ಹೇಗೆ?
* ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ರಕ್ತದೊತ್ತಡ ಪರೀಕ್ಷೆ ಮಾಡಿದ ಬಳಿಕ ವರ್ಕೌಟ್ ಮಾಡಿ. ರಕ್ತದೊತ್ತಡ ಅಧಿಕವಿದ್ದರೆ ವರ್ಕೌಟ್ ಮಾಡಬೇಡಿ, ಇದರಿಂದ ರಕ್ತದೊತ್ತಡ ಮತ್ತಷ್ಟು ಅಧಿಕವಾಗುವುದು. ಇದರಿಂದ ಹೃದಯಾಘಾತದ ಸಾಧ್ಯತೆ ಹೆಚ್ಚುವುದು.
* ವರ್ಕೌಟ್ ಮಾಡುವ ಮೊದಲು ವಾರ್ಮ್‌ಅಪ್ ಮಾಡಿ. ಹೆಚ್ಚು ವರ್ಕೌಟ್ ಕೂಡ ಮಾಡಬೇಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
