Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪೆರಿಮೆನೋಪಾಸ್ ಹಂತದಲ್ಲಿ ಮಹಿಳೆಯ ಕಾಡುವ ಖಿನ್ನತೆಗೂ, ಬಾಲ್ಯದ ಘಟನೆಗೂ ಸಂಬಂಧವಿದೆಯೇ? ಇದರ ಬಗ್ಗೆ ತಜ್ಞರು ಹೇಳುವುದೇನು?
ಅಕ್ಟೋಬರ್ 18ನ್ನು ವಿಶ್ವ ಮೆನೋಪಾಸ್ ದಿನವನ್ನಾಗಿ ಆಚರಿಸಲಾಗಿವುದು, ಮೆನೋಪಾಸ್ ಎಂಬುವುದು ಮಹಿಳೆಯರ ಬದುಕಿನಲ್ಲಿ ಪ್ರಮುಖವಾದ ಹಂತ, ಇದನ್ನು ಮುಟ್ಟು ನಿಲ್ಲುವ ಸಮಯ ಅಥವಾ ಋತುಬಂಧ ಎಂದು ಹೇಳಲಾಗುವುದು. ಸಾಮಾನ್ಯವಾಗಿ ಮೆನೋಪಾಸ್ 50 ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ ಕಂಡು ಬಂದರೆ ಪೆರಿಮೆನೋಪಾಸ್ 40-55 ವರ್ಷಗಳ ಒಳಗಡೆ ಕಂಡು ಬರುವುದು. ಋತುಬಂಧ ತಲುಪುವ 3-4 ವರ್ಷಗಳ ಮೊದಲೇ ಪೆರಿ ಮೆನೋಪಾಸ್ ಕಾಣಿಸಿಕೊಳ್ಳುವುದು.
ಪ್ರತಿಯೊಬ್ಬ ಮಹಿಳೆಯ ಪಾಲಿಗೆ ಇದು ಸೂಕ್ಷ್ಮವಾದ ಹಂತ. ಮಹಿಳೆಯ ಶರೀರದಲ್ಲಿ ಹಾರ್ಮೋನ್‌ಗಳ ವ್ಯತ್ಯಾಸ ಉಂಟಾಗುವುದು, ಇದರ ಪ್ರಭಾವ ಅವಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಕಂಡು ಬರುವುದು, ಅವಳಲ್ಲಿ ಮಾನಸಿಕ ಖಿನ್ನತೆ, ಆತ್ಮವಿಶ್ವಾಸ ಕಡಿಮೆಯಾಗುವುದು ಈ ಬಗೆಯ ಸಮಸ್ಯೆಯಲ್ಲಾ ಆ ಸಮಯದಲ್ಲಿ ಕಂಡು ಬರುವುದು.

ಪೆರಿಮೆನೋಪಾಸ್ ಹಂತದಲ್ಲಿ ಕಂಡು ಬರುವ ಲಕ್ಷಣವೇನು? ಈ ಸಮಯದಲ್ಲಿ ಅವಳು ಅನುಭವಿಸುವ ಖಿನ್ನತೆ, ಅದರಿಂದ ಹೊರ ಬರಲು ಏನು ಮಾಡಬೇಕು? ಈ ಬಗ್ಗೆ ಸ್ತ್ರೀರೋಗ ತಜ್ಞ ಡಾ. ಪೃಥ್ವಿರಾಜ್ MO (Consultant - Obstetrics and Gynaecology, Manipal Hospital, Varthur)ಈ ಕುರಿತಂತೆ ಉಪಯುಕ್ತ ಮಾಹಿತಿ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ ನೋಡಿ:
ಪೆರಿಮೆನೋಪಾಸ್ ಹಂತ, ಈ ಸಮಯದಲ್ಲಿ ಮಹಿಳೆಯರು ಎದುರಿಸುವ ಸಮಸ್ಯೆಗಳು
ಪೆರಿಮೆನೋಪಾಸ್ ಸಾಮಾನ್ಯವಾಗಿ 40 ಮತ್ತು 55 ವರ್ಷಗಳ ನಡುವೆ ಕಂಡು ಬರುವುದು. ಈ ಸಮಯದಲ್ಲಿ ಮಹಿಳೆಯರು ಎದುರಿಸುವ ಸಮಸ್ಯೆಯೆಂದರೆ
- ದೇಹ ಬಿಸಿಯಾಗುವುದು, ಸೆಕೆ ತಡೆದುಕೊಳ್ಳಲು ಸಾಧ್ಯವಾಗಲ್ಲ
- ದೇಹದ ಉಷ್ಣಾಂಶ ಹೆಚ್ಚಾಗುವುದು, ಇದರಿಂದಾಗಿ ಅಸ್ವಸ್ಥತೆ ಎದುರಾಗುವುದು, ಮೈ ತುಂಬಾ ಬೆವರುವುದು
- ನಿದ್ರಾಹೀನತೆ ಸಮಸ್ಯೆ ಉಂಟಾಗುವುದು
- ದಿನನಿತ್ಯದ ಕೆಲಸ ಕಾರ್ಯ ಮಾಡಲು ಸಾಧ್ಯವಾಗಲ್ಲ, ಕೆಲವರು ಈ ಹಂತದಲ್ಲಿ ಖಿನ್ನತೆಗೆ ಜಾರುತ್ತಾರೆ.
- (ಬಾಲ್ಯದಲ್ಲಿ ಅನುಭವಿಸಿದ ಆಘಾತ, ನಿರ್ಲಕ್ಷ್ಯ, ದೈಹಿಕ ಕಿರುಕುಳ, ಕೌಟುಂಬಿಕ ಸಮಸ್ಯೆಗಳು ಮತ್ತು ಆಘಾತ ನಂತರದ ಒತ್ತಡದ ಸಮಸ್ಯೆ - ಪಿಟಿಎಸ್‌ಡಿ (Post-traumatic stress disorder - PTSD) ಇವೆಲ್ಲಾ ಖಿನ್ನತೆಗೆ ಕಾರಣವಾಗಬಹುದು ಎಂದು ಅಧ್ಯಯನ ವರದಿಗಳು ಹೇಳಿವೆ.
ವಯಸ್ಸಾಗುತ್ತಿರುವ ಅಂಡಾಶಯದ ಮೇಲೆ ಬಾಲ್ಯದ ಅನುಭವಗಳು ಋತುಬಂಧ ಸಮಯದಲ್ಲಿ ಖಿನ್ನತೆಯ ಅಪಾಯ ಉಂಟು ಮಾಡುತ್ತದೆ ಎಂದು 2017ರ ಪೆನ್ ಅಧ್ಯಯನದಲ್ಲಿ ಹೇಳಲಾಗಿದೆ.
ಈ ಅಧ್ಯಯನವನ್ನು 16 ಸುದೀರ್ಘ ವರ್ಷಗಳ ಮಾಡಲಾಯ್ತು. ಹೆಣ್ಮಗು ಪ್ರೌಢಾವಸ್ಥೆ ಪ್ರಾರಂಭವಾಗುವ ಮುನ್ನ ಅವಳ ಬದುಕಿನಲ್ಲಿ ಏನಾದರೂ ಕೆಟ್ಟ ಘಟನೆಗಳು ನಡೆದಿದ್ದರೆ, ಅಪಘಾತ, ನಕರಾತ್ಮಕ ಅನುಭವಗಳು ಇವೆಲ್ಲಾ ಅವಳು ಮೆನೋಪಾಸ್ ಹಂತ ತಲುಪಿದಾಗ ಅವಳನ್ನು ಖಿನ್ನತೆಗೆ ದೂಡುವುದು ಎಂದು ಅಧ್ಯಯನ ವರದಿ ಹೇಳಿದೆ.
ಮೆನೋಪಾಸ್ ಹಂತದಲ್ಲಿ ಖಿನ್ನತೆ ಲಕ್ಷಣಗಳು
- ತುಂಬಾ ಬೇಸರದಲ್ಲಿ ಇರುವುದು, ಬೇಡದ ಆಲೋಚನೆಗಳು ಬರುವುದು, ಕಿರಿಕಿರಿ ಅನುಭವಿಸುವುದು
- ಹಸಿವು ಇಲ್ಲದಿರುವುದು ಅಥವಾ ಅತಿಯಾಗಿ ತಿನ್ನುವುದು
- ತಲೆಸುತ್ತು
- ಯಾವುದರಲ್ಲಿಯೂ ಆಸಕ್ತಿ ಇಲ್ಲದಿರುವುದು
- ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಕಷ್ಟವಾಗುವುದು
- ಆತ್ಮಹತ್ಯೆಯ ಆಲೋಚನೆಗಳು
ಈ ಬಗೆಯ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡಬೇಡಿ ವೈದ್ಯರನ್ನು ಕಾಣಿ, ಮನೆಯಲ್ಲಿ 40-55ರ ಒಳಗಿನ ಮಹಿಳೆಯರಲ್ಲಿ ಈ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡಬೇಡಿ, ಅವರ ಪೆರಿಮೆನೋಪಾಸ್ ಹಂತದಲ್ಲಿ ಇರ್ತಾರೆ, ಆವಾಗ ಅವರಲ್ಲಿ ಈ ರೀತಿಯ ವರ್ತನೆ ಕಂಡು ಬರಬಹುದು.
ಸ್ತ್ರೀ ರೋಗ ತಜ್ಞರನ್ನು ಭೇಟಿಯಾಗಿ, ಅಗತ್ಯಬಿದ್ದರೆ ಅವರಿ ಮನಶಾಸ್ತ್ರಜ್ಞರಿಗೆ ಸಲಹೆ ನೀಡಲಾಗುವುದು. ಸೂಕ್ತ ಚಿಕಿತ್ಸೆಯಿಂದ ಮಹಿಳೆಯರಲ್ಲಿ ಈ ಸಮಯದಲ್ಲಿ ಕಾಣುವ ಸಮಸ್ಯೆಯನ್ನು ಹೋಗಲಾಡಿಸಬಹುದು.
ಕೊನೆಯದಾಗಿ ಹೇಳುವುದಾದರೆ ಸ್ತ್ರೀರೋಗ ತಜ್ಞರ ಬಳಿಬಾಲ್ಯದ ಘಟನೆಗಳು ಅಥವಾ ಈ ಹಿಂದೆ ಅಪಘಾತ, ಪಿಸಿಒಡಿ ಸಮಸ್ಯೆ ಎದುರಿಸಿದ್ದರೆ ಅದರ ಬಗ್ಗೆ ತಿಳಿಸುವುದು ಸೂಕ್ತ, ಇದು ವೈದ್ಯರಿಗೆ ಈ ಪ್ರೀ ಮೆನೋಪಾಸ್ ಹಂತದಲ್ಲಿ ನೀವು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಅರಿಯಲು ಸಾಧ್ಯವಾಗುವುದು. ನಿಮಗೆ ಸೂಕ್ತ ಚಿಕಿತ್ಸೆ ಸಿಕ್ಕರೆ ಖಿನ್ನತೆ ಸಮಸ್ಯೆಯಿಂದಹೊರಬಹುದು.
ಚಿಕಿತ್ಸೆ ನೀಡುವ ಸ್ತ್ರೀರೋಗತಜ್ಞರಿಗೂ ಕಿವಿಮಾತು
ಮಧ್ಯವಯಸ್ಸಿನ ಮಹಿಳೆಯರ ಆರೋಗ್ಯವನ್ನು ನೋಡುವಾಗ ಅಥವಾ ಅವರ ಪೆರಿಮೆನೋಪಾಸಲ್ ಲಕ್ಷಣಗಳು ಅಥವಾ ಸಮಯಕ್ಕೆ ಮುಂಚಿನ ಋತುಬಂಧ ಎಷ್ಟು ತೀವ್ರವಾಗಿದೆ ಎಂಬುದನ್ನು ನಿರ್ಣಯಿಸುವಾಗ ಆಘಾತದ ಇತಿಹಾಸವನ್ನು ನಿಯಮಿತವಾಗಿ ಪರಿಶೀಲಿಸುವುದು ಬಹಳ ಮುಖ್ಯ.
ಬಲು ಸುಲಭದಲ್ಲಿ ಮಾಡಬಹುದು ಬೆಳ್ಳುಳ್ಳಿ ಅನ್ನ, ರುಚಿಯಂತೂ ಬೊಂಬಾಟ್
ಹದಿಹರೆಯದ ಪ್ರಾಯದಲ್ಲಿ ಹೆಣ್ಮಕ್ಕಳು ಋತುಮತಿಯಾಗುವುದು ಪ್ರಕೃತಿ ನಿಯಮ, ಅದರಂತೆ ಒಂದು ಹಂತದಲ್ಲಿ ಋತುಬಂಧ ನಿಲ್ಲುವುದು ಕೂಡ ನಿಸರ್ಗ ನಿಯಮ, ಇದನ್ನು ಸ್ವೀಕರಿಸಬೇಕು, ಅಲ್ಲದೆ ಈ ಸಮಯದಲ್ಲಿ ಅವಳ ಗಂಡ-ಮಕ್ಕಳು ಕೂಡ ಆಕೆಗೆ ಮಾನಸಿಕ ಧೈರ್ಯ ತುಂಬುವ ಕಾರ್ಯ ಮಾಡಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
