Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬೆಳಗ್ಗೆ ಹಾಸಿಗೆಯಲ್ಲೇ ಮೊಬೈಲ್ ಬಳಸುತ್ತೀರಾ..? ಈ ಅಭ್ಯಾಸ ಬಿಟ್ಟುಬಿಡಿ..!
ಬೆಳಗ್ಗೆ ಬೇಗ ಏಳುವುದು ಉತ್ತಮ ಅಭ್ಯಾಸ ಎಂದು ಹಿರಿಯರು ಹೇಳುತ್ತಾರೆ. ಇತ್ತ ಕೆಲವರು ಬೇಗ ಏಳಲು ಅಲರಾಮ್ ಇಟ್ಟುಕೊಂಡರೆ ಮತ್ತೆ ಕೆಲವರು ದಿನಾಲು ಬೇಗನೇ ಏಳುತ್ತಾರೆ. ಆದ್ರೆ ಬಹುತೇಕ ಮಂದಿ ಬೆಳಗ್ಗೆ ಹಾಸಿಗೆಯಿಂದ ಮೇಲೆ ಏಳುವ ಮುನ್ನವೆ ಮೊಬೈಲ್ ಕೈಗೆತ್ತಿಕೊಂಡು ಒಂದು ಸುತ್ತು ಅದರಲ್ಲಿ ಹುಡುಕಾಡುತ್ತಾರೆ.
ಬರಿ ಯುವಕರು ಮಾತ್ರವಲ್ಲ ಎಲ್ಲಾ ವರ್ಗದ ಮಂದಿ ಸಹ ಇದನ್ನೇ ಮಾಡುತ್ತಾರೆ. ಏಕೆಂದರೆ ಬೆಳಗ್ಗೆ ಎದ್ದಾಗ ಮೊಬೈಲ್ ನೋಡುವುದು ಅಭ್ಯಾಸ ಆಗಿರುತ್ತದೆ. ಆದ್ರೆ ಒಳ್ಳೆಯ ಅಭ್ಯಾಸವೇ? ಅಥವಾ ಕೆಟ್ಟ ಅಭ್ಯಾಸವೇ ಎಂಬ ಗೊಂದಲವಂತು ಎಲ್ಲರಲ್ಲೂ ಇದ್ದೆ ಇದೇ.

ಆದರೆ ಈ ಅಭ್ಯಾಸ ಖಂಡಿತವಾಗಿಯೂ ಒಳ್ಳೆಯದಲ್ಲವಂತೆ. ಇಷ್ಟಾದರು ಕೆಲವರು ಇದನ್ನು ಸಮರ್ಥಿಸಿಕೊಳ್ಳುತ್ತಾರೆ. ಬೆಳಗ್ಗೆ ಎದ್ದ ಕೂಡಲೆ ಸುದ್ದಿ ನೋಡುತ್ತೇವೆ. ಸಂದೇಶಗಳ ಕುರಿತು ನೋಡುತ್ತೇವೆ ಎನ್ನುತ್ತಾರೆ. ಆದರೆ ಇದು ಒಳ್ಳೆಯ ಅಭ್ಯಾಸವಂತೂ ಅಲ್ಲವಂತೆ. ಈ ಅಭ್ಯಾಸ ಭವಿಷ್ಯದಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿದುಬಂದಿದೆ.
ಹಾಗಾದ್ರೆ ಬೆಳಗ್ಗೆ ಏಳುವ ಮುನ್ನ ಹಾಸಿಗೆಯಲ್ಲಿ ಬೊಬೈಲ್ ಬಳಕೆಯಿಂದಾಗುವ ದುಷ್ಪರಿಣಾಮದ ಬಗ್ಗೆ ನಾವಿಂದು ಹೆಚ್ಚು ತಿಳಿದುಕೊಳ್ಳೋಣ.
ನಿಮ್ಮ ನಿದ್ರೆಗೆ ಅಡ್ಡಿ ಪಡಿಸಲಿದೆ
ಮಾನವ ದೇಹಕ್ಕೆ 6 ಗಂಟೆಗಿಂತ ಹೆಚ್ಚು ಸಮಯ ನಿದ್ರೆ ಉತ್ತಮವಂತೆ. ಆದ್ರೆ ನಿತ್ಯ ಬೆಳಗ್ಗೆ ನೀವು ಮೊಬೈಲ್ ಬಳಕೆಯ ಅಭ್ಯಾಸ ಇಟ್ಟುಕೊಂಡಿದ್ದರೆ ಒಂದು ವೇಳೆ ನೀವು ತಡವಾಗಿ ಮಲಗಿದ್ದರೆ ಬೆಳಗ್ಗೆ ಬೇಗ ಎಚ್ಚರವಾಗುತ್ತದೆ. ಇದಕ್ಕೆ ಮೊಬೈಲ್ ಬಳಕೆ ಕಾರಣವಾಗುತ್ತದೆ. ಇಲ್ಲವೆ ಬೆಳಗ್ಗೆ ನೀವು ಎಚ್ಚರಗೊಂಡಾಗ ಮತ್ತೆ ಮಲಗುವ ಅವಕಾಶವಿದ್ದರೂ ಈ ಮೊಬೈಲ್ ಬಳಕೆಯ ಕಾರಣ ನಿದ್ರೆ ಅರ್ಥದಲ್ಲೇ ಮೊಟಕುಗೊಳ್ಳುತ್ತದೆ.
ಕಣ್ಣಿನ ಹಾನಿಗೆ ಬಹುಮುಖ್ಯ ಕಾರಣ
ಬೆಳಗ್ಗೆ ಇನ್ನೂ ನಿಮ್ಮ ಕಣ್ಣುಗಳು ಬೆಳಕಿಗೆ ಹೊಂದಿಕೊಳ್ಳುವ ಮೊದಲೇ ಮೊಬೈಲ್ ಬೆಳಕಿನ ಪರಿಣಾಮ ದೃಷ್ಟಿ ಹಾನಿಗೆ ಕಾರಣವಾಗುತ್ತದೆ. ಇದು ಕಣ್ಣು ಆಯಾಸಗೊಳ್ಳಲು ಕಾರಣವಾಗುತ್ತದೆ. ಇದು ತಲೆನೋವು, ಕಣ್ಣು ಉರಿ, ಕಣ್ಣಿನಿಂದ ನೀರು ಬರುವುದು. ದೃಷ್ಟಿಯ ಮೇಲೂ ಪರಿಣಾಮ ಬೀರಲಿದೆ.
ಒತ್ತಡ ಮತ್ತು ಆತಂಕ ಹೆಚ್ಚಳ
ಸಾಮಾಜಿಕ ಮಾಧ್ಯಮ, ಸುದ್ದಿ ಮತ್ತು ಇಮೇಲ್‌ಗಳಿಂದ ಬಂದಿರು ಸಂದೇಶ ನಿಮಗೆ ಒತ್ತಡ ಹಾಗೂ ಆತಂಕ ಹೆಚ್ಚಳಕ್ಕೂ ಕಾರಣವಾಗಬಹದು. ಇಲ್ಲವೆ ನೀವು ಮೊಬೈಲ್ ಆನ್ ಮಾಡಿದಾಗ ಕೆಟ್ಟ ಸುದ್ದಿ, ಅಹಿತಕರ ಘಟನೆಯಿಂದ ಆ ದಿನ ಆರಂಭವಾಗಬಹುದು.
ಡೋಪಮೈನ್ ಬೇಸ್‌ಲೈನ್ ಹೆಚ್ಚಿಸುತ್ತದೆ
ನಿಮ್ಮ ಡೋಪಮೈನ್ ಬೇಸ್‌ಲೈನ್ ಅಥವಾ ನಿಮ್ಮ ಮೆದುಳು ಸಂತೋಷ ಅಥವಾ ತೃಪ್ತಿಯನ್ನು ಅನುಭವಿಸುವ ಸಲುವಾಗಿ ಸ್ವೀಕರಿಸುವ ಡೋಪಮೈನ್ ಪ್ರಮಾಣವು ನೀವು ಬೆಳಿಗ್ಗೆ ನಿಮ್ಮ ಫೋನ್ ಅನ್ನು ಮೊದಲು ಬಳಸಿದರೆ ಹೆಚ್ಚಾಗಬಹುದು. ಇದು ನೀವು ದಿನವಿಡೀ ಸಾಮಾಜಿಕ ಮಾಧ್ಯಮದಿಂದ ಡೋಪಮೈನ್ ಮಟ್ಟ ತಲುಪಲು ಮತ್ತೆ ಮತ್ತೆ ಮೊಬೈಲ್ ಬಳಸುವಂತೆ ಮಾಡಬಹುದು.
ಹಾಗಾದ್ರೆ ಬೆಳಗ್ಗೆ ಮೊಬೈಲ್ ಬಳಕೆ ನಿಯಂತ್ರಿಸುವುದು ಹೇಗೆ?
ಬೆಳಗ್ಗೆ ಎದ್ದ ಕೂಡಲೆ ನೀವು ಮೊಬೈಲ್ ಬಳಸುವುದನ್ನ ಬಿಡಬೇಕು ಅಂದ್ರೆ ನೀವು ಮಲಗುವಾಗಲೇ ಮೊಬೈಲ್ ದೂರವಿಟ್ಟು ಮಲಗಬೇಕು. ಮಲಗಿದ್ದಲ್ಲೇ ಕೈಗೆ ಸಿಗುವಂತೆ ಇಟ್ಟುಕೊಳ್ಳಬೇಡಿ. ಈ ರೀತಿ ಒಂದು ವಾರ ನಿರಂತರವಾಗಿ ಮಾಡಿದರೆ ಆಗ ನೀವು ಬೇಕು ಅಂದರು ಮೊಬೈಲ್ ಬಳಸಲು ಮುಂದಾಗುವುದಿಲ್ಲ.
ಮೊಬೈಲ್ ಅಲರಾಮ್‌ನಿಂದ ಏಳುವ ಅಭ್ಯಾಸ ಇದ್ದರೆ ಬಿಟ್ಟುಬಿಡಿ. ಏಕೆಂದರೆ ನೀವು ಮೊಬೈಲ್‌ನಲ್ಲಿ ಅಲರಾಮ್ ಇಟ್ಟು ಮಲಗಿದ್ದರೆ ಬೆಳಗ್ಗೆ ಅದನ್ನು ಆಫ್ ಮಾಡಲು ಮೊಬೈಲ್ ಹಿಡಿಯಲೇ ಬೇಕಾಗುತ್ತದೆ. ಹೀಗಾಗಿ ನೀವುಂದುಕೊಂಡ ಸಮಯಕ್ಕೆ ಸರಿಯಾಗಿ ಏಳುವ ಅಭ್ಯಾಸ ಮಾಡಿಕೊಳ್ಳಿ. ಇಲ್ಲವೆ ಅಲರಾಮ್‌ಗೆಂದೇ ಬೇರೆ ಗ್ಯಾಜೆಟ್ ಖರೀದಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
