Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಇತ್ತೀಚೆಗೆ ಮೈ ದುರ್ವಾಸನೆ ಹೆಚ್ಚಾಗಿದೆ ಎಂದು ಅನಿಸುತ್ತಿದೆಯೇ? ಈ ಕಾರಣಗಳಿರಬಹುದು
ದೇಹ ಬೆವರಿದಾಗ ದುರ್ವಾಸನೆ ಬೀರುವುದು ಸಹಜ. ಆದರೆ ಕೆಲವೊಮ್ಮೆ ದೇಹ ಮಾಮೂಲಿಗಿಂತ ಹೆಚ್ಚಿನ ದುರ್ವಾಸನೆ ಬೀರುವುದು ಎಂದು ಅನಿಸಲಾರಂಭಿಸುವುದು. ನಿಮಗನೇ ದೇಹ ದುರ್ವಾಸನೆ ಬೀರುತ್ತಿದೆ ಎಂದು ಅನಿಸಲಾರಂಭಿಸುವುದು, ಈ ಬಗೆಯ ದುರ್ವಾಸನೆಯನ್ನು ನಿರ್ಲಕ್ಷ್ಯ ಮಾಡಬೇಡಿ. ಕೆಲವೊಂದು ದೈಹಿಕ ಸಮಸ್ಯೆಯಿಂದ ಕೂಡ ದೇಹದಲ್ಲಿ ದುರ್ವಾಸನೆ ಹೆಚ್ಚಾಗುವುದು, ಕೆಲವೊಂದು ಆಹಾರಗಳೂ ಕೂಡ ಮೈ ದುರ್ವಾಸನೆ ಹೆಚ್ಚಿಸುವುದು.

ಯಾವ ಆಹಾರಗಳು ಮೈ ದುರ್ವಾಸನೆ ಹೆಚ್ಚಿಸುತ್ತದೆ?
* ಬ್ರೊಕೋಲು, ಕ್ಯಯಾಬೇಜ್, ಕಲೆ ಎಲೆ
* ಬೆಳ್ಳುಳ್ಳಿ
* ಈರುಳ್ಳಿ
* ಜೀರಿಗೆ, ಕರಿಮೆಣಸು
* ಕೆಂಪು ಮಾಂಸ
* ಮೀನು
* ಮದ್ಯ
ಮಾನಸಿಕ ಒತ್ತಡ ಕೂಡ ಮೈ ದುರ್ವವಾಸನೆ ಹೆಚ್ಚಿಸುತ್ತದೆ
ನೀವು ಗಮನಿಸಿದ್ದೀರೋ ಇಲ್ವೋ ಗೊತ್ತಿಲ್ಲ, ಆದರೆ ತುಂಬಾ ಒತ್ತಡಕ್ಕೆ ಒಳಗಾದಾಗ ಮೈ ದುರ್ವಾಸನೆ ಹೆಚ್ಚಾಗುವುದು. ಏಕೆಂದರೆ ನಾವು ಮಾನಸಿಕ ಒತ್ತಡಕ್ಕೆ ಒಳಗಾದಾಗ ಬೆವರು ಹೆಚ್ಚಾಗುವುದು, ಇದರಿಂದ ಮೈ ದುರ್ವಾಸನೆ ಹೆಚ್ಚಾಗುವುದು.
ಈ ಬಗೆಯ ಆರೋಗ್ಯ ಸಮಸ್ಯೆಯಿದ್ದರೆ ಮೈ ದುರ್ವಾಸನೆ ಹೆಚ್ಚಾಗುವುದು
* ಒಬೆಸಿಟಿ
* ಲಿವರ್ ಸಮಸ್ಯೆ
* ಥೈರಾಯ್ಡ್ ಸಮಸ್ಯೆ
* ಕಿಡ್ನಿ ಸಮಸ್ಯೆ (ಅಮೋನಿಯಾ ರೀತಿ ವಾಸನೆ ಬೀರುವುದು)
* ಮಧುಮೇಹ (ಫ್ರೂಟಿ ವಾಸನೆ ಬೀರುವುದು)
* ಹಾರ್ಮೋನ್‌ಗಳ ವ್ಯತ್ಯಾಸ ಉಂಟಾಗುವುದು, ಗರ್ಭಾವಸ್ಥೆಯಲ್ಲಿ , ಮೆನೋಪಾಸ್ ಸಮಯದಲ್ಲಿ ಮೈ ದುರ್ವಾಸನೆ ಬೀರುವುದು.
* ಕೆಲವೊಂದು ಔಷಧಗಳು ಈ ರೀತಿ ಪರಿಣಾಮ ಬೀರುವುದು.
ಮೈ ದುರ್ವಾಸನೆ ಕಡಿಮೆ ಮಾಡಲು ಟಿಪ್ಸ್
* ದಿನದಲ್ಲಿ 2 ಬಾರಿ ಸ್ನಾನ ಮಾಡಿ
* ನಿಮ್ಮ ಕೆಲಸಕ್ಕೆ ಸೂಕ್ತವಾದ ಬಟ್ಟೆ ಧರಿಸಿ, ಮೈ ತುಂಬಾ ಬೆವರಿದರೆ ದುರ್ವಾಸನೆ ಹೆಚ್ಚಾಗುವುದು
* ವಿಶ್ರಾಂತಿ ಪಡೆಯಿರಿ
ಯೋಗ, ಧ್ಯಾನ ಇವುಗಳು ಮಾನಸಿಕ ಒತ್ತಡ ಕಡಿಮೆಯಾಗುವುದು, ಇದರಿಂದ ಮೈ ದುರ್ವಾಸನೆ ಬೀರುವುದು ಕಡಿಮೆಯಾಗುವುದು.
ಆಹಾರಕ್ರಮ: ಮೈ ದುರ್ವಾಸನೆ ಹೆಚ್ಚಿಸುವ ಆಹಾರಗಳನ್ನು ಸೇವಿಸುವುದನ್ನು ಕಡಿಮೆ ಮಾಡಿ.
ಸುಗಂಧದ್ರವ್ಯ ಬಳಸಿ
ಮೈ ದುರ್ವಾಸನೆ ತಡೆಗಟ್ಟಲು ಸುಗಂಧದ್ರವ್ಯ ಬಳಸಿ, ಸುಗಂಧದ್ರವ್ಯ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುವುದು.
ಬಟ್ಟೆಯ ದುರ್ವಾಸನೆ ಹೋಗಲಾಡಿಸುವುದು ಹೇಗೆ?
* ಬೆವರು ಬಟ್ಟೆಯನ್ನು ಬಿಚ್ಚಿ ಹಾಕಿದ ತಕ್ಷಣ ತೊಳೆಯಲು ಹಾಕಿ.
* ಬಟ್ಟೆಯ ಒಳಗಡೆ, ಹೊರಗಡೆ ಚೆನ್ನಾಗಿ ಉಜ್ಜಿ ತೊಳೆಯಿರಿ, ವಾಷಿಂಗ್ ಮೆಷಿನ್ ಹಾಕುವ ಮುನ್ನ ತಿಕ್ಕಿ ತೊಳೆಯಿರಿ
* ಬಟ್ಟೆ ತೊಳೆಯುವಾಗ ಒಂದು ಕಪ್ ವಿನೆಗರ್ ಬಳಸಿ. ಅಥವಾ 1/2 ಚಮಚ ಅಡುಗೆ ಸೋಡಾ ಹಾಕಬಹುದು, ಆದರೆ ಎರಡನ್ನೂ ಜೊತೆಗೆ ಹಾಕಬೇಡಿ.
* ಬಟ್ಟೆಯನ್ನು ಚೆನ್ನಾಗಿ ಒಣಗಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
