Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಸಕ್ಕರೆ ಸಂಪೂರ್ಣ ನಿರ್ಲಕ್ಷ್ಯ ಮಾಡಬೇಡಿ, ಆರೋಗ್ಯಕ್ಕೆ ಇಷ್ಟು ಸಕ್ಕರೆ ಬೇಕೇಬೇಕು
ಸಕ್ಕರೆಯನ್ನು ಬಳಕೆ ಮಾಡದ ಮನೆಯನ್ನು ಹುಡುಕಲು ಸಾಧ್ಯವೇ ಇಲ್ಲ ಎಂಬಷ್ಟರ ಮಟ್ಟಿಗೆ ಸಕ್ಕರೆ ಎಲ್ಲರ ಮನೆಯ ಅಡುಗೆ ಮನೆಗಳಲ್ಲಿ ಸ್ಥಾನ ಪಡೆದಿದೆ. ಬೇಕರಿಗಳಲ್ಲಿ ಸಿಗುವ ಬಹುತೇಕ ಪದಾರ್ಥಗಳು ಸಕ್ಕರೆಯಿಂದಲೇ ಮಾಡಲ್ಪಟ್ಟವುಗಳಾಗಿವೆ. ಹೀಗಾಗಿ ಸಕ್ಕರೆ ಬಹುತೇಕರ ಜೀವನದ ಅವಿಭಾಜ್ಯ ಅಂಗವಾಗಿ ಬದಲಾಗಿದೆ.
ಚಹಾ, ಕಾಫಿ ಸೇವನೆಯಿಂದ ಹಿಡಿದು ಸಣ್ಣ ಬಿಸ್ಕಟ್ ಬಾಯಿಗೆ ಹಾಕಿಕೊಂಡರೂ ನಿಮ್ಮ ದೇಹಕ್ಕೆ ಸಕ್ಕರೆ ಸೇರಿದಂತೆಯೇ. ಐಸ್ಕ್ರೀಂಗಳು ಹಾಗೂ ತಂಪು ಪಾನೀಯಗಳಂತೂ ಸಕ್ಕರೆ ಅಗಾಧ ಪ್ರಮಾಣದಲ್ಲಿ ಇರುತ್ತದೆ. ಆದರೆ ನಿಜವಾಗಿಯೂ ನಮ್ಮ ದೇಹಕ್ಕೆ ಇಷ್ಟೆಲ್ಲ ಸಕ್ಕರೆಯ ಅವಶ್ಯಕತೆ ಇದೆಯೇ...?

ಹೀಗೊಂದು ಪ್ರಶ್ನೆ ನಿಮ್ಮ ಮನಸ್ಸಲ್ಲಿ ಮೂಡಿದ್ದರೆ ಇದಕ್ಕೆ ಉತ್ತರ ಖಂಡಿತವಾಗಿಯೂ ಇಲ್ಲ. ನಮ್ಮ ದೇಹ ಕಾರ್ಯ ನಿರ್ವಹಿಸಲು ಶಕ್ತಿಯನ್ನು ನೀಡುವ ಕಾರ್ಯವನ್ನು ರಕ್ತದಲ್ಲಿರುವ ಗ್ಲುಕೋಸ್ ಮಾಡುತ್ತದೆ ಎಂಬುದು ನಿಜ. ಹಾಗಂತ ನೀವು ದಿನಗಟ್ಟಲೇ ಕೆಜಿಯಷ್ಟು ಸಕ್ಕರೆ ತಿನ್ನಬೇಕು ಎಂದೇನಿಲ್ಲ. ನೈಸರ್ಗಿಕವಾಗಿ ಸಿಗುವ ಹಣ್ಣುಗಳು, ತರಕಾರಿಗಳಲ್ಲಿಯೂ ಗ್ಲುಕೋಸ್ ಅಂಶವಿದ್ದು ಇವುಗಳೇ ನಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸುವ ಕಾರ್ಯವನ್ನು ಮಾಡುತ್ತದೆ. ನಾವು ಸೇವಿಸುವ ಕಾರ್ಬೋಹೈಡ್ರೇಟ್ಗಳಿಂದ ಯಕೃತ್ತು ಗ್ಲುಕೋಸ್ ಅಂಶವನ್ನು ಪಡೆದುಕೊಳ್ಳುತ್ತದೆ.
ಮನುಷ್ಯನ ದೇಹಕ್ಕೆ ನಿತ್ಯ ಎಷ್ಟು ಸಕ್ಕರೆ ಅಗತ್ಯವಿದೆ..?
ಮನುಷ್ಯನ ಆರೋಗ್ಯ ಸೌಖ್ಯವಾಗಿ ಇರಬೇಕು ಎಂದರೆ ಖಂಡಿತವಾಗಿಯೂ ನೀವು ಸಕ್ಕರೆ ಸೇವಿಸುವುದನ್ನು ತ್ಯಜಿಸುವುದೇ ಉತ್ತಮ ಎಂದು ಹೇಳಬಹುದು. ಏಕೆಂದರೆ ಆರೋಗ್ಯಕರ ಮನುಷ್ಯನಿಗೆ ನಿತ್ಯ 5 ಗ್ರಾಂ ಸಕ್ಕರೆಯ ಅವಶ್ಯಕತೆ ಮಾತ್ರ ಇರುತ್ತದೆ. ಇದನ್ನು ದೇಹವು ನೈಸರ್ಗಿಕ ಆಹಾರಗಳಿಂದಲೇ ಪಡೆದುಕೊಳ್ಳುತ್ತದೆ. ನಾವು ಸೇವಿಸುವ ಅನ್ನದಲ್ಲಿಯೇ ಗ್ಲುಕೋಸ್ ಇರುತ್ತದೆ. ಅಲ್ಲದೇ ಯಾವ ಮನುಷ್ಯನ ದೇಹ ಯಾವ ರೀತಿಯಲ್ಲಿ ಸಕ್ಕರೆಯನ್ನು ಸಂಸ್ಕರಿಸುತ್ತದೆ ಎಂಬುದರ ಆಧಾರದ ಮೇಲೆ ಈ ಅಂಕಿ ಅಂಶ ಬದಲಾಗುತ್ತಾ ಹೋಗುತ್ತದೆ.
ಮಧುಮೇಹಿ ರೋಗಿಯಲ್ಲಿ ಸಕ್ಕರೆಯ ಸಂಸ್ಕರಣೆ ಹೇಗಾಗುತ್ತದೆ..?
ಆರೋಗ್ಯಕರ ಮನುಷ್ಯನಿಗೂ ಮಧುಮೇಹದಿಂದ ಬಳಲುತ್ತಿರುವವರಿಗೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಇಬ್ಬರ ದೇಹವು ಸಕ್ಕರೆಯ ಸಂಸ್ಕರಣೆಯನ್ನು ಬೇರೆ ರೀತಿಯಲ್ಲಿಯೇ ಮಾಡುತ್ತಿರುತ್ತದೆ. ಆರೋಗ್ಯವಂತ ವ್ಯಕ್ತಿಯಲ್ಲಿ ಆತನ ಮೇದೋಜೀರಕ ಗ್ರಂಥಿಯಲ್ಲಿ ಹಾರ್ಮೋ್ನ್ ಇನ್ಸುಲಿನ್ ಉತ್ಪತ್ತಿಯಾಗುತ್ತದೆ. ಇದನ್ನೇ ದೇಹವು ಶಕ್ತಿಯ ಮೂಲವಾಗಿ ಬಳಕೆ ಮಾಡಿಕೊಳ್ಳುತ್ತದೆ. ಆದರೆ ಮಧುಮೇಹದಿಂದ ಬಳಲುತ್ತಿರುವ ವ್ಯಕ್ತಿಯಲ್ಲಿ ಸಕ್ಕರೆಯ ಸಂಸ್ಕರಣೆ ಅಷ್ಟು ಸುಲಭವಾಗಿ ಆಗುವುದಿಲ್ಲ. ಇವರ ದೇಹವು ಇನ್ಸುಲಿನ್ ಉತ್ಪಾದನೆ ಅಷ್ಟು ಸುಲಭವಾಗಿ ಮಾಡುವುದರಿಲ್ಲ. ಹೀಗಾಗಿ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚುತ್ತಲೇ ಹೋಗುತ್ತದೆ.
ಮನುಷ್ಯನ ದೇಹಕ್ಕೆ ಶಕ್ತಿಯನ್ನು ಒದಗಿಸುವ ಗ್ಲುಕೋಸ್ ಉತ್ಪಾದನೆ ಅತೀ ಕಡಿಮೆ ಸಕ್ಕರೆಯ ಅಂಶದಿಂದಲೇ ಆಗುತ್ತದೆ. ಇವುಗಳನ್ನು ದೇಹವು ಶಕ್ತಿಯಾಗಿ ಬಳಸಿಕೊಂಡು ನಿಮ್ಮನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳುತ್ತದೆ. ಆದರೆ ನೀವು ಅತಿಯಾಗಿ ತಂಪು ಪಾನೀಯ, ಐಸ್ಕ್ರೀಂಗಳು ಸೇರಿದಂತೆ ಸಕ್ಕರೆಯಂಶಯುಕ್ತ ಆಹಾರವನ್ನೇ ಅತಿಯಾಗಿ ಸೇವನೆ ಮಾಡಿದಾಗ ಸಕ್ಕರೆ ಅಂಶವು ಕೊಬ್ಬಾಗಿ ಪರಿವರ್ತನೆಗೊಳ್ಳುತ್ತಾ ಹೋಗುತ್ತದೆ. ಇದರಿಂದ ನಿಮ್ಮ ತೂಕ ಹೆಚ್ಚಳವಾಗುತ್ತದೆ. ಹೃದಯ ಸಂಬಂಧಿಸ ಸಮಸ್ಯೆಗಳು ನಿಮ್ಮನ್ನು ಕಾಡಲು ಆರಂಭಿಸುತ್ತದೆ. ಆನುವಂಶಿಕ ಸಕ್ಕರೆ ಕಾಯಿಲೆಯನ್ನು ಬಿಟ್ಟು ಸಾಮಾನ್ಯವಾಗಿದ್ದ ನಿಮಗೂ ಮಧುಮೇಹ ಕಾಣಿಸಿಕೊಂಡಿದೆ ಎಂದರೆ ಇದಕ್ಕೆ ನೀವು ಅತಿಯಾಗಿ ಸಕ್ಕರೆಯಂಶಯುಕ್ತ ಆಹಾರ ಸೇವಿಸಿದ್ದೇ ಪ್ರಾಥಮಿಕ ಕಾರಣ ಎಂದು ಹೇಳಬಹುದು. ಇನ್ನೂ ಗಂಭೀರ ಪ್ರಕರಣಗಳಲ್ಲಿ ಅತಿಯಾದ ಸಕ್ಕರೆ ಪ್ರಮಾಣ ಕ್ಯಾನ್ಸರ್ನಂತಹ ಮಾರಕ ಕಾಯಿಲೆಗಳಿಗೂ ಅಹ್ವಾನ ನೀಡಬಹುದು.
ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣಕ್ಕೆ ಏನು ಮಾಡಬೇಕು..?
ನೀವು ನಿತ್ಯ ಸೇವನೆ ಮಾಡುವ ಅನ್ನ, ಗೋಧಿ, ಜೋಳ, ಹಣ್ಣುಗಳು , ತರಕಾರಿಗಳಲ್ಲಿಯೇ ಸಕ್ಕರೆ ಪ್ರಮಾಣ ಇರುತ್ತದೆ. ಹೀಗಾಗಿ ಅತಿಯಾಗಿ ಸಕ್ಕರೆ ಸೇವನೆಯನ್ನು ನೀವು ಮೊದಲು ತಪ್ಪಿಸಬೇಕು. ಸಂಸ್ಕರಿಸಿದ ಆಹಾರ ಸೇವನೆಗಳನ್ನು ತ್ಯಜಿಸುವುದು ಉತ್ತಮ ಆರೋಗ್ಯದ ಮೊದಲ ಗುಟ್ಟಾಗಿದೆ.
ಮನುಷ್ಯನ ದೇಹ ಉತ್ತಮ ನಡಿಗೆಗೆಂದೇ ರಚನೆಯಾಗಿದೆ. ಹೀಗಾಗಿ ನಿತ್ಯ ನಿಯಮಿತ ವಾಕಿಂಗ್ ಮಾಡಿ. ವ್ಯಾಯಾಮಗಳನ್ನು ಮಾಡಿ. ಪ್ರತಿನಿತ್ಯ ಸಾಕಷ್ಟು ನೀರನ್ನು ಕುಡಿಯಿರಿ. ನಿತ್ಯದ ಆಹಾರ ಕ್ರಮದಲ್ಲಿ ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತಾ ಬನ್ನಿ. ಸೂರ್ಯಾಸ್ತದ ಬಳಿಕ ಅತಿಯಾದ ಆಹಾರ ಸೇವನೆಯನ್ನು ತಪ್ಪಿಸಿ.
ಕಾಲ ಕಾಲಕ್ಕೆ ಮಧುಮೇಹ ಪರೀಕ್ಷೆ ಮಾಡಿಸಿಕೊಳ್ಳುತ್ತಾ ಬನ್ನಿ. ನಿಮ್ಮ ದೇಹದಲ್ಲಿ ಸಕ್ಕರೆ ಪ್ರಮಾಣ ಎಷ್ಟಿದೆ ಎಂಬುದರ ಲೆಕ್ಕಾಚಾರ ನಿಮ್ಮ ಬಳಿ ಇರಬೇಕು. ಚಹಾ, ಕಾಫಿ ಸೇವನೆಯನ್ನು ಆದಷ್ಟು ಕಮ್ಮಿ ಮಾಡಿ. ಈ ರೀತಿ ಮಾಡುವ ಮೂಲಕ ಖಂಡಿತವಾಗಿಯೂ ನೀವು ಸಕ್ಕರೆ ಅಂಶವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
