Latest Updates
-
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಈ 7 ನಿಮಿಷದ ರೂಟೀನ್ ನಿಮ್ಮನ್ನು ರಕ್ಷಿಸುತ್ತದೆ! -
ಬೆಂಗಳೂರಿನಲ್ಲಿ ಇಂದೇ ವಿದ್ಯುತ್ ಕಡಿತ: ನಿಮ್ಮ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸುರಕ್ಷಿತವಾಗಿಡುವುದು ಹೇಗೆ? -
ಕರ್ಕ ಸಂಕ್ರಾಂತಿ ವಿಶೇಷ: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಜಗನ್ನಾಥ ರಥಯಾತ್ರೆ 2026: ಸಂಚಾರ ಮಾರ್ಗ ಬದಲಾವಣೆ, ಭಕ್ತರಿಗಾಗಿ ಇಲ್ಲಿದೆ ಮಹತ್ವದ ಮಾಹಿತಿ! -
ನೀಟ್ ಪರೀಕ್ಷೆಯ ಆತಂಕವೇ? ಈ 6 ನಿಮಿಷದ ವ್ಯಾಯಾಮ ನಿಮ್ಮ ಒತ್ತಡವನ್ನು ಮರೆಸುತ್ತದೆ! -
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ! -
ಹಾಲಿನಲ್ಲಿ ವಿಷಕಾರಿ ಕಲಬೆರಕೆ ಪತ್ತೆ: ನಿಮ್ಮ ಮನೆಯ ಹಾಲಿನ ಸುರಕ್ಷತೆ ಪರೀಕ್ಷಿಸುವುದು ಹೇಗೆ? -
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು?
ಫ್ರೆಂಚ್ ಕಿಸ್: ತುಟಿಗೆ ತುಟಿ ಒತ್ತಿ ನೀಡುವ ಚುಂಬನದಿಂದ ಸಿಗಲಿದೆ ಈ 10 ಪ್ರಯೋಜನಗಳು
ಸಿನಿಮಾದಲ್ಲಿ ಫ್ರೆಂಚ್‌ಕಿಸ್ ಸೀನ್ ಬಂದಾಗ ನೋಡುಗರಿಗೆ ರೋಮಾಂಚನ, ನಾಚಿಕೆ ಎಲ್ಲವೂ ಒಟ್ಟೊಟ್ಟಿಗೆ ಉಂಟಾಗುವುದು ಅಲ್ವಾ? ಕಿಸ್‌ನಲ್ಲಿ ಹಲವು ಬಗೆಯ ಕಿಸ್‌ಗಳಿವೆ, ಅದರಲ್ಲಿ ಫ್ರೆಂಚ್ ಕಿಸ್ ಅತ್ಯಂತ ರೊಮ್ಯಾಂಟಿಕ್ ಕಿಸ್ ಆಗಿದೆ. ಸಂಗಾತಿ ನೀಡುವ ಫ್ರೆಂಚ್‌ಕಿಸ್‌ಗೆ ಕರಗದವರೇ ಇರಲ್ಲ, ಫ್ರೆಂಚ್ ಕಿಸ್ ಎಂಬುವುದು ಇಬ್ಬರ ನಡುವಿನ ಪ್ರೀತಿಯ ಆಳ ವ್ಯಕ್ತಿ ಪಡಿಸುವುದು ಮಾತ್ರವಲ್ಲ, ಕಾಮದ ಬಯಕೆಯನ್ನು ಉದ್ರೇಕಿಸುತ್ತದೆ ಅಷ್ಟು ಮಾತ್ರವಲ್ಲ ಫ್ರೆಂಚ್‌ಕಿಸ್ ನೀಡುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ:
ಹ್ಯಾಪಿ ಹಾರ್ಮೋನ್ ಉತ್ಪತ್ತಿಯಾಗುತ್ತದೆ
ಸಂಗಾತಿ ಜೊತೆ ಫ್ರೆಂಚ್‌ಕಿಸ್ ನೀಡಿದಾಗ ಆ ಕ್ಷಣ ತುಂಬಾನೇ ರೊಮ್ಯಾಂಟಿಕ್ ಅನಿಸುವುದು, ಇದರಿಂದ ದೇಹದಲ್ಲಿ ಹ್ಯಾಪಿ ಹಾರ್ಮೋನ್‌ಗಳು ಉತ್ಪತ್ತಿಯಾಗುತ್ತದೆ. ಇದರಿಂದ ಮಾನಸಿಕ ಒತ್ತಡ ಕಡಿಮೆಯಾಗಲಿದೆ.

ಸಂಗಾತಿ ಜೊತೆಗಿನ ಬಾಂಧವ್ಯ ಗಟ್ಟಿಯಾಗಿಸುತ್ತದೆ
ಇಬ್ಬರು ತುಟಿ-ತುಟಿ ಒತ್ತಿ ಫ್ರೆಂಚ್ ಕಿಸ್ ನೀಡಿದಾಗ ಇಬ್ಬರು ತುಂಬಾ ಸಂತೋಷಪಡುತ್ತಾರೆ, ಅಲ್ಲದೆ ಇಬ್ಬರ ನಡುವೆ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುವುದು.
ಆತ್ಮವಿಶ್ವಾಸ ಹೆಚ್ಚಿಸುವುದು
ಫ್ರೆಂಚ್‌ಕಿಸ್ ನೀಡುವುದರಿಂದ ಮಾನಸಿಕ ಒತ್ತಡ ಹೆಚ್ಚಿಸುವ ಕಾರ್ಟಿಸೋಲ್ ಪ್ರಮಾಣವನ್ನು ಕಡಿಮೆ ಮಾಡುವುದರಿಂದ ಇಬ್ಬರ ನಡುವೆ ಬಾಂಧವ್ಯ ಹೆಚ್ಚಿಸುವುದರ ಜೊತೆಗೆ ಆತ್ಮವಿಶ್ವಾಸ ಹೆಚ್ಚಿಸುವುದು.
ಮಾನಸಿಕ ಒತ್ತಡ ಕಡಿಮೆಯಾಗುವುದು
ಸಂಗಾತಿ ನಮಗೆ ಐ ಲವ್ ಯೂ, ನೀನೆಂದರೆ ನನಗಿಷ್ಟ, ನನಗೆ ನೀನೇ ಎಲ್ಲಾ ಈ ರೀತಿಯ ಮಾತುಗಳನ್ನು ಹೇಳುವಾಗ ನನಗಾಗಿ ಈ ವ್ಯಕ್ತಿಯಿದ್ದಾನೆ/ಳೆ ಎಂಬ ಭಾವನೆಯೇ ಮನಸ್ಸಿಗೆ ಖುಷಿ ಕೊಡುತ್ತದೆ, ಇದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದು.
ರಕ್ತದೊತ್ತಡ ಕೂಡ ಕಡಿಮೆ ಮಾಡುತ್ತದೆ
ಸಂಗಾತಿ ನೀಡುವ ಫ್ರೆಂಚ್ ಕಿಸ್‌ನಿಂದ ನಿಮ್ಮು ಮುಖ ಕೆಂಪೇರುವುದು, ಆದರೆ ರಕ್ತದೊತ್ತಡ ಹೆಚ್ಚಾಗಲ್ಲ, ಹೌದು ಫ್ರೆಂಚ್ ಕಿಸ್‌ನಿಂದ ಇಬ್ಬರು ಖುಷಿಯಾಗಿರುತ್ತೀರಿ, ಇದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.
ಮುಟ್ಟಿನ ನೋವು ಕಡಿಮೆ ಮಾಡುತ್ತದೆ
ಅಚ್ಚರಿ ಅನಿಸಿದರೂ ಇದು ಸತ್ಯ. ಮುಟ್ಟಿನ ನೋವು ಕಡಿಮೆ ಮಾಡಲು ಕೂಡ ಸಹಕಾರಿಯಾಗಿದೆ. ದೇಹದಲ್ಲಿ ಗುಡ್ ಕೆಮಿಕಲ್ ಬಿಡುಗಡೆ ಮಾಡುವುದರಿಂದ ಮುಟ್ಟಿನ ನೋವು ಕಡಿಮೆಯಾಗುವುದು.
ತಲೆನೋವು ಕಡಿಮೆ ಮಾಡುತ್ತದೆ
ಟೆನ್ಷನ್, ತಲೆ ಸಿಡಿಯುತ್ತದೆ ಎಂದು ನಾವು ಸಿಡಿಮಿಡಿಯಿಂದ ಇರುತ್ತೇವೆ, ಅದರ ಬದಲಿಗೆ ಸಂಗಾತಿ ಜೊತೆ ಸ್ವಲ್ಪ ಸಮಯ ರೊಮ್ಯಾಂಟಿಕ್ ಆಗಿ ಕಳೆದರೆ ತಲೆನೋವು ಕಡಿಮೆಯಾಗಿರುತ್ತದೆ, ನಿಮ್ಮ ಮಾನಸಿಕ ಒತ್ತಡ ಕೂಡ ಕಡಿಮೆಯಾಗಿರುತ್ತದೆ.
ಹೃದಯದ ಆರೋಗ್ಯಕ್ಕೆ ಒಳ್ಳೆಯದು
2009ರಲ್ಲಿ ನಡೆಸಿದ ಅಧ್ಯಯನ ಪ್ರಕಾರ ರೊಮ್ಯಾಂಟಿಕ್ ಕಿಸ್ ಕೊಲೆಸ್ಟ್ರಾಲ್, ರಕ್ತದೊತ್ತಡ ನಿಯಂತ್ರಣದಲ್ಲಿರುವುದರಿಂದ ಹೃದಯ ಆರೋಗ್ಯಕ್ಕೂ ಒಳ್ಳೆಯದು.
ಲೈಂಗಿಕ ಆಸೆ ಹೆಚ್ಚಿಸುತ್ತದೆ, ಲೈಂಗಿಕ ತೃಪ್ತಿ ನೀಡುತ್ತದೆ
ಇಬ್ಬರು ತುಟಿಗೆ ತುಟಿ ಒತ್ತಿ ಚುಂಬಿಸಿದಾಗ ಇಬ್ಬರು ಒಂದಾಗಬೇಕೆಂಬ ದೈಹಿಕ ಆಸೆ ಮೂಡುತ್ತದೆ. ಇಬ್ಬರಿಗೆ ಖುಷಿ ನೀಡುವುದು, ಲೈಂಗಿಕ ತೃಪ್ತಿ ನೀಡುವುದು.
ಈ ಬಗೆಯ ಕಿಸ್ ಸಂಗಾತಿ ಹಾಗೂ ನಿಮ್ಮ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುವುದು
ಎಷ್ಟೇ ಬ್ಯುಸಿ, ಕೆಲಸದ ಒತ್ತಡ ಏನೇ ಇರಲಿ ದಿನಾ ಮಲಗುವ ಮುನ್ನ ನಿಮ್ಮ ಸಂಗಾತಿಯನ್ನು ಬಿಗಿದಪ್ಪಿ ಫ್ರೆಂಚ್ ಕಿಸ್ ನೀಡಿ, ನಿಮ್ಮಿಬ್ಬರ ನಡುವೆ ಇರುವ ಎಲ್ಲಾ ಮುನಿಸು ದೂರಾಗುವುದು, ಇಬ್ಬರ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುವುದು, ಇಬ್ಬರು ಒಬ್ಬರನ್ನೊಬ್ಬರು ಮತ್ತಷ್ಟು ಇಷ್ಟಪಡುತ್ತೀರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications