Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಮಾರುಕಟ್ಟೆಗೆ ಬಂದಿದೆ ಚೀನಾ ಬೆಳ್ಳುಳ್ಳಿ, ಬೆಲೆ ಕಡಿಮೆ ಅಂತ ಖರೀದಿಸುವ ಮುನ್ನ ತಿಳಿದಿರಲಿ ಈ ವಿಷಯ
ಈ ಚೀನಾದವರು ಯಾವೆಲ್ಲಾ ವಸ್ತು ಮಾರುಕಟ್ಟೆಗೆ ತರ್ತಾರಪ್ಪಾ, ಚೀನಾದ ವಸ್ತುಗಳಿಗೆ ವಾರಂಟಿಯಿಲ್ಲ, ಗ್ಯಾರಂಟಿಯಿಲ್ಲ, ಈಗ ಬೆಳ್ಳುಳ್ಳಿ ಕೂಡ ಮಾರುಕಟ್ಟೆಗೆ ಬಿಟ್ಟಿದ್ದಾರೆ,ಬೆಳ್ಳುಳ್ಳಿ ಕೆಜಿಗೆ 400 ದಾಟಿರುವಾಗ ಚೀನಾದಿಂದ ಬಂದಂಥ ಬೆಳ್ಳುಳ್ಳಿ ಬರೀ 80 ರುಪಾಯಿ, ಕಡಿಮೆ ಬೆಲೆ ಅಂತ ಈ ಬೆಳ್ಳುಳ್ಳಿ ಸೇವಿಸಿದರೆ ಇದೆಯಲ್ಲಾ ನಿಮ್ಮ ಜೀವಕ್ಕೆ ಡಾಕ್ಟರ್ ಕೂಡ ಗ್ಯಾರಂಟಿ ಕೊಡಲು ಕಷ್ಟವಾಗುವುದು, ಅದ್ದರಿಂದ ಜಾಗ್ರತೆ!

ಚೀನಾದ ಬೆಳ್ಳುಳ್ಳು ಹಾಗೂ ಭಾರತದ ಈರುಳ್ಳಿ ನಡುವಿನ ವ್ಯತ್ಯಾಸವೇನು?
ನೋಡಲು ಭಿನ್ನವಾಗಿರುತ್ತದೆ, ಗಾತ್ರದಲ್ಲಿ ವ್ಯತ್ಯಾಸವಿರುತ್ತದೆ, ಭಾರತದ ಈರುಳ್ಳಿ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು , ಏಕೆಂದರೆ ದಿನನಿತ್ಯದ ಅಡುಗೆಯಲ್ಲಿ ಬೆಳ್ಳುಳ್ಳಿ ಇರುತ್ತದೆ. ಹಾಗಾಗಿ ಅದರ ಬಗ್ಗೆ ಗೊತ್ತಿರುತ್ತದೆ, ಆದರೆ ಈ ಚೀನಾ ಬೆಳ್ಳುಳ್ಳಿ ನಾರ್ಮಲ್ ಬೆಳ್ಳುಳ್ಳಿಯಂತೆ ಅಲ್ಲ, ಗಾತ್ರದಲ್ಲಿ ದೊಡ್ಡದಿರುತ್ತದೆ, ಅಲ್ಲದೆ ಅದರ ಸಿಪ್ಪೆ ಅರ್ಧ ಬಿಳಿ, ಅರ್ಧ ಪಿಂಕ್ ಇರುತ್ತದೆ.
ಹೆಚ್ಚು ಎಸಳುಗಳಿರುತ್ತದೆ
ಈ ಚೀನಾದ ಬೆಳ್ಳುಳ್ಳಿಯಲ್ಲಿ ಹೆಚ್ಚು ಎಸಳುಗಳು ಇರಲ್ಲ, ಅಲ್ಲದೆ ಅದರ ಹೊರಭಾಗಿನ ತ್ವಚೆ ತುಂಬಾ ಪಾಲಿಷ್ ರೀತಿಯಲ್ಲಿರುತ್ತದೆ.
ರುಚಿಯಲ್ಲಿ ಭಿನ್ನವಾಗಿರುತ್ತದೆ
ರುಚಿಯಲ್ಲಿ ಈ ಬೆಳ್ಳುಳ್ಳಿ ಭಿನ್ನವಾಗಿರುತ್ತದೆ. ಅಡುಗೆಗೆ ನಮ್ಮ ಭಾರತೀಯ ಬೆಳ್ಳುಳ್ಳಿ ತುಂಬಾ ರುಚಿಯಾಗಿರುತ್ತದೆ, ಆದರೆ ಚೀನಾದ ಬೆಳ್ಳುಳ್ಳಿ ರುಚಿಯಿರಲ್ಲ.
ಮಧ್ಯ ಪ್ರದೇಶ ಮತ್ತು ಗುಜರಾತ್, ರಾಜಾಸ್ಥಾನ ಈ ಭಾಗಗಳಲ್ಲಿ ಬೆಳೆಯಲಾಗುವುದು. ಇದನ್ನು ಹೆಚ್ಚೇನು ರಾಸಾಯನಿಕ ಬಳಸಲ್ಲ, ಆದರೆ ಚೀನಾ ಬೆಳ್ಳುಳ್ಳಿಯನ್ನು ತುಂಬಾ ರಾಸಾಯನಿಕ ಹಾಕಿ ಬೆಳೆಸಲಾಗುವುದು. ವಿಶ್ವಕ್ಕೆ ಹೆಚ್ಚು ಬೆಳ್ಳುಳ್ಳಿಯನ್ನು ರಪ್ತು ಮಾಡುವ ದೇಶವೆಂದರೆ ಅದು ಚೀನಾ, ಹಾಗಾಗಿ ಬೆಳ್ಳುಳ್ಳಿಯನ್ನು ಕೆಮಿಕಲ್ ಟ್ರೀಟ್ಮೆಂಟ್ ಮೂಲಕ ಬೆಳೆಸಲಾಗುವುದು, ಹಾಗಾಗಿಯೇ ಅದರ ಗಾತ್ರ ನಮ್ಮ ಬೆಳ್ಳುಳ್ಳಿಗಿಂತ ಹೆಚ್ಚಿರುತ್ತದೆ.
ಎರಡೂ ಬೆಳ್ಳುಳ್ಳಿಯಲ್ಲಿ ಪೋಷಕಾಂಶವಿರುತ್ತದೆ, ಆದರೆ ಭಾರತದ ಬೆಳ್ಳುಳ್ಳಿಯಲ್ಲಿ ಔಷಧೀಯ ಗುಣಗಳಿರುತ್ತದೆ
ಭಾರತದ ಬೆಳ್ಳುಳ್ಳಿಯನ್ನು ಅನೇಕ ಔಷಧಗಳಲ್ಲಿ ಬಳಸಲಾಗುವುದು. ಇದರಲ್ಲಿ allicin ಅಂಶ ಹೆಚ್ಚಿರುತ್ತದೆ. ಭಾರತದ ಬೆಳ್ಳುಳ್ಳಿ ಸೇವನೆಯಿಂದ ರಕ್ತದೊತ್ತಡ ನಿಯಂತ್ರಣದಲ್ಲಿಡಬಹುದು, ಅಲ್ಲದೆ ರೋಗ ನಿರೋಧಕ ಶಕ್ತಿ ಹೆಚ್ಚಸುತ್ತದೆ, ರಕ್ತ ಶುದ್ಧೀಕರಣ ಮಾಡುತ್ತದೆ. ಶೀತ, ಕೆಮ್ಮು, ಅಜೀರ್ಣ ಈ ಬಗೆಯ ಸಮಸ್ಯೆ ತಡೆಗಟ್ಟುತ್ತದೆ.
ಅದೇ ಚೀನಾದ ಬೆಳ್ಳುಳ್ಳಿಯಲ್ಲಿ ಇಂಥ ಯಾವುದೇ ಗುಣಗಳಿರಲ್ಲ, ಕೆಲ ಪೋಷಕಾಂಶಗಳಿರುತ್ತದೆ, ರಾಸಾಯನಿಕ ವಿಧಾನ ಬಳಸಿ ಬೆಳೆದಿರುವುದರಿಂದ ರಾಸಾಯನಿಕವಿರುತ್ತದೆ, ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.
ಚೀನಾದ ಬೆಳ್ಳುಳ್ಳಿ ಕಡಿಮೆ ಬೆಲೆಯಲ್ಲಿ ದೊರೆಯುತ್ತದೆ
ಬೆಳ್ಳುಳ್ಳಿ ರೇಟ್ ಕೇಳಿದರೆ ಅಬ್ಬಾಇಷ್ಟೊಂದಾ ಅಂತ ಕೇಳುತ್ತೇವೆ, ಕೆಜಿಗೆ ರುಪಾಯಿ 40, 60 ಇದ್ದ ಬೆಳ್ಳುಳ್ಳಿ ಈಗ ಕೆಜಿಗೆ 4-00 ರುಪಾಯಿ, 450 ರುಪಾಯಿ ಅಂತ ಮಾರಾಟ ಮಾಡಲಾಗುತ್ತಿದೆ. ಹೋಗಾಗಿ ಇದು ತುಂಬಾನೇ ದುಬಾರಿ ಅನಿಸಲಾರಂಭಿಸಿದೆ, ಅದೇ ಚೀನಾ ಬೆಳ್ಳುಳ್ಳಿ ಕಡಿಮೆ ಬೆಲೆಗೆ ದೊರೆಯುತ್ತಿದೆ.
ಆರೋಗ್ಯ, ರುಚಿ ಗಮನದಲ್ಲಿಟ್ಟು ಖರೀದಿ ಮಾಡುವುದಾದರೆ ಭಾರತದಲ್ಲಿ ಬೆಳೆದ ಬೆಳ್ಳುಳ್ಳಿ ಒಳ್ಳೆಯದು, ಅದೇ ಬೆಲೆ ಮಾತ್ರ ನೋಡುವವರು ಚೀನಾದ ಈರುಳ್ಳಿ ಖರೀದಿಸುತ್ತಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
