Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
Year Ender 2022: ಈ ವರ್ಷ ಆರೋಗ್ಯ ಹೆಚ್ಚಿಸಲು ಟಾಪ್ ಸರ್ಚ್ ಮಾಡಿದ 6 ಬಗೆಯ ಆಹಾರಗಳಿವು
ಈ ಕೊರೊನಾ ಬಂದ ಮೇಲೆ ಜನರಿಗೆ ಆರೋಗ್ಯದ ಬಗ್ಗೆ ತುಂಬಾನೇ ಜಾಗೃತಿ ಮೂಡಿದೆ, ಕಳೆದ ಮೂರು ವರ್ಷಗಳಿಂದ ಆರೋಗ್ಯದ ಬಗ್ಗೆ ಜನ ಕಾಮನ್ ಆಗಿ ಆಸಕ್ತಿ ತೋರಿಸುತ್ತಿರುವ ಅಂಶವೆಂದರೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಹೇಗೆ?

2022ರಲ್ಲಿಯೂ ಕೂಡ ಹೆಚ್ಚು ಜನ ಈ ಕುರಿತು ಸರ್ಚ್ ಮಾಡಿರುವುದರಿಂದ ಟಾಪ್ ಲಿಸ್ಟ್‌ನಲ್ಲಿದೆ, ಈ ವರ್ಷ ಆರೋಗ್ಯದ ಬಗ್ಗೆ ಜನರು ಸರ್ಚ್ ಮಾಡಿರುವ ಟಾಪ್ ಹೆಲ್ತ್ ಟ್ರೆಂಡ್‌ಗಳೆಂದರೆ ಇವೇ ನೋಡಿ:

1. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳು ( Immunity-boosting foods)
ಎಲ್ಲರಿಗೂ ಈ ವಿಷಯದ ಬಗ್ಗೆ ತುಂಬಾನೇ ಆಸಕ್ತಿ, ಕೊರೊನಾ ಬಳಿಕ ಜನ ಆರೋಗ್ಯಕರ ಜೀವನಶೈಲಿ ಕಡೆ ತುಂಬಾನೇ ಗಮನ ನೀಡುತ್ತಿದ್ದಾರೆ. ಎಷ್ಟು ನಿದ್ದೆ ಮಾಡಬೇಕು, ಯಾವ ಆಹಾರ ತಿನ್ನಬೇಕು, ಯಾವುದು ತಿನ್ನಬಾರದು ಎಂಬೆಲ್ಲಾ ವಿಷಯಗಳನ್ನು ತಿಳಿದುಕೊಳ್ಳಬಯಸುತ್ತಿದ್ದಾರೆ.
ಈ ಆಹಾರಗಳು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತುಂಬಾನೇ ಸಹಕಾರಿ:
* ಪ್ರೊಬಯೋಟಿಕ್ ಆಹಾರಗಳು (ಹುದುಗುಬರಿಸಿದ ಆಹಾರ ಅಂದರೆ ದೋಸೆ ಹಿಟ್ಟು, ಇಡ್ಲಿ ಹಿಟ್ಟು , ತಂಗಳು ಅನ್ನ )
* ಸತು
* ವಿಟಮಿನ್ ಸಿ ಇರುವ ಆಹಾರಗಳು
* ಪ್ರೊಟೀನ್ ಆಹಾರಗಳು

ಕಾಳು ಇರುವ ತರಕಾರಿ (Seed-based plants)
2022ರಲ್ಲಿ ಜನರು ಕಾಳುಗಳು ಹಾಗೂ ಕಾಳುಗಳಿರುವ ತರಕಾರಿಗಳ ಬಗ್ಗೆ ಕೂಡ ತುಂಬಾನೇ ಸರ್ಚ್ ಮಾಡಿದ್ದಾರೆ. ಕಾಳುಗಳಲ್ಲಿ ಪೋಷಕಾಂಶಗಳು, ಖನಿಜಾಂಶಗಳಿದ್ದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ನೀವು ಕಾಳುಗಳನ್ನು ಮೊಳಕೆಬರಿಸಿ ಸೇವಿಸಿದರೆ ತುಂಬಾನೇ ಒಳ್ಳೆಯದು. ಕಾಳು ಇರುವ ತರಕಾರಿಗಳಿಂದ ಪಲ್ಯನೂ ಮಾಡಬಹುದು. ಈ ಬಗೆಯ ತರಕಾರಿಗಳು ಮಧುಮೇಹಿಗಳ ಆರೋಗ್ಯಕಂತೂ ತುಂಬಾ ಒಳ್ಳೆಯದು. ಜೀರ್ಣಕ್ರಿಯೆಗೂ ಸಹಕಾರಿ.
ಸಿಹಿ ಕುಂಬಳಕಾಯಿ, ಬೀನ್ಸ್, ಅವರೆಕಾಳು, ಬಟಾಣಿ ಈ ಬಗೆಯ ತರಕಾರಿಗಳು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

3. ಗಿಡಗಳಿಂದ ದೊರೆಯುವ ಆಹಾರ
2021ರಲ್ಲಿ ಈ ಆಹಾರ ಟಾಪ್ ಟ್ರೆಂಡ್‌ನಲ್ಲಿತ್ತು, 2022ರಲ್ಲೂ ಕೂಡ ಜನ ಇಂಥ ಆಹಾರಗಳ ಬಗ್ಗೆ ತುಂಬಾ ಸರ್ಚ್ ಮಾಡಿದ್ದಾರೆ, 2021ರಲ್ಲಿ ಈ ಬಗೆಯ ಆಹಾರಗಳನ್ನು ಹೆಚ್ಚಾಗಿ ಬಳಸುವುದರಿಂದ ಅದರ ಪ್ರಯೋಜನ ಕಂಡ ಬಂದಿರಬಹುದು ಅಥವಾ ಬೇರೆಯವರು ಹೇಳಿ ಇದರ ಬಗ್ಗೆ ತಿಳಿದಿರಬಹುದು. ಹಾಗಾಗಿ ಜನ ಈ ವರ್ಷ ಕೂಡ ಇದರ ಬಗ್ಗೆ ಸರ್ಚ್ ಮಾಡಿದ್ದಾರೆ.

ಆಲ್ಕೋಹಾಲ್ ಫ್ರೀ ಆಪ್ಷನ್
ಮದ್ಯದ ಫೀಲ್ ಬೇಕು ಆದರೆ ಆಲ್ಕೋಹಾಲ್ ಫ್ರೀ ಆಗಿರಬೇಕು, ಆಲ್ಕೋಹಾಲ್ ಫ್ರೀ ಆಪ್ಷನ್ ಕೂಡ ತುಂಬಾನೇ ಪ್ರಸಿದ್ಧಿ ಪಡೆಯಿತು. ಆಲ್ಕೋಹಾಲ್ ಫ್ರೀ ಸ್ಪಿರಿಟ್, ವೈನ್, ಬೀರ್ ಈ ಬಗೆಯ ಪಾನೀಯಗಳ ಸರ್ಚ್ ತುಂಬಾ ಜೋರಾಗಿತ್ತಂತೆ, ಜನರಿಗೆ ಆರೋಗ್ಯ ಕಾಳಜಿ ತುಂಬಾನೇ ಇದೆ ಎಂದಾಯ್ತು.

ಮುರಿಂಗಾ ಅಂದರೆ ನುಗ್ಗೆಸೊಪ್ಪು
ನುಗ್ಗೆಸೊಪ್ಪಿನಲ್ಲಿ ಹಲವಾರು ಔಷಧೀಯ ಗುಣಗಳಿವೆ. ಈ ನುಗ್ಗೆ ಸೊಪ್ಪಿಗೆ ರಕ್ತದೊತ್ತಡ ನಿಯಂತ್ರಿಸುವ ಶಕ್ತಿ ಇದೆ. ಬಾಣಂತಿಯರು ನುಗ್ಗೆಸೊಪ್ಪು ತಿಂದರೆ ಎದೆಹಾಲಿನ ಉತ್ಪತ್ತಿ ಹೆಚ್ಚುವುದು. ನುಗ್ಗೆ ಸೊಪ್ಪನ್ನು ಹಲವಾರು ಕಾಯಿಲೆಗಳಿಗೆ ಮನೆಮದ್ದಾಗಿ ಬಳಸಲಾಗುವುದು.
* ಇದರಲ್ಲಿ ವಿಟಮಿನ್ ಸಿ ಮತ್ತು ಬೀಟಾ ಕೆರೋಟಿನ್ ಇರುವುದರಿಂದ ಮಧುಮೇಹ, ಕ್ಯಾನ್ಸರ್, ಅಲ್ಜೈಮರ್ಸ್ ಈ ಬಗೆಯ ಸಮಸ್ಯೆ ತಡೆಗಟ್ಟಲು ಸಹಕಾರಿ.
* ನುಗ್ಗೆಸೊಪ್ಪು ತ್ವಚೆ ಹಾಗೂ ಕೂದಲಿನ ಆರೋಗ್ಯಕ್ಕೂ ತುಂಬಾ ಒಳ್ಳೆಯದು.

ನಾನ್ ಡೈರಿ ಮಿಲ್ಕ್ (Non-Dairy Milk)
ಸೋಯಾ ಮಿಲ್ಕ್ ಇದು ನಾನ್ ಡೈರಿ ಮಿಲ್ಕ್. ಕೆಲವೊಂದು ತರಕಾರಿಗಳಿಂದ ಕೂಡ ಹಾಲನ್ನು ತೆಗಿಯಲಾಗುವುದು. ತೆಂಗಿನಕಾಯಿ ಹಾಲು, ಬಾದಾಮಿ ಹಾಲು, ಓಟ್ ಮಿಲ್ಕ್ ಇವೆಲ್ಲಾ ನಾನ್ ಡೈರಿ ಮಿಲ್ಕ್ ಆಗಿವೆ.
* ನಾನ್ ಡೈರಿ ಮಿಲ್ಕ್ ಹಾಲಿಗೆ ಪರ್ಯಾಯವಾಗಿದೆ, ಹಾಲು ಕುಡಿದಷ್ಟೇ ಪ್ರಯೋಜನ ಇದರಿಂದ ಸಿಗುವುದು.
* ಕೆಲವರಿಗೆ ಲ್ಯಾಕ್ಟೋಸ್ ಅಲರ್ಜಿ ಇರುತ್ತದೆ, ಅಂಥವರಿಗೆ ಈ ಬಗೆಯ ಹಾಲು ತುಂಬಾನೇ ಒಳ್ಳೆಯದು.
* ನಿಮ್ಮ ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆಯದು
* ಇದು ಗ್ಲುಟೇನ್ ಫ್ರೀಯಾಗಿದೆ
* ಇದು ಕೊಲೆಸ್ಟ್ರಾಲ್ ಫ್ರೀ ಕೂಡ ಹೌದು.
ಈ ಎಲ್ಲಾ ಕಾರಣಗಳಿಂದ ನಾನ್ ಡೈರಿ ಉತ್ಪನ್ನಗಳು ತುಂಬಾನೇ ಜನಪ್ರಿಯವಾಗಿದೆ.



Click it and Unblock the Notifications
