Latest Updates
-
UGC NET ಪರೀಕ್ಷೆ: ಪರೀಕ್ಷೆಯ ಒತ್ತಡದ ನಡುವೆ ಮನೆಯಲ್ಲಿ ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈಗಲೇ ಈ ಕೆಲಸ ಮಾಡಿ! -
ಭಾರಿ ಮಳೆ, ವಿದ್ಯುತ್ ಕಡಿತ: ಸಂಕಷ್ಟದ ಸಮಯದಲ್ಲಿ ನಿಮ್ಮ ಆರೋಗ್ಯ ಮತ್ತು ಆಹಾರ ಸುರಕ್ಷತೆ ಕಾಪಾಡಿಕೊಳ್ಳುವುದು ಹೇಗೆ? -
ಮುಂಬೈನಲ್ಲಿ ವರುಣನ ಆರ್ಭಟ: ರೆಡ್ ಅಲರ್ಟ್ ಘೋಷಣೆ, ಪ್ರಯಾಣಿಕರೇ ಎಚ್ಚರ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಆರ್ಭಟ: ಹೊರಗೆ ಹೋಗುವ ಮುನ್ನ ಎಚ್ಚರ, ಮನೆಯಲ್ಲೇ ಫಿಟ್ ಆಗಿರಲು ಈ 8 ನಿಮಿಷದ ಟಿಪ್ಸ್! -
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ!
ವಿಶ್ವ ತೆಂಗಿನಕಾಯಿ ದಿನ 2022: ಅಡುಗೆಗೆ ತೆಂಗಿನೆಣ್ಣೆ ಆಲೀವ್ ಎಣ್ಣೆಗಿಂತಲೂ ಬೆಸ್ಟ್ ಗೊತ್ತಾ?
ಸೆಪ್ಟೆಂಬರ್ 2 ವಿಶ್ವ ತೆಂಗಿನಕಾಯಿ ದಿನ. ಎಳನೀರು, ತೆಂಗಿನಕಾಯಿ, ತೆಂಗಿನೆಣ್ಣೆ ಇವೆಲ್ಲಾ ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿದೆ. ಆದರೆ ತೆಂಗಿನೆಣ್ಣೆ ಬಗ್ಗೆ ಹಲವಾರು ಕಾಂಟ್ರೋವರ್ಸಿಗಳಿವೆ. ತೆಂಗಿನೆಣ್ಣೆಯಲ್ಲಿ ಕೊಬ್ಬಿನಂಶ ಜಾಸ್ತಿ, ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬೆಲ್ಲಾ ವದಂತಿ ಇದೆ. ಆದರೆ ತೆಂಗಿನೆಣ್ಣೆ ಅಡುಗೆಗೆ ಬಳಸಬಹುದಾದ ಅತ್ಯುತ್ತಮವಾದ ಎಣ್ಣೆಗಳಲ್ಲಿ ಒಂದಾಗಿದೆ.

ಏಕೆ ತೆಂಗಿನೆಣ್ಣೆ ಅಡುಗೆಗೆ ಒಳ್ಳೆಯದು, ತೆಂಗಿನೆಣ್ಣೆ ಬಳಸುವುದರಿಂದ ದೊರೆಯುವ ಪ್ರಯೋಜನಗಳೇನು ಎಂದು ನೋಡೋಣ ಬನ್ನಿ:

ತೆಂಗಿನೆಣ್ಣೆಯಲ್ಲಿ ಲೌರಿಕ್ ಆಮ್ಲ ಅಧಿಕವಿದೆ
ಲೌರಿಕ್ ಆಮ್ಲ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು. ಇದು ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುತ್ತೆ, ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ (HDL) ಹೃದಯಾಘಾತದ ಅಪಾಯ ಕಡಿಮೆಯಾಗುವುದು. ತೆಂಗಿನೆಣ್ಣೆ ಆಲೀವ್ ಎಣ್ಣೆಯಷ್ಟೇ ಪ್ರಯೋಜನಕಾರಿಯಾಗಿದೆ.

ಬ್ಲಡ್ ಲಿಪಿಡ್ ಉತ್ತಮಪಡಿಸುತ್ತೆ
ತೆಂಗಿನೆಣ್ಣೆ ಸೇವನೆ ಮಾಡಿದರೆ ಅದು ರಕ್ತದಲ್ಲಿರುವ ಲಿಪಿಡ್ ಅಂಶ ಹೆಚ್ಚಿಸುತ್ತೆ, ಇದರಿಂದ ಹೃದಯ ಸಂಬಂಧಿ ಸಮಸ್ಯೆ ಕಡಿಮೆಯಾಗುವುದು. ತೆಂಗಿನೆಣ್ಣೆ ಸೇವನೆ ಮಾಡುವುದರಿಂದ ಬೆಣ್ಣೆ ಮತ್ತು ಎಕ್ಟ್ರಾ ವರ್ಜಿನ್ ಆಯಿಲ್‌ಗಿಂತ ಪ್ರಯೋಜನಕಾರಿಯಾಗಿದೆ ಎಂಬುವುದು ಸಂಶೋಧನೆಯಿಂದ ತಿಳಿದು ಬಂದಿದೆ.

ತೆಂಗಿನೆಣ್ಣೆ ತೂಕ ಇಳಿಕೆಗೂ ಸಹಕಾರಿ
ತೆಂಗಿನೆಣ್ಣೆಯಲ್ಲಿ ಕೊಬ್ಬಿನಂಶ ಇರುವುದರಿಂದ ತೂಕ ಹೆಚ್ಚಾಗುತ್ತೆ ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ, ಆದರೆ ತೆಂಗಿನೆಣ್ಣೆ ಸೇವನೆ ತೂಕ ಇಳಿಕೆಗೆ ಸಹಕಾರಿಯಾಗಿದೆ. ಅಡುಗೆಯಲ್ಲಿ ತೆಂಗಿನೆಣ್ಣೆ ಬಳಸಿದರೆ ಬೇಗನೆ ಹಸಿವು ಉಂಟಾಗಲ್ಲ, ಅಲ್ಲದೆ ಇದರಲ್ಲಿರುವುದು ಆರೋಗ್ಯಕರ ಕೊಬ್ಬಿನಂಶ, ಇದನ್ನು ಅಡುಗೆಗೆ ಬಳಸಿದರೆ ಆರೋಗ್ಯಕರ ಮೈತೂಕ ಹೊಂದಬಹುದು.

ತೆಂಗಿನೆಣ್ಣೆಯನ್ನು ಮಕ್ಕಳಿಗೆ ಕೊಡುವುದು ತುಂಬಾ ಒಳ್ಳೆಯದು
* ಮಕ್ಕಳ ಹಲ್ಲಿನ ಆರೋಗ್ಯಕ್ಕೆ ಒಳ್ಳೆಯದು: ಸ್ವಲ್ಪ ತೆಂಗಿನೆಣ್ಣೆ ತೆಗೆದು ಮಕ್ಕಳ ಹಲ್ಲಿಗೆ ತಿಕ್ಕಿದರೆ ಹಲ್ಲು ಹುಳುಕಾಗುವುದನ್ನು ತಡೆಗಟ್ಟಬಹುದು.
* ತ್ವಚೆಗೆ ಒಳ್ಳೆಯದು: ತೆಂಗಿನೆಣ್ಣೆಯ ಮಸಾಜ್ ಹಾಗೂ ಆಹಾರದಲ್ಲಿ ತೆಂಗಿನೆಣ್ಣೆ ನೀಡುವುದರಿಂದ ಮಕ್ಕಳ ತ್ವಚೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
* ಮಕ್ಕಳ ಮೈಗೆ ತೆಂಗಿನೆಣ್ಣೆ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ
* ಮಕ್ಕಳ ತಲೆಗೆ ಎಣ್ಣೆ ಹಚ್ಚುವುದರಿಂದ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು
* ಮಕ್ಕಳ ಮೆದುಳು ಹಾಗೂ ಹೃದಯದ ಆರೋಗ್ಯಕ್ಕೆ ಕೂಡ ತೆಂಗಿನೆಣ್ಣೆ ಒಳ್ಳೆಯದು.

ತೆಂಗಿನೆಣ್ಣೆಯ ಗುಣಗಳು ಹಾಗೂ ಅದರ ಪ್ರಯೋಜನಗಳು
* ಆ್ಯಂಟಿವೈರಲ್: ಇದು ದೇಹದಲ್ಲಿ ರೋಗಾಣುಗಳ ವಿರುದ್ಧ ಹೋರಾಡುತ್ತೆ
* ಆ್ಯಂಟಿಬ್ಯಾಕ್ಟಿರಿಯಾ: ದೇಹವನ್ನು ಹಾನಿಕಾರಕ ಬ್ಯಾಕ್ಟಿರಿಯಾಗಳಿಂದ ರಕ್ಷಣೆ ಮಾಡುತ್ತೆ
* ತೆಂಗಿನೆಣ್ಣೆ ಉರಿಯೂತ ಕಡಿಮೆ ಮಾಡುತ್ತೆ
* ಇದರ ಆ್ಯಂಟಿಮೈಕ್ರೋಬಯಲ್ ದೇಹದಲ್ಲಿ ಅಪಾಯಕಾರಿ ಗಡ್ಡೆಗಳು ಉಂಟಾಗುವುದನ್ನು ತಡೆಗಟ್ಟುತ್ತೆ
*ಲಿವರ್‌ನ ಆರೋಗ್ಯ ಕಾಪಾಡುತ್ತೆ
* ದೇಹದಲ್ಲಿ ಆರೋಗ್ಯಕರ ಕೊಲೆಸ್ಟ್ರಾಲ್ ಕಾಪಾಡಲು ಸಹಕಾರಿ
* ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕುತ್ತೆ
ಮಕ್ಕಳಿಗೆ ದಿನದಲ್ಲಿ 1-2 ಸ್ಪೂನ್ ತೆಂಗಿನೆಣ್ಣೆ ಒಳ್ಳೆಯದು. ದೊಡ್ಡವರು 2-3 ಚಮಚ ಬಳಸಬಹುದು.



Click it and Unblock the Notifications