For Quick Alerts
ALLOW NOTIFICATIONS  
For Daily Alerts

ತೂಕ ಇಳಿಕೆಯ ಸರ್ಜರಿಯ ಅಡ್ಡಪರಿಣಾಮಗಳಿವು

|

ಸ್ಯಾಂಡಲ್‌ವುಡ್‌ನ ಹಾಸ್ಯನಟ ಬುಲೆಟ್‌ ಪ್ರಕಾಶ್‌ ಇನ್ನಿಲ್ಲ ಎಂಬ ಸುದ್ದಿ ಬರುತ್ತಿದ್ದಂತೆಯೇ ಅವರು ತೂಕ ಇಳಿಸಿಕೊಳ್ಳಲು ಈ ಹಿಂದೆ ಮಾಡಿಸಿಕೊಂಡ ಸರ್ಜರಿಯೇ ಅವರಿಗೆ ಮುಳುವಾಯಿತೇ ಎಂಬ ಮಾತುಗಳು ಕೇಳಿ ಬರುತ್ತಿವೆ. ದಪ್ಪಗಿನ ಮೈತೂಕ ಹೊಂದಿದ್ದ ಬುಲೆಟ್‌ ಪ್ರಕಾಶ್‌ ತಮ್ಮ ಹಾಸ್ಯದಿಂದಲೇ ಸಿನಿ ಪ್ರೇಕ್ಷಕರನ್ನು ನಗಿಸುತ್ತಿದ್ದರು. ಆದರೆ ಅವರು ಇದ್ದಕ್ಕಿದ್ದಂತೆ ತೂಕ ಇಳಿಕೆಗೆ ನಿರ್ಧರಿಸಿ ಸರ್ಜರಿ ಮಾಡಿಸಿಕೊಂಡು 36 ಕೆಜಿ ತೂಕ ಇಳಿಸಿಕೊಂಡರು. ಆದರೆ ಅದಾದ ಬಳಿಕ ಅವರಲ್ಲಿ ಮೊದಲಿನ ಗೆಲುವು ಕಾಣಲಿಲ್ಲ ಎಂಬುವುದೇ ಅವರ ಅಭಿಮಾನಿಗಳ ಮಾತಾಗಿದೆ.

weight loss surgery side effects

ನಂತರದ ದಿನಗಳಲ್ಲಿ ಅವರಿಗೆ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿದೆವು. 2018ರಲ್ಲಿ ಅವರ ಸ್ಥಿತಿ ಗಂಭೀರವಾಗಿತ್ತು. ಇದೀಗ ಬಹು ಅಂಗಾಗ ವೈಫಲ್ಯದಿಂದ ನಿಧನರಾಗಿದ್ದಾರೆ. ನಾವು ಅನೇಕ ಸೆಲೆಬ್ರಿಟಿಗಳು ತಮ್ಮ ಮೈತೂಕ ಕಡಿಮೆ ಮಾಡಿಕೊಳ್ಳಲು, ದೇಹದ ಅಂದವನ್ನು ಹೆಚ್ಚಿಸಲು ಬೇರಿಯಾಟ್ರಿಕ್ ಸರ್ಜರಿ ಮೊರೆ ಹೋಗುವುದರ ಬಗ್ಗೆ ಕೇಳುತ್ತೇವೆ.

ತೂಕ ಇಳಿಕೆಗೆ ಮಾಡುವ ಈ ಸರ್ಜರಿಯಿಂದ ಕೆಲವೊಮ್ಮೆ ದೇಹದ ಮೇಲೆ ಅಡ್ಡಪರಿಣಾಮವೂ ಬೀರುತ್ತದೆ. ಇಲ್ಲಿ ನಾವು ಈ ಸರ್ಜಿರಿಯಿಂದ ಉಂಟಾಗುವ ಅಡ್ಡಪರಿಣಾಮಗಳೇನು ಎಂದು ಹೇಳಿದ್ದೇವೆ ನೋಡಿ:

ಮೈ ತೂಕ ಇಳಿಸಲು 5 ಬಗೆಯ ಸರ್ಜರಿಗಳಿವೆ

ಮೈ ತೂಕ ಇಳಿಸಲು 5 ಬಗೆಯ ಸರ್ಜರಿಗಳಿವೆ

1. ಗ್ಯಾಸ್ಟ್ರಿಕ್ ಬೈಪಾಸ್‌: ಈ ಸರ್ಜರಿಯಲ್ಲಿ ಹೊಟ್ಟೆಗಾತ್ರವನ್ನು ತಗ್ಗಿಸಲಾಗುವುದು, ಇದರಿಂದ ವ್ಯಕ್ತಿ ಕಡಿಮೆ ಊಟ ಮಾಡುತ್ತಾರೆ.

2. ಅಡ್ಜೆಸ್ಟೇಬಲ್ ಗ್ಯಾಸ್ಟ್ರಿಕ್ ಬ್ಯಾಂಡ್ ಅಥವಾ ಲ್ಯಾಪ್ ಬ್ಯಾಂಡ್

ಇದನ್ನು ಲ್ಯಾಪ್ರೋಸ್ಕೋಪಿಕ್ ಅಥವಾ ಓಪನ್ ವಿಧಾನದಲ್ಲಿ ಮಾಡಲಾಗುವುದು. ಇದರಲ್ಲಿ ಹೊಟ್ಟೆಯಲ್ಲಿ ಸಿಲಿಕೋನ್ ಅಡ್ ಅಡ್ಜೆಸ್ಟೇಬಲ್ ಗ್ಯಾಸ್ಟ್ರಿಕ್ ಬ್ಯಾಂಡ್ ಹಾಕುತ್ತಾರೆ. ಇದು ವ್ಯಕ್ತಿ ಆಹಾರ ಹೆಚ್ಚು ತೆಗೆದುಕೊಳ್ಳದಂತೆ ನಿಯಂತ್ರಿಸುತ್ತದೆ.

3. ಸ್ಲೀವ್‌ ಗ್ಯಾಸ್ಟ್ರೋಕ್ಟಮಿ

ಇದು ಹೊಟ್ಟೆ ಗಾತ್ರವನ್ನು ಸೇ. 15ರಷ್ಟು ಕಡಿಮೆ ಮಾಡುತ್ತದೆ.

4.ಬಿಪಿಡಿ/ಡಿ ಎಸ್ ಗ್ಯಾಸ್ಟ್ರಿಕ್ ಬೈಪಾಸ್

ಇದರಲ್ಲಿ ಹೊಟ್ಟೆ ಬೊಜ್ಜು ಅನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆಯಲಾಗುವುಉದ.

5.ಎಲೆಕ್ಟ್ರಿಕ್ ಇಂಪ್ಲ್ಯಾಂಟ್ ಸರ್ಜರಿ

ಇದೊಂದು ಎಲೆಕ್ಟ್ರಿಕ್ ಸಾಧನವಾಗಿದ್ದು ಇದನ್ನು ಹೊಟ್ಟೆಯೊಳಗೆ ಇಡಲಾಗುವುದು, ಇದು ಹಸಿವನ್ನು ನಿಯಂತ್ರಿಸಿ ತೂಕ ಇಳಿಕೆ ಮಾಡುತ್ತದೆ.

ತೂಕ ಇಳಿಕೆ ಸರ್ಜರಿಯಿಂದ ಉಂಟಾಗುವ ಅಡ್ಡ ಪರಿಣಾಮಗಳು:

ಡಂಪಿಂಗ್ ಸಿಂಡ್ರೋಮ್

ಡಂಪಿಂಗ್ ಸಿಂಡ್ರೋಮ್

ಅಜೀರ್ಣ ಸಮಸ್ಯೆ ಉಂಟಾಗುವುದು ಚಿಕ್ಕ ಕರುಳಿನ ಕಾರ್ಯಕ್ಕೆ ತೊಂದರೆ ಉಂಟಾಗುವುದು. ಇದರಿಂದ ವಾಂತಿ, ತಲೆಸುತ್ತು, ಸುಸ್ತು ಮುಂತಾದ ತೊಂದರೆಗಳು ಉಂಟಾಗುವುದು.

ರಕ್ತದೊತ್ತಡ ಕಡಿಮೆಯಾಗುವುದು

ರಕ್ತದೊತ್ತಡ ಕಡಿಮೆಯಾಗುವುದು

ತೂಕ ಇಳಿಕೆಗೆ ಸರ್ಜರಿ ಮಾಡಿಸಿಕೊಂಡು 2-3 ವರ್ಷ ಕಳೆದ ಮೇಲೆ ಕೆಲವರಿಗೆ ರಕ್ತದೊತ್ತಡ ಕಡಿಮೆಯಾಗುವ ಸಮಸ್ಯೆ ಉಂಟಾಗುವುದು. ಇದರಿಂದ ಅನೇಕ ಆರೋಗ್ಯ ಸಮಸ್ಯೆ ಉಂಟಾಗುವುದು.

ಪೋಷಕಾಂಶದ ಕೊರತೆ

ಪೋಷಕಾಂಶದ ಕೊರತೆ

ತೂಕ ಇಳಿಕೆಯ ಸರ್ಜರಿಯಲ್ಲಿ ವ್ಯಕ್ತಿಯ ಹಸಿವನ್ನು ನಿಯಂತ್ರಿಸಲಾಗುವುದು, ಇದರಿಂದಾಗಿ ವ್ಯಕ್ತಿ ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸಲಾರಂಭಿಸುತ್ತಾನೆ. ಸರ್ಜರಿ ಮಾಡಿಸಿ ಸ್ವಲ್ಪ ವರ್ಷಗಳು ಕಳೆಯುತ್ತಿದ್ದಂತೆ ಪೋಷಕಾಂಶದ ಕೊರತೆಯಿಂದ ದೇಹ ಬಳಲುವುದು.

ಮಾರ್ಜಿನಲ್ ಅಲ್ಸರ್‌ ಸಮಸ್ಯೆ

ಮಾರ್ಜಿನಲ್ ಅಲ್ಸರ್‌ ಸಮಸ್ಯೆ

ತೂಕ ಇಳಿಕೆಗೆ ಸರ್ಜರಿ ಮಾಡಿಸಿಕೊಂಡ ಬಳಿಕ ಕೆಲವರು ಮಾರ್ಜಿನಲ್ ಅಲ್ಸರ್ ಸಮಸ್ಯೆಯಿಂದ ಬಳಲುತ್ತಾರೆ. ಇದರಿಂದ ಮುಂದೆ ಗಂಭೀರ ಸಮಸ್ಯೆ ಕೂಡ ಉಂಟಾಗಬಹುದು. ಕೆಳಹೊಟ್ಟೆ ನೋವು, ವಾಂತಿ, ಹೊಟ್ಟೆ ಹಾಳಾಗುವುದು ಮುಂತಾದ ತೊಂದರೆ ಉಂಟಾಗುವುದು.

ಜೀರ್ಣಕ್ರಿಯೆಗೆ ತೊಂದರೆ

ಜೀರ್ಣಕ್ರಿಯೆಗೆ ತೊಂದರೆ

ತೂಕ ಇಳಿಕೆಗೆ ಸರ್ಜರಿ ಮಾಡಿಸಿಕೊಳ್ಳುವುದರಿಂದ ಅಜೀರ್ಣಸಮಸ್ಯೆ, ಹೊಟ್ಟೆಯಲ್ಲಿ ಗ್ಯಾಸ್‌ ತುಂಬಿಕೊಳ್ಳುವುದು, ವಾಂತಿ ಮುಂತಾದ ಸಮಸ್ಯೆ ಕಂಡು ಬರುವುದು. ಇದರಿಂದಾಗಿ ವ್ಯಕ್ತಿಯ ಪ್ರಾಣಕ್ಕೆ ಕೂಡ ಅಪಾಯ ಉಂಟಾಗಬಹುದು.

ಆಂತರಿಕ ಹರ್ನಿಯಾ ಸಮಸ್ಯೆ

ಆಂತರಿಕ ಹರ್ನಿಯಾ ಸಮಸ್ಯೆ

ತೂಕ ಇಳಿಕೆಯಿಂದಾಗಿ ಕೆಲವೊಮ್ಮೆ ಆಂತರಿಕ ಹರ್ನಿಯಾ ಸಮಸ್ಯೆ ಉಂಟಾಗಬಹುದು. ತೂಕ ಇಳಿಕೆಯ ಸರ್ಜರಿ ಮಾಡಿಸಿಕೊಂಡವರಲ್ಲಿ ಬಹುತೇಕರಿಗೆ ಈ ಸಮಸ್ಯೆ ಉಂಟಾಗುವುದು.

ಗಾಲಾಸ್ಟೋನ್

ಗಾಲಾಸ್ಟೋನ್

ಇನ್ನು ತೂಕ ಇಳಿಕೆಯ ಶಸ್ತ್ರ ಚಿಕಿತ್ಸೆ ಮಾಡಿಸುವುದರಿಂದ ಉಂಟಾಗುವ ಮತ್ತೊಂದು ಅಡ್ಡಪರಿಣಾಮವೆಂದರೆ ಗಾಲಾಸ್ಟೋನ್. ತೂಕ ಇಳಿಕೆಯ ಸರ್ಜರಿ ಬಳಿಕ ಅತೀ ಹೆಚ್ಚಿನವರು ಈ ಸಮಸ್ಯೆಯಿಂದ ಬಳಲುತ್ತಾರೆ ಎಂದು ಅಧ್ಯಯನಗಳು ಹೇಳಿದೆ.

ತೂಕ ಇಳಿಕೆಗೆ ಆರೋಗ್ಯಕರ ವಿಧಾನ

ತೂಕ ಇಳಿಕೆಗೆ ಆರೋಗ್ಯಕರ ವಿಧಾನ

ತೂಕ ಇಳಿಕೆಗೆ ಶಾರ್ಟ್‌ಕಟ್ ಬೇಡ. ಆರೋಗ್ಯಕರ ಹಾಗೂ ಸಮತೋಲನ ಆಹಾರ ಸೇವಿಸಬೇಕು, ಹಾಗೂ ಪ್ರತಿದಿನ ವ್ಯಾಯಾಮ ಮಾಡಬೇಕು. ಫಾಸ್ಟ್‌ಫುಡ್ಸ್, ಕ್ಯಾಲೋರಿ ಇವುಗಳಿಂದ ದೂರ ಇರಬೇಕು. ಹೀಗೆ ಮಾಡುವುದರಿಂದ ಬಯಸಿದ ತೂಕ ಪಡೆಯಬಹುದು.

English summary

weight loss surgery side effects

Bariatric Surgery is the simple way to loose weight, but after that this surgery amy lead to serious health problem. here we have mentioned side effect of weight loss surgery.
Story first published: Tuesday, April 7, 2020, 17:51 [IST]
X
Desktop Bottom Promotion