Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನ್ಯಾಷನಲ್ ಕ್ರಷ್ ಸ್ಮೃತಿ ಮಂದಾನ ಬಗ್ಗೆ ನಿಮಗೆ ಗೊತ್ತಿರದ ಇಂಟ್ರಸ್ಟಿಂಗ್ ವಿಷಯಗಳು..!
ಪಡ್ಡೆ ಹುಡುಗರ ನಿದ್ದೆ ಕದ್ದ ನ್ಯಾಷನಲ್ ಕ್ರಷ್ ಸ್ಮೃತಿ ಮಂದಾನ. ಭಾರತೀಯ ಮಹಿಳಾ ತಂಡದಲ್ಲಿ ಸೆನ್ಸ್‌ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಸ್ಮೃತಿ ಅಂದ್ರೆ ಹುಡುಗರಿಗಂತೂ ತುಂಬಾನೇ ಅಚ್ಚು ಮೆಚ್ಚು. ಯಾವ ಬಾಲಿವುಡ್ ಸ್ಟ್ರಾರ್ ಕಮ್ಮಿ ಇಲ್ಲ ಈ ಮಿಲ್ಕಿ ಬ್ಯೂಟಿ ಸ್ಮೃತಿ ಮಂದಾನ.

ಅದ್ಯಾವಾಗ ಆರ್‌ಸಿಬಿ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಸ್ಮೃತಿ ಮಂದಾನರನ್ನ ಖರೀದಿಸಿತೋ ಆಗಿನಿಂದ ಕರ್ನಾಟಕದಲ್ಲಿ ಸ್ಮೃತಿ ಹವಾ ಜೋರಾಗಿದೆ. ಇವತ್ತು ನಾವು ನಿಮಗೆ ನ್ಯಾಷನಲ್ ಕ್ರಷ್ ಬಗ್ಗೆ ಗೊತ್ತಿರದ ಕೆಲವೊಂದು ಇಂಟ್ರಸ್ಟಿಂಗ್ ವಿಷಯಗಳ ಬಗ್ಗೆ ತಿಳಿಸಿ ಕೊಡ್ತೀವಿ.
ಮಹಿಳಾ ತಂಡದ ಸ್ಟಾರ್ ಬ್ಯಾಟರ್ ಮಂದಾನ
ಮಂದಾನ ಬ್ಯಾಟ್ ಹಿಡಿದು ಫೀಲ್ಡ್‌ಗಿಳಿದ್ರೆ ಸಾಕು ಹೊಡಿ ಬಡಿ ಆಟ ಶುರು. ಎಂತಹ ಕಠಿಣ ಪರಿಸ್ಥಿತಿಯಲ್ಲಾದ್ರೂ ತಂಡವನ್ನು ದಡ ಸೇರಿಸೋ ತಾಕತ್ತು ಇವರಲ್ಲಿದೆ. ಇನ್ನೂ ಫೀಲ್ಡಿಂಗ್ ವಿಚಾರಕ್ಕೆ ಬಂದ್ರೆ ಅಂತೂ ಕೇಳೋದೇ ಬೇಡ. ಹುಡುಗರಿಗೆ ಸರಿ ಸಮನಾಗಿ ಫೀಲ್ಡಿಂಗ್ ಮಾಡೋ ಕೆಪಾಸಿಟಿ ಸ್ಮೃತಿಗಿದೆ.
ಬ್ಯೂಟಿಗೆ ಮತ್ತೊಂದು ಹೆಸರೇ ಸ್ಮೃತಿ
ಮೇಕಪ್ ಮಾಡಿದ್ರೆ ಮಾತ್ರ ಸುಂದರವಾಗಿ ಕಾಣೋದು ಅನ್ನುವವರ ಮಧ್ಯೆ ನೋ ಮೇಕಪ್ ಲುಕ್‌ನಲ್ಲಿ ಮುದ್ದು ಮುದ್ದಾಗಿ ಕಾಣ್ತಾರೆ ಸ್ಮೃತಿ. ಇವರು ಫೀಲ್ಡ್‌ಗಿಳಿದ್ರೆ ಸಾಕು ಆಟ ನೋಡ್ಬೇಕು ಅನ್ನೋರಿಗಿಂತ ಹೆಚ್ಚಾಗಿ ಸ್ಮೃತಿಯನ್ನು ನೋಡಿ ಕಣ್ತುಂಬಿಕೊಳ್ಳೋಣ ಅನ್ನೋರೇ ಹೆಚ್ಚು. ಸ್ಮೃತಿ ಸ್ಮೈಲ್‌ಗೆ ಪಡ್ಡೆ ಹುಡುಗರು ಕ್ಲೀನ್ ಬೋಲ್ಡ್ ಆಗಿದ್ದಾರೆ.
ಆರ್‌ಸಿ ಬಿ ಕ್ವೀನ್ ಮಂದಾನ
ನಿಮಗೆಲ್ಲಾ ಗೊತ್ತಿರೋ ಹಾಗೇ ವಿರಾಟ್ ಕೊಹ್ಲಿಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ. ಇನ್ನೂ ವುಮೆನ್ಸ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ರೇಂಜ್‌ಗೆ ಸೌಂಡ್ ಮಾಡ್ತಿರೋರು ಅಂದ್ರೆ ಸ್ಮೃತಿ ಮಂದಾನ ಒಬ್ಬರೇ. ಸ್ಮೃತಿ ಏನೇ ಮಾಡಿದ್ರು ಸುದ್ದಿಯಾಗುತ್ತೆ. ಸ್ಮೃತಿಯನ್ನು ನೋಡ್ಬೇಕು ಅನ್ನೋ ಕ್ರೇಜ್‌ಗೆ ಅಭಿಮಾನಿಗಳು ಮ್ಯಾಚ್‌ಗೆ ಹೋಗ್ತಾರೆ. ಇನ್ನೂ ಸ್ಮೃತಿಯನ್ನು WPL ನಲ್ಲಿ ಆರ್‌ಸಿಬಿ ಖರೀದಿಸಿದ್ದೇ ತಡ ಅಷ್ಟರಲ್ಲಾಗಲೇ ಕರ್ನಾಟಕದ ಜನತೆ ಸ್ಮೃತಿಗೆ ತಮ್ಮ ಹಾರ್ಟ್‌ನಲ್ಲಿ ಜಾಗ ರಿಸರ್ವ್ ಮಾಡ್ಬಿಟ್ರು. ಇನ್ನೇನಿದ್ರು ಸ್ಮೃತಿ ಹವಾ ಶುರು. ಆರ್‌ಸಿ ಬಿ ಸ್ಮೃತಿರನ್ನ ಖರೀದಿಸಿದಾಗಿನಿಂದ ನಮ್ಮ ಹುಡುಗ್ರು ಮೀಮ್ಸ್‌ನ ತುಂಬೆಲ್ಲಾ ಬರೀ ಸ್ಮೃತಿ ಜಪಾನೇ ಮಾಡ್ತಿದ್ದಾರೆ.
ಸಾಂಪ್ರದಾಯಿಕ ಉಡುಗೆಯಲ್ಲೂ ಮಂದಾನ ಮಿಂಚಿಂಗ್
26 ವರ್ಷದ ಎಡಗೈ ಆರಂಭಿಕ ಬ್ಯಾಟ್ಸ್‌ವುಮನ್ ಆಗಿರೋ ಸ್ಮೃತಿ ಮಂದಾನ ಸಾಂಪ್ರದಾಯಿಕ ಉಡುಗೆಯಲ್ಲೂ ತುಂಬಾನೇ ಸುಂದರವಾಗಿ ಕಾಣುತ್ತಾರೆ. ಮೇಕಪ್ ಕಡೆಗೆ ಅಷ್ಟೊಂದು ಗಮನ ಕೊಡದ ಸ್ಮೃತಿ ಸಿಂಪಲ್ ಮೇಕಪ್‌ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಾರೆ. ಇನ್ನೂ ಮುಂಬೈನವರಾದ ಸ್ಮೃತಿ ಮಂದನಾಗೆ ಬಾಲ್ಯದಿಂದಲೇ ಕ್ರಿಕೆಟ್ ಮೇಲೆ ಕ್ರೇಜ್ ಇದ್ದ ಕಾರಣ ತಂದೆ ಅವರ ಆಸೆಗೆ ಪ್ರೋತ್ಸಾಹ ನೀಡ್ತಾರೆ. ಇದೇ ಕಾರಣಕ್ಕೆ ಸ್ಮೃತಿ ಇಂದು ಕ್ರಿಕೆಟ್ ಲೋಕದಲ್ಲಿ ಮಿಂಚುತ್ತಿರೋದು. ಪುರುಷರ ತಂಡದಲ್ಲಿ ಆರ್‌ಸಿಬಿಗೆ ಕಪ್ ಗೆಲ್ಲೋ ಆಸೆ ಇದುವರೆಗೂ ಈಡೇರಿಲ್ಲ. ಆದ್ರೆ ಮಹಿಳೆಯರಾದ್ರು ಕಪ್ ತಂದುಕೊಡ್ತಾರಾ ಅನ್ನೋದೇ ಕುತೂಹಲ ಹುಟ್ಟಿಸಿದೆ.
ಸ್ಮೃತಿ ಮಂದಾನ ಡಯೇಟ್ ಪ್ಲಾನ್ ಹೇಗಿರುತ್ತೆ?
ಸ್ಪೋಟ್ಸ್‌ವುಮೆನ್ ಆಗಿರೋದ್ರಿಂದ ಖಂಡಿತ ವರ್ಕ್‌ಔಟ್ ಮಾಡ್ತಾರೆ. ಇನ್ನೂ ತಮ್ಮ ಫೇವರೇಟ್ ಕ್ರಿಕೆಟರ್ ಡಯೇಟ್ ಸೀಕ್ರೆಟ್ ಏನು? ಅವರು ಪ್ರತಿ ನಿತ್ಯ ಯಾವ ರೀತಿ ಆಹಾರಗಳನ್ನು ಸೇವಿಸ್ತಾರೆ ಅನ್ನೋ ಕ್ಯೂರಿಯಾಸಿಟಿ ಎಲ್ಲರಲ್ಲೂ ಇದ್ದೇ ಇರುತ್ತೆ. ಆ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
* ಸ್ಮೃತಿ ವರ್ಕ್‌ಔಟ್ ಮಾತ್ರ ಮಿಸ್ ಮಾಡೋದಿಲ್ಲ. ಪ್ರತಿನಿತ್ಯ ಜಿಮ್‌ನಲ್ಲಿ, ಗ್ರೌಂಡ್‌ನಲ್ಲಿ ವ್ಯಾಯಾಮ ಮಾಡ್ತಾರೆ.
* ಸ್ಮೃತಿ ಸಸ್ಯಹಾರಿಯಾಗಿದ್ದು ಬೆಳಗ್ಗೆ ಹಾಲು ಹಾಗೂ ಮೊಟ್ಟೆಯನ್ನು ಸೇವಿಸ್ತಾರೆ.
* ಸ್ಮೃತಿ ಮಾರ್ವಾರಿ ಕುಟುಂಬಕ್ಕೆ ಸೇರಿದ್ದು, ಇವರು ಸಸ್ಯಹಾರಿಯಾಗಿದ್ದಾರೆ. ಅವರ ಕೋಚ್‌ನ ಸಲಹೆಯ ನಂತರ ಮೊಟ್ಟೆ ತಿನ್ನಲು ಶುರು ಮಾಡಿದ್ದಾರಂತೆ.
* ಸ್ಮೃತಿ ಹೋಮ್‌ಮೇಡ್ ಫುಡ್‌ಗೆ ಒಗ್ಗಿಕೊಂಡಿದ್ದಾರಂತೆ. ಹೆಚ್ಚಾಗಿ ಅವರ ಅಮ್ಮನ ಕೈ ಅಡುಗೆಯನ್ನೇ ತಿನ್ನುತ್ತಾರೆ. ಹೊರಗಡೆಯ ಊಟವೆಂದರೆ ಸ್ಮೃತಿಗೆ ಕೊಂಚ ದೂರ.
* ಇತ್ತೀಚಿಗೆ ವೆಗನ್ ಫುಡ್ ಟ್ರೆಂಡ್ ಹೆಚ್ಚಾಗ್ತಿದೆ. ಸ್ಮೃತಿ ಮಂದಾನ ಕೂಡ ವೆಗನ್ ಆಹಾರ ಸೇವಿಸ್ತಾರಂತೆ.
* ಸ್ಮೃತಿ ಭಾರತೀಯ ಶೈಲಿಯ ಆಹಾರವನ್ನೇ ಹೆಚ್ಚು ಇಷ್ಟ ಪಡುತ್ತಾರೆ. ಅದರಲ್ಲೂ ಹಸಿರು ತರಕಾರಿ, ಸಲಾಡ್ ಅನ್ನು ಇಷ್ಟ ಪಟ್ಟು ತಿನ್ನುತ್ತಾರಂತೆ.
* ವರ್ಕ್‌ಔಟ್ ನಂತರ ಸ್ಮೃತಿ ಪ್ರೋಟಿನ್ ಶೇಕ್ ಸೇವಿಸ್ತಾರಂತೆ.
* ಸಾವಯಾವ ಗೊಬ್ಬರ ಬಳಸಿ ಬೆಳೆಸಿದ ದೇಸಿ ಆಹಾರವನ್ನು ತಿನ್ನಲು ಸ್ಮೃತಿ ಇಷ್ಟಪಡುತ್ತಾರಂತೆ.
* ಇನ್ನೂ ಮಹಾರಾಷ್ಟ್ರದಲ್ಲಿ ಫೇಮಸ್ ಆಗಿರೋ ಸಿಹಿ ಬೇಲ್ ಎಂದರೆ ಸ್ಮೃತಿಗೆ ಪಂಚಪ್ರಾಣ.
ಈ ಬಾರಿ ಆರ್‌ಸಿಬಿ ವುಮೆನ್ಸ್ ಟೀಮ್‌ನ ಸಾರಥ್ಯ ವಹಿಸಿರೋ ಸ್ಮೃತಿ ಮಂದಾನ ಮೇಲೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೇಯಂತೂ ಇದ್ದೇ ಇದೆ. ಈ ಬಾರಿಯ ಚೊಚ್ಚಲ ಪಂದ್ಯದಲ್ಲಿ ಚೊಚ್ಚಲ ಕಪ್‌ನ ನಿರೀಕ್ಷೇಯಲ್ಲಿ ಅಭಿಮಾನಿಗಳು ಕಾಯ್ತಿದ್ದಾರೆ. ಪುರುಷರ ತಂಡದಲ್ಲಿ ಆರ್‌ಸಿಬಿಗೆ ಕಪ್ ಗೆಲ್ಲೋ ಆಸೆ ಇದುವರೆಗೂ ಈಡೇರಿಲ್ಲ. ಆದ್ರೆ ಈ ಬಾರಿ ಮಹಿಳೆಯರಾದ್ರು ಕಪ್ ತಂದುಕೊಡ್ತಾರಾ ಅನ್ನೋದೇ ಕುತೂಹಲ ಹುಟ್ಟಿಸಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


