Latest Updates
-
ದೀಪಾವಳಿ ಹಬ್ಬದ ಡ್ರಾಮಾ ತಪ್ಪಿಸಿ: ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಪ್ಲಾನ್ ಮತ್ತು ಮೆಸೇಜ್ ಟಿಪ್ಸ್ -
ದೀಪಾವಳಿ ಪಾರ್ಟಿ ಜೋರಾಗಿದೆಯಾ? ₹30ರೊಳಗೆ ಸಿಗುವ 12 ಆರೋಗ್ಯಕರ ಹೈ-ಪ್ರೋಟೀನ್ ಸ್ನ್ಯಾಕ್ಸ್ ಇಲ್ಲಿದೆ! -
ಧನ್ತೇರಸ್ ಮುನ್ನವೇ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ: ಇಂದೇ ಖರೀದಿಸಬೇಕಾ ಅಥವಾ ನಾಳೆ ಕಾಯಬೇಕಾ? -
IND vs NZ 2nd ODI: ಪಂದ್ಯದ ದಿನ ಬೆಳಿಗ್ಗೆ ಫ್ರೆಶ್ ಆಗಿರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಎನ್ಆರ್ಐಗಳೇ ಎಚ್ಚರ! ವಿದೇಶಿ ವಿಚ್ಛೇದನ ಭಾರತದಲ್ಲಿ ಸಿಂಧುವಲ್ಲ: ದ್ವಿವಿವಾಹದ ಅಪಾಯ ತಪ್ಪಿಸಿಕೊಳ್ಳುವುದು ಹೇಗೆ? -
ದೀಪಾವಳಿ ಸಿಹಿ ಕೊಳ್ಳುವ ಮುನ್ನ ಎಚ್ಚರ! ಕಲಬರಕೆ ಪತ್ತೆ ಹಚ್ಚುವುದು ಹೇಗೆ? -
IND vs NZ 1st ODI: ಈಡನ್ ಪಾರ್ಕ್ನಲ್ಲಿ ಸಿಕ್ಸರ್ಗಳ ಸುರಿಮಳೆ, ಫ್ಯಾಂಟಸಿ ಟೀಮ್ಗೆ ಯಾರನ್ನು ಆರಿಸಬೇಕು? -
ದೆಹಲಿ-ಎನ್ಸಿಆರ್ನಲ್ಲಿ ತೀವ್ರ ವಾಯು ಮಾಲಿನ್ಯ: ನಿಮ್ಮ ಶ್ವಾಸಕೋಶವನ್ನು ರಕ್ಷಿಸಿಕೊಳ್ಳಲು ಇಲ್ಲಿದೆ ತ್ವರಿತ ಗೈಡ್ -
ದೆಹಲಿ ಮಾಲಿನ್ಯದ ಹೊಡೆತ: ಶ್ವಾಸಕೋಶದ ಆರೋಗ್ಯ ಕಾಪಾಡಲು ಇಂದೇ ನಿಮ್ಮ ಆಹಾರದಲ್ಲಿ ಈ ಬದಲಾವಣೆ ಮಾಡಿ! -
ಧನ್ತೇರಸ್ ಶಾಪಿಂಗ್: ಬಂಗಾರ ಖರೀದಿಸುವ ಮುನ್ನ ಈ 5 ವಿಷಯ ಮರೆಯದಿರಿ, ಇಲ್ಲವಾದರೆ ಮೋಸ ಹೋಗ್ತೀರಾ!
ಈ 9 ಬಗೆಯ ಆಹಾರಗಳು ಮೈಗ್ರೇನ್ ಹೆಚ್ಚಿಸುತ್ತೆ
ಮೈಗ್ರೇನ್ ಸಮಸ್ಯೆ ಇರುವವರು ತಿನ್ನುವ-ಕುಡಿಯುವ ಆಹಾರದ ಕಡೆ ತುಂಬಾನೇ ಗಮನ ನೀಡಬೇಕು. ನಿಮಗೆ ಸೇರದ ಒಂದು ಆಹಾರ ತಿಂದರೆ ಸಾಕು, ಆ ದಿನ ಪೂರ್ತಿ ತಲೆ ನೋವಿನಿಂದ ಬಳಲಬೇಕಾಗುತ್ತದೆ. ಕೆಲವರಿಗೆ ತಲೆನೋವಿನಿಂದ ವಾಂತಿ ಕೂಡ ಉಂಟಾಗುವುದು.
ಆದ್ದರಿಂದ ಮೈಗ್ರೇನ್ ಸಮಸ್ಯೆ ಇರುವವರು ಈ ಬಗೆಯ ಆಹಾರಗಳನ್ನು ದೂರ ಇಡಬೇಕು:

1. ಕೆಫೀನ್
ನೀವು ಕಾಫಿ ಹೆಚ್ಚಾಗಿ ಕುಡಿದರೆ ಅಥವಾ ಕೆಫೀನ್ ಇರುವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿದರೆ ತಲೆ ನೋವು ಹೆಚ್ಚಾಗುವುದು. ತಲೆನೋವು ಬಂದಾಗ ಕೆಲವರು ಟೀ ಅಥವಾ ಕಾಫಿ ಕುಡಿದರೆ ರಿಲೀಫ್ ಆಗುತ್ತದೆ ಎಂದು ಕುಡಿಯತ್ತಾರೆ, ಆದರೆ ಹೆಚ್ಚು ಟೀ-ಕಾಫಿ ಕುಡಿದಾಗ ಕೆಫೀನ್ ಅಂಶ ಹೆಚ್ಚಾಗಿ ತಲೆನೋವು ಉಂಟಾಗುವುದು.
ಕೆಫೀನ್ ಇರುವ ಪದಾರ್ಥಗಳು
* ಕಾಫಿ
* ಟೀ
* ಚಾಕೋಲೇಟ್

2. ಕೃತಕ ಸಿಹಿ
ಕೃತಕ ಸಿಹಿ ಸೇರಿಸಿ ತಯಾರಿಸಿದ ಸಿಹಿ ತಿಂಡಿಗಳನ್ನು ತಿನ್ನಬೇಡಿ. ಸಿಹಿ ತಿಂಡಿಗಳನ್ನು ತುಂಬಾ ತಿಂದರೆ ಮೈಗ್ರೇನ್ ತಲೆನೋವು ಹೆಚ್ಚಾಗುವುದು.

3. ಮದ್ಯಪಾನ
ಮದ್ಯಪಾನ ಕುಡಿದರೆ ತಲೆನೋವು ಉಂಟಾಗುವುದು ಅದರಲ್ಲೂ ಮೈಗ್ರೇನ್ ಇರುವವರು ಮದ್ಯಪಾನ ಮಾಡಿದರೆ ತಲೆನೋವು ಮತ್ತಷ್ಟು ಹೆಚ್ಚಾಗುವುದು. ರೆಡ್ವೈನ್ ಕೂಡ ಮೈಗ್ರೇನ್ ಹೆಚ್ಚಿಸುವುದು.

4. ಚಾಕೋಲೇಟ್
ಅಮೆರಿಕನ್ ಮೈಗ್ರೇನ್ ಫೌಂಡೇಷನ್ ಪ್ರಕಾರ ಮದ್ಯಪಾನದ ನಂತರ ಮೈಗ್ರೇನ್ ಹೆಚ್ಚಿಸುವ ಮತ್ತೊಂದು ಆಹಾರವೆಂದರೆ ಅದು ಚಾಕೋಲೇಟ್ ಎಂದು ಹೇಳಿದೆ. ಮೈಗ್ರೇನ್ ಸಮಸ್ಯೆಯಿದ್ದರೆ ಚಾಕೋಲೇಟ್ ತಿನ್ನಬೇಡಿ.

5. ಸಂಸ್ಕರಿಸಿದ ಮಾಂಸ
ಸಂಸ್ಕರಿಸಿದ ಮಾಂಸ, ಸಾಸೇಜ್ ಇವುಗಳಲ್ಲಿ ಪ್ರಿಸರ್ವೇಟಿವ್ ನೈಟ್ರೇಟ್ಸ್ ಇರುತ್ತದೆ. ಇಂಥ ಆಹಾರಗಳನ್ನು ತಿನ್ನುವುದರಿಮದ ಕೂಡ ಮೈಗ್ರೇನ್ ಹೆಚ್ಚುವುದು.

6. ಹಳೆಯ ಚೀಸ್
ಚೀಸ್ನಲ್ಲಿ tyramine ಎಂಬ ಅಂಶ ಇರುತ್ತದೆ, ಚೀಸ್ ಹಳೆಯದಾಗುತ್ತಿದ್ದಂತೆ ಪ್ರೊಟೀನ್ ಒಡೆಯುತ್ತದೆ. ಇಂಥ ಆಹಾರ ತಿಂದಾಗ ಅದು ಕುಡ ಮೈಗ್ರೇನ್ ಸಮಸ್ಯೆ ಹೆಚ್ಚಿಸುವುದು.

7. ಉಪ್ಪಿನಕಾಯಿ ಅಥವಾ ಹುದುಗು ಬರಿಸುವ ಆಹಾರ
ಮೈಗ್ರೇನ್ ಇರುವವರು ಹುದುಗು ಬರಿಸಿದ ಆಹಾರ ಸೇವಿಸಬೇಡಿ, ಉಪ್ಪಿನಕಾಯಿ ಬಳಸಬೇಡಿ. ಇವುಗಳನ್ನು ತಿಂದರೆ ಮೈಗ್ರೇನ್ ಹೆಚ್ಚುವುದು.

8. ತಣ್ಣನೆಯ ವಸ್ತುಗಳು
ಐಸ್ ಕ್ರೀಮ್ ತಿನ್ನುವುದು, ತಣ್ಣೆಯ ಜ್ಯೂಸ್ ಕುಡಿಯುವುದು ಇವೆಲ್ಲಾ ಮೈಗ್ರೇನ್ ಹೆಚ್ಚಲು ಕಾರಣವಾಗಿದೆ.

9. ಉಪ್ಪಿನ ಪದಾರ್ಥಗಳು
ತುಂಬಾ ಉಪ್ಪಿನಂಶವಿರುವ ಆಹಾರಗಳನ್ನು ತಿನ್ನಬೇಡಿ. ಸ್ನ್ಯಾಕ್ಸ್, ಪಾಪ್ಕಾರ್ನ್ ಇಂಥ ಆಹಾರಗಳನ್ನು ತಿನ್ನಬೇಡಿ.



Click it and Unblock the Notifications
