Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಈ 10 ಜ್ಯೂಸ್‌ಗಳು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
ನಮ್ಮ ದೇಹದಲ್ಲಿ ರೋಗ ನಿರೋಧಕ ಕಾರ್ಯ ವಿಧಾನವೂ ನಮ್ಮ ದೇಹಕ್ಕೆ ಯಾವ ಕಣಗಳು, ಯಾವುದು ಬೇಡ ಎಂದು ನಿರ್ಧರಿಸುತ್ತವೆ. ಅಂದರೆ ದೇಹಕ್ಕೆ ಹಾನಿಕಾರಕವಾದ ಕಣಗಳ ವಿರುದ್ಧ ಹೋರಾಟವನ್ನು ಮಾಡಿ ದೇಹದ ಆರೋಗ್ಯ ಕಾಪಾಡುತ್ತದೆ. ಆದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗಲು ದೇಹಕ್ಕೆ ವಿಟಮಿನ್ಸ್, ಖನಿಜಾಂಶಗಳು ಅವಶ್ಯಕವಾಗಿವೆ.

ಇಲ್ಲಿ ನಾವು ಕೆಲವೊಂದು ರೆಸಿಪಿಗಳನ್ನು ನೀಡಿದ್ದೇವೆ. ಇವುಗಳು ನಿಮ್ಮ ದೇಹದ ಆರೋಗ್ಯ ಹೆಚ್ಚಿಸುವುದರ ಜೊತೆಗೆ ಶೀತ, ಜ್ವರ ಬರದಂತೆ ದೇಹ ರಕ್ಷಣೆ ಮಾಡುತ್ತವೆ. ಬೇಸಿಗೆ ಎಂದ ಮೇಲೆ ಜ್ಯೂಸ್ ಕುಡಿಯಬೇಕು ಅನಿಸುವುದು. ಆಗ ಈ ಜ್ಯೂಸ್ ಮಾಡಿ ಸವಿಯಿರಿ, ಇದರಿಂದ ಆರೋಗ್ಯ ಹೆಚ್ಚುವುದು.

1. ಸೇಬು, ಕ್ಯಾರೆಟ್, ಕಿತ್ತಳೆ ಜ್ಯೂಸ್
ಕ್ಯಾರೆಟ್, ಸೇಬು, ಕಿತ್ತಳೆ ಮೂರು ಮಿಶ್ರ ಮಾಡಿ ಜ್ಯೂಸ್ ಮಾಡಿ ಕುಡಿಯುವುದರಿಂದ ದೇಹವು ಸೋಂಕಾಣುಗಳ ವಿರುದ್ಧ ಹೋರಾಡುವ ಸಾಮಾರ್ಥ್ಯ ಹೆಚ್ಚಿಸಿಕೊಳ್ಳುತ್ತದೆ. ಇದನ್ನು ಬೆಳಗ್ಗಿನ ಹೊತ್ತು ಮಾಡಿ ಕುಡಿಯಿರಿ.
ಇದರಲ್ಲಿರುವ ಪೋಷಕಾಂಶಗಳು
- ವಿಟಮಿನ್ ಎ, ಬಿ-6 ಮತ್ತು ಸಿ
- ಪೊಟಾಷ್ಯಿಯಂ
- ಫಾಲಿಕ್ ಆಮ್ಲ
- ವಿಟಮಿನ್ ಎ, ಬಿ-6 ತ್ತು
- ಫಾಲಿಕ್ ಆಮ್ಲ
- ಸತು
- ವಿಟಮಿನ್ ಎ ಮತ್ತು ಸಿ
- ಕಬ್ಬಿಣದಂಶ
- ಫೋಲೆಟ್
- ವಿಟಮಿನ್ ಎ ಮತ್ತು ಸಿ
- ಮೆಗ್ನಿಷ್ಯಿಯಂ
- ಪೊಟಾಷ್ಯಿಯಂ
- ಕಬ್ಬಿಣದಂಶ
- ಕೊಬ್ಬಿನ ಆಮ್ಲ
- ವಿಟಮಿನ್ ಎ, ಸಿ ಮತ್ತು ಇ
- ಕಬ್ಬಿಣದಂಶ
- ಕ್ಯಾಲ್ಸಿಯಂ
- ವಿಟಮಿನ್ ಎ, ಸಿ ಮತ್ತು ಇ
- ಕಬ್ಬಿಣದಂಶ'
- ಪೋಲೆಟ್
- ವಿಟಮಿನ್ ಎ, ಸಿ ಮತ್ತು ಬಿ-6
- ಮೆಗ್ನಿಷ್ಯಿಯಂ
- ಸತು
- ಫೋಲೆಟ್
- ವಿಟಮಿನ್ ಎ ಮತ್ತು ಸಿ
- ಮೆಗ್ನಿಷ್ಯಿಯಂ
- ಸತು
- ಮೂಳೆ ಆರೋಗ್ಯ ಹೆಚ್ಚುವುದು
- ಮೆನೋಪಾಸ್‌ನಲ್ಲಿ ಕಾಡುವ ಸಮಸ್ಯೆ ಕಡಿಮೆ ಮಾಡುವುದು
- ಮೂತ್ರ ಸೋಂಕು ತಡೆಗಟ್ಟುತ್ತದೆ
- ಕೂದಲು ಹಾಗೂ ತ್ವಚೆಯ ಆರೋಗ್ಯಕ್ಕೆ ಒಳ್ಳೆಯದು
- ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು
- ಪುರುಷರ ಪ್ರೋಸ್ಟೇಟ್ ಆರೋಗ್ಯ ಕಾಪಾಡುತ್ತದೆ.
- ವಿಟಮಿನ್ ಎ, ಸಿ ಮತ್ತು ಬಿ-6
- ಮೆಗ್ನಿಷ್ಯಿಯಂ
- ಸತು
- ವಿಟಮಿನ್ ಎ, ಸಿ ಮತ್ತು ಬಿ-6
- ಕಬ್ಬಿಣದಂಶ
- ಕ್ಯಾಲ್ಸಿಯಂ

2. ಕಿತ್ತಳೆ ಮತ್ತು ಗ್ರೇಪ್‌ಫ್ರೂಟ್
ವಿಟಮಿನ್ ಸಿ ಮತ್ತು ಆ್ಯಂಟಿಆಕ್ಸಿಡೆಂಟ್ ದೇಹವನ್ನು ಹಾನಿಕಾರಕ ಕಣಗಳಿಂದ ರಕ್ಷಣೆ ಮಾಡುತ್ತದೆ. ವಿಟಮಿನ್ ಸಿ ಕಡಿಮೆಯಾದರೆ ದೇಹದಲ್ಲಿ ಗಾಯ ಉಂಟಾದರೆ ಬೇಗ ಒಣಗುವುದಿಲ್ಲ ಅಲ್ಲದೆ ದೇಹ ಸೋಂಕಾಣುಗಳ ವಿರುದ್ಧ ಹೋರಾಡುವ ಸಾಮಾರ್ಥ್ಯ ಕಳೆದುಕೊಳ್ಳುವುದು.
ಆದರೆ ಈ ಕಾಂಬಿನೇಷನ್ ಜ್ಯೂಸ್ ಕುಡಿದರೆ ವಿಟಮಿನ್ ಸಿ ಕೊರತೆ ಉಂಟಾಗುವುದಿಲ್ಲ ಹಾಗೂ ದೇಹದಲ್ಲಿ ರೋಗ ನಿರೋಧಕ ಸಾಮಾರ್ಥ್ಯ ಹೆಚ್ಚುವುದು.
ಪೋಷಕಾಂಶಗಳು

3. ಮನೆಯಲ್ಲಿಯೇ ಮಾಡಿದ ಟೊಮೆಟೊ ಜ್ಯೂಸ್/ರಸ
ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಟೊಮೆಟೊ ಜ್ಯೂಸ್ ತುಂಬಾ ಪ್ರಯೋಜನಕಾರಿಯಾಗಿದೆ. ಈ ಟೊಮೆಟೊ ಜ್ಯೂಸ್ ಮಾಡುವ ವಿಧಾನ ಕೂಡ ಸುಲಭವಾಗಿದೆ. ತಾಜಾ ಟೊಮೆಟೊ ಹಣ್ಣು ಆಯ್ಕೆ ಮಾಡಿ ಅದನ್ನು ತೊಳೆದು, ಟೊಮೆಟೊದ ತೊಟ್ಟಿನ ತುದಿ ತೆಗೆಯಿರಿ, ಅದನ್ನು ಪ್ಯಾನ್‌ಗೆ ಹಾಕಿ ತುಂಬಾ ಕಡಿಮೆ ಉರಿಯಲ್ಲಿ 30 ನಿಮಿಷ ಬೇಯಿಸಿ, ನಂತರ ಮನೆಯಲ್ಲಿರುವ ಮಸಿಯುವ ಮರದ ಸಾಮಗ್ರಿಯಿಂದ ಚೆನ್ನಾಗಿ ಮಸಿಯಿರಿ, ನಂತರ ಅದನ್ನು ಕಾಯಿಸಿ ಒಗ್ಗರಣೆ ನೀಡಿ, ಸ್ವಲ್ಪ ಹೊತ್ತು ಕುದಿಸಿ ಅದನ್ನು ಕುಡಿಯಿರಿ.
ಇದರಲ್ಲಿರುವ ಪೋಷಕಾಂಶಗಳು

4. ಕಲೆ, ಟೊಮೆಟೊ, ಸೆಲರಿ
ದೇಹದಲ್ಲಿ ವಿಟಮಿನ್ ಎ ಕೊರತೆ ಉಂಟಾಗದಂತೆ ತಡೆಯಲು ಈ ಜ್ಯೂಸ್ ದಾರಾಳ ಸಾಕು. ಇವು ಮೂರನ್ನು ಟ್ಯೂಸ್ ಮಾಡಿ ಕುಡಿಯಬಹುದು.
ಪೋಷಕಾಂಶಗಳು

5, ಬೀಟ್‌ರೂಟ್, ಕ್ಯಾರೆಟ್, ಶುಂಠಿ ಮತ್ತು ಅರಿಶಿಣ
ಉರಿಯೂತದ ಸಮಸ್ಯೆ ಇರುವವರು ಈ ಜ್ಯೂಸ್ ಮಾಡಿ ಕುಡಿಯುವುದರಿಂದ ಉತ್ತಮ ಪ್ರಯೋಜನ ಪಡೆಯಬಹುದು. ರೋಗನಿರೋಧಕ ಶಕ್ತಿ ಕುಂದಿ ಸೋಂಕು ಉಂಟಾದರೆ ಉರಿಯೂತ ಉಂಟಾಗುವುದು. ಇದರಿಂದಾಗಿ ಜ್ವರ, ಕೆಮ್ಮು, ನೆಗಡಿ, ಮೈಕೈ ನೋವು ಮುಂತಾದ ಸಮಸ್ಯೆ ಉಂಟಾಗುವುದು.
ಸಂಧಿವಾತ ಇರುವವರು ಈ ಜ್ಯೂಸ್ ಕುಡಿಯುವುದು ಒಳ್ಳೆಯದು ಏಕೆಂದರೆ ಶುಂಠಿ ಹಾಗೂ ಅರಿಶಿಣ ಉರಿಯೂತದ ವಿರುದ್ಧ ಹೋರಾಡುತ್ತದೆ.
ಪೋಷಕಾಂಶಗಳು

6. ಸ್ಟ್ರಾಬೆರ್ರಿ ಮತ್ತು ಮಾವಿನಹಣ್ಣು
ಹುಳಿ ಮಿಶ್ರ ಸಿಹಿ ಇಷ್ಟ ಪಡುವವರಿಗೆ ಈ ಜ್ಯೂಸ್ ತುಂಬಾ ಇಷ್ಟವಾಗುವುದು, ತಣ್ಣನೆಯ ಸ್ಟ್ರಾಬೆರ್ರಿ ಹಾಗೂ ಮಾವಿನಹಣ್ಣು ತೆಗೆದು ಜ್ಯೂಸ್ ಮಾಡಿ ಕುಡಿಯಿರಿ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು, ಅದರಲ್ಲೂ ವಯಸ್ಸಾದವರು ಈ ಜ್ಯೂಸ್ ಕುಡಿಯುವ ಮೂಲಕ ಆರೋಗ್ಯ ಕಾಪಾಡಬಹುದು.
ಪೋಷಕಾಂಶಗಳು

7. ಸ್ಟ್ರಾಬೆರ್ರಿ, ಕಿವಿ, ಪುದೀನಾ
ವಿಟಮಿನ್ ಸಿ ಅಧಿಕವಿರುವ ಈ ಜ್ಯೂಸ್ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿ. ಸ್ಟ್ರಾಬೆರ್ರಿ, ಕಿವಿ ಬ್ಲೆಮಡ್ ಮಾಡಿ ಅದಕ್ಕೆ ಪುದೀನಾ ಹಾಕಿದರೆ ಸವಿಯಲು ರುಚಿಕರ ಹಾಗೂ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇದನ್ನು ತಯಾರಿಸುವಾಗ ಮೊಸರು ಬದಲಿಗೆ ಗ್ರೀಕ್ ಯೋಗರ್ಟ್ ಬಳಸಿದರೆ ರುಚಿಕರ.
ಪೋಷಕಾಂಶಗಳು

8. ಕಲ್ಲಂಗಡಿ ಜ್ಯೂಸ್
ಕಲ್ಲಂಗಡಿ ಜ್ಯೂಸ್ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಮಾತ್ರವಲ್ಲ, ಸ್ನಾಯುಗಳ ಊತವನ್ನು ಕೂಡ ಕಡಿಮೆ ಮಾಡುತ್ತದೆ. ವಯಸ್ಕರಲ್ಲಿ ಸ್ನಾಯುಗಳಲ್ಲಿ ಊತ, ನೋವು ಜ್ವರ ಲಕ್ಷಣವಾಗಿದೆ. ಇದರ ಜ್ಯೂಸ್ ಮಾಡುವ ವಿಧಾನ ಕೂಡ ಸುಲಭವಾಗಿದೆ.
ಪೋಷಕಾಂಶಗಳು

9. ಕುಂಬಳಕಾಯಿ ಬೀಜ
ಕುಂಬಳಕಾಯಿ ಬೀಜ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕುಂಬಳಕಾಯಿ ಬೀಜವನ್ನು ಹಾಲಿನಲ್ಲಿ ಹಾಕಿ ಬ್ಲೆಂಡ್ ಮಾಡಿ ಜ್ಯೂಸ್ ಮಾಡಿ ಕುಡಿಯಬಹುದು. ಇದನ್ನು ಸ್ಮೂತಿ ಮಾಡಿ ಕುಡಿದರೆ ಹೆಚ್ಚು ರುಚಿಕರ.
ಈ ಜ್ಯೂಸ್‌ನಿಂದ ದೊರೆಯುವ ಇತರ ಪ್ರಯೋಜನಗಳು
ಪೋಷಕಾಂಶಗಳು

10. ಪಾಲಾಕ್, ಲೆಟ್ಯೂಸೆ ಮತ್ತು ಕಳೆ
ಇವುಗಳ ಜ್ಯೂಸ್ ಕೂಡ ರೋಗ ನಿರೋಧಕ ಶಕ್ತಿ ಹೆಚ್ಚು ಮಾಡುವಲ್ಲಿ ತುಂಬಾ ಸಹಕಾರಿ. ಈ ಜ್ಯೂಸ್ ಮಕ್ಕಳಿಗೆ ಕೂಡ ಇಷ್ಟವಾಗುವುದು.
2 ಸಾಧಾರಣ ಗಾತ್ರ ಕಳೆ ಸೊಪ್ಪು. 1 ಕಪ್ ಪಾಲಾಕ್, ಅರ್ಧ ಸೌತೆಕಾಯಿ, ಸ್ವಲ್ಪ ಶುಂಠಿ, ಲೆಟ್ಯೂಸೆ ಹಾಕಿ ಮಿಕ್ಸಿಯಲ್ಲಿ ರುಬ್ಬಿ, ಸೋಸಿ, ನಂತರ ನಿಂಬೆರಸ ಹಿಂಡಿ ಕುಡಿಯಬಹುದು.
ಪೋಷಕಾಂಶಗಳು
ಇದರ ಜೊತೆಗೆ ವ್ಯಾಯಾಮ,ಸಮತೋಲಿನ ಆಹಾರಕ್ರಮ ಪಾಲಿಸಿದರೆ ಅನೇಕ ರೋಗಗಳು ಬರದಂತೆ ತಡೆಗಟ್ಟಬಹುದು. ಹೆಚ್ಚಿನ ನಮ್ಮ ಜೀವನಶೈಲಿಯಿಂದಾಗಿ ಬರುತ್ತವೆ, ಆದ್ದರಿಂದ ಜೀವನಶೈಲಿ ಆರೋಗ್ಯಕರವಾಗಿದ್ದರೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ಹೆಚ್ಚುವುದು.



Click it and Unblock the Notifications