Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ರಕ್ತದಾನಕ್ಕೆ ಮುನ್ನ ಹಾಗೂ ನಂತರ ತಿನ್ನಬೇಕಾದ 5 ಆಹಾರಗಳು
ಜೂನ್ 14 ವಿಶ್ವ ರಕ್ತದಾನಿಗಳ ದಿನ. ಹಸಿದವರ ಹೊಟ್ಟೆ ತುಂಬಿಸುವುದು ಎಷ್ಟು ಪುಣ್ಯಕಾರ್ಯವೋ ಅದಕ್ಕಿಂತ ದೊಡ್ಡದು ಒಬ್ಬ ವ್ಯಕ್ತಿಗೆ ರಕ್ತ ದಾನ ಮಾಡುವುದರ ಮುಖಾಂತರ ಜೀವ ನೀಡುವುದು.

ಒಬ್ಬ ವ್ಯಕ್ತಿ ರಕ್ತ ನೀಡುವುದರಿಂದ ಅವನಿಗೆ ಏನೂ ತೊಂದರೆಯುಂಟಾಗುವುದಿಲ್ಲ, ಬದಲಿಗೆ ಆ ವ್ಯಕ್ತಿ ಮತ್ತಷ್ಟು ಆರೋಗ್ಯವಂತರಾಗುತ್ತಾರೆ. ಇನ್ನು ಆ ವ್ಯಕ್ತಿಯಿಂದ ರಕ್ತ ಪಡೆದ ವ್ಯಕ್ತಿಗೆ ಮರುಜನ್ಮ ನೀಡಿದಂತಾಗುವುದು. ರಕ್ತದಾನ ಮಾಡುವುದರ ಬಗ್ಗೆ ಜನರಿಗೆ ಎಷ್ಟೇ ಅರಿವು ಮೂಡಿಸಿದರೂ ಜನರಲ್ಲಿ ಇದರ ಬಗ್ಗೆ ಒಂದು ಆತಂಕ ಅಂತೂ ಇದ್ದೇ ಇದೆ. ಎಲ್ಲಿ ರಕ್ತ ಕೊಟ್ಟರೆ ನಮಗೆ ರಕ್ತ ಕಡಿಮೆಯಾಗಬಹುದೋ ಎಂಬ ಭಯ ಕೆಲವರಲ್ಲಿದೆ.
ಆದರೆ ರಕ್ತದಾನ ಮಾಡುವುದರಿಂದ ನಮ್ಮ ದೇಹದಲ್ಲಿ ರಕ್ತ ಕಡಿಮೆಯಾಗುವುದಿಲ್ಲ, ದೇಹದಿಂದ ತೆಗೆದ 24 ಗಂಟೆಗಳಲ್ಲಿ ಪ್ಲಾಸ್ಮಾ ಮರುಉತ್ಪತ್ತಿಯಾಗುತ್ತದೆ. ಇನ್ನು ರಕ್ತ ಕಣಗಳ ಉತ್ಪತ್ತಿಗೆ 6 ವಾರಗಳು ಬೇಕಾಗುವುದು. ಆದ್ದರಿಂದ ಒಮ್ಮೆ ರಕ್ತದಾನ ಮಾಡಿದ ಬಳಿಕ 56 ದಿನಗಳ ಬಳಿಕ ಮತ್ತೆ ಬೇಕಾದರೂ ರಕ್ತ ನೀಡಬಹುದು.
ಇನ್ನು ಪ್ಲಾಸ್ಮಾ ದಾನಿಗಳು ವರ್ಷದಲ್ಲಿ 24 ಬಾರಿ ಬೇಕಾದರೂ ದಾನ ಮಾಡಬಹುದು. ಈ ರಕ್ತ ಅಥವಾ ಪ್ಲಾಸ್ಮಾ ದಾನ ಮಾಡುವವರು ಆರೋಗ್ಯ ಉತ್ತಮವಾಗಿರಬೇಕು ಹಾಗೂ ರಕ್ತದಾನಕ್ಕಿಂತ ಮೊದಲು ಹಾಗೂ ನಂತರ ಕೆಲವೊಂದ ಆಹಾರಗಳನ್ನು ಸೇವಿಸಬೇಕು.
ಇಲ್ಲಿ ನಾವು ನೀವು ರಕ್ತದಾನಕ್ಕೆ ಮೊದಲು ಹಾಗೂ ನಂತರ ಯಾವ 5 ಆಹಾರಗಳನ್ನು ಸೇವಿಸಬೇಕೆಂದು ಹೇಳಿದ್ದೇವೆ ನೋಡಿ:

1. ನೀರು
ನಿಮ್ಮ ದೇಹದಲ್ಲಿ ಕಬ್ಬಿಣದಂಶ ಹೆಚ್ಚು ಮಾಡುವುದರಲ್ಲಿ ನೀರಿನ ಪಾತ್ರ ಏನೂ ಇಲ್ಲ, ಆದರೆ ರಕ್ತದಾನಕ್ಕೆ ಮುಂಚೆ ನೀರು ಕುಡಿಯುವುದು ಅಷ್ಟೇ ಮುಖ್ಯ. ದೇಹದಲ್ಲಿ ನೀರಿನಂಶ ಕಾಪಾಡಲು ನೀರು ಮುಖ್ಯ, ಅಲ್ಲದೆ ನೀರು ಕುಡಿಯುವುದರಿಂದ ರಕ್ತದಾನದ ಬಳಿಕ ಆರಾಮವಾಗಿ ಇರುವಿರಿ.

2. ತೆಳು ಕೆಂಪು ಮಾಂಸ
ಕೆಂಪು ಮಾಂಸವನ್ನು ಮಿತವಾಗಿ ತಿನ್ನುವುದು ಒಳ್ಳೆಯದು. ರಕ್ತದಾನಕ್ಕೆ ಮುಂಚೆ ಒಂದು ಸ್ಟೀಕ್ ಮಾಂಸ ಬಾಯಲ್ಲಿ ಹಾಕಿ ಸವಿಯಬಹುದು. 100 ಗ್ರಾಂ ಕೆಂಪು ಮಾಂಸದಲ್ಲಿ 2.4 ಮಿ.ಗ್ರಾಂ ಕಬ್ಬಿಣದಂಶವಿರುತ್ತದೆ. ಇದು ರಕ್ತದ ಕೆಂಪು ಬಣ್ಣ ಹೆಚ್ಚಿಸುವಲ್ಲಿ ಸಹಕಾರಿ.

3. ಧಾನ್ಯಗಳು
ಕೆಂಪು ಮಾಂಸ ತಿನ್ನದಿರುವುದು ಧಾನ್ಯಗಳನ್ನು ತಿನ್ನಬಹುದು. ಇದರಲ್ಲಿ ಕೂಡ ಕಬ್ಬಿಣದಂಶ ಅಧಿಕವಿರುತ್ತದೆ. ಕಬ್ಬಿಣದಂಶದ ಜೊತೆಗೆ ಇತರ ಪೋಷಕಾಂಶಗಳು ದೊರೆಯುತ್ತದೆ. ಧಾನ್ಯಗಳನ್ನು ಮೊಳಕೆ ಬರಿಸಿ ತಿಂದರೆ ಮತ್ತಷ್ಟು ಒಳ್ಳೆಯದು.

4. ಪಾಲಾಕ್
ಇನ್ನು ರಕ್ತದಾನಕ್ಕೆ ಮುಂಚೆ ಪಾಲಾಕ್ ತಿನ್ನಿ. ಇದನ್ನು ಪಲ್ಯ ಅಥವಾ ಸ್ಮೂತಿ ಮಾಡಿ ಸೇವಿಸಬಹುದು. ಇದು ದೇಹದಲ್ಲಿ ನೀರಿನಂಶ ಕಾಪಾಡುವಲ್ಲಿ ಕೂಡ ತುಂಬಾನೇ ಸಹಕಾರಿ.

5. ಕಲ್ಲಂಗಡಿ ಹಣ್ಣು
ನೀರು ಕುಡಿಯಲು ಇಷ್ಟವಿಲ್ಲವೆಂದರೆ ಅದಕ್ಕೆ ಬದಲಾಗಿ ಕಲ್ಲಂಗಡಿ ಹಣ್ಣು ಜ್ಯೂಸ್ ಕುಡಿಯಿರಿ. ಇನ್ನು ಸ್ಟ್ರಾಬೆರ್ರಿ ಕೂಡ ತಿನ್ನಬಹುದು. ರಕ್ತದಾನ ಮಾಡುವ ಇವುಗಳನ್ನು ತಿಂದು ರಕ್ತದಾನ ಮಾಡಲು ಹೇಳಿ.

ನೀವು ರಕ್ತದಾನ ಮಾಡಿರುವುದರಿಂದ 3 ಜನಕ್ಕೆ ಜೀವದಾನ ಮಾಡಿದ್ದೀರಿ. ಈಗ ನಿಮ್ಮ ಆರೋಗ್ಯದ ಕಾಳಜಿಗೆ ಈ ಆಹಾರಗಳನ್ನು ತಿನ್ನಿ:
1. ಜ್ಯೂಸ್
ನೀರು ಹಾಗೂ ಜ್ಯೂಸ್ ಕುಡಿಯಬೇಕು. ರಕ್ತದಾನ ಮಾಡಿದ ಬಳಿಕ ಎಳನೀರು ಅಥವಾ ತಾಜಾ ಹಣ್ಣಿನ ಜ್ಯೂಸ್ ಕುಡಿಯಿರಿ. ನಿಮಗೆ ಇಷ್ಟವಾದ ಯಾವುದೇ ಹಣ್ಣಿನ ಜ್ಯೂಸ್ ಕುಡಿಯಬಹುದು. ಸೇಬು ಹಾಗೂ ಕಿತ್ತಳೆಯ ಜ್ಯೂಸ್ ಕುಡಿವುದು ಒಳ್ಳೆಯದು.

2. ಕುಕ್ಕೀಸ್
ಯಾವ ಕುಕ್ಕೀಸ್ ಬೇಕಾದರೂ ಸವಿಯಬಹುದು, ಆದರೆ ಡ್ರೈ ಫ್ರೂಟ್ಸ್‌ನಿಂದ ಮಾಡಿದ ಕುಕ್ಕೀಸ್ ಆದರೆ ತುಂಬಾನೇ ಒಳ್ಳೆಯದು, ರಕ್ತದಾನದ ಬಳಿಕ ಇದನ್ನು ಸವಿಯಿರಿ, ಇದರಲ್ಲಿ ಸಕ್ಕರೆಯಂಶ ಇರುವುದರಿಂದ ಗ್ಲೂಕೋಸ್ ಹೆಚ್ಚಾಗಿ ಸುಸ್ತು ಕಡಿಮೆಯಾಗುವುದು.

3. ಬೆಣ್ಣೆಹಣ್ಣು
ರಕ್ತದಾನದ ಬಳಿಕ ಬೆಣ್ಣೆ ಹಣ್ಣು ತಿನ್ನಿ. ಇದರಲ್ಲಿರುವ ಒಮೆಗಾ 3 ಕೊಬ್ಬಿನಂಶ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದನ್ನು ಹಾಗೇ ತಿನ್ನಬಹುದು ಅಥವಾ ಜ್ಯೂಸ್ ಅಥವಾ ಮಿಲ್ಕ್ ಶೇಕ್ ಮಾಡಿ ತಿನ್ನಬಹುದು.

4. ಮಾಕ್‌ಟೇಲ್
ನೀವು ರಕ್ತದಾನ ಮಾಡುವ ಮುನ್ನ ಮಾತ್ರವಲ್ಲ, ಮಾಡಿದ ಬಳಿಕ ಕೂಡ 24 ಗಂಟೆಗಳವರೆಗೆ ಮದ್ಯಪಾನ ಮಾಡಬಾರದು. ಈ ಸಮಯದಲ್ಲಿ ನೀವು ಮಾಕ್‌ಟೇಲ್ ಮಾಡಿ ಕುಡಿಯಬಹುದು. ಹೀಗೆ ಮಾಡುವುದರಿಂದ ಖುಷಿಯೂ ಉಂಟಾಗುವುದು.

5. ನಟ್ಸ್
ರಕ್ತ ದಾನದ ಬಳಿಕ ನಟ್ಸ್, ಕಡಲೆ ಮುಂತಾದವುಗಳನ್ನು ಸವಿಯುವುದು ಒಳ್ಳೆಯದು. ಇನ್ನು ಡ್ರೈಫ್ರೂಟ್ಸ್ ಕೂಡ ಸವಿಯಬಹುದು. ಇವೆಲ್ಲಾ ದೇಹದಲ್ಲಿ ರಕ್ತ ಮರು ಉತ್ಪತ್ತಿಯಾಗಲೂ ತುಂಬಾನೇ ಸಹಕಾರಿ.
ರಕ್ತದಾನದ ಬಗ್ಗೆ ಆತಂಕ ಬೇಡ, ನಿಮ್ಮ ರಕ್ತದಾನವೂ ಕನಿಷ್ಠ ಮೂರು ವ್ಯಕ್ತಿಗೆ ಜೀವದಾನ ಎಂಬ ಹೆಮ್ಮೆ ನಿಮ್ಮದಾಗಿರಲಿ.



Click it and Unblock the Notifications
