Latest Updates
-
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ
ಪುರುಷರೇ, ನಿಮ್ಮ ಆಹಾರದಲ್ಲಿರಲಿ ಟೊಮೆಟೊ, ಇದು ತಡೆಗಟ್ಟುತ್ತೆ ಪ್ರಾಸ್ಟೇಟ್ ಕ್ಯಾನ್ಸರ್
ಪ್ರಾಸ್ಟೇಟ್ ಕ್ಯಾನ್ಸರ್ ಇದು ಒಂದು ರೀತಿಯ ಸೈಲೆಂಟ್ ಕಿಲ್ಲರ್ ಆಗಿದೆ. ಕೆಲ ಪುರುಷರಿಗೆ ವಯಸ್ಸಾಗುತ್ತಿದ್ದಂತೆ ಈ ಕ್ಯಾನ್ಸರ್ ಉಂಟಾಗುವುದು. ಪ್ರಾರಂಭದ ಹಂತದಲ್ಲಿ ಈ ಕ್ಯಾನ್ಸರ್‌ನ ಲಕ್ಷಣಗಳೇ ಗೊತ್ತಾಗುವುದಿಲ್ಲ. ಆದ್ದರಿಂದ ಇದು ಸೈಲೆಂಟ್ ಕಿಲ್ಲರ್ ಆಗಿದೆ. ಎಷ್ಟೋ ಜನರಿಗೆ ಕೊನೆಯ ಹಂತದಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಇದೆ ಎಂದು ತಿಳಿದು ಬರುವುದು. ಆಗ ಚಿಕಿತ್ಸೆ ಮಾಡಿದರೂ ಫಲಕಾರಿಯಾಗುವುದು ಕಷ್ಟ. ಹೀಗಾಗಿ ವ್ಯಕ್ತಿ ಸಾವನ್ನಪ್ಪುತ್ತಾರೆ.
ಪ್ರಾಸ್ಟೇಟ್ ಕ್ಯಾನ್ಸರ್ ಅನ್ನು ಆರೋಗ್ಯಕರ ಜೀವನಶೈಲಿ ಹಾಗೂ ಆಹಾರಶೈಲಿಯಿಂದಾಗಿ ತಡೆಗಟ್ಟಬಹುದಾಗಿದೆ. ಪ್ರಾಸ್ಟೇಟ್ ಕ್ಯಾನ್ಸರ್ ತಡೆಗಟ್ಟಲು ನಿಮ್ಮ ಆಹಾರಕ್ರಮದಲ್ಲಿ ಟೊಮೆಟೊ ಸೇರಿಸಿದರೆ ಒಳ್ಳೆಯದು ಎಂಬ ಅಂಶ ತಿಳಿದು ಬಂದಿದೆ.
ಟೊಮೆಟೊ ಪ್ರಾಸ್ಟೇಟ್ ಕ್ಯಾನ್ಸರ್ ತಡೆಗಟ್ಟುವಲ್ಲಿ ಹೇಗೆ ಸಹಕಾರಿ? ಪ್ರಾಸ್ಟೇಟ್ ಕ್ಯಾನ್ಸರ್ ತಡೆಗಟ್ಟಲು ಎಷ್ಟು ಟೊಮೆಟೊ ತಿನ್ನಬೇಕು ಎಂಬೆಲ್ಲಾ ಮಾಹಿತಿ ಈ ಲೇಖನದಲ್ಲಿದೆ ನೋಡಿ:

ಟೊಮೆಟೊದಲ್ಲಿರುವ ಪೋಷಕಾಂಶಗಳು ಪ್ರಾಸ್ಟೇಟ್ ಕ್ಯಾನ್ಸರ್ ತಡೆಗಟ್ಟುತ್ತೆ
ಟೊಮೆಟೊದಲ್ಲಿ ವಿಟಮಿನ್ ಸಿ, ಕೆ, ಫೋಲೇಟ್ ಹಾಗೂ ಪೊಟಾಷ್ಯಿಯಂ ಅಂಶವಿದೆ. ಹೊಸ ಅಧ್ಯಯನದ ಪ್ರಕಾರ ಈ ಎಲ್ಲಾ ಪೋಷಕಾಂಶಗಳು ಪ್ರಾಸ್ಟೇಟ್ ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ ಎಂದು ತಿಳಿದು ಬಂದಿದೆ. 'Cancer Epidemiology Biomarkers and Prevention' ಎಂಬ ಜರ್ನಲ್‌ನಲ್ಲಿ ಪ್ರಕಟವಾದ ವರದಿಯಲ್ಲಿ ಟೊಮೆಟೊ ಕ್ಯಾನ್ಸರ್ ತಡೆಗಟ್ಟಲು ಪರಿಣಾಮಕಾರಿ ಎಂದು ಹೇಳಿದೆ.

ಟೊಮೆಟೊವನ್ನು ಎಷ್ಟು ಸೇವಿಸಬೇಕು?
ಪುರುಷರು ತಿನ್ನುವ ಆಹಾರದಲ್ಲಿ ವಾರದಲ್ಲಿ 10 ಟೊಮೆಟೊ ಸೇರಿಸಿದರೆ ಅಂದ್ರೆ ದಿನದಲ್ಲಿ ಒಂದರಿಂದ -ಎರಡು ಟೊಮೆಟೊ ತಿನ್ನುವುದರಿಂದ ಪ್ರಾಸ್ಟೇಟ್ ಕ್ಯಾನ್ಸರ್ ತಡೆಗಟ್ಟಬಹುದು. ಟೊಮೆಟೊದಲ್ಲಿರುವ ಕಶ್ಮಲಗಳನ್ನು ಹೊರಹಾಕುತ್ತೆ ಹಾಗೂ ಜೀವ ಕಣಗಳಿಗೆ ಹಾನಿಯುಂಟಾಗುವುದನ್ನು ತಡೆಗಟ್ಟುತ್ತೆ.

ಪ್ರಾಸ್ಟೇಟ್ ಕ್ಯಾನ್ಸರ್ ಲಕ್ಷಣಗಳು
ಸಾಮಾನ್ಯವಾಗಿ 60 ವರ್ಷ ಮೇಲ್ಪಟ್ಟ ಪುರುಷರಲ್ಲಿ ಈ ರೀತಿಯ ಸಮಸ್ಯೆ ಕಂಡು ಬರುತ್ತದೆ. ಪ್ರಾಸ್ಟೇಟ್ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳನ್ನು ಕೆಲವರು ನಿರ್ಲಕ್ಷ್ಯ ಮಾಡುವುದರಿಂದ ಅದು ಗಂಭೀರ ಹಂತ ತಲುಪಿದಾಗ ತಿಳಿಯುವಂತಾಗುವುದು. ಪ್ರಾಸ್ಟೇಟ್ ಕ್ಯಾನ್ಸರ್ ತಡೆಗಟ್ಟಲು ಪುರುಷರು ಈ ಲಕ್ಷಣಗಳನ್ನು ತಡೆಗಟ್ಟಬಾರದು.
* ಮೂತ್ರ ವಿಸರ್ಜನೆ ವೇಳೆ ನೋವು
* ಮೂತ್ರ ಸರಾಗವಾಗಿ ಹೋಗಲು ಕಷ್ವವಾದಾಗ
* ರಾತ್ರಿ ವೇಳೆ ಪದೇ ಪದೆ ಮೂತ್ರ ವಿಸರ್ಜನೆ
* ಮೂತ್ರದಲ್ಲಿ ರಕ್ತ
* ಲೈಂಗಿಕ ಕ್ರಿಯೆ ವೇಳೆ ನೋವು
* ಉರಿಮೂತ್ರ
* ಬಾಯಲ್ಲಿ ಹುಣ್ಣುಗಳು ಉಂಟಾಗುವುದು
* ಮಲದಲ್ಲಿ ರಕ್ತ
ಇವೆಲ್ಲಾ ಕಂಡು ಬಂದರೆ ನಿರ್ಲಕ್ಷ್ಯ ಮಾಡದೆ ಕೂಡಲೇ ವೈದ್ಯರಿಗೆ ತೋರಿಸಿ ನಿಮ್ಮ ಆರೋಗ್ಯದ ಸ್ಥಿತಿ ತೆಗೆದುಕೊಳ್ಳಿ.

ಪ್ರಾಸ್ಟೇಟ್ ಕ್ಯಾನ್ಸರ್ ತಡೆಗಟ್ಟಲು ಕೆಲ ಮನ್ನೆಚ್ಚರಿಕೆಗಳು
* ವ್ಯಾಯಾಮ ಮಾಡುವುದು ಹಾಗೂ ಆರೋಗ್ಯಕರ ಜೀವನಶೈಲಿ
* ಆರೋಗ್ಯಕರ ಆಹಾರಶೈಲಿ
* ರಕ್ತ ಪರೀಕ್ಷೆ ಮಾಡಿಸುವುದು
ಕೊನೆಯದಾಗಿ: ಪ್ರಾಸ್ಟೇಟ್ ಕುರಿತು ನಡೆಸಿದ ಅಧ್ಯಯನದಲ್ಲಿ ಟೊಮೆಟೊ ಪ್ರಾಸ್ಟೇಟ್ ಕ್ಯಾನ್ಸರ್ ತಡೆಗಟ್ಟಲು ಸಹಕಾರಿ ಎಂಬುವುದು ತಿಳಿದು ಬಂದಿದೆ, ಇದರ ಕುರಿತು ಇನ್ನೂ ಅನೇಕ ಸಂಶೋಧನೆಗಳು ನಡೆಯಬೇಕಾಗಿದೆ.
ಟೊಮೆಟೊದಲ್ಲಿ ಇನ್ನಿತರ ಆರೋಗ್ಯಕರ ಗುಣಗಳಿರುವುದರಿಂದ ನಿಮ್ಮ ದಿನನಿತ್ಯದ ಆಹಾರ ಕ್ರಮದಲ್ಲಿ ಟೊಮೆಟೊ ಸೇರಿಸುವುದರಿಂದ ಅನೇಕ ಗುಣಗಳನ್ನು ಪಡೆಯಬಹುದು. ಇದರಲ್ಲಿ ವಿಟಮಿನ್ ಸಿ, ಲೈಕೋಪೆನೆ ಇರುವುದರಿಂದ ರೋಗ ನಿರೋಧಕ ಶಕ್ತಿ ಕೂಡ ವೃದ್ಧಿಸುವುದು.



Click it and Unblock the Notifications
