Latest Updates
-
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ!
ಈ ತಪ್ಪುಗಳನ್ನು ಮಾಡಿದರೆ ಯೋಗ ಮಾಡಿಯೂ ಪ್ರಯೋಜನವಿಲ್ಲ
ದಿನಾ ಯೋಗ ಮಾಡುವುದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ಹೆಚ್ಚುವುದು. ಆದರೆ ಯೋಗ ಮಾಡುವಾಗ ಸರಿಯಾದ ರೀತಿಯಲ್ಲಿ ಮಾಡಿದರೆ ಮಾತ್ರ ಪ್ರಯೋಜನ ಪಡೆಯಲು ಸಾಧ್ಯ. ಇಲ್ಲದಿದ್ದರೆ ನೀವು ಯೋಗ ಮಾಡಿಯೂ ಪ್ರಯೋಜವಿಲ್ಲ.
ಯೋಗ ಅಭ್ಯಾಸ ಮಾಡುವಾಗ ಈ ತಪ್ಪಗಳನ್ನು ಮಾಡಲೇಬೇಡಿ

ಸೂಕ್ತ ಬಟ್ಟೆ ಧರಿಸದಿರುವುದು
ನೀವು ಯೋಗ ಅಭ್ಯಾಸ ಮಾಡುವಾಗ ಮೊದಲು ಬಟ್ಟೆಯ ಕಡೆ ಗಮನ ನೀಡಬೇಕು. ತುಂಬಾ ಬಿಗಿಯಾದ ಅಥವಾ ತುಂಬಾ ಸಡಿಲವಾದ ಬಟ್ಟೆಯನ್ನು ಧರಿಸಬಾರದು. ಸ್ಟ್ರೆಚಬಲ್ ಬಟ್ಟೆ ಧರಿಸಿ ಅಥವಾ ಕಾಟನ್ ಬಟ್ಟೆ ಧರಿಸಿ. ನೀವು ಯೋಗ ಭಂಗಿಗಳನ್ನು ಮಾಡುವಾಗ ಬಟ್ಟೆ ಅಡಚಣೆ ಉಂಟು ಮಾಡುವಂತಿರಬಾರದು.

ಗುಣಮಟ್ಟವಲ್ಲದ ಹಾಗೂ ಕೊಳೆಯಾದ ಯೋಗಾ ಮ್ಯಾಟ್
ನೀವು ಮ್ಯಾಟ್‌ನಲ್ಲಿ ಯೋಗ ಮಾಡುವುದರಿಂದ ಅದರ ಗುಣಮಟ್ಟ ಹಾಗೂ ಶುದ್ಧತೆ ಎರಡೂ ಮುಖ್ಯವಾಗುತ್ತದೆ. ಯೋಗ ಮ್ಯಾಟ್ ಒಳ್ಳೆಯ ಗ್ರಿಪ್ (ಹಿಡಿತವಿರಬೇಕು). ಕಡಿಮೆ ಗುಣಮಟ್ಟದ ಮ್ಯಾಟ್ ಬಳಸಿದರೆ ಜಾರಬಹುದು. ಇನ್ನು ಯೋಗಾ ಮ್ಯಾಟ್ ಸ್ವಚ್ಛವಾಗಿರಬೇಕು. ಅದರಲ್ಲಿ ಬೆವರು, ಕೊಳೆಯ ಅಂಶವಿದ್ದರೆ ಆರೋಗ್ಯಕ್ಕೆ ಹಾನಿ, ಸ್ವಚ್ಛವಾಗಿಡಿ.

ಅಗ್ಯತಬಿದ್ದರೆ ವಸ್ತುಗಳನ್ನು ಬಳಸಿ
ಎಲ್ಲರ ದೇಹ ಒಂದೇ ರೀತಿ ಇರುವುದಿಲ್ಲ. ಕೆಲವರಿಗೆ ವಜ್ರಾಸನ ಹಾಗೇ ಕೂಡಬಹುದು, ಅದೇ ಮಂಡಿ ನೋವು ಇರುವವರು ಆ ಭಂಗಿಯಲ್ಲಿ ಕೂರುವಾಗ ಮ್ಯಾಟ್ ರೋಲ್ ಮಾಡಿ ಕೂರಬೇಕು, ಹೀಗೆ ನಿಮ್ಮ ದೇಹದ ಸ್ಥಿತಿ ಬಗ್ಗೆ ನಿಮಗೆ ಮೊದಲು ತಿಳಿದಿರಬೇಕು. ಅಗ್ಯತಬಿದ್ದರೆ ಗೋಡೆ, ದಿಂಬು ಇವುಗಳ ಸಹಾಯದಿಂದ ಯೋಗಾ ಭಂಗಿಗಳನ್ನು ಅಭ್ಯಾಸ ಮಾಡಿ.

ತಿಂದ ಮೇಲೆ ಅಥವಾ ಖಾಲಿ ಹೊಟ್ಟೆಯಲ್ಲಿ ಯೋಗ ಮಾಡಬಹುದು
ಹೊಟ್ಟೆತುಂಬುವಂತೆ ತಿಂದು ಯೋಗ ಮಾಡಲೇಬಾರದು. ಅದೇ ರೀತಿ ಖಾಲಿ ಹೊಟ್ಟೆಯಲ್ಲೂ ಮಾಡಬಾರದು. ಯೋಗ ಅಭ್ಯಾಸ ಮಾಡುವ ಸ್ವಲ್ಪ ಡ್ರೈ ಫ್ರೂಟ್ಸ್ ತಿನ್ನಿ. ಇನ್ನು ಯೋಗ ಮಾಡುವ ಮಧ್ಯದಲ್ಲಿ ನೀರು ಕುಡಿಯಬಾರದು. ಯೋಗ ಮಾಡುವ 2 ಗಂಟೆ ಮೊದಲು ಆಹಾರ ಸೇವಿಸಬೇಡಿ.

ಉಸಿರಾಟದ ಕ್ರಿಯೆ ಮುಖ್ಯ
ಸುಮ್ಮನೆ ಯೋಗಾ ಭಂಗಿ ಮಾಡಿದರೆ ಪ್ರಯೋಜನವಿಲ್ಲ, ಅದರ ಜೊತೆಗೆ ಉಸಿರಾಟದ ಕ್ರಿಯೆ ಸರಿಯಾಗಿರಬೇಕು. ಉಸಿರಾಟದ ಕ್ರಿಯೆ ಬಗ್ಗೆ ತಿಳಿಯಲು ಯೂ ಟ್ಯೂಬ್ ನೋಡಿದರೆ ಕಷ್ಟ. ನೀವು ಪರಿಣಿತರ ಬಳಿಯಿಂದ ತಿಳಿದುಕೊಳ್ಳುವುದು ಒಳ್ಳೆಯದು.

ಬೇರೆಯವರು ಮಾಡುತ್ತಿದ್ದಾರೆ ಅಂತ ನೀವೂ ಕೆಲವು ಆಸನಗಳನ್ನು ಮಾಡುವುದು
ನಿಮಗೆ ಭುಜ ನೋವಿದೆ ಎಂದಾದರೆ ನೀವು ಬೇರೆಯವರು ಮಾಡುತ್ತಿದ್ದಾರೆ ಎಂದು ಡಂಡಾಸನ ಅಭ್ಯಾಸ ಮಾಡಿದರೆ ಭುಜ ನೋವು ಹೆಚ್ಚಾಗುವುದು. ನಿಮ್ಮ ಆರೋಗ್ಯಸ್ಥಿತಿಗೆ ತಕ್ಕಂತೆ ಯೋಗಾಸನ ಮಾಡಬೇಕು, ಇದಕ್ಕೆ ಪರಿಣಿತರ ಸಲಹೆ ಅವಶ್ಯಕವಾಗಿ ಬೇಕು.

ಸಂಶಯಗಳಿದ್ದರೆ ಕೇಳದೇ ಇರುವುದು
ನಿಮಗೆ ಕೆಲವೊಂದು ಸಂಶಯಗಳಿದ್ದರೆ ಕೇಳಿ ಬಗೆಹರಿಸಿ ಉದಾಹರಣೆಗೆ ಮುಟ್ಟಿನಲ್ಲಿ ಮಾಡಬಹುದೇ?, ನಾನು ಗರ್ಭಿಣಿ ಯಾವ ಯೋಗಾಸನ ಮಾಡಬಾರದು ಹೀಗೆ ನಿಮ್ಮ ಆರೋಗ್ಯದ ಬಗ್ಗ, ನಿಮ್ಮ ದೇಹದ ಸ್ಥಿತಿ ಬಗ್ಗೆ ಯೋಗ ಪರಿಣಿತರ ಬಳಿ ಹೇಳಿ ಅವರಿಂದ ಸಲಹೆ ಪಡೆಯಿರಿ.

ಶವಾಸನ ಮಾಡದೇ ಇರುವುದು
ಯೋಗಾಸನದಲ್ಲಿ ಪ್ರತಿಯೊಂದು ಭಂಗಿಯಾದ ಮೇಲೆ ಶವಾಸನ ಮಾಡಲೇಬೇಕು, ಹಾಗಾದರೆ ಮಾತ್ರ ಅದರ ಪ್ರಯೋಜನ ಪಡೆಯಲು ಸಾಧ್ಯ. ನೀವು ಒಂದು ಪ್ರತಿ ಆಸನವನ್ನು ಒಂದು ನಿಮಿಷ ಮಾಡಬಹುದು, ಆದರೆ ಆ ಆಸನ ಮುಗಿದ ತಕ್ಷಣ ಶವಾಸನದಲ್ಲಿ ರೆಸ್ಟ್ ಮಾಡಬೇಕು. ಒಂದರ ಹಿಂದೆ ಮತ್ತೊಂದು ಆಸನ ಮಾಡುವುದರಿಂದ ಆಸನಗಳ ಪ್ರಯೋಜನ ಪಡೆಯಲು ಸಾಧ್ಯವಿಲ್ಲ.
ಶವಾಸನ ಏಕೆ ಮಾಡಬೇಕು?
* ನರಗಳನ್ನು ರಿಲ್ಯಾಕ್ಸ್ ಮಾಡುತ್ತದೆ
* ಮಾನಸಿಕ ಒತ್ತಡ ಹೊರಹಾಕುತ್ತದೆ
* ದೈಹಿಕ ಸುಸ್ತು ಕಡಿಮೆ ಮಾಡುತ್ತದೆ
* ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ
* ವ್ಯಾಯಾಮದಿಂದ ದಣಿದ ದೇಹಕ್ಕೆ ಚೈತನ್ಯ ತುಂಬುತ್ತದೆ.
ಶವಾಸನ ಮಾಡುವುದು ಹೇಗೆ?
ಮ್ಯಾಟ್ ಮೇಶವಾಸನ ಮಾಡುವುದು ಹೇಗೆ?ಲೆ ಅಂಗಾತ ಮಲಗಿ, ಮುಖ ಮೇಲ್ಭಾಗ ಇರಬೇಕು, ಕೈಗಳನ್ನು ನಿಮ್ಮ ಪಕ್ಕದಲ್ಲಿರಿಸಿ, ಕಾಲುಗಳನ್ನು ಸ್ವಲ್ಪ ಅಗಲವಾಗಿಟ್ಟು ವಿಶ್ರಾಂತೊಯ ಭಂಗಿಯಲ್ಲಿ ಒಂದು ನಿಮಿಷ ಮಲಗಿ. ಸರ್ವಾಂಗಾಸನಂಥ ಆಸನ ಮಾಡಿದ ಬಳಿಕ ಕನಿಷ್ಠ 2 ನಿಮಿಷ ಶವಾಂಗಾಸದಲ್ಲಿ ರೆಸ್ಟ್ ಮಾಡಬೇಕು.' ನೀವು ಜಿಮ್‌ನಲ್ಲಿ ವರ್ಕೌಟ್ ಮಾಡುವಾಗಲೂ ಈ ಶವಾಂಗಾಸನ ಅಭ್ಯಾಸ ಮಾಡಬಹುದು.



Click it and Unblock the Notifications