Latest Updates
-
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ!
ಅಧ್ಯಯನ: ಸ್ಥೂಲಕಾಯದವರ ಸ್ಮರಣಾ ಶಕ್ತಿ ಕಾಪಾಡುತ್ತೆ ಬೆಣ್ಣೆಹಣ್ಣು
ಪ್ರತಿದಿನವೂ ಬೆಣ್ಣೆ ಹಣ್ಣಿನ ಸೇವನೆಯನ್ನೊಳಗೊಂಡಂತಹ ಆಹಾರಪದ್ಧತಿಯು, ಅತೀ ತೂಕ ಅಥವಾ ಬೊಜ್ಜು ಮೈ ಅಂತಾ ಕರೆಸಿಕೊಳ್ಳೋದಕ್ಕೆ ಕಾರಣವಾಗುವಂತಹ ಎತ್ತರ ಮತ್ತು ತೂಕಗಳ ಅಳತೆಯನ್ನೊಳಗೊಂಡಿರುವ ವಯಸ್ಕರಲ್ಲಿ, ಗಮನವನ್ನು ಕೇಂದ್ರೀಕರಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಅಂತಾ ಸಂಶೋಧಕರು ಹೇಳ್ತಾರೆ.
ಜರ್ನಲ್ ಆಫ಼್ ಸೈಕೋಫಿಸಿಯೋಲಜಿಯಲ್ಲಿ ಪ್ರಕಟಗೊಂಡ ಸಂಶೋಧನಾ ವರದಿಗಳಿಗಾಗಿ, ಯು.ಎಸ್. ನ ಯುನಿರ್ವಸಿಟಿ ಆಫ಼್ ಇಲ್ಲಿನಾಯ್ ನ ಸಂಶೋಧಕರು, ಅತೀ ತೂಕವನ್ನು ಹೊಂದಿದ್ದ ಅಥವಾ ಸ್ಥೂಲಕಾಯವನ್ನು ಹೊಂದಿದ್ದ, 84 ವಯಸ್ಕರ ಮೇಲೆ ದೈನಂದಿನ ಆಹಾರಕ್ರಮದ ಕುರಿತಾದ 12 ವಾರಗಳ ಅಧ್ಯಯನವನ್ನು ಕೈಗೊಂಡಿದ್ದರು.

ಸ್ಥೂಲ ಕಾಯದವರ ಸ್ಮರಣಾ ಶಕ್ತಿ ಕಾಪಾಡುವ ಬೆಣ್ಣೆ ಹಣ್ಣು
"ಹಿಂದಿನ ಅಧ್ಯಯನಗಳು ತೋರಿಸಿಕೊಟ್ಟಿರುವ ಪ್ರಕಾರ, ಅಧಿಕ ತೂಕ ಹಾಗೂ ಸ್ಥೂಲಕಾಯವುಳ್ಳವರು ತಮ್ಮ ಇಳಿವಯಸ್ಸಿನಲ್ಲಿ ಗ್ರಹಿಕಾ ಸಾಮರ್ಥ್ಯದ ಕ್ಷೀಣತೆ ಹಾಗೂ ಸ್ಮರಣಶಕ್ತಿ ನಷ್ಟದಂತಹ ತೊಂದರೆಗಳಿಗೆ ಸಿಲುಕಿಕೊಳ್ಳುವ ಅಪಾಯ ಹೆಚ್ಚು" ಎಂದು ಯುನಿರ್ವಸಿಟಿ ಆಫ಼್ ಇಲ್ಲಿನಾಯ್ ನ ಅಧ್ಯಯನ ಮುಂದಾಳು ನೈಮನ್ ಖಾನ್ ಅವರು ಹೇಳುತ್ತಾರೆ.
"ವಿಶೇಷವಾಗಿ ಮಧ್ಯವಯಸ್ಕರಲ್ಲಿ ಸರಿಯಾದ ಆಹಾರಪದ್ಧತಿಯು ಅವರ ಗ್ರಹಿಕೆ ಹಾಗೂ ಸ್ಮರಣಶಕ್ತಿಯ ಆರೋಗ್ಯಕ್ಕೆ ಪ್ರಯೋಜನವಾಗಬಲ್ಲದೇ ಎಂಬುದರ ಕುರಿತು ತಿಳಿದುಕೊಳ್ಳಲು ನಾವು ಆಸಕ್ತರಾಗಿದ್ದೇವೆ" ಎಂದೂ ಖಾನ್ ಅವರು ಸೇರಿಸಿದರು.
ಬೆಣ್ಣೆ ಹಣ್ಣುಗಳಲ್ಲಿ ಅಧಿಕ ಪ್ರಮಾಣದಲ್ಲಿ ಲ್ಯುಟೇನ್ ಅನ್ನು ಒಳಗೊಂಡಿದೆ. ಲ್ಯುಟೇನ್, ಮೆದುಳಿನ ಗ್ರಹಣ ಶಕ್ತಿಯ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
ಬೆಣ್ಣೆ ಹಣ್ಣಿನ ಸೇವನೆಯಿಂದಾಗುವ ಪ್ರಯೋಜನಗಳ ಕುರಿತು ಹಿರಿಯ ನಾಗರಿಕರಲ್ಲಿ ಹಾಗೂ ಮಕ್ಕಳಲ್ಲಿ ಅಧ್ಯಯನಗಳನ್ನು ಕೈಗೊಳ್ಳಲಾಗಿದೆಯಾದರೂ ಕೂಡ, ಅಧಿಕ ತೂಕವುಳ್ಳ ಅಥವಾ ಸ್ಥೂಲಕಾಯವುಳ್ಳ ವಯಸ್ಕರಲ್ಲಿ ಗ್ರಹಿಕಾ ಸಾಮರ್ಥ್ಯಕ್ಕೆ ಸಂಬಂಧಿಸಿದ ಹಾಗೆ ಅದರ ಪ್ರಯೋಜನಗಳ ಕುರಿತು ಯಾದೃಚ್ಛಿಕವಾದ ನಿಯಂತ್ರಿತ ಅಧ್ಯಯನಗಳು ಇನ್ನೂ ನಡೆದಿಲ್ಲ.

ಅಧ್ಯಯನ ಏನು ಹೇಳಿದೆ?
ವಿನೂತನ ಅಧ್ಯಯನದಲ್ಲಿ, ಅಧಿಕ ತೂಕ ಅಥವಾ ಬೊಜ್ಜು ಮೈ ಹೊಂದಿದ್ದ 84 ಮಂದಿಗೆ 12 ವಾರಗಳವರೆಗೆ ದೈನಂದಿನ ಉಟೋಪಚಾರದ ವ್ಯವಸ್ಥೆಯನ್ನು ಸಂಶೋಧಕರೇ ಕೈಗೊಂಡರು.
ಅವರೆಲ್ಲರಿಗೂ ಒದಗಿಸಲಾದ ಊಟಗಳಲ್ಲಿ ಕ್ಯಾಲರಿಗಳು ಹಾಗೂ ಮ್ಯಾಕ್ರೋ ಪೋಷಕಾಂಶಗಳು ತದ್ರೂಪಿನವುಗಳೇ ಆಗಿದ್ದರೂ ಕೂಡ, ಒಂದು ಗುಂಪಿಗೆ ಪ್ರತಿದಿನವೂ ಒಂದು ತಾಜಾ ಅವೊಕಾಡೊವನ್ನು ನೀಡಲಾಗಿತ್ತು ಹಾಗೂ ಅದೇ ವೇಳೆಗೆ ಮತ್ತೊಂದು ಗುಂಪಿಗೆ ಅವರ ಊಟದಲ್ಲಿ ಬೆಣ್ಣೆ ಹಣ್ಣನ್ನು ನೀಡಿರಲಿಲ್ಲ.
ಅಧ್ಯಯನದ ಆರಂಭದಲ್ಲಿ ಹಾಗೂ ಅಧ್ಯಯನದ ಅಂತ್ಯದಲ್ಲಿ, ಅಧ್ಯಯನದಲ್ಲಿ ಭಾಗವಹಿಸಿದ್ದವರು ಗಮನ ಕೇಂದ್ರೀಕರಣ ಸಾಮರ್ಥ್ಯ ಹಾಗೂ ಇನ್ಹಿಬಿಷನ್ ಗಳನ್ನು ಅಳೆಯುವ ಮೂರು ಗ್ರಹಿಕಾ ಪರೀಕ್ಷೆಗಳನ್ನು ಪೂರ್ಣಗೊಳಿಸಿದರು. ಇದರ ಜೊತೆಗೆ, ಸಂಶೋಧಕರು ಅವರ ರಕ್ತದಲ್ಲಿನ ಹಾಗೂ ಅವರ ಅಕ್ಷಿಪಟಲಗಳಲ್ಲಿನ ಲ್ಯುಟೇನ್ ನ ಮಟ್ಟಗಳನ್ನು ಅಳೆದರು. ಈ ಮಟ್ಟಗಳು ಮೆದುಳಿನಲ್ಲಿಯ ಲ್ಯುಟೇನ್ ನ ಪ್ರಾಬಲ್ಯದೊಂದಿಗೆ ಸಹಯೋಗ ಹೊಂದಿವೆ.
ಸಂಶೋಧಕರು ಕಂಡುಕೊಂಡ ಪ್ರಕಾರ, ಯಾವ ಗುಂಪಿನವರ ಆಹಾರ ಪದ್ಧತಿಯಲ್ಲಿ ಅವೊಕಾಡೊಗಳನ್ನು ಸೇರಿಸಲಾಗಿತ್ತೋ, ಆ ಗುಂಪಿಗೆ ಸೇರಿದವರು ಗ್ರಹಣ ಸಾಮರ್ಥ್ಯ ಪರೀಕ್ಷೆಗಳ ಪೈಕಿ ಫ಼್ಲಾಂಕರ್ ಟಾಸ್ಕ್ ಎಂದು ಕರೆಯಲ್ಪಡುವ ಪರೀಕ್ಷೆಯಲ್ಲಿ ಸುಧಾರಿತ ನಿರ್ವಹಣೆಯನ್ನು ಪ್ರದರ್ಶಿಸಿದ್ದರು. ಫ಼್ಲಾಂಕರ್ ಟಾಸ್ಕ್, ಅಟೆನ್ಷನಲ್ ಇನ್ಹಿಬಿಷನ್ ಅರ್ಥಾತ್ ಗಮನವನ್ನು ಬೇರೆಡೆ ಸೆಳೆಯುವಂತಹ ಪರಿಸ್ಥಿತಿಯಲ್ಲೂ ಕೈಗೆತ್ತಿಕೊಂಡಿರುವ ಕಾರ್ಯದತ್ತ ಗಮನವನ್ನು ಕಾಪಿಟ್ಟುಕೊಳ್ಳುವ ಸಾಮರ್ಥ್ಯವನ್ನು ಅಳೆಯುತ್ತದೆ.

ಬೆಣ್ಣೆ ಹಣ್ಣಿನಲ್ಲಿರುವ ಪೋಷಕಾಂಶಗಳು
"ಬೆಣ್ಣೆಹಣ್ಣುಗಳಲ್ಲಿರುವ ಪೋಷಕಾಂಶಗಳು, ಈ ನಿರ್ಧಿಷ್ಟ ಕೆಲಸವನ್ನು ಮಾಡಲು ಬೇಕಾದ ಸಾಮರ್ಥ್ಯವನ್ನು ಬೆಂಬಲಿಸುವ ಒಂದು ನಿರ್ಧಿಷ್ಟ ಕ್ರಿಯೆಯನ್ನು ಮೆದುಳಿನ ಮೇಲೆ ನಡೆಸುತ್ತವೆ ಅಥವಾ ಇತರ ಪೋಷಕಾಂಶಗಳಿಗೆ ಹೋಲಿಸಿದರೆ ಇವು ಕೆಲ ನಿರ್ಧಿಷ್ಟ ಗ್ರಹಣ ಸಾಮರ್ಥ್ಯಗಳಿಗೆ ಅಧಿಕ ಪ್ರಯೋಜನಕಾರಿಯಾಗಿರುವ ಸಾಧ್ಯತೆ ಇದೆ" ಎನ್ನುತ್ತಾರೆ ಖಾನ್ ಅವರು.
"ಇನ್ನಷ್ಟು ಸುದೀರ್ಘ ಅಧ್ಯಯನ ಅಥವಾ ಬೇರೆ ಬೇರೆ ಪರೀಕ್ಷೆಗಳೊಂದಿಗೆ, ನಾವು ಬೆಣ್ಣೆ ಹಣ್ಣುದ ಇತರ ಪರಿಣಾಮಗಳನ್ನೂ ಕಂಡುಕೊಳ್ಳುವ ಸಾಧ್ಯತೆ ಇದೆ. ಇತರ ಅಧ್ಯಯನಗಳು ಇತರ ಜನಸಮುದಾಯಗಳಲ್ಲಿ ಇನ್ನಷ್ಟು ವ್ಯಾಪಕ ಪರಿಣಾಮಗಳನ್ನು ಕಂಡುಕೊಂಡಿವೆ. ಹಾಗಾಗಿ, ಈ ಜನಸಮುದಾಯಕ್ಕೆ ಇನ್ನಷ್ಟು ನಿರ್ಧಿಷ್ಟ ಪ್ರಯೋಜನವನ್ನು ಕಂಡುಕೊಳ್ಳುವುದು ಸ್ವಾರಸ್ಯಕರವಾಗಿರುತ್ತದೆ" ಎಂದು ಖಾನ್ ಸೇರಿಸುತ್ತಾರೆ.
ಈ ಅಧ್ಯಯನವು ಅವೊಕಾಡೊಗಳ ಮೇಲೆ ಕೇಂದ್ರೀಕೃತವಾಗಿದ್ದರೂ ಕೂಡ, ಹಸಿರು ಸೊಪ್ಪಿನ ತರಕಾರಿಗಳು ಅಥವಾ ಮೊಟ್ಟೆಗಳಂತಹ ಲ್ಯುಟೇನ್, ನಾರಿನಂಶ, ಮತ್ತು ಅಪರ್ಯಾಪ್ತ ಕೊಬ್ಬುಗಳ ಆಹಾರ ಮೂಲಗಳೂ ಕೂಡ ಗ್ರಹಿಕಾ ಸಾಮರ್ಥ್ಯಕ್ಕೆ ಸಂಬಂಧಿಸಿದ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಪ್ರಯೋಜನಗಳನ್ನು ಹೊಂದಿವೆ.
ಸಂಶೋಧಕರು ಹೇಳುವ ಪ್ರಕಾರ, ಬೆಣ್ಣೆ ಹಣ್ಣುಗಳನ್ನು ಸೇವಿಸುವಂತಹ ಆಹಾರ ಪದ್ಧತಿಯಲ್ಲಿನ ಸಣ್ಣ ಬದಲಾವಣೆಗಳೂ ಕೂಡ ಗ್ರಹಿಕೆಯ ಸಾಮರ್ಥ್ಯದ ಮೇಲೆ ಗಮನಾರ್ಹ ಪ್ರಭಾವವನ್ನುಂಟು ಮಾಡಬಲ್ಲವು ಹಾಗೂ ಅದೇ ವೇಳೆಗೆ ಆರೋಗ್ಯಕ್ಕೆ ಸಂಬಂಧಿಸಿದ ಇತರ ವರ್ತನೆಗಳಲ್ಲಿ ಯಾವುದೇ ವ್ಯತ್ಯಾಸವಾಗದು.



Click it and Unblock the Notifications











