Latest Updates
-
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ!
ಖರ್ಜೂರ ತಿಂದರೂ ಸಾಕು, ದೇಹದ ತೂಕ ಇಳಿಸಿಕೊಳ್ಳಬಹುದು!
ಮರುಭೂಮಿಯ ಬಂಗಾರವೆಂದೇ ಪರಿಗಣಿಸಲಾರುವ ಖರ್ಜೂರದಲ್ಲಿ ಹಲವಾರು ರೀತಿಯ ವಿಟಮಿನ್ ಗಳು, ಖನಿಜಾಂಶಗಳು, ಕ್ಯಾಲ್ಸಿಯಂ ಮತ್ತು ಕಬ್ಬಿನಾಂಶವಿದೆ. ಖರ್ಜೂರವನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಅದರಿಂದ ರಕ್ತಹೀನತೆ ದೂರವಾಗುವುದು ಮಾತ್ರವಲ್ಲದೆ ಇನ್ನೂ ಹಲವಾರು ಆರೋಗ್ಯ ಲಾಭಗಳು ಇವೆ. ಖರ್ಜೂರವನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಅದು ನಿಮ್ಮನ್ನು ಫಿಟ್ ಆಗಿ ಇಡುವುದು ಮಾತ್ರವಲ್ಲದೆ, ಪ್ರತಿರೋಧಕ ಶಕ್ತಿ ಹೆಚ್ಚಿಸಿ, ವಿವಿಧ ರೀತಿಯ ಕಾಯಿಲೆಗಳು ಬರದಂತೆ ತಡೆಯುವುದು. ತೂಕ ಇಳಿಸಲು ಬಯಸುವವರಿಗು ಖರ್ಜೂರವು ತುಂಬಾ ಪರಿಣಾಮಕಾರಿ.

ತೂಕ ಕಳೆದುಕೊಳ್ಳಲು ಖರ್ಜೂರವು ಯಾವ ರೀತಿ ನೆರವಾಗುವುದು ಎಂದು ನೀವು ತಿಳಿಯಿರಿ. ಕರಿದಿರುವ ತಿಂಡಿಗಳ ಬದಲಿಗೆ 4-5 ಖರ್ಜೂರವನ್ನು ತಿನ್ನಬಹುದು. ಖರ್ಜೂರದಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ ಮತ್ತು ಇದು ಆರೋಗ್ಯಕ್ಕೆ ತುಂಬಾನೇ ಉಪಯೋಗಿ. ತೂಕ ಇಳಿಸಲು ಖರ್ಜೂರವು ಯಾವ ರೀತಿ ನಿಮಗೆ ನೆರವಾಗುವುದು ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ.

ಹೊಟ್ಟೆ ತುಂಬಿದಂತೆ ಮಾಡುವುದು
ಖರ್ಜೂರದಲ್ಲಿ ವಿಟಮಿನ್ ಗಳು ಹಾಗೂ ಖನಿಜಾಂಶಗಳಾಗಿರುವ ಸೆಲೆನಿಯಂ, ಮೆಗ್ನಿಶಿಯಂ, ತಾಮ್ರ ಇತ್ಯಾದಿಗಳು ಇವೆ. ಹೀರಿಕೊಳ್ಳುವ ಮತ್ತು ಹೀರಿಕೊಳ್ಳದ ನಾರಿನಾಂಶವನ್ನು ಹೊಂದಿರುವ ಇದು ಹೊಟ್ಟೆ ತುಂಬಿದಂತೆ ಮಾಡುವುದು ಮತ್ತು ತಿನ್ನುವ ಬಯಕೆ ಕಡಿಮೆ ಮಾಡಿಸಿ, ಅತಿಯಾಗಿ ತಿನ್ನುವುದನ್ನು ಕಡಿಮೆ ಮಾಡುವುದು.

ವಿರೇಚಕ ಗುಣ
ಕರುಳಿನ ಕ್ರಿಯೆಗಳು ಸರಾಗವಾಗಿ ಆಗಲು ಮತ್ತು ಮಲಬದ್ಧತೆ ನಿವಾರಣೆ ಮಾಡಲು ಖರ್ಜೂರವು ನೆರವಾಗುವುದು. ಇದು ಆರೋಗ್ಯಕರ ಜೀರ್ಣಕ್ರಿಯೆ ವ್ಯವಸ್ಥೆ ಕಾಪಾಡುವುದು ಮತ್ತು ಚಯಾಪಚಯ ವೃದ್ಧಿಸುವುದು. ಈ ವಿಧದಲ್ಲಿ ಇದು ತೂಕ ಕಳೆದುಕೊಳ್ಳಲು ನೆರವಾಗುವುದು. ತೂಕ ಇಳಿಸಲು ಮತ್ತು ಆರೋಗ್ಯಕಾರಿ ಹೊಟ್ಟೆಗೆ ಖರ್ಜೂರ ತಿನ್ನಬಹುದು.

ಜೀರ್ಣಕ್ರಿಯೆ ಉತ್ತೇಜಿಸುವುದು
ತೂಕ ಇಳಿಸಲು ಖರ್ಜೂರವು ಹೇಗೆ ನೆರವಾಗುವುದು? ಖರ್ಜೂರದಲ್ಲಿ ನಿಕೋಟಿನ್ ಇದ್ದು, ಜೀರ್ಣಕ್ರಿಯೆ ವ್ಯವಸ್ಥೆ ಮತ್ತು ಕರುಳಿನ ಸಮಸ್ಯೆ ನಿವಾರಣೆ ಮಾಡುವುದು. ಖರ್ಜೂರವು ಒಳ್ಳೆಯ ಬ್ಯಾಕ್ಟೀರಿಯಾವನ್ನು ಹೆಚ್ಚಿಸುವುದು ಮತ್ತು ಹಾನಿಕಾರಕ ಬ್ಯಾಕ್ಟೀರಿಯಾ ಕೊಲ್ಲುವುದು. ಜೀರ್ಣಕ್ರಿಯೆ ಸುಧಾರಣೆ ಮಾಡುವ ಕಾರಣದಿಂದ ಇದು ತೂಕ ಕಳೆದುಕೊಳ್ಳಲು ಸಹಕಾರಿ. ತೂಕ ಕಳೆದುಕೊಳ್ಳಲು ಇದು ಖರ್ಜೂರದ ಅತ್ಯುತ್ತಮ ಲಾಭವಾಗಿದೆ.

ಶಕ್ತಿಯ ಆಗರ
ಖರ್ಜೂರದಲ್ಲಿ ಕ್ಯಾಲರಿ ಕಡಿಮೆ ಮತ್ತು ಶಕ್ತಿಯು ಉನ್ನತ ಮಟ್ಟದಲ್ಲಿದೆ. ನೈಸರ್ಗಿಕ ಸಕ್ಕರೆಯಾಗಿರುವ ಫ್ರಕ್ಟೋಸ್ ಮತ್ತು ಗ್ಲೂಕೋಸ್ ಇದರಲ್ಲಿದೆ. ಇದು ದೇಹಕ್ಕೆ ತಕ್ಷಣ ಶಕ್ತಿ ನೀಡುವುದು. ಕಾರ್ಬ್ರೋಹೈಡ್ರೇಟ್ಸ್ ಅಧಿಕ ಮತ್ತು ಕ್ಯಾಲರಿ ಹೆಚ್ಚಿರುವ ಆಹಾರದ ಬದಲು ಖರ್ಜೂರ ಸೇವಿಸಿ.

ಕೊಲೆಸ್ಟ್ರಾಲ್ ಮತ್ತು ಟ್ರಾನ್ಸ್ ಫ್ಯಾಟ್ ಮುಕ್ತ
ಈ ಎರಡು ಅಂಶಗಳು ತೂಕ ಹೆಚ್ಚಿಸಲು ಪ್ರಮುಖ ಕಾರಣ. ಖರ್ಜೂರವು ತುಂಬಾ ರುಚಿಕರವಾಗಿದ್ದು, ಕೊಬ್ಬಿನಿಂದ ಮುಕ್ತವಾಗಿದೆ. ನೀವು ಇದನ್ನು ಹಾಗೆ ಸೇವಿಸಬಹುದು. ಎಲ್ಲಾ ಪೋಷಕಾಂಶಗಳು ಇರುವ ಕಾರಣದಿಂದ ಹೆಚ್ಚಿನ ಕ್ಯಾಲರಿ ದಹಿಸಲು ನೆರವಾಗುವುದು.

ಆಹಾರ ಪಥ್ಯ
ನೀವು ತುಂಬಾ ಕಠಿನ ಆಹಾರ ಪಥ್ಯ ಮಾಡುತ್ತಿದ್ದರೆ ಆಗ ನೀವು ಎಲ್ಲಾ ಪೋಷಕಾಂಶಗಳಿಂದ ವಂಚಿತರಾಗುವಿರಿ ಮತ್ತು ಹೆಚ್ಚು ತಿಂದು ತೂಕ ಹೆಚ್ಚಿಸಿಕೊಳ್ಳುವಿರಿ. ನಿಮ್ಮ ಕಾರ್ಬ್ರೋಹೈಡ್ರೇಟ್ ಬಯಕೆಯು ಹೆಚ್ಚಾಗಿ ತೂಕ ಹೆಚ್ಚಾಗುವುದು. ನೀವು ಖರ್ಜೂರವನ್ನು ಕೇವಲ ಪೋಷಕಾಂಶಗಳನ್ನು ಪಡೆಯಲು ಮಾತ್ರವಲ್ಲದೆ, ತೂಕ ಕಳೆದುಕೊಳ್ಳಲು ಬಳಸಿ.

ಕೊಬ್ಬು ವಿಘಟಿಸಲು ನೆರವಾಗುವುದು
ಖರ್ಜೂರದಲ್ಲಿ ಇರುವಂತಹ ಪೊಟಾಶಿಯಂ ಮತ್ತು ಸಲ್ಫರ್ ನಂತಹ ಅಂಶಗಳು ಹೃದಯದ ಆರೋಗ್ಯ ಕಾಪಾಡಲು ನೆರವಾಗುವುದು ಮಾತ್ರವಲ್ಲದೆ, ದೇಹದಲ್ಲಿ ಕೊಬ್ಬನ್ನು ವಿಘಟಿಸುವುದು. ಬೆಳಗ್ಗೆ ಉಪಾಹಾರದಲ್ಲಿ ನೀವು ಖರ್ಜೂರ ಸೇವನೆ ಮಾಡಿದರೆ ಅದರಿಂದ ಚಯಾಪಚಯ ಕ್ರಿಯೆ ಹೆಚ್ಚುವುದು ಮತ್ತು ತೂಕ ಇಳಿಯುವುದು.

ಜಡತ್ವ ನಿವಾರಣೆ
ಹಸಿವಾದ ಬಳಿಕ ನೀವು ಹೆಚ್ಚು ಆಹಾರ ತಿಂದರೆ ಆಗ ನಿಮಗೆ ಆಲಸ್ಯ ಬರುವುದು. ಇದರಿಂದ ನಿಮ್ಮ ದೇಹದಲ್ಲಿ ಕೊಬ್ಬು ಶೇಖರಣೆಯಾಗುವುದು ಮತ್ತು ನಿಮ್ಮಲ್ಲಿ ಜಡತ್ವ ಬರುವುದು. ನೀವು ಖರ್ಜೂರ ಸೇವನೆ ಮಾಡಿದರೆ ಆಗ ನೀವು ತುಂಬಾ ತಾಜಾ ಹಾಗೂ ಶಕ್ತಿಯುತವಾಗಿರುವಿರಿ. ನೀವು ತುಂಬಾ ಚುರುಕಾಗಿ, ಹೆಚ್ಚು ತೂಕ ಕಳೆದುಕೊಳ್ಳುವಿರಿ. ಇನ್ನು ನಿಯಮಿತವಾಗಿ ಖರ್ಜೂರದ ಸೇವನೆಯಿಂದ ವಿಶೇಷವಾಗಿ ಹೊಟ್ಟೆ ಮತ್ತು ಕರುಳಿನ ಕ್ಯಾನ್ಸರ್‌ನಿಂದ ರಕ್ಷಿಸುತ್ತದೆ. ಅಲ್ಲದೇ ಇದರಲ್ಲಿರುವ ಕರಗುವ ನಾರು ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತದೆ.

ಮಲಬದ್ಧತೆಯಿಂದ ರಕ್ಷಿಸುತ್ತದೆ
ಕೆಲವು ಖರ್ಜೂರಗಳನ್ನು ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಈ ನೀರನ್ನು ಮತ್ತು ಖರ್ಜೂರವನ್ನು ಸೇವಿಸುವುದರಿಂದ ನಿಸರ್ಗದ ಕರೆಗೆ ಸುಲಭವಾಗಿ ಸ್ಪಂದಿಸುವಂತಾಗುತ್ತದೆ. ವಾಸ್ತವವಾಗಿ ಈ ನೀರು ಒಂದು ಉತ್ತಮ ವಿರೇಚಕವಾಗಿದೆ.



Click it and Unblock the Notifications