Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ಟೀ ಕಾಫಿಯ ಬದಲಿಗೆ, ಕ್ಯಾರೆಟ್-ಪಾಲಕ್ ಜ್ಯೂಸ್ ಕುಡಿಯಿರಿ
ಉತ್ತಮ ಆರೋಗ್ಯಕ್ಕೆ ಯಾವ ಆಹಾರ ಉತ್ತಮ ಎಂದು ಕೇಳಿದರೆ ವೈಯಕ್ತಿಕವಾಗಿ ಪ್ರತಿಯೊಬ್ಬರೂ ತಮ್ಮ ಇಷ್ಟದ ಆಹಾರವನ್ನೇ ಸೂಚಿಸಬಹುದು. ಆದರೆ ಆಹಾರತಜ್ಞರ ಪ್ರಕಾರ ನಮ್ಮ ದೇಹಕ್ಕೆ ನಿಜಕ್ಕೂ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಕೆಲವೇ ಆಹಾರಗಳಿಂದ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಇವೆಲ್ಲವೂ ಇರುವ ವಿವಿಧ ಆಹಾರಗಳ ಸಂಗ್ರಹವಾದ 'ಸಮತೋಲನದ ಆಹಾರ'ವೇ ಶ್ರೇಷ್ಠ ಆಹಾರವಾಗಿದೆ. ಉತ್ತಮ ಆರೋಗ್ಯಕ್ಕೆ ಸಿಂಪಲ್ ಮನೆಮದ್ದು, ಎಂದಿಗೂ ನೆನಪಿರಲಿ
ಅಂದರೆ ನಮ್ಮ ದಿನದ ಆಹಾರದಲ್ಲಿ ಸಾಕಷ್ಟು ತರಕಾರಿ, ಧಾನ್ಯಗಳು, ಸುಲಭವಾಗಿ ಜೀರ್ಣವಾಗುವ ಮಾಂಸಾಹಾರ, ಪ್ರೋಟೀನು, ಮೊಟ್ಟೆ ಮತ್ತು ಇತರ ನೈಸರ್ಗಿಕ ಸಾಮಾಗ್ರಿಗಳಿರಬೇಕು. ಸಮತೋಲನದ ಆಹಾರವನ್ನು ಸರಿಯಾದ ಕ್ರಮದಲ್ಲಿ ಸೇವಿಸುತ್ತಾ ಬಂದರೆ ದೇಹಕ್ಕೆ ಅತ್ಯುತ್ತಮ ಪೋಷಣೆ ಲಭಿಸಿದಂತಾಗಿ ರೋಗ ನಿರೋಧಕ ಶಕ್ತಿಯೂ ಹೆಚ್ಚುವ ಮೂಲಕ ಯಾವುದೇ ರೋಗದಿಂದ ಮುಕ್ತವಾಗಿರುತ್ತದೆ. ಇದೇ ವಿಷಯವನ್ನು ಕನ್ನಡದಲ್ಲಿ "ಊಟ ಬಲ್ಲವನಿಗೆ ರೋಗವಿಲ್ಲ" ಎಂಬ ಗಾದೆಮಾತಿನ ರೂಪದಲ್ಲಿಯೂ ತಿಳಿಸಲಾಗಿದೆ.

ಈ ನಿಟ್ಟಿನಲ್ಲಿ ಕ್ಯಾರೆಟ್ ಹಾಗೂ ಪಾಲಕ್ ಒಂದು ಅದ್ಭುತ ಆಹಾರವಾಗಿದ್ದು ಸಮತೋಲನ ಆಹಾರಕ್ಕೆ ಬೇಕಾದ ಬಹಳಷ್ಟನ್ನು ನೀಡುತ್ತದೆ. ಇದರಿಂದ ಹಲವು ದೇಹದ ತೊಂದರೆಗಳಿಂದ ರಕ್ಷಣೆ ನೀಡುತ್ತದೆ. ಇದಕ್ಕಾಗಿ ಒಂದು ಬಾರಿ ಸೇವಿಸಲು ಒಂದು ಕ್ಯಾರೆಟ್ ಮತ್ತು ಇದಕ್ಕೆ ಸರಿಸಮನಾದ ಪ್ರಮಾಣದ ಪಾಲಕ್ ಎಲೆಗಳನ್ನು ಮಿಕ್ಸಿಯಲ್ಲಿ ನುಣ್ಣಗೆ ಅರೆದು ಅಗತ್ಯವೆನಿಸಿದರೆ ಕೊಂಚವೇ ನೀರು ಸೇರಿಸಿ ಸೋಸದೇ ಹಾಗೇ ಕುಡಿದುಬಿಡಬೇಕು. ಕ್ಯಾರೆಟ್‍ನ ಮಹತ್ವ ಮತ್ತು ಆರೋಗ್ಯದ ಮಹಾತ್ಮೆ
ಪ್ರತಿನಿತ್ಯ ಬೆಳಗ್ಗಿನ ಉಪಾಹಾರದ ಬಳಿಕ ಟೀ ಕಾಫಿಯ ಬದಲಿಗೆ ಈ ಅದ್ಭುತ ಜ್ಯೂಸ್ ಕುಡಿದರೆ ಇದರ ಗರಿಷ್ಠ ಉಪಯೋಗವನ್ನು ಪಡೆಯಬಹುದು. ಉಪಯೋಗಗಳೆಂದರೆ ಯಾವುವು? ಎಂಬ ನಿಮ್ಮ ಕುತೂಹಲವನ್ನು ಕೆಳಗಿನ ಮಾಹಿತಿ ಮೂಲಕ ವಿವರಿಸಲಾಗಿದೆ ಮುಂದೆ ಓದಿ...
ರಕ್ತಹೀನತೆಯಿಂದ ಕಾಪಾಡುತ್ತದೆ
ಈ ಜ್ಯೂಸ್ ನಲ್ಲಿ ಅತಿ ಹೆಚ್ಚಿನ ಪ್ರಮಾಣದ ಕಬ್ಬಿಣ ಮತ್ತು ವಿಟಮಿನ್ ಎ ಇರುವ ಕಾರಣ ಹೊಸ ಕೆಂಪುರಕ್ತಕಣಗಳು ಹುಟ್ಟಲು ಮತ್ತು ಹಿಮೋಗ್ಲೋಬಿನ್ ಅಂಶ ಹೆಚ್ಚಲು ನೆರವಾಗುತ್ತದೆ. ರಕ್ತದಲ್ಲಿ ಕೆಂಪುರಕ್ತಕಣಗಳು ಹೆಚ್ಚಿದ್ದಾಗ ರಕ್ತದ ಕ್ಷಮತೆ ಹೆಚ್ಚುತ್ತದೆ. ಇದರಿಂದ ಪ್ರಥಮವಾಗಿ ರಕ್ತಹೀನತೆಯ ತೊಂದರೆ ಇಲ್ಲವಾದರೆ ಇದರ ಪರೋಕ್ಷ ಪರಿಣಾಮಗಳು ಹಲವಾರು ರೀತಿಯಿಂದ ದೇಹವನ್ನು ವಿವಿಧ ತೊಂದರೆಗಳಿಂದ ಕಾಪಾಡುತ್ತವೆ.
ಕ್ಯಾನ್ಸರ್ ಬರದಂತೆ ತಡೆಯುತ್ತದೆ
ಈ ಜ್ಯೂಸ್ ನಲ್ಲಿ ಕ್ಯಾರೋಟಿನಾಯ್ಡ್ ಮತ್ತು ಫ್ಲೇವನಾಯ್ಡುಗಳೆಂಬ ಪೋಷಕಾಂಶಗಳಿದ್ದು ಇವು ದೇಹದಲ್ಲಿ ಯಾವುದೇ ಅಂಗ ಅಥವಾ ಅಂಗಾಂಶ ತನ್ನ ನಿಗದಿತ ಗಾತ್ರಕ್ಕಿಂತಲೂ ಹೆಚ್ಚಾಗಿ ಬೆಳೆಯದಂತೆ ತಡೆಯುತ್ತದೆ. ಇದರಿಂದ ಹಲವು ವಿಧದ ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತದೆ.
ಜೀವಕೋಶಗಳ ಸವೆತ ತಡೆಯುತ್ತದೆ
ಕ್ಯಾರೆಟ್ ಮತ್ತು ಪಾಲಕ್ ಎರಡರಲ್ಲಿಯೂ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳು ಮತ್ತು ವಿಟಮಿನ್ ಸಿ ಇದ್ದು ಜೀವಕೋಶಗಳ ಬೆಳವಣಿಗೆ ಮತ್ತು ಸತ್ತ ಜೀವಕೋಶಗಳ ಬದಲಿಗೆ ಹೊಸ ಜೀವಕೋಶಗಳ ಹುಟ್ಟಿಗೆ ನೆರವಾಗುತ್ತವೆ. ಇದರಿಂದಾಗಿ ಚರ್ಮ ವಯಸ್ಸಿಗೂ ಮುನ್ನವೇ ಸಡಿಲವಾಗುವುದು, ವೃದ್ಧಾಪ್ಯದ ಚಿಹ್ನೆಗಳು ಚಿಕ್ಕವಯಸ್ಸಿಗೇ ಗೋಚರಿಸುವುದು ಮೊದಲಾದವು ಇಲ್ಲವಾಗುತ್ತವೆ. ಆರೋಗ್ಯಕ್ಕೆ ಹಿತಕರವಾಗಿರುವ ಪಾಲಕ್ ಸೊಪ್ಪಿನ ಪ್ರಯೋಜನಗಳೇನು?
ಮೂಳೆಗಳನ್ನೂ ದೃಢಗೊಳಿಸುತ್ತದೆ
ಹಾಲಿನಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಇದ್ದರೂ ನಮ್ಮ ಮೂಳೆಗಳು ಇದನ್ನು ನೇರವಾಗಿ ಹೀರಿಕೊಳ್ಳಲು ಸಾಧ್ಯವಿಲ್ಲ. ಇದಕ್ಕೆ ವಿಟಮಿನ್ ಕೆ ಇರುವ ಬೇರೆ ಮಾಧ್ಯಮ ಬೇಕು. ಆದ್ದರಿಂದ ಬರೆಯ ಹಾಲು ಕುಡಿಯುವ ಬದಲು ಕೊಂಚ ಜೇನು ಸೇರಿಸಿ ಕುಡಿಯುವುದೇ ಉತ್ತಮ.
ಈ ಜ್ಯೂಸ್ ನಲ್ಲಿಯೂ ಉತ್ತಮ ಪ್ರಮಾಣದ ವಿಟಮಿನ್ ಕೆ ಇರುವ ಕಾರಣ ನಮ್ಮ ಆಹಾರದಲ್ಲಿ ಲಭ್ಯವಾದ ಕ್ಯಾಲ್ಸಿಯಂ ಅನ್ನು ಮೂಳೆಗಳು ಹೀರಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಮೂಳೆಗಳಲ್ಲಿ ಗಾಳಿಗುಳ್ಳೆಗಳು ತುಂಬಿ ಸುಲಭವಾಗಿ ತುಂಡಾಗುವ ಸಂಭವ (osteoporosis) ಕಡಿಮೆಯಾಗುತ್ತದೆ. ಅಲ್ಲದೇ ಮೂಳೆಸಂದುಗಳಲ್ಲಿ ಸವೆತ ಕಡಿಮೆಯಾಗಿ ಸಂಧಿವಾತದ ಸಮಸ್ಯೆಯೂ ದೂರಾಗುತ್ತದೆ. ಆಗಾಗ ಕಾಡುವ ಮೂಳೆ ನೋವಿನಿಂದ ಮುಕ್ತಿ ಹೇಗೆ?
ಮೇಲೆ ತಿಳಿಸಿದ ಪ್ರಯೋಜನಗಳನ್ನು ತಿಳಿದ ಬಳಿಕವಾದರೂ ನಿತ್ಯವೂ ಈ ಅದ್ಭುತ ಜ್ಯೂಸ್ ಕುಡಿಯಲು ಮನಸ್ಸು ಮಾಡಿದರೆ ಸಾಕು. ಪ್ರಥಮ ದಿನದಿಂದಲೇ ನಿಮಗೆ ಇಷ್ಟವಾಗುವ ಈ ಜ್ಯೂಸ್ ನಿತ್ಯವೂ ಕುಡಿಯಲು ನೀವೇ ಹಾತೊರೆಯುವಂತಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications














