Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಜಿಮ್‌ನಲ್ಲಿ ವ್ಯಾಯಮದ ಜೊತೆ-ಆಹಾರಕ್ರಮವೂ ಹೀಗಿರಲಿ...
ದೇಹದಾರ್ಢ್ಯ ಪಟುಗಳನ್ನು ನೋಡಿದರೆ ನಮಗೂ ಅದೇ ರೀತಿಯ ಕಟ್ಟುಮಸ್ತಾದ ದೇಹ ಬೇಕೆಂದು ಅನಿಸುವುದುಂಟು. ಆದರೆ ದೇಹದಾರ್ಢ್ಯ ಪಟುಗಳು ಆ ರೀತಿಯ ದೇಹ ಬೆಳೆಸಿಕೊಳ್ಳಲು ಕಠಿಣ ಪರಿಶ್ರಮ ಪಡುತ್ತಾರೆ. ಈಗೀಗ ಪ್ರತಿಯೊಬ್ಬರು ಫಿಟ್ನೆಸ್ ಕಾರಣದಿಂದಾಗಿ ಜಿಮ್ ಗೆ ಹೋಗಿ ಬೆವರು ಸುರಿಸಲು ಆರಂಭಿಸಿದ್ದಾರೆ. ಜಿಮ್‌ನಲ್ಲಿ ಸಾಕಷ್ಟು ಕಸರತ್ತು ನಡೆಸಿದರೆ ಮಾತ್ರ ದೇಹ ಕಟ್ಟುಮಸ್ತಾಗಿರುತ್ತದೆಯಾ? ಕಟ್ಟುಮಸ್ತಾದ ಮೈಕಟ್ಟಿಗೆ ಇಲ್ಲಿದೆ ನೋಡಿ ಸರಳ ಸೂತ್ರ
ಖಂಡಿತವಾಗಿಯೂ ಇಲ್ಲ, ಯಾಕೆಂದರೆ ಜಿಮ್‌ನಲ್ಲಿ ವ್ಯಾಯಮ ಮಾಡುವ ಜತೆಗೆ ನಾವು ತಿನ್ನುವ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ಸ್ನಾಯುಗಳು ಬಲಿಷ್ಠವಾಗಲು ನಾವು ಪೋಷಕಾಂಶಗಳಿರುವ ಆಹಾರವನ್ನು ತಿನ್ನಲೇಬೇಕಾಗುತ್ತದೆ. ಜಿಮ್‌ನಲ್ಲಿ ಕಸರತ್ತು ನಡೆಸಿದ ಬಳಿಕ ಮೊದಲು ಯಾವ ರೀತಿಯ ಆಹಾರವನ್ನು ಬೇಗನೆ ಸೇರಿಕೊಳ್ಳುತ್ತದೆ. ದೇಹದಾರ್ಢ್ಯ ಪಟುಗಳು ಸೇವಿಸಲೇಬೇಕಾದ ಆಹಾರಗಳು
ನಿಮ್ಮ ಆಹಾರ ಕ್ರಮದಲ್ಲಿ ಅಗತ್ಯವಾಗಿ ಪ್ರೋಟೀನ್ ಬೇಕೇಬೇಕು. ಇದರಿಂದ ಸ್ನಾಯುಗಳು ಬಲಿಷ್ಠ ಮತ್ತು ದೊಡ್ಡದಾಗಿ ಬೆಳೆಯುತ್ತದೆ. ಪ್ರೋಟೀನ್ ಹೊರತುಪಡಿಸಿ ಕಬ್ಬಿನಾಂಶ, ಕ್ಯಾಲ್ಸಿಯಂ, ಸೆಲೆನಿಯಂ, ಪೊಟಾಶಿಯಂ, ಮೆಗ್ನಿಶಿಯಂ ಮತ್ತು ಇತರ ಹಲವಾರು ವಿಟಮಿನ್‌ಗಳು ಬೇಕಾಗುತ್ತದೆ. ನೀವು ಜಿಮ್‌ನಲ್ಲಿ ಗಂಟೆಗಟ್ಟಲೆ ಬೆವರು ಸುರಿಸುತ್ತಾ ಇದ್ದರೆ ಯಾವೆಲ್ಲಾ ಆಹಾರಗಳನ್ನು ತಿನ್ನಬಹುದು ಎನ್ನುವ ಬಗ್ಗೆ ಈ ಲೇಖನದಲ್ಲಿ ವಿವರಗಳನ್ನು ನೀಡಲಾಗಿದೆ.

ಮೊಟ್ಟೆ
ದಿನಕ್ಕೊಂದು ಮೊಟ್ಟೆ ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಮಾತಿದೆ. ಮೊಟ್ಟೆಯಲ್ಲಿ ಇರುವಂತಹ ಅಮಿನೋ ಆ್ಯಸಿಡ್ ಮತ್ತು ಪ್ರೋಟೀನ್ ಸ್ನಾಯುಗಳು ವೇಗವಾಗಿ ಬೆಳೆಯಲು ನೆರವಾಗುತ್ತದೆ. ಕಬ್ಬಿನಾಂಶ, ಸತು ಮತ್ತು ಕ್ಯಾಲ್ಸಿಯಂನೊಂದಿಗೆ ಫಾಲಿಕ್ ಆ್ಯಸಿಡ್, ವಿಟಮಿನ್ ಬಿ, ಕೆ, ಇ, ಎ ಮೊಟ್ಟೆಯಲ್ಲಿದೆ.

ಹಾಲು
ಹಾಲನ್ನು ಮಾಂಸಹಾರಿ ಹಾಗೂ ಸಸ್ಯಹಾರಿಗಳಿಬ್ಬರೂ ಸೇವಿಸುತ್ತಾರೆ. ಹಾಲಿನಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಹಾಲಿನಲ್ಲಿರುವ ಪ್ರೋಟೀನ್ ನ್ನು ದೇಹವು ವೇಗವಾಗಿ ಹೀರಿಕೊಳ್ಳಬಲ್ಲದು. ಇದರಲ್ಲಿ ಕಾರ್ಬೋಹೈಡ್ರೆಟ್ಸ್, ಖನಿಜಾಂಶ ಮತ್ತು ವಿಟಮಿನ್ ಗಳು ಇದೆ. ವ್ಯಾಯಾಮದ ಬಳಿಕ ಹಾಲು ಒಳ್ಳೆಯ ಆಯ್ಕೆ.

ಬಾದಾಮಿ
ವಿಟಮಿನ್ ಬಿ, ಪ್ರೋಟೀನ್ ಮತ್ತು ನಾರಿನಾಂಶವು ಬಾದಾಮಿಯಲ್ಲಿದೆ. ಈ ಪೋಷಕಾಂಶಗಳನ್ನು ಹೊರತುಪಡಿಸಿ ನಿಮ್ಮ ಸ್ನಾಯುಗಳು ಬೆಳೆಯಲ್ಲ. ಇದರಲ್ಲಿನ ಆ್ಯಂಟಿಆಕ್ಸಿಡೆಂಟ್ ನಿಮ್ಮ ದೇಹವನ್ನು ಫ್ರೀ ರ್ಯಾಡಿಕಲ್ ಹಾನಿಯಿಂದ ತಡೆಯುತ್ತದೆ.

ಕೋಳಿ ಮಾಂಸ
ಸ್ನಾಯುಗಳು ಬಲಶಾಲಿಯಾಗಬೇಕೆಂದರೆ ನೀವು ಕೋಳಿ ಮಾಂಸವನ್ನು ತಿನ್ನಿ. ಅದರಲ್ಲಿ ಚಿಕನ್ ಬ್ರೆಸ್ಟ್ ತುಂಬಾ ಒಳ್ಳೆಯದು. ಸತು, ಸೆಲೆನಿಯಂ, ಕಬ್ಬಿನಾಂಶ, ನಿಯಾಸಿನ್ ಮತ್ತು ವಿಟಮಿನ್ ಬಿ6 ಕೂಡ ಕೋಳಿ ಮಾಂಸದಲ್ಲಿದೆ.

ಪಾಲಕ್ ಸೊಪ್ಪು
ಪಾಲಕ್ ಸೊಪ್ಪು ಇಲ್ಲದೆ ನಿಮ್ಮ ಆರೋಗ್ಯವು ಸ್ಥಿರವಾಗಿರಲು ಸಾಧ್ಯವಿಲ್ಲ. ಇದರಲ್ಲಿ ಎಲ್ಲಾ ಪೋಷಕಾಂಶಗಳ ಭಂಡಾರವಿದೆ. ಹೊಸ ಅಧ್ಯಯನದ ಪ್ರಕಾರ ಪಾಲಕ್ ಒಂದು ಹಂತದಲ್ಲಿ ಸ್ನಾಯುಗಳನ್ನು ಬೆಳೆಸುತ್ತದೆ. ಇದರಲ್ಲಿ ಕ್ಯಾಲ್ಸಿಯಂ ಕೂಡ ಇದೆ.

ಗೆಣಸು
ವ್ಯಾಯಾಮ ಮಾಡುವವರಿಗೆ ಗೆಣಸೇ ಎಂದು ಪ್ರಶ್ನಿಸಬಹುದು. ಆದರೆ ಗೆಣಸಿನಲ್ಲಿರುವ ಪೊಟಾಶಿಯಂ, ನಾರಿನಾಂಶ ಮತ್ತು ವಿಟಮಿನ್ ನಿಂದ ಇದನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದರಲ್ಲಿ ಸಂಯುಕ್ತ ಕಾರ್ಬ್ಸ್ ಒಳಗೊಂಡಿರುವುದರಿಂದ ವ್ಯಾಯಾಮದ ಬಳಿಕ ಇದನ್ನು ತಿನ್ನುವುದು ತುಂಬಾ ಒಳ್ಳೆಯದು.

ಸಾಲ್ಮನ್
ಸ್ನಾಯುಗಳ ಬೆಳವಣಿಗೆ ಮತ್ತು ತೂಕ ಕಳೆದುಕೊಳ್ಳಲು ಸಾಲ್ಮನ್ ತುಂಬಾ ಒಳ್ಳೆಯದು. ಇದರಲ್ಲಿ ಪ್ರೋಟೀನ್, ವಿಟಮಿನ್ ಮತ್ತು ಒಮೆಗಾ 3 ಕೊಬ್ಬಿನಾಂಶದ ಆ್ಯಸಿಡ್ ಇದೆ. ಇತರ ಖನಿಜಾಂಶಗಳಾದ ಕ್ಯಾಲ್ಸಿಯಂ, ಸೆಲೆನಿಯಂ ಮತ್ತು ಮೆಗ್ನಿಶಿಯಂ ಇದರಲ್ಲಿದೆ.



Click it and Unblock the Notifications
