Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ಫಿಟ್ನೆಸ್‌ನಲ್ಲಿ ಪಾಸಾದರೆ, ನೀವು ಫಿಟ್ ಆಗಿದ್ದೀರಿ ಎಂದರ್ಥ!
ಪ್ರತಿಯೊಂದು ಕೆಲಸದಲ್ಲೂ ನಮಗೆ ನೆರವಿಗೆ ಬರುವುದು ನಮ್ಮ ಫಿಟ್ನೆಸ್. ಇದು ಚೆನ್ನಾಗಿದ್ದರೆ ಮಾತ್ರ ಯಾವುದೇ ಕೆಲಸವನ್ನು ಮಾಡಲು ಸಮರ್ಥರಾಗುತ್ತೇವೆ. ಇಲ್ಲವೆಂದಾದಲ್ಲಿ ನಿಶ್ಯಕ್ತಿಯಿಂದ ಬಳಲಿ ಯಾವುದೂ ಬೇಡ, ಸ್ವಲ್ಪ ವಿಶ್ರಾಂತಿ ಪಡೆದುಕೊಳ್ಳುವ ಎನ್ನುವಂತಹ ಮನಸ್ಥಿತಿ ನಿರ್ಮಾಣವಾಗುತ್ತದೆ.
ಆದರೆ ಫಿಟ್ನೆಸ್ ಎನ್ನುವುದು ಕೇವಲ ಜಿಮ್‌ಗೆ ಹೋಗುವುದರಿಂದ ಬರುವುದಿಲ್ಲ. ನಿಮ್ಮ ವಯಸ್ಸು ಮತ್ತು ಚಟುವಟಿಕೆಗಳಿಗೆ ಅನುಗುಣವಾಗಿ ಫಿಟ್ನೆಸ್ ಮಟ್ಟವು ಭಿನ್ನವಾಗಿರುತ್ತದೆ. ದಿನಪೂರ್ತಿ ಕೆಲಸ ಮಾಡಿಕೊಂಡು ಇರಬೇಕಾದರೆ ಫಿಟ್ನೆಸ್ ಮಟ್ಟವೂ ಚೆನ್ನಾಗಿರಬೇಕಾಗುತ್ತದೆ. ಫಿಟ್ನೆಸ್ ದೊಡ್ಡವರಿಗೆ ಮಾತ್ರವಲ್ಲ, ಮಕ್ಕಳಿಗೂ ಅತ್ಯಗತ್ಯ...
ಕೆಲವೊಂದು ಕೆಲಸಗಳಿಗೆ ಹೆಚ್ಚಿನ ಫಿಟ್ನೆಸ್ ಬೇಕಾಗುತ್ತದೆ. ಇನ್ನು ಕೆಲವು ಕೆಲಸಗಳಿಗೆ ಕಡಿಮೆ. ಕಠಿಣವಾಗಿರುವ ಕೆಲಸಗಳಿಗೆ ಫಿಟ್ನೆಸ್ ತುಂಬಾ ಮಹತ್ವವನ್ನು ಪಡೆಯುತ್ತದೆ. ನೀವು ಎಷ್ಟು ಫಿಟ್ ಆಗಿದ್ದೀರಿ ಎಂದು ತಿಳಿದುಕೊಳ್ಳಲು ಇಲ್ಲಿ ಕೊಟ್ಟಿರುವ ಕೆಲವೊಂದು ಚಟುವಟಿಕೆಗಳನ್ನು ಮಾಡಿದರೆ ಫಿಟ್ನೆಸ್ ಮಟ್ಟವು ಯಾವ ರೀತಿಯಲ್ಲಿದೆ ಎಂದು ತಿಳಿದುಕೊಳ್ಳಲು ಸಾಧ್ಯವಾಗುವುದು. ಬಾಲಿವುಡ್ ನಟರ ಫಿಟ್ನೆಸ್ ರಹಸ್ಯಗಳು

ಟಿಪ್ಸ್ #1
ಶೂ ಲೇಸ್ ಅನ್ನು ಕಟ್ಟಿಕೊಳ್ಳುವಾಗ ಕುರ್ಚಿ ಮೇಲೆ ಕುಳಿತುಕೊಳ್ಳದೆ, ಮೊಣಕಾಲನ್ನು ಬಗ್ಗಿಸಿದ ಕಟ್ಟಿದರೆ ನಿಮ್ಮ ಫಿಟ್ನೆಸ್ ಮಟ್ಟವು ಉತ್ತಮವಾಗಿದೆ ಎಂದರ್ಥ ಮತ್ತು ಹೊಟ್ಟೆಯ ಕೊಬ್ಬು ಕಡಿಮೆಯಿದೆ ಎಂದು ಹೇಳಬಹುದು. ಶೂ ತನಕ ಬಗ್ಗಲು ನಿಮಗೆ ಸಾಧ್ಯವಾಗದೆ ಇದ್ದರೆ ಆಗ ಫಿಟ್ನೆಸ್ ಕಡೆ ಮತ್ತಷ್ಟು ಶ್ರಮ ವಹಿಸಬೇಕು.

ಟಿಪ್ಸ್ #2
ಕಚೇರಿಯಲ್ಲಿ ಲಿಫ್ಟ್ ಬಳಸುವ ಬದಲು ಮೆಟ್ಟಿಲುಗಳಲ್ಲಿ ಓಡಿಕೊಂಡು ಹೋಗಿ. ಕೊನೆಯ ಮಹಡಿ ತಲುಪಿದಾಗ ನಿಮಗೆ ತುಂಬಾ ಆಯಾಸವಾಗಿದೆ ಎಂದಾದರೆ ನಿಮ್ಮ ಫಿಟ್ನೆಸ್ ಮಟ್ಟವು ತುಂಬಾ ಕೆಟ್ಟದಾಗಿದೆ ಎಂದರ್ಥ. ಒಂದೇ ಉಸಿರಿನಲ್ಲಿ ಸುಮಾರು 50 ಮೆಟ್ಟಿಲುಗಳನ್ನು ಏರಿ ಹೃದಯದ ಸಾಮರ್ಥ್ಯವನ್ನು ಪರೀಕ್ಷಿಸಿ.

ಟಿಪ್ಸ್ #3
ಮೂರೇ ನಿಮಿಷದಲ್ಲಿ ಒಂದು ಕಿ.ಮೀ. ಓಡಿದರೆ ನಿಮ್ಮ ಫಿಟ್ನೆಸ್ ಬಗ್ಗೆ ಚಿಂತೆ ಮಾಡಬೇಕಿಲ್ಲ. ಒಂದು ಕಿ.ಮೀ. ಓಡಲು 4ಕ್ಕಿಂತ ಹೆಚ್ಚು ನಿಮಿಷ ತೆಗೆದುಕೊಂಡರೆ ನಿಮ್ಮ ಫಿಟ್ನೆಸ್ ಮಟ್ಟವು ತುಂಬಾ ಕಳಪೆಯಾಗಿದೆ ಎಂದು ಹೇಳಬಹುದು. ಇದು ನಿಮ್ಮ ಹೃದಯಕ್ಕೆ ನಿಜವಾದ ಪರೀಕ್ಷೆ.

ಟಿಪ್ಸ್ #4
ನೀವು 50ಕ್ಕಿಂತ ಹೆಚ್ಚಿನ ಬಸ್ಕಿ ತೆಗೆದರೆ ಆಗ ಫಿಟ್ನೆಸ್ ಮಟ್ಟವು ಉತ್ತಮವಾಗಿದೆ ಎನ್ನಬಹುದು. 15ಕ್ಕಿಂತ ಕಡಿಮೆ ಇದ್ದರೆ ಇನ್ನಷ್ಟು ಪ್ರಯತ್ನಪಡಬೇಕಾಗುತ್ತದೆ. ಇದು ನಿಮ್ಮ ಸಂಪೂರ್ಣ ಸಾಮರ್ಥ್ಯ ಮತ್ತು ಕಾಲುಗಳ ಸಾಮರ್ಥ್ಯವನ್ನು ಪರೀಕ್ಷಿಸುತ್ತದೆ.

ಟಿಪ್ಸ್ #5
ಸುಮಾರು 13 ಫುಲ್ ಅಪ್ಸ್ ಮಾಡಿದರೆ ಫಿಟ್ನೆಸ್ ಮಟ್ಟವು ಚೆನ್ನಾಗಿದೆ ಎಂದು ಹೇಳಬಹುದು. 3ಕ್ಕಿಂತ ಕಡಿಮೆ ಫುಲ್ ಅಪ್ಸ್ ಆಗಿದ್ದರೆ ಫಿಟ್ನೆಸ್ ಮಟ್ಟದ ಕಡೆ ಹೆಚ್ಚಿನ ಗಮನಹರಿಸಬೇಕು. ಇದು ನಿಮ್ಮ ಕೈಗಳು ಮತ್ತು ಬೆನ್ನಿನ ಮೇಲ್ಭಾಗವನ್ನು ಪರೀಕ್ಷೆಗೊಡ್ಡುತ್ತದೆ.

ಟಿಪ್ಸ್ #6
ನೀವು 50 ಫುಶ್ ಅಪ್ಸ್ ಮಾಡಿದರೆ ಫಿಟ್ನೆಸ್ ಮಟ್ಟವು ಒಳ್ಳೆಯದಾಗಿದೆ ಎಂದರ್ಥ. 15ಕ್ಕಿಂತ ಹೆಚ್ಚು ಮಾಡಲು ಸಾಧ್ಯವಿಲ್ಲವೆಂದಾದರೆ ಗಂಭೀರವಾಗಿ ಚಿಂತಿಸಬೇಕು. ಈ ವ್ಯಾಯಾಮವು ಭುಜ, ಎದೆ ಟ್ರಿಸೆಪ್ಸ್ ನ್ನು ಬಲಪಡಿಸುತ್ತದೆ.



Click it and Unblock the Notifications
