Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ದೇಹದ ಶಕ್ತಿಯನ್ನು ವೃದ್ಧಿಸುವ, ನೈಸರ್ಗಿಕ ಶಕ್ತಿವರ್ಧಕ ಜ್ಯೂಸ್
ಇಂದು ನಮ್ಮ ಜೀವನ ಹೇಗಾಗಿದೆ ಎಂದರೆ ಮನೆಯಿಂದ ಹೊರಗೆ ಹೋಗಿ ಮತ್ತೆ ಮನೆಗೆ ಬಂದು ಕುಳಿತ ಕೂಡಲೆ ಸುಸ್ತು ಬಂದು ನಮ್ಮನ್ನು ಆವರಿಸಿಕೊಂಡು ಬಿಡುತ್ತದೆ. ಮನೆಯಿಂದ ಐದು ಕಿ.ಮೀ ಇರುವ ಆಫೀಸಿನಿಂದ ಮನೆಗೆ ಬರುವಷ್ಟರಲ್ಲಿ ಟ್ರಾಫಿಕ್ ಸಿಗ್ನಲ್‍ಗಳ ಸೀಮೋಲ್ಲಂಘನ ಮಾಡಲಾಗದೆ ಬಸವಳಿಯುವ ಸರದಿ ನಮ್ಮದಾಗಿರುತ್ತದೆ. ಬರೀ ಟ್ರಾಫಿಕ್ ಮಾತ್ರ ನಮ್ಮನ್ನು ಸುಸ್ತು ಮಾಡುತ್ತದೆ ಎಂದು ಭಾವಿಸಬೇಡಿ. ಜೊತೆಗೆ ನಮ್ಮ ಅನಾರೋಗ್ಯಕರ ಆಹಾರ ಸೇವನೆ ಕ್ರಮವು ಸಹ ನಮ್ಮನ್ನು ಹಾಳು ಮಾಡುತ್ತಿದೆ. ಸೇವಿಸುವ ಆಹಾರದಲ್ಲಿ ಸತ್ವ ಇಲ್ಲವೆಂದಾದಲ್ಲಿ ನಮ್ಮ ದೇಹಕ್ಕೆ ಶಕ್ತಿ ಎಲ್ಲಿಂದ ಬರಬೇಕು?

ಮಾನವ ಅನಾದಿ ಕಾಲದಲ್ಲಿ ಬೇಟೆಯಾಡುತ್ತಾ ಬದುಕುತ್ತಿದ್ದ ಕಾಲದಲ್ಲಿ, ಪ್ರಾಣಿಗಳಿಗೆ ಸರಿಸಮಾನವಾದ ಸಾಮರ್ಥ್ಯವನ್ನು ಹೊಂದಿದ್ದನು. ಆಗ ಅವನಿಗೆ ಆರೋಗ್ಯದ ಸಮಸ್ಯೆಗಳು ಬಂದಾಗ ಅವನು ಮೊರೆ ಹೋಗುತಿದ್ದುದು ಸ್ವಾಭಾವಿಕ ಪದಾರ್ಥಗಳನ್ನೆ. ಸ್ವಾಭಾವಿಕವಾದ ಉತ್ಪನ್ನಗಳು ನಮ್ಮ ದೇಹಕ್ಕೆ ಶಕ್ತಿಯನ್ನು, ಆರೋಗ್ಯವನ್ನು ಮತ್ತು ತಾಕತ್ತನ್ನು ಎಲ್ಲವನ್ನೂ ನೀಡುತ್ತದೆ. ಬನ್ನಿ ಅದಕ್ಕಾಗಿಯೇ ಇಂದು ಬೋಲ್ಡ್‌ಸ್ಕೈ ನಿಮಗಾಗಿ ತಕ್ಷಣ ನಿಮ್ಮ ತಾಕತ್ತನ್ನು ಹೆಚ್ಚಿಸುವ ಜ್ಯೂಸ್ ರೆಸಿಪಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದೆ. ಆ ಜ್ಯೂಸ್ ಯಾವುದು ಎಂಬ ಕುತೂಹಲ ನಿಮಗಿದೆಯಲ್ಲವೇ? ಅದೇ ಬೀಟ್‌ರೂಟ್ ಜ್ಯೂಸ್. ಇದು ನಿಮ್ಮ ಶಕ್ತಿ ಮತ್ತು ಸಾಮರ್ಥ್ಯಗಳನ್ನು ತಕ್ಷಣ ಹೆಚ್ಚಿಸುತ್ತದೆ. ಪುರುಷರಿಗಾಗಿ 8 ಶಕ್ತಿವರ್ಧಕ ಆಹಾರಗಳು
ಬೀಟ್‌ರೂಟ್‌ಗಳಲ್ಲಿ ಸಾವಯವವಲ್ಲದ ನೈಟ್ರೇಟ್ ಸಮೃದ್ಧವಾಗಿರುತ್ತದೆ. ಇದು ನಿಮಗೆ ಶಕ್ತಿಯನ್ನು ನೀಡಲು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಅಧ್ಯಯನಗಳ ಪ್ರಕಾರ ಬೀಟ್‌ರೂಟ್ ಜ್ಯೂಸ್ ಪ್ರತಿಯೊಬ್ಬರ ಕಾರ್ಯ ವೈಖರಿಯನ್ನು ಸುಧಾರಿಸುತ್ತದೆ ಎಂದು ತಿಳಿದು ಬಂದಿದೆ.
ಬಹುತೇಕ ಅಥ್ಲಿಟ್‌ಗಳು ತಮ್ಮ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಲು ಬೀಟ್‌ರೂಟ್ ರಸದ ಮೊರೆ ಹೋಗುತ್ತಾರೆ. ಕೆಲವೊಂದು ಅಧ್ಯಯನಗಳ ಪ್ರಕಾರ ಬೀಟ್‌ರೂಟ್ ರಸವನ್ನು ಸೇವಿಸಿದರೆ ಆಯಾಸವಿಲ್ಲದೆ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡಬಹುದಂತೆ. ಬನ್ನಿ ಇನ್ನು ತಡ ಮಾಡದೆ ಈ ರಸವನ್ನು ತಯಾರಿಸಿಕೊಳ್ಳುವ ವಿಧಾನವನ್ನು ತಿಳಿದುಕೊಳ್ಳೋಣ...
ಅಗತ್ಯವಾದ ಪದಾರ್ಥಗಳು
*1-2 ಹಣ್ಣಾದ ಬೀಟ್‌ರೂಟ್
*1 ಸೇಬು
*1 ಶುಂಠಿ ತುಂಡು
*ಬೀಟ್‌ರೂಟ್ ಅನ್ನು ಮೊದಲು ಚೆನ್ನಾಗಿ ತೊಳೆದುಕೊಂಡು, ಸಣ್ಣ ಸಣ್ಣ ಹೋಳು ಮಾಡಿಕೊಳ್ಳಿ. ನಂತರ ಇದನ್ನು ಶೋಧಿಸಿಕೊಳ್ಳಿ. ನಿಮಗೆ ಅಗತ್ಯವಾದರೆ ಇದಕ್ಕೆ ಐಸ್ ಕ್ಯೂಬ್ ಸಹ ಬೆರೆಸಿಕೊಳ್ಳಬಹುದು.
*ವಾರಕ್ಕೆ 3-4 ಬಾರಿ ಈ ರಸವನ್ನು ಸೇವಿಸಿ. ಆಗ ನೋಡಿ, ನಿಮ್ಮ ಸಾಮರ್ಥ್ಯವು ಹೇಗೆ ಸುಧಾರಿಸುತ್ತದೆ ಎಂದು. ಆದರೆ ಒಂದು ಮಾತು ನೆನಪಿಡಿ. ಇದನ್ನು ಒಂದೇ ಬಾರಿಗೆ ಸೇವಿಸುವ ಮೊದಲು ಸ್ವಲ್ಪ ಸೇವಿಸಿ, ರುಚಿ ನೋಡಿ. ಇದರ ರುಚಿಯು ನಿಮಗೆ ಒಗ್ಗಿದರೆ ಮುಂದುವರಿಯಿರಿ. ಇಲ್ಲವಾದರೆ ಬೇಡ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


