Latest Updates
-
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ -
ಹಬ್ಬದ ಫ್ಯಾಷನ್: ಈ ಟಿಪ್ಸ್ ಫಾಲೋ ಮಾಡಿ ಮಿಂಚಿ!
ನೀವು ಕೂಡ ಮುಪ್ಪಿನ ಕಬಂಧಬಾಹುವಿಗೆ ಸಿಲುಕಬಹುದು!
ವೃದ್ಧಾಪ್ಯ ಜೀವನದ ಒಂದು ಅನಿವಾರ್ಯ ಘಟ್ಟವಾಗಿದೆ. ವಯಸ್ಸಾಗುತ್ತಿದ್ದಂತೆಯೇ ಎಲ್ಲರೂ ಯೌವನದಿಂದ ಮುಪ್ಪಿಗೆ ಜಾರಲೇ ಬೇಕು. ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಿಸರ್ಗದ ನಿಯಮದ ಅನುಸಾರ ಬಾಲ್ಯ ಯೌವನ ಮತ್ತು ವೃದ್ಧಾಪ್ಯ ಪ್ರತಿ ಜೀವಿ ಅನುಭವಿಸಬೇಕಾದ ಘಟ್ಟಗಳಾಗಿವೆ. ಆದರೆ ವೃದ್ಧಾಪ್ಯ ಆವರಿಸುವ ವಯಸ್ಸು ಪ್ರತಿ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಇದಕ್ಕೆ ಜೀವನಶೈಲಿ, ಕುಟುಂಬದ ಇತಿಹಾಸ, ಭಾವಾವೇಶ, ಉದ್ವೇಗ, ಆರೋಗ್ಯದ ಲಕ್ಷಣಗಳು, ಔಷಧಿಗಳ ಪರಿಣಾಮಗಳು, ಉತ್ತಮ ಆಹಾರದ ಕೊರತೆ ಮೊದಲಾದ ಹತ್ತು ಹಲವು ಕಾರಣಗಳಿವೆ.
ಎಲ್ಲರಿಗೂ ಗೊತ್ತಿರವ ಹಾಗೆ ವೃದ್ಧಾಪ್ಯವನ್ನು ತಡೆಯಲು ಸಾಧ್ಯವಿಲ್ಲದಿದ್ದರೂ ಸಾಕಷ್ಟು ಮುಂದೂಡಲು ಸಾಧ್ಯ. ಇದಕ್ಕಾಗಿ ಮೊತ್ತ ಮೊದಲು ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳುವುದಕ್ಕೆ ಪ್ರಥಮ ಆದ್ಯತೆ ನೀಡಬೇಕು. ಉತ್ತಮ ಪೌಷ್ಠಿಕ ಆಹಾರ, ಸಾಕಷ್ಟು ನಿದ್ದೆ, ವ್ಯಾಯಾಮ ಮೊದಲಾದವುಗಳಿಂದ ಆರೋಗ್ಯ ಪಡೆಯುವುದರ ಜೊತೆಗೇ ಮುಪ್ಪನ್ನೂ ಮುಂದೂಡಬಹುದು. ಆದರೆ ಅದಕ್ಕೂ ಮುನ್ನ ಮುಪ್ಪು ಬೇಗನೇ ಆವರಿಸಲು ಯಾವ ಕಾರಣಗಳಿವೆ ಎಂದು ತಿಳಿದರೆ ಇದನ್ನು ಅನುಸರಿಸದೇ ಮುಪ್ಪು ಬೇಗನೇ ಆವರಿಸದಿರುವಂತೆ ನೋಡಿಕೊಳ್ಳುವುದು ಜಾಣತನವಾಗಿದೆ.
ಅದರಲ್ಲೂ ಆಫೀಸ್‌ನಲ್ಲಿ ಕೆಲಸ ಕಾರ್ಯವನ್ನು ನಿರ್ವಹಿಸುತ್ತಿರುವಾಗ ನೀವು ಗಂಟೆಗಟ್ಟಲೆ ಒಂದೇ ಜಾಗದಲ್ಲಿ ಕುಳಿತಿರುತ್ತೀರಿ, ಜಡವಾದ ಜೀವನವು ನಿಮ್ಮ ವಯಸ್ಸನ್ನು ಹೆಚ್ಚು ಮಾಡುವುದಷ್ಟೇ ಅಲ್ಲ, ನಿಮಗೆ ಹಲವಾರು ಕಾಯಿಲೆಗಳನ್ನು ನೀಡುತ್ತದೆ. ಒಂದು ವೇಳೆ ನೀವು ಕುಳಿತು ಕೆಲಸ ಮಾಡುವ ಹುದ್ದೆಯಲ್ಲಿದ್ದರೆ, ಗಂಟೆಗೊಮ್ಮೆ ಎದ್ದು ಹೊರಹೋಗಿ ಬನ್ನಿ, ಆಫೀಸಿನಲ್ಲಿ ಹೊರಗೆ ಹೋಗುವ ನಿರ್ಬಂಧವಿದ್ದರೆ, ಅದರೊಳಗೆಯೇ ಅಲ್ಲಿ-ಇಲ್ಲಿ ಸುತ್ತಾಡಿ. ಜೊತೆಗೆ ವಾರಾಂತ್ಯದಲ್ಲಿ ನಿಮಗೆ ಇಷ್ಟವಾಗುವ ಆಟಗಳಲ್ಲಿ ಪಾಲ್ಗೊಳ್ಳಿ. ಇದರಿಂದ ನಿಮಗೆ ಅಗತ್ಯವಾಗಿ ಬೇಕಾಗುವ ದೈಹಿಕ ವ್ಯಾಯಾಮ ದೊರೆಯುತ್ತದೆ. ಬನ್ನಿ ನಿಮ್ಮನ್ನು ವೃದ್ಧಾಪ್ಯಕ್ಕೆ ದೂಡುವ ಸಂಗತಿಗಳಾವುವು ಎಂಬುದನ್ನು ಮುಂದೆ ಓದಿ...

ಯಾವಾಗಲು ಟಿವಿ ನೋಡುತ್ತಾ ಇರುತ್ತೀರಿ
ಬ್ರಿಟೀಷ್ ಜರ್ನಲ್ ಆಫ್ ಸ್ಪೋರ್ಟ್ಸ್ ಮೆಡಿಸಿನ್ 2012 ರ ಪ್ರಕಾರ 25 ತುಂಬಿದವರು ಒಂದು ಗಂಟೆ ಕುಳಿತು ಟಿವಿ ನೋಡಿದರೆ ನಿಮ್ಮ ಆಯಸ್ಸಿನಲ್ಲಿ 21.8 ನಿಮಿಷಗಳನ್ನು ಕಡಿಮೆ ಮಾಡಿಕೊಳ್ಳುತ್ತೀರಂತೆ. ಆದ್ದರಿಂದ ಟಿವಿಯನ್ನು ನೋಡಿ, ಅದರ ಮುಂದೆ ಕುಳಿತೇ ಇರಬೇಡಿ. ಅದರಿಂದ ಹೊರಗೆ ಪ್ರಪಂಚ ಇದೆ ಎಂಬುದನ್ನು ಮರೆಯಬೇಡಿ.

ಅಗತ್ಯಕ್ಕೆ ತಕ್ಕಷ್ಟು ನಿದ್ದೆ ಮಾಡದಿದ್ದರೆ
ಒಂದು ವೇಳೆ ನೀವು ಎಂಟು ಗಂಟೆಗಳ ಕಾಲ ನಿದ್ದೆ ಮಾಡಲಿಲ್ಲವಾದಲ್ಲಿ, ನಿಮ್ಮ ತ್ವಚೆಯು ಬೇಗ ವಯಸ್ಸಾದಂತೆ ಕಾಣುತ್ತದೆ. ಅದನ್ನು ತಡೆಯಲು ಅಗತ್ಯ ಪ್ರಮಾಣದಷ್ಟು ನಿದ್ದೆ ಮಾಡಿ. ಹೌದು, ನಿದ್ದೆ ಮಾಡಬೇಕಾದ ಸಮಯದಲ್ಲಿ ಎಚ್ಚರಿದ್ದು ಎಚ್ಚರಿರಬೇಕಾದ ಸಮಯದಲ್ಲಿ ನಿದ್ದೆ ಹೋಗುವುದು, ಅತಿ ಹೆಚ್ಚು ಅಥವಾ ಅತಿ ಕಡಿಮೆ ಸಮಯ ನಿದ್ದೆ ಮಾಡುವುದು ಮೊದಲಾದವು ಕ್ರಮಬದ್ದವಲ್ಲದ ನಿದ್ದೆಯ ಅಭ್ಯಾಸಗಳಾಗಿವೆ. ಉತ್ತಮ ಆರೋಗ್ಯಕ್ಕೆ ನಿತ್ಯವೂ ನಿಯಮಿತ ಸಮಯದಲ್ಲಿ ಆರರಿಂದ ಎಂಟು ಗಂಟೆಗಳ ಗಾಢ ನಿದ್ದೆ ಬೇಕು.

ಅಗತ್ಯವಾದಷ್ಟು ಒಮೆಗಾ-3 ಕೊಬ್ಬಿನ ಆಮ್ಲಗಳನ್ನು ಸೇವಿಸುತ್ತಿಲ್ಲ
ಒಮೆಗಾ-3 ಕೊಬ್ಬಿನ ಆಮ್ಲಗಳು ನಮ್ಮ ದೇಹಕ್ಕೆ ಅಗತ್ಯವಿರುವ ಆರೋಗ್ಯಕರ ಕೊಬ್ಬು ಆಗಿದೆ. ನಾವು ಸೇವಿಸುವ ಆಹಾರದಲ್ಲಿ ಕೊಬ್ಬು ಇರಬಾರದು. ಆದರೆ ಆರೋಗ್ಯಕರವಾದ ಕೊಬ್ಬು ನಮ್ಮ ಆರೋಗ್ಯಕ್ಕೆ ಮತ್ತು ತೂಕ ಕಡಿಮೆ ಮಾಡಿಕೊಳ್ಳಲು ಮತ್ತು ವಯಸ್ಸಾಗದಂತೆ ತಡೆಯಲು ತೀರಾ ಮುಖ್ಯ. ಈ ಆಮ್ಲಗಳು ನಿಮ್ಮ ಮೆದುಳಿನ ಕೋಶಗಳು ಹಾಳಾಗುವುದನ್ನು ಸಹ ತಡೆಯುತ್ತವೆ.

ಧೂಮಪಾನ ಮತ್ತು ಮದ್ಯಪಾನ
ಸಾಮಾಜಿಕ ಪಿಡುಗುಗಳಾದ ಈ ಎರಡು ದುರಭ್ಯಾಸಗಳು ಮುಪ್ಪನ್ನು ಬೇಗೇ ಆವರಿಸುವಲ್ಲಿ ಪ್ರಮುಖ ಕಾರಣವಾಗಿವೆ ಎಂಬ ಮಾತಿನಲ್ಲಿ ಯಾವುದೇ ಸಂಶಯವಿಲ್ಲ. ಇವುಗಳ ಸೇವನೆಯಿಂದ ದೇಹದ ಮುಖ್ಯ ಅಂಗಗಳಾದ ಮೂತ್ರಪಿಂಡಗಳು ಮತ್ತು ಶ್ವಾಸಕೋಶಗಳು ಬಾಧೆಗೊಳಗಾಗುತ್ತವೆ. ಅಲ್ಲದೇ ಚರ್ಮವೂ ಸಡಿಲಗೊಂಡು ನೆರಿಗೆಗಳು ಮೂಡಲು ತೊಡಗುತ್ತದೆ. ದಿನಗಳೆದಂತೆ ಇದರ ವ್ಯಸನಕ್ಕೆ ಒಳಗಾದವರು ಸೇವನೆಯ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಆರೋಗ್ಯವನ್ನು ಇನ್ನಷ್ಟು ಕೆಡಿಸಿಕೊಳ್ಳುವುದಲ್ಲದೇ ಜೋಲುಬಿದ್ದ ಚರ್ಮ, ಗುಳಿಬಿದ್ದ ಕಣ್ಣುಗಳು, ಕೆಲಭಾಗ ಕೆಂಪಗಾಗಿ ಸವೆದ ಚರ್ಮ ಮೊದಲಾದ ಲಕ್ಷಣಗಳಿಂದ ಚಿಕ್ಕವಯಸ್ಸಿಗೇ ಮುಪ್ಪಿಗೀಡಾದವರಂತೆ ಕಾಣುತ್ತಾರೆ.

ಸೋಡಾ ಪಾನೀಯಗಳ ಸೇವನೆ
ಸೋಡಾ ಪಾನೀಯಗಳಲ್ಲಿರುವ ಅಧಿಕ ಸಕ್ಕರೆ ಅಂಶವು ನಿಮ್ಮ ತ್ವಚೆಯು ಶೀಘ್ರವಾಗಿ ವಯಸ್ಸಾದಂತೆ ಕಾಣುವಂತೆ ಮಾಡುತ್ತದೆ. ಜೊತೆಗೆ ನಿಮ್ಮ ಜೀರ್ಣ ಕ್ರಿಯೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಸೋಡಾ ಪಾನೀಯಗಳನ್ನು ಸೇವಿಸಬೇಡಿ.



Click it and Unblock the Notifications











