Latest Updates
-
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು!
ಮಾನಸಿಕ ರೋಗವಾದ 'ಅನೋರೆಕ್ಸಿಯಾ' ಕಾಯಿಲೆಯ ಲಕ್ಷಣಗಳೇನು?
ಕೆಲವರಿಗೆ ತಮ್ಮ ದೇಹದಲ್ಲಿ ಏನೋ ಕೊರತೆ ಕಂಡುಬಂದು ಅದಕ್ಕೆ ಪ್ರತೀಕಾರವೆಂಬಂತೆ ಅನಾರೋಗ್ಯಕರವಾದ ಚಟುವಟಿಕೆಗಳನ್ನು ಪಾಲಿಸುತ್ತಾರೆ. ಉದಾಹರಣೆಗೆ ತನ್ನ ಕೈ ಸ್ವಚ್ಛವಾಗಿಲ್ಲವೆಂದು ಸತತವಾಗಿ ಕೈ ತೊಳೆದುಕೊಳ್ಳುವುದು. ವೈದ್ಯವಿಜ್ಞಾನ ಇಂತಹ ಎಲ್ಲಾ ಮಾನಸಿಕ ಕಾಯಿಲೆಗಳನ್ನು ಅಭ್ಯಸಿಸಿ ಒಂದೊಂದು ಹೆಸರುಗಳನ್ನು ಕೊಟ್ಟಿದೆ. ಕೈ ತೊಳೆಯುವ ಈ ಗೀಳಿಗೆ Mysophobia ಎಂದು ಕರೆಯುತ್ತಾರೆ. ಇಂತಹದ್ದೇ ಇನ್ನೊಂದು ಮಾನಸಿಕ ಕಾಯಿಲೆಯಿಂದರೆ ಅನೋರೆಕ್ಸಿಯಾ ನರ್ವೋಸಾ (anorexia nervosa) ಎಂಬ ಗೀಳು.
ಸಾಮಾನ್ಯವಾಗಿ ನಮಗೆಲ್ಲರಿಗೆ ಸ್ವಾದಿಷ್ಟವಾದ ಊಟವನ್ನು ನೆನೆಸಿಕೊಂಡರೇ ಬಾಯಿಯಲ್ಲಿ ನೀರೂರುತ್ತದೆ. (ಇದು ಸ್ವಾಭಾವಿಕ), ಊಟ ಎದುರಿಗಿದ್ದರೆ ನಾವು ಹೊಟ್ಟೆ ತುಂಬುವಷ್ಟು ಊಟ ಮಾಡಿ ತೃಪ್ತಿ ಹೊಂದುತ್ತೇವೆ. ಆದರೆ ಅಗ್ನಿಮಾಂದ್ಯ (ಅನೋರೆಕ್ಸಿಯಾ ನರ್ವೋಸಾ) ಇರುವ ವ್ಯಕ್ತಿಗಳು ಇದಕ್ಕೆ ವ್ಯತಿರಿಕ್ತರಾಗಿ ವರ್ತಿಸುತ್ತಾರೆ. ತಮ್ಮ ತೂಕ ಅಗತ್ಯಕ್ಕಿಂತಲೂ ಹೆಚ್ಚಿರುವುದರಿಂದ ಅತ್ಯಂತ ಕಡಿಮೆ ಊಟ ಮಾಡಬೇಕು ಎಂಬ ಮಾತು ಅವರ ಮನದಾಳದಲ್ಲಿ ಹುದುಗಿರುತ್ತದೆ. ತಮ್ಮ ತೂಕ (ಈಗಾಗಲೇ ತೂಕ ಕಳೆದುಕೊಂಡು ಕಡ್ಡಿಪೈಲ್ವಾನನಾಗಿದ್ದರೂ) ಕಳೆದುಕೊಳ್ಳಲು ಸದಾ ಒಂದಾದರೊಂದು ಚಟುವಟಿಕೆಯಲ್ಲಿ ಮಗ್ನರಾಗಿರುತ್ತಾರೆ.
ಸತತವಾಗಿ ಊಟದಿಂದ ವಿಮುಖರಾಗುವುದರಿಂದ ದೇಹದಿಂದ ಹೆಚ್ಚಿನ ಕೊಬ್ಬು, ಸ್ನಾಯುಗಳು ಕರಗಿ ಮೂಳೆ ಚಕ್ಕಳವಾಗಿರುತ್ತಾರೆ. ಬಳಿಕ ದೇಹದ ಯಾವುದೋ ಒಂದು ರೋಗ ಅವರನ್ನು ಪ್ರಬಲವಾಗಿ ವ್ಯಾಪಿಸಿಕೊಂಡು ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಈ ತೊಂದರೆಗೂ ತನ್ನ ತೂಕವೇ ಕಾರಣ ಎಂದು ಹಲಬುತ್ತಾ ಇನ್ನಷ್ಟು ತೂಕ ಕಳೆದುಕೊಳ್ಳಲು ಯತ್ನಿಸುತ್ತಿರುತ್ತಾರೆ. ಸೂಕ್ತ ಚಿಕಿತ್ಸೆ ಮತ್ತು ಪ್ರೀತಿಯ ಮನವೊಲಿಕೆಯಿಲ್ಲದಿದ್ದರೆ ಪ್ರಾಣಾಪಾಯವನ್ನೂ ತಂದುಕೊಳ್ಳುತ್ತಾರೆ. ಎಚ್ಚರ: ಔಷಧಿ ತೆಗೆದುಕೊಳ್ಳುವಾಗ ಇಂತಹ ತಪ್ಪುಗಳನ್ನು ಮಾಡದಿರಿ!
ಈ ಪರಿಸ್ಥಿತಿ ಬರೆಯ ಒಂದೆರಡು ದಿನಗಳಿಂದ ಬಂದಿರುವುದಲ್ಲ, ತನ್ನ ತೂಕದ ಬಗ್ಗೆ ಹಲವು ವರ್ಷಗಳ ಸತತ ದ್ವೇಶದಿಂದ ಮೂಡಿಬಂದಿರುವ ಉಲ್ಬಣ ಸ್ಥಿತಿಗೆ ಬರುತ್ತದೆ. ಈ ಸ್ಥಿತಿಗೆ ಬಂದ ಬಳಿಕ ಸಾಮಾನ್ಯ ಸ್ಥಿತಿಗೆ ಹಿಮ್ಮರಳಲು ದೀರ್ಘಕಾಲದ ಚಿಕಿತ್ಸೆ ಮತ್ತು ನಿಗಾವಹಿಸುವುದು ಅಗತ್ಯವಾಗಿದೆ. ಈ ಪರಿಸ್ಥಿತಿಯನ್ನು ಪ್ರಾರಂಭದಿಂದಲೇ ಗಮನಿಸಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಅಗ್ನಿಮಾಂದ್ಯ ಸ್ಥಿತಿಗೆ ಬರದಿರುವಂತೆ ನೋಡಿಕೊಳ್ಳುವುದು ಜಾಣತನವಾಗಿದೆ. ಈ ಬಗ್ಗೆ ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

ಕೆಲ ಹೊತ್ತಿನ ಊಟವನ್ನು ಬಿಟ್ಟು ಬಿಡುವುದು
ಒಂದು ವೇಳೆ ಈ ವ್ಯಕ್ತಿ ಬೇಕು ಬೇಕೆಂದೇ ಒಂದು ಅಥವಾ ಎರಡು ಹೊತ್ತಿನ ಊಟವನ್ನು ಬಿಟ್ಟುಬಿಟ್ಟರೆ ಈ ವ್ಯಾಧಿ ನಿಧಾನವಾಗಿ ಆವರಿಸುತ್ತಿದೆ ಎಂದು ಅರ್ಥೈಸಿಕೊಳ್ಳಬಹುದು.

ಊಟ ಮಾಡುವ ಅಭ್ಯಾಸದಲ್ಲಿ ಹಠಾತ್ತನೇ ಬದಲಾವಣೆಯಾಗುವುದು
ಈ ವ್ಯಕ್ತಿಗಳು ತಮ್ಮ ಊಟಮಾಡುವ ಅಭ್ಯಾಸಗಳು ಮತ್ತು ಆಹಾರಗಳಲ್ಲಿ ಹಠಾತ್ತಾಗಿ ಬದಲಾವಣೆಯನ್ನು ಬಯಸುವುದು ರೋಗದ ಪ್ರಮುಖ ಲಕ್ಷಣವಾಗಿದೆ. ಉದಾಹರಣೆಗೆ ಪ್ರತಿದಿನ ಮಧ್ಯಾಹ್ನ ಒಂದು ಗಂಟೆಗೆ ಊಟ ಮಾಡುತ್ತಿದ್ದ ವ್ಯಕ್ತಿ ಥಟ್ಟನೇ ನಾನು ನಾಳೆಯಿಂದ ಸಂಜೆ ನಾಲ್ಕು ಗಂಟೆಗೆ ತಿನ್ನುತ್ತೇನೆ ಎನ್ನುವುದು. ಅಥವಾ ಬೇರೇನೂ ಬೇಡ, ಕೇವಲ ಬಾಳೆಹಣ್ಣನ್ನು ಮಾತ್ರ ತಿನ್ನುತ್ತೇನೆ ಎನ್ನುವುದ್ ಅಥವಾ ಊಟ ಮಾಡಿದರೆ ಅರ್ಧ ಇಡ್ಲಿ ಮಾತ್ರ ತಿನ್ನುತ್ತೇನೆ ಎನ್ನುವುದು ಇದರ ಲಕ್ಷಣಗಳಾಗಿವೆ.

ತೂಕದಲ್ಲಿ ಭಾರೀ ಇಳಿಕೆ ಕಂಡುಬರುವುದು
ವ್ಯಕ್ತಿಯ ತೂಕದಲ್ಲಿ ಸಾಮಾನ್ಯವಾಗಿರುವುದಕ್ಕಿಂತಲೂ ಭಾರೀ ಪ್ರಮಾಣದಲ್ಲಿ ತೂಕ ಕಡಿಮೆಯಾಗಿರುವುದು ಮತ್ತು ಈ ತೂಕವೂ ಹೆಚ್ಚೇ ಎಂದು ವಾದಿಸುವುದು ಇನ್ನೊಂದು ಪ್ರಮುಖ ಲಕ್ಷಣವಾಗಿದೆ.

ತೂಕ ಕಳೆದುಕೊಂಡಿರುವುದನ್ನು ಮರೆಮಾಚಲು ಪ್ರಯತ್ನಿಸುವುದು
ಸಾಮಾನ್ಯವಾಗಿ ತೂಕ ಕಳೆದುಕೊಂಡ ವ್ಯಕ್ತಿಯನ್ನು ಸಮಾಜ ಕಳಕಳಿಯಿಂದ ವಿಚಾರಿಸುತ್ತದೆ. ಈ ಕಳಕಳಿ ಅಗ್ನಿಮಾಂದ್ಯ (ಅನೋರೆಕ್ಸಿಯಾ ನರ್ವೋಸಾ) ತೊಂದರೆಯಿರುವ ವ್ಯಕ್ತಿಗೆ ಕಿರಿಕಿರಿ ಎಂದು ಅನ್ನಿಸುತ್ತದೆ. ತನ್ನನ್ನು ಯಾರೂ ಆ ರೀತಿ ಕೇಳಬಾರದು ಎಂಬ ಇರಾದೆಯಿಂದ ತನ್ನ ಕೃಶಕಾಯ ತೋರದಂತಹ ಉಡುಪುಗಳನ್ನೇ ತೊಡುತ್ತಾರೆ. ಇದು ಇನ್ನೊಂದು ಪ್ರಮುಖ ಲಕ್ಷಣವಾಗಿದೆ.

ದೇಹದ ಅನಗತ್ಯ ಸ್ಥಳಗಳಲ್ಲಿ ರೋಮಗಳು ಮೂಡುವುದು
ದೇಹ ಅತ್ಯಂತ ಕೃಷವಾಗಿದ್ದರೆ ದೇಹ ಉತ್ಪಾದಿಸಿದ ತಾಪಮಾನವನ್ನು ಕಡಿಮೆಗೊಳಿಸಲು ದೇಹಕ್ಕೆ ಸಾಧ್ಯವಾಗದೇ ಅನಿವಾರ್ಯವಾಗಿ ಕೆಲವು ಸ್ಥಳಗಳಲ್ಲಿ ರೋಮಗಳನ್ನು ಹೆಚ್ಚಿಸಬೇಕಾಗುತ್ತದೆ. ಮುಖ (ಮೀಸೆ ಮತ್ತು ಗಡ್ಡ, ವಿಶೇಷವಾಗಿ ಮಹಿಳೆಯರಲ್ಲಿ), ಕೈ, ಕಾಲುಗಳಲ್ಲಿ ಹೆಚ್ಚಿನ ರೋಮಗಳು ಹುಟ್ಟಿರುವುದು ಕಂಡುಬಂದರೆ ಅಗ್ನಿಮಾಂದ್ಯತೆ ಉಲ್ಬಣಗೊಂಡಿದೆ ಎಂದು ಅರ್ಥೈಸಿಕೊಳ್ಳಬೇಕು.

ತನ್ನ ಬಗ್ಗೆ ಕೀಳರಿಮೆಯಲ್ಲಿ ಮಾತನಾಡುವುದು
ಈಗಾಗಲೇ ಕೃಶಶರೀರಿಯಾಗಿದ್ದರೂ ತಾನು ದಪ್ಪನಾಗಿದ್ದೇನೆ ಎಂಬಂತೆ ಕೀಳರಿಮೆಯ ಮಾತುಗಳನ್ನಾಡುವುದು ಇನ್ನೊಂದು ಲಕ್ಷಣವಾಗಿದೆ. ಉದಾಹರಣೆಗೆ ಕಾರಿನಲ್ಲಿ ಹಿಂದೆ ಮೂರು ಜನರು ಕುಳಿತುಕೊಳ್ಳಲು ಅವಕಾಶವಿದ್ದರೂ ಮೂರನೆಯವರಾಗಿ ಬರಲು ಒಪ್ಪದಿರುವುದು.

ಋತುಚಕ್ರದ ದಿನಗಳಲ್ಲಿ ಭಾರೀ ಏರುಪೇರಾಗುವುದು
ಯುವತಿಯರಲ್ಲಿ ಅತಿ ಬೇಗನೇ ಅಥವಾ ಅತ್ಯಂತ ತಡವಾಗಿ ಋತುಚಕ್ರದ ದಿನಗಳು ಬರುವುದು ಅಗ್ನಿಮಾಂದ್ಯದ ಲಕ್ಷಣವಾಗಿದೆ. ಈ ವ್ಯಾಧಿಗೆ ಒಳಗಾದವರಲ್ಲಿ ಸುಮಾರು ಮೂರು ತಿಂಗಳು ಋತುಸ್ರಾವವಾಗದಿರುವುದು ಕಂಡುಬಂದಿದೆ.

ನಡವಳಿಕೆಯಲ್ಲಿ ಬದಲಾವಣೆ
ನಿಧಾನವಾಗಿ ಈ ವ್ಯಕ್ತಿಗಳು ತಮ್ಮನ್ನು ತಾವೇ ಒಂಟಿಯಾಗಿಸಿಕೊಳ್ಳುತ್ತಾ ಹೋಗುತ್ತಾರೆ. ತಮ್ಮ ಮನೆಯವರೊಂದಿಗೆ, ಸ್ನೇಹಿತರೊಂದಿಗೆ ಮಾತನಾಡುವುದನ್ನು ಕಡಿಮೆಗೊಳಿಸಿ ತಮ್ಮದೇ ಗೋಪ್ಯ ಜಗತ್ತಿನಲ್ಲಿ ವಿಹರಿಸುತ್ತಿರುತ್ತಾರೆ.

ರಕ್ತದೊತ್ತಡ ಭಾರೀ ಪ್ರಮಾಣದಲ್ಲಿ ಕುಸಿಯುವುದು
ಯಾವಾಗಲಾದರೂ ಇವರ ರಕ್ತದೊತ್ತಡವನ್ನು ಪರೀಕ್ಷಿಸಿದರೂ ಸಾಮಾನ್ಯವಾಗಿರುವುದಕ್ಕಿಂತ ಅತಿ ಕಡಿಮೆ ಇರುವುದು ಅಗ್ನಿಮಾಂದ್ಯದ ಲಕ್ಷಣವಾಗಿದೆ.

ಚರ್ಮ ಒಣಗಿ ಸುಕ್ಕುಗೊಂಡಿರುವುದು
ಊಟವನ್ನೇ ಸರಿಯಾಗಿ ಮಾಡದಿರುವ ಕಾರಣ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರಕದೇ ಸೊರಗುತ್ತದೆ. ಇದರ ನೇರ ಪರಿಣಾಮವನ್ನು ಚರ್ಮದ ಕಾಂತಿಯಲ್ಲಿ ಗಮನಿಸಬಹುದು. ಈ ವ್ಯಕ್ತಿಗಳ ಚರ್ಮ ಒಣಗಿ, ಸುಕ್ಕುಸುಕ್ಕಾಗಿರುತ್ತವೆ ಹಾಗೂ ಕಾಂತಿಯನ್ನು ಕಳೆದುಕೊಂಡು ಸಪ್ಪೆಯಾಗಿರುತ್ತವೆ. ಚಿಕ್ಕ ಗೀರು ಬಿದ್ದರೂ ಸುಲಭವಾಗಿ ಗಾಯವಾಗುವಂತಿರುತ್ತದೆ.
ಇದರಲ್ಲಿ ಯಾವುದೇ ಒಂದು ಲಕ್ಷಣ ಕಂಡುಬಂದರೂ ಕೂಡಲೇ ಮನೆಯವರು ವೈದ್ಯರಲ್ಲಿ ತಪಾಸಣೆಗೊಳಪಡಿಸಿ ಸೂಕ್ತ ಚಿಕಿತ್ಸೆ ನೀಡುವುದು ಅಗತ್ಯವಾಗಿದೆ. ಪ್ರಮುಖವಾಗಿ ಮನೆಯವರು ಇವರ ವರ್ತನೆಯನ್ನು ಪರಿಗಣಿಸದೇ ಪ್ರೀತಿಯಿಂದ ನೋಡಿಕೊಂಡಲ್ಲಿ ಶೀಘ್ರವಾಗಿ ಗುಣಮುಖರಾಗುತ್ತಾರೆ. ಒಂದು ಸಮೀಕ್ಷೆಯ ಪ್ರಕಾರ ಈ ವ್ಯಾಧಿ ಹೆಚ್ಚಾಗಿ 20ರಿಂದ 50ರ ವಯಸ್ಸಿನ ಮಹಿಳೆಯರಲ್ಲಿ ಕಂಡುಬರುತ್ತದೆ. (85 ರಿಂದ 95 ಪ್ರತಿಶತ).



Click it and Unblock the Notifications











