Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ದೇಹದ ಮೂಳೆಗಳ ಸಾಂದ್ರತೆ ಹೆಚ್ಚಿಸಲು ಸರಳ ಸೂತ್ರ
ಸಾಮಾನ್ಯವಾಗಿ ಮಕ್ಕಳ ಮೂಳೆಗಳು ವಯಸ್ಕರಷ್ಟೇ ಗಾತ್ರ ಪಡೆದಿದ್ದರೂ ವಯಸ್ಕರ ದೃಢತೆ ಪಡೆದಿರುವುದಿಲ್ಲ. ಬೆಳವಣಿಗೆ ನಿಂತ ಬಳಿಕ ಮೂಳೆಗಳು ಗಟ್ಟಿಯಾಗುತ್ತಾ ಹೋಗುತ್ತವೆ. ಆದರೆ ವಯಸ್ಸಾದಂತೆ ಮೂಳೆಗಳೂ ಇತರ ಅಂಗಗಳಂತೆ ಕೊಂಚ ಶಿಥಿಲವಾಗುತ್ತವೆ. ಅಷ್ಟೇ ಅಲ್ಲದೆ ಉತ್ತಮ ಆಹಾರ ಮತ್ತು ಆರೈಕೆ ಇಲ್ಲದಿದ್ದರೆ ಚಿಕ್ಕವಯಸ್ಸಿನಲ್ಲಿಯೇ ಶಿಥಿಲಗೊಳ್ಳಲು ಪ್ರಾರಂಭವಾಗುತ್ತದೆ.
ಚಿಕ್ಕದಾಗಿ ಬಿದ್ದಿದ್ದೇ ಕಾರಣವಾಗಿ ಮೂಳೆ ಸುಲಭವಾಗಿ ತುಂಡಾಗುವುದು ಅಥವಾ ಕೀಲುಗಳಿಂದ ಕಳಚಿಕೊಳ್ಳುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ. ಇದಕ್ಕೆ ಮುಖ್ಯ ಕಾರಣ ಮೂಳೆಗಳಲ್ಲಿ ಗಾಳಿಗುಳ್ಳೆಗಳು ತುಂಬಿ ದೃಢತೆ ಕಡಿಮೆಯಾಗುವುದು(Osteoporosis). ದೇಹದ ಮೂಳೆಗಳ ಆರೋಗ್ಯ ವರ್ಧನೆಗೆ ಸರಳ ಸೂತ್ರ
ದೇಹದ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳುವಲ್ಲಿ ಮೂಳೆಗಳ ಸಾಂದ್ರತೆ ಕಡಿಮೆಯಾಗದಂತೆ ನೋಡಿಕೊಳ್ಳುವುದೂ ಮುಖ್ಯ. ಅದರಲ್ಲೂ ನಡು ವಯಸ್ಸು ದಾಟಿದ ಬಳಿಕ ಹೆಚ್ಚಿನ ಕಾಳಜಿ ವಹಿಸಬೇಕು. ಚಟುವಟಿಕೆಯ ದಿನಚರಿಯ ಜೊತೆಗೇ ಉತ್ತಮ ಪೋಷಕಾಂಶವುಳ್ಳ ಆಹಾರವನ್ನು ಸೇವಿಸುವುದೂ ಅಗತ್ಯವಾಗಿದೆ.
ಮೂಳೆಗಳು ಬಹುತೇಕ ಕ್ಯಾಲ್ಸಿಯಂನಿಂದ ಕೂಡಿದೆ. ಆದ್ದರಿಂದ ಮೂಳೆಗಳಿಗೆ ಕ್ಯಾಲ್ಸಿಯಂ ಹೆಚ್ಚಿರುವ ಆಹಾರಗಳು ಅಗತ್ಯ. ಬರೆಯ ಕ್ಯಾಲ್ಸಿಯಂ ಇದ್ದರೆ ಸಾಲದು, ಇತರ ಪೋಷಕಾಂಶಗಳೂ ಬೇಕು. ಇದರಲ್ಲಿ ಪೊಟ್ಯಾಶಿಯಂ, ಫಾಸ್ಪರಸ್, ಸತು ಮೊದಲಾದವು ಕ್ಯಾಲ್ಸಿಯಂ ಅಂಶವನ್ನು ಮೂಳೆ ಹೀರಿಕೊಳ್ಳಲು ಸಹಾಯ ಮಾಡುತ್ತವೆ. ಮೂಳೆಸವೆತದ ವಿರುದ್ಧ ಹೋರಾಡುವ ಮಾರ್ಗಗಳು
ಹಾಲಿನಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಇದ್ದರೂ ಇದನ್ನು ಮೂಳೆಗಳು ನೇರವಾಗಿ ಹೀರಲಾರವು. ಆದ್ದರಿಂದ ಇದರ ಜೊತೆ ಕೊಂಚ ಜೇನನ್ನು ಸೇರಿಸಿ ಕುಡಿದಾಗ ಮಾತ್ರ ಕ್ಯಾಲ್ಸಿಯಂ ಮೂಳೆಗಳಿಗೆ ತಲುಪುತ್ತದೆ. ಕ್ಯಾಲ್ಸಿಯಂ ಹೆಚ್ಚಿಸುವ ಇತರ ಆಹಾರಗಳ ಬಗ್ಗೆ ಕೆಲವು ಮಾಹಿತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ..

ಹಸಿರು ಸೊಪ್ಪು ಮತ್ತು ಎಲೆಗಳು
ಕ್ಯಾಲ್ಸಿಯಂ ಅಂಶವನ್ನು ಮೂಳೆಗಳು ಹೀರಿಕೊಳ್ಳಲು ಅಗತ್ಯವಾದ ಪೋಷಕಾಂಶವೆಂದರೆ ವಿಟಮಿನ್ ಕೆ. ಇದು ಹಸಿರು ಎಲೆ ಮತ್ತು ಸೊಪ್ಪುಗಳಲ್ಲಿ ಹೇರಳವಾಗಿದ್ದು ವಾರದ ಕೆಲವು ಹೊತ್ತಿನಲ್ಲಾದರೂ ಸಾಕಷ್ಟು ಪ್ರಮಾಣದಲ್ಲಿ ಸೊಪ್ಪುಗಳನ್ನು ಸೇವಿಸಬೇಕು.

ಅಕ್ರೋಟು
ಅಕ್ರೋಟು ಅಥವಾ ಕಂದುಕಾಯಿಯಲ್ಲಿ ಉತ್ತಮ ಪ್ರಮಾಣದ ಸತು (Zinc) ಲಭ್ಯವಿದ್ದು ಮೂಳೆಗಳು ಕ್ಯಾಲ್ಸಿಯಂ ಹೀರಿಕೊಳ್ಳಲು ನೆರವಾಗುತ್ತವೆ.

ಕಿತ್ತಳೆಜಾತಿಯ ಹಣ್ಣುಗಳು
ಕಿತ್ತಳೆ, ಮೂಸಂಬಿ ಮೊದಲಾದ ಹಣ್ಣುಗಳಲ್ಲಿ ವಿಟಮಿನ್ ಸಿ ಮತ್ತು ಇತರ ಪೋಷಕಾಂಶಗಳಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೇ ಮೂಳೆಗಳು ದೃಢವಾಗಲು ಸಹಕರಿಸುತ್ತವೆ. ಆಗಾಗ ಈ ಹಣ್ಣುಗಳನ್ನು ಸೇವಿಸುತ್ತಿರುವುದು ಉತ್ತಮ.

ವಿವಿಧ ಒಣಫಲಗಳು
ಮ್ಯಾಂಗನೀಸ್, ಪೊಟ್ಯಾಶಿಯಂ ಮತ್ತು ಫಾಸ್ಪರಸ್ ಹೆಚ್ಚಿರುವ ಒಣಫಲಗಳನ್ನು ಆಗಾಗ ತಿನ್ನುತ್ತಿರುವುದರಿಂದ ಮೂಳೆಗಳು ದೃಢವಾಗುತ್ತವೆ. ನಮ್ಮ ಬಡವರ ಬಾದಾಮಿ ಶೇಂಗಾಬೀಜ ಇದಕ್ಕೆ ಉತ್ತಮ ಆಯ್ಕೆಯಾಗಿದೆ. ಅಂತೆಯೇ ಬಾದಾಮಿ, ಒಣ ಪೀಚ್ ಹಣ್ಣುಗಳಲ್ಲೂ ಉತ್ತಮ ಪ್ರಮಾಣದ ಪೊಟ್ಯಾಶಿಯಂ ಇದೆ. ಇದು ನಮ್ಮ ಶರೀರದಿಂದ ಕ್ಯಾಲ್ಸಿಯಂ ಮೂತ್ರದ ಮೂಲಕ ವ್ಯರ್ಥವಾಗಿ ಹೊರಹೋಗದಂತೆ ತಡೆಯುತ್ತದೆ.

ಮೀನು
ಸಾಲ್ಮನ್ ಮೊದಲಾದ ಮೀನುಗಳಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಡಿ ಇದೆ. ಇದು ಹಾಲಿನಲ್ಲಿರುವ ಕ್ಯಾಲ್ಸಿಯಂ ಮೂಳೆಗಳು ಹೀರಿಕೊಳ್ಳಲು ನೆರವಾಗುತ್ತದೆ. ವಾರಕ್ಕೊಮ್ಮೆ ಮೀನಿನ ಊಟ ಮೂಳೆಗಳಿಗೆ ಉತ್ತಮವಾಗಿದೆ.

ಬಾಳೆಹಣ್ಣು
ದಿನಕ್ಕೆರಡು ಬಾಳೆಹಣ್ಣು ತಿನ್ನುವುದರಿಂದ ಉತ್ತಮ ಪ್ರಮಾಣದ ಪೊಟ್ಯಾಶಿಯಂ ದೇಹಕ್ಕೆ ಲಭ್ಯವಾಗುತ್ತದೆ. ವಿಶೇಷವಾಗಿ ವ್ಯಾಯಾಮದ ಬಳಿಕ ಸೇವಿಸುವ ಆಹಾರದಲ್ಲಿ ಕನಿಷ್ಟ ಒಂದಾದರೂ ಬಾಳೆಹಣ್ಣಿರಲಿ.

ಒಣದ್ರಾಕ್ಷಿ
ಒಣದ್ರಾಕ್ಷಿಯಲ್ಲಿ ಉತ್ತಮ ಪ್ರಮಾಣದ ಮೆಗ್ನೀಶಿಯಂ ಇದೆ. ಆಗಾಗ ಇವನ್ನು ಕೊಂಚವಾಗಿ ಸೇವಿಸುವ ಮೂಲಕ ಮೂಳೆಗಳ ಸಾಂದ್ರತೆ ಹೆಚ್ಚುತ್ತದೆ. ಮೂಳೆಗಳಿಗೆ ಪೂರಕವಾದ ಇನ್ನಾವುದೇ ಆಹಾರಗಳ ಬಗ್ಗೆ ನಿಮಗೆ ಮಾಹಿತಿಯಿದ್ದರೆ ದಯವಿಟ್ಟು ನಮ್ಮೊಂದಿಗೆ ಹಂಚಿಕೊಳ್ಳಿ.

ಬಿಯರ್
ಬಿಯರ್‌ನಲ್ಲಿ ಸಿಲಿಕಾನ್ ಎಂಬ ಧಾತುವಿದೆ. ಇದೂ ಸಹಾ ಮೂಳೆಗಳು ಕ್ಯಾಲ್ಸಿಯಂ ಅಂಶವನ್ನು ಹೀರಿಕೊಳ್ಳಲು ನೆರವಾಗುತ್ತದೆ. ಆದರೆ ಬಿಯರ್ ಸಹಾ ಮಾದಕ ಪಾನೀಯವಾದುದರಿಂದ ಯಾವಾಗಲೋ ಒಮ್ಮೆ ಕೊಂಚ ಪ್ರಮಾಣದಲ್ಲಿ ಮಾತ್ರ ಸೇವಿಸಿದರೆ ಸಾಕು.



Click it and Unblock the Notifications